Search
  • Follow NativePlanet
Share
» »ಸೆಲೆಬ್ರಿಟಿಗಳಿಗೆ ಗೆಸ್ಟ್‌ಹೌಸ್‌ ಆಗಿದ್ದ ಈ ಸ್ಥಳದಲ್ಲಿ ಇಂದು ಆತ್ಮಗಳು ಓಡಾಡುತ್ತಿವೆ

ಸೆಲೆಬ್ರಿಟಿಗಳಿಗೆ ಗೆಸ್ಟ್‌ಹೌಸ್‌ ಆಗಿದ್ದ ಈ ಸ್ಥಳದಲ್ಲಿ ಇಂದು ಆತ್ಮಗಳು ಓಡಾಡುತ್ತಿವೆ

ನೀವು ಯಾವತ್ತಾದರೂ ಪ್ರೇತಾತ್ಮಗಳಿರುವ ಲಾಡ್ಜ್‌ನಲ್ಲಿ ತಂಗಿದ್ದೀರಾ? ಇಲ್ಲಾ ಎಂದಾದಲ್ಲಿ ನಿಮಗಿಲ್ಲಿದೆ ಒಂದು ಅವಕಾಶ. ಮೋರ್ಗನ್ ಹೌಸ್‌ಗೆ ಟ್ರಿಪ್ ಹೋಗಿ. ಸ್ವರ್ಗೀಯ ಸೌಂದರ್ಯದ ಮಧ್ಯೆ ಉಳಿಯುವ ಮತ್ತು ನಿಗೂಢ ಸ್ಥಳಗಳನ್ನು ಬಹಿರಂಗಪಡಿಸುವುದಕ್ಕಿಂತ ಹೆಚ್ಚು ಥ್ರಿಲ್ ಇನ್ನೊಂದಿಲ್ಲ. ಆದ್ದರಿಂದ, ಮಾರ್ಗನ್ ಹೌಸ್ ಹಾಗೂ ಅಲ್ಲಿನ ರಹಸ್ಯಗಳ ಬಗ್ಗೆ ತಿಳಿಯುವ ಕುತೂಹಲವಿದ್ದರೆ ಮೋರ್ಗನ್ ಹೌಸ್‌ಗೆ ಹೋಗಲೇ ಬೇಕು.

ಬ್ರಿಟಿಷ್ ವಸಾಹತಿನ ಮಹಲಾಗಿದ್ದ ಇದು ಅತಿಥಿ ಗೃಹ ಮತ್ತು ಬ್ರಿಟಿಷರ ಬೇಸಿಗೆ ತಾಣವೂ ಆಗಿತ್ತು. ಶ್ರೀಮತಿ ಮತ್ತು ಶ್ರೀಮತಿ ಮೋರ್ಗನ್ ಸತ್ತ ನಂತರ ಅವರ ಉತ್ತರಾಧಿಕಾರಿಗಳಿಲ್ಲದ ಕಾರಣ ಧರ್ಮದರ್ಶಿಗಳ ಆಸ್ತಿಯಾಗಿತ್ತು. ಸ್ವಾತಂತ್ರ್ಯದ ನಂತರ ಭಾರತೀಯ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿತು.

ಸರ್ಕಾರಿ ಅತಿಥಿ ಗೃಹದ ಯೋಜನೆ ಇತ್ತು

ಸರ್ಕಾರಿ ಅತಿಥಿ ಗೃಹದ ಯೋಜನೆ ಇತ್ತು

PC- Subhrajyoti07

ಇದರ ಸೌಂದರ್ಯ ಮತ್ತು ಭವ್ಯತೆಯನ್ನು ಕಂಡ ಜವಾಹರ್ ಲಾಲ್ ನೆಹರೂ ಮೋರ್ಗನ್ ಹೌಸ್ ಸರ್ಕಾರಿ ಅತಿಥಿ ಗೃಹವಾಗಿ ಮಾಡುವ ಆಲೋಚನೆಯಲ್ಲಿದ್ದರು. ಆದರೆ ಅವರ ಸಾವಿನ ನಂತರ ಈ ಯೋಜನೆಯನ್ನು ಪೂರ್ಣಗೊಳಿಸಲಾಗಲಿಲ್ಲ. ಮೋರ್ಗನ್ ಹೌಸ್ ಯಾವಾಗಲೂ ಪ್ರವಾಸಿಗರಿಗೆ ಬೇಸಿಗೆಯ ತಾಣವಾಗಿಯೇ ಉಳಿಯಿತು. ಮೋರ್ಗನ್ ಹೌಸ್ ಇಂದು ಇದು ಪಶ್ಚಿಮ ಬಂಗಾಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೇಲ್ವಿಚಾರಣೆಯಲ್ಲಿದೆ ಮತ್ತು ಇದೊಂದು ಹೋಟೆಲ್ ಆಗಿ ಪರಿವರ್ತನೆಯಾಗಿದೆ.

ಪುಟ್ಟಪರ್ತಿ ಸಾಯಿ ಬಾಬಾನ ಸನ್ನಿಧಿಗೆ ಹೋಗಿದ್ದೀರಾ ?ಪುಟ್ಟಪರ್ತಿ ಸಾಯಿ ಬಾಬಾನ ಸನ್ನಿಧಿಗೆ ಹೋಗಿದ್ದೀರಾ ?

ಸುತ್ತುತ್ತಿವೆ ಮೊರ್ಗಾನ್‌ ಆತ್ಮಗಳು

ಸುತ್ತುತ್ತಿವೆ ಮೊರ್ಗಾನ್‌ ಆತ್ಮಗಳು

ಮೋರ್ಗನ್ ಹೌಸ್‌ನ ಭಯಾನಕ ಕಥೆಗಳು ಇನ್ನೂ ಅದರ ಸುತ್ತ ಸುತ್ತುತ್ತಿದೆ. ಶ್ರೀಮತಿ ಮತ್ತು ಶ್ರೀಮತಿ ಮೊರ್ಗಾನ್‌ರ ಆತ್ಮಗಳು ಇಂದಿಗೂ ಆ ಹೋಟೆಲ್ ಸುತ್ತಲೂ ಸುತ್ತುತ್ತಿದೆ. ಹಾಗಾಗಿ ಅಲ್ಲಿ ಅಸ್ವಾಭಾವಿಕ ಘಟನೆಗಳು ನಡೆಯುತ್ತಿದೆ ಎಂದು ಹೇಳಲಾಗಿದೆ.

ಸೆಲೆಬ್ರಿಟಿಗಳ ಬೇಸಿಗೆ ತಾಣ

ಸೆಲೆಬ್ರಿಟಿಗಳ ಬೇಸಿಗೆ ತಾಣ

PC- Subhrajyoti07

ಕಾಲಿಂಪಾಂಗ್‌ನ ಹಸಿರುಮನೆ ಮಧ್ಯದಲ್ಲಿ ಮೋರ್ಗಾನ್ ಹೌಸ್ ತನ್ನ ಸುಂದರ ಮತ್ತು ಅದ್ಭುತ ವಾಸ್ತುಶಿಲ್ಪದ ಕಾರಣದಿಂದಾಗಿ ಪ್ರಸಿದ್ಧಿಯನ್ನು ಹೊಂದಿತ್ತು. ಕಾಲಾನಂತರದಲ್ಲಿ, ಹಲವಾರು ಪ್ರಸಿದ್ಧ ವ್ಯಕ್ತಿಗಳಿಗೆ ಬೇಸಿಗೆಯ ಸ್ಥಳವಾಗಿ ಮಾರ್ಪಟ್ಟಿತು.

ಈ ಊರಿಗೆಲ್ಲಾ ರೈಲಿನಲ್ಲಿ ಪ್ರಯಾಣಿಸೋದಕ್ಕಿಂತ ವಿಮಾನದಲ್ಲಿ ಪ್ರಯಾಣಿಸೋದೇ ಅಗ್ಗಈ ಊರಿಗೆಲ್ಲಾ ರೈಲಿನಲ್ಲಿ ಪ್ರಯಾಣಿಸೋದಕ್ಕಿಂತ ವಿಮಾನದಲ್ಲಿ ಪ್ರಯಾಣಿಸೋದೇ ಅಗ್ಗ

ಬಾಲಿವುಡ್‌ ಸ್ಟಾರ್‌ಗಳ ಹಸ್ತಾಕ್ಷರ

ಬಾಲಿವುಡ್‌ ಸ್ಟಾರ್‌ಗಳ ಹಸ್ತಾಕ್ಷರ

PC- Subhrajyoti07

ಈ ಅತಿಥಿ ಗೃಹಕ್ಕೆ ಹೋದಾಗ ನೀವು ಮೇಜಿನ ಮೇಲೆ ಹಲವಾರು ಪ್ರಸಿದ್ಧ ಬಾಲಿವುಡ್ ವ್ಯಕ್ತಿಗಳ ಹಸ್ತಾಕ್ಷರವನ್ನು ಫ್ರೇಮ್ ಮಾಡಿ ಹಾಕಿರುವುದನ್ನು ಕಾಣಬಹುದು. ಕಿಶೋರ್ ಕುಮಾರ್, ಉತ್ಪಾಲ್ ದತ್, ಸುನಿಲ್ ದತ್, ನರ್ಗಿಸ್, ಸುಪ್ರಿಯಾ ದೇವಿ ಮತ್ತು ಇನ್ನಿತರರಲ್ಲಿ ಜನಪ್ರಿಯತೆ ನಟ, ನಟಿಯರು ಮೋರ್ಗನ್ ಹೌಸ್ ನ ನೈಸರ್ಗಿಕ ಸೌಂದರ್ಯವನ್ನು ಆಹ್ಲಾದಿಸಿದ್ದಾರೆ.

ಯಾಕೆ ನೀವು ಮೋರ್ಗನ್ ಹೌಸ್‌ಗೆ ಭೇಟಿ ನೀಡಬೇಕು?

ಯಾಕೆ ನೀವು ಮೋರ್ಗನ್ ಹೌಸ್‌ಗೆ ಭೇಟಿ ನೀಡಬೇಕು?

ರಹಸ್ಯಗಳನ್ನು ಅನ್ವೇಷಿಸಲು ನೀವು ಬಯಸಿದ್ದರೆ ಮೋರ್ಗನ್ ಹೌಸ್ ನಿಮಗೆ ಖಂಡಿತವಾಗಿ ಭೇಟಿ ನೀಡುವ ಸ್ಥಳವಾಗಿದೆ. ಇದರ ಉತ್ತಮ ವಾಸ್ತುಶಿಲ್ಪದ ಕೆಲಸವನ್ನು ಮತ್ತು ಅದರ ಸೌಂದರ್ಯವನ್ನು ಪ್ರಶಂಸಿಸುವುದರ ಹೊರತಾಗಿಯೂ, ಮೋರ್ಗನ್ ಹೌಸ್‌ನ ಸುತ್ತಲೂ ಹಸಿರುಮನೆ ಹರಡಿದೆ. ಬೆಟ್ಟದ ಮೇಲೆ ನೆಲೆಗೊಂಡಿದ್ದರೂ ಪ್ರವಾಸಿಗರಿಗೆ ಆಯಾಸವನ್ನುಂಟು ಮಾಡದೆ ಉತ್ತಮ ವಾತಾವರಣವನ್ನು ಒದಗಿಸುತ್ತದೆ. ಈ ವಾತಾವರಣದಲ್ಲಿ ಸುತ್ತಲೂ ಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಒಂದು ಕಪ್ ಕಾಫೀ ಸವಿಯೋದರ ಖುಷಿಯೇ ಬೇರೆ.

ಮೋರ್ಗನ್ ಹೌಸ್‌ಗೆ ತಲುಪುವುದು ಹೇಗೆ?

ಮೋರ್ಗನ್ ಹೌಸ್‌ಗೆ ತಲುಪುವುದು ಹೇಗೆ?

PC- Subhrajyoti07

ವಿಮಾನದ ಮೂಲಕ : ನೀವು ವಿಮಾನದ ಮೂಲಕ ಸಿಲಿಗಿರಿ ಏರ್‌ಪೋರ್ಟ್‌ ತಲುಪಿ ಆ ನಂತರ ಕ್ಯಾಬ್ ಮೂಲಕ ಮೋರ್ಗನ್ ಹೌಸ್‌ಗೆ ತಲುಪಬಹುದು. ಇದು ಕಾಲಿಪೊಂಗ್ ನಲ್ಲಿದೆ. ಸಿಲಿಗಿರಿ ವಿಮಾನ ನಿಲ್ದಾಣದಿಂದ ಸುಮಾರು ೭೮ ಕಿ.ಮೀ ದೂರದಲ್ಲಿದೆ ಮೋರ್ಗನ್ ಹೌಸ್‌.
ರೈಲು: ಮೋರ್ಗನ್ ಹೌಸ್‌ಗೆ ಸಮೀಪದ ರೈಲು ನಿಲ್ದಾಣವೆಂದರೆ ಜಲಪೈಗುರಿ. ಇದು ೭೩ ಕಿ.ಮೀ ದೂರದಲ್ಲಿದೆ. ಅಲ್ಲಿಂದ ಕ್ಯಾಬ್ ಮೂಲಕ ಹೋಗಬಹುದು.
ರಸ್ತೆ: ಕಾಲಿಂಪೊಂಗ್ ಎಲ್ಲಾ ದೊಡ್ಡ ದೊಡ್ಡ ನಗರಗಳಿಂದ ಬಸ್ ವ್ಯವಸ್ಥೆ ಇದೆ. ಹಾಗಾಗಿ ಬಸ್‌ನಲ್ಲಿ ಹೋಗೋದು ಬಹಳ ಸುಲಭ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X