Search
  • Follow NativePlanet
Share
» »ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು

ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು

ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ -ಕೊಲ್ಲೂರು

kollurmukhambike
kollurmukhambike
Photo Credit:

ಕರ್ನಾಟಕದ ಕುಂದಾಪುರ ತಾಲೂಕಿನಲ್ಲಿರುವ ಸಣ್ಣ ಹಳ್ಳಿಯಾಗಿರುವ ಕೊಲ್ಲೂರು ರಾಜ್ಯದಾದ್ಯಂತದ ಯಾತ್ರಿಗಳಿಗೆ ವಿಶೇಷವಾದ ಒಂದು ಸ್ಥಳವಾಗಿದೆ.

ಪಶ್ಚಿಮಘಟ್ಟಗಳ ಹಿನ್ನೆಲೆಯಿರುವ ಈ ಸುಂದರವಾದ ಸ್ಥಳವು ಸೌಪರ್ಣಿಕಾ ನದಿಯ ದಡದಲ್ಲಿದ್ದು ಪ್ರಶಾಂತ ವಾತಾವರಣವನ್ನು ಹೊಂದಿದೆ. ಇದರಿಂದಾಗಿ ಈ ದೇವಾಲಯ ಪಟ್ಟಣಕ್ಕೆ ಇನ್ನೂ ಹೆಚ್ಚಿನ ಮೆರುಗನ್ನು ತಂದುಕೊಡುತ್ತದೆ. ಕೊಲ್ಲೂರು ಮೂಕಾಂಬಿಕಾ ದೇವಾಲಯವು ಪರಶುರಾಮದೇವರಿಂದ ರಚಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ.

ಕೊಲ್ಲೂರಿನ ಪ್ರವಾಸಿ ಸ್ಥಳಗಳು ಮತ್ತು ಅಲ್ಲಿಯ ಕೆಲವು ಇತಿಹಾಸದ ತುಣುಕುಗಳು

kollurtravelanimalsanctury

ಕೊಲ್ಲೂರಿನ ಮೂಕಾಂಬಿಕಾ ದೇವಾಲಯವು ರಾಜ್ಯದ ಅತ್ಯಂತ ಹೆಚ್ಚು ನಿರತವಾಗಿರುವ ಧಾರ್ಮಿಕ ಕೇಂದ್ರಗಳಲ್ಲಿ ಒಂದೆನಿಸಿದೆ ಹಾಗೂ ಇದು ಶಕ್ತಿ ಆರಾಧನೆಯ ಒಂದು ಪ್ರಮುಖ ಪೀಠವಾಗಿದೆ. ಇಲ್ಲಿ ಪಾರ್ವತಿ ದೇವಿಯು ಮೂಕಾಸುರನೆಂಬ ಅಸುರನನ್ನು ಕೊಂದ ಸ್ಥಳವಾಗಿದ್ದು ಇದರಿಂದಾಗಿ ಮೂಕಾಂಬಿಕೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಾಳೆ ಹಾಗೂ ಇಲ್ಲಿಯ ಮುಖ್ಯ ದೇವಾಲಯವು ಮೂಲತಃ ಜ್ಯೋತಿರ್ಲಿಂಗವನ್ನು ಮಾತ್ರ ಹೊಂದಿದ್ದು, ಈ ಜ್ಯೋತಿರ್ಲಿಂಗವು ಸ್ವರ್ಣರೇಖ ಅಥವಾ ಚಿನ್ನದ ಗೆರೆಯನ್ನು ಹೊಂದಿದ್ದು, ಅದನ್ನು ಎರಡು ಅಸಮಾನ ಭಾಗಗಳಾಗಿ ವಿಂಗಡಿಸಿದೆ. ಸಣ್ಣ ಭಾಗವು ಬ್ರಹ್ಮ, ವಿಷ್ಣು ಮತ್ತು ಶಿವನ ತ್ರಿಮೂರ್ತಿಗಳನ್ನು ಪ್ರತಿಬಿಂಬಿಸುವ ಶಕ್ತಿಯನ್ನು ಪ್ರತಿನಿಧಿಸಿದರೆ ಉಳಿದ ಹೆಚ್ಚಿನ ಭಾಗವು ಸರಸ್ವತಿ, ಪಾರ್ವತಿ ಮತ್ತು ಲಕ್ಷ್ಮಿ ಎಂಬ ಸ್ತ್ರೀ ಶಕ್ತಿಗಳನ್ನು ಸಂಕೇತಿಸುತ್ತದೆ ಎಂದು ಹೇಳಲಾಗುತ್ತದೆ.

ಈ ಜ್ಯೋತಿರ್ಲಿಂಗದ ಹಿಂದೆ ದೇವಿ ಮೂಕಾಂಬಿಕಾ ದೇವಿಯ ಸುಂದರವಾದ ಲೋಹದ ವಿಗ್ರಹವನ್ನು ಶ್ರೀ ಆದಿ ಶಂಕರರು ಸ್ಥಾಪಿಸಿದರು. ಇದರ ಹಿಂದೆ ಇರುವ ಕಥೆಯ ಪ್ರಕಾರ, ಶಂಕರರಿಗೆ ಅವರ ತಪಸ್ಸಿನ ಫಲವಾಗಿ ದೇವಿಯು ಕಾಣಿಸಿಕೊಂಡು ಅವರ ಕೋರಿಕೆಯಂತೆ ದೇವಿಯನ್ನು ಕೇರಳಕ್ಕೆ ತನ್ನ ಜೊತೆ ಬರಬೇಕೆಂದೂ ಅಲ್ಲಿ ಅವಳು ನೆಲೆಸಬೇಕೆಂದೂ ಇದರ ಮೂಲಕ ಅವರು ಈ ದೇವಿಯನ್ನು ನಿರಂತರವಾಗಿ ಪೂಜಿಸಲು ಅನುಕೂಲ ಮಾಡಿಕೊಡುವಂತೆಯೂ ವಿನಂತಿಸಿಕೊಂಡರು ಎಂದು ಹೇಳಲಾಗುತ್ತದೆ. ಇದರ ಪ್ರಕಾರ ದೇವಿಯು ಶಂಕರರನ್ನು ಹಿಂಬಾಲಿಸಲು ಒಪ್ಪಿದಳು, ಆದರೆ ಅವಳುಹಿಂಬಾಲಿಸುತ್ತಿದ್ದಾಳೆಯೇ ಎಂದು ಪರೀಕ್ಷಿಸಲು ಅವರು ಹಿಂತಿರುಗಿ ನೋಡಬಾರದು ಎಂದು ಷರತ್ತು ವಿಧಿಸಿದಳು.

ಹೀಗೆ ಹಿಂಬಾಲಿಸುತ್ತಾ ಹೋದಾಗ ಒಂದು ಕಡೆ ದೇವಿಯ ಗೆಜ್ಜೆಯ ಸದ್ದು ಕೇಳುವುದು ನಿಂತಿತು ಇದಕ್ಕಾಗಿ ಶಂಕರರು ದೇವಿಯು ತಮ್ಮನ್ನು ಹಿಂಬಾಲಿಸುತ್ತಿದಾಳೆಯೇ ಎಂದು ನೋಡಲು ಹಿಂತಿರುಗಿದರು ಇಲ್ಲಿ ದೇವಿಯು ತಾನು ಹಾಕಿದ ಷರತ್ತಿನ ಪ್ರಕಾರ ಅವರನ್ನು ಹಿಂಬಾಲಿಸಲು ನಿರಾಕರಿಸಿದಳು. ಇದರ ಪರಿಣಾಮವಾಗಿ ಶ್ರೀ ಆದಿ ಶಂಕರರು ದೇವಿಯ ಲೋಹದ ಮೂರ್ತಿಯನ್ನು ಕೊಲ್ಲೂರು ದೇವಾಲಯದ ಜೋತಿರ್ಲಿಂಗದ ಹಿಂಬಾಗದಲ್ಲಿ ಪ್ರತಿಸ್ಥಾಪಿಸಿದರು.

ಇಲ್ಲಿ ಕೊಲ್ಲೂರು ದೇವಾಲಯ ಮಾತ್ರವಲ್ಲದೆ ಭೇಟಿ ಕೊಡಬಹುದಾದ ಇನ್ನಿತರ ಸ್ಥಳಗಳು
ಅರಶಿನ ಗುಂಡಿ ಜಲಪಾತವು ಅರಣ್ಯದ ಅತ್ಯಂತ ಒಳಭಾಗದಲ್ಲಿ ನೆಲೆಸಿದೆ ಮತ್ತು ಇದು ಇಲ್ಲಿಯ ಅತ್ಯಂತ ಪಸಿದ್ದ ಪ್ರವಾಸಿ ತಾಣವಾಗಿದೆ. ಈ ಜಲಪಾತದ ಮೇಲೆ ಬೀಳುವ ಸೂರ್ಯನ ಕಿರಣವು ಹೊಳೆಯುವ ಅರಸಿನ/ಕಿತ್ತಳೆ ಬಣ್ಣವನ್ನು ಹೊರಸೂಸುವಂತೆ ಕಾಣುತ್ತಿದ್ದು, ಇದು ಅರಸಿನ ಎಂಬ ಹೆಸರಿಗೆ ಕಾರಣವಾಗಿದೆ (ಅರಸಿನ ಹಳದಿ)

ಶ್ರೀ ಆದಿ ಶಂಕರರು ಮೊದಲು ದೇವಿಯ ದರ್ಶನ ಪಡೆದ ಸ್ಥಳವಾಗಿರುವ ಕೊಡಚಾದ್ರಿ ಬೆಟ್ಟಗಳ ಸಾಲುಗಳು ಇನ್ನೊಂದು ಸುಂದರವಾದ ತಾಣವಾಗಿದೆ. ಇದು ಟ್ರಕ್ಕಿಂಗ್ ಉತ್ಸಾಹಿಗಳಿಂದ ಹೆಚ್ಚಾಗಿ ಭೇಟಿ ನೀಡಲ್ಪಡುತ್ತದೆ. ದಸರಾ ಅಥವಾ ನವರಾತ್ರಿಯಂತಹ ವಿಶೇಷ ಸಂದರ್ಭಗಳಲ್ಲಿ ಈ ದೇವಾಲಯಕ್ಕೆ ಭೇಟಿ ಕೊಡುವುದು ಹೆಚ್ಚು ಸೂಕ್ತವಾಗಿದ್ದು ಈ ಸಮಯದಲ್ಲಿ ಒಂಬತ್ತುರಾತ್ರಿಗಳಲ್ಲಿಯೂ ತ್ರಿದೇವಿಗಳನ್ನು ಅತ್ಯಂತ ವೈಭವದಿಂದ ಪೂಜಿಸಲಾಗುತ್ತದೆ.

ಕೊಲ್ಲೂರು ವನ್ಯಜೀವಿ ಸಂರಕ್ಷಿತ ಪ್ರದೇಶದ ಒಂದು ಭಾಗವಾಗಿದ್ದು, ಮೂಕಾಂಬಿಕ ವನ್ಯಜೀವಿ ಅಭಯಾರಣ್ಯವು ಕಡಿಮೆ ಅನ್ವೇಷಿತ ನೈಸರ್ಗಿಕ ಸ್ಥಳಗಳಲ್ಲಿ ಒಂದಾಗಿದೆ. ಇದು ವಿಶ್ವ ವನ್ಯಜೀವಿ ನಿಧಿ (ಡಬ್ಲೂ ಡಬ್ಲೂ ಎಫ಼್) ನಿಂದ ಸಹಾಯ ಪಡೆಯುತ್ತದೆ. ಕೊಲ್ಲೂರು ಕಣಿವೆಗಳು, ಬೆಟ್ಟಗಳು ಮತ್ತು ಜಲಮಾರ್ಗಗಳ ರುದ್ರರಮಣೀಯ ದೃಶ್ಯಗಳನ್ನು ಹೊಂದಿರುವ ಸುಂದರವಾದ ಸೌಂದರ್ಯದ ಸ್ಥಳವಾಗಿದೆ. ಕೊಲ್ಲೂರು ದೇವಾಲಯ ಮತ್ತು ಅದರ ಪರಿಸರವು ನಿಮಗೆ ಮರೆಯಲಾಗದ ಅನುಭವ ಮಾಡುತ್ತದೆ.

ಕೊಲ್ಲೂರಿಗೆ ತಲುಪುವುದು ಹೇಗೆ?

ಕುಂದಾಪುರ ಹತ್ತಿರದ ರೈಲು ನಿಲ್ದಾಣವು ಹತ್ತಿರದ ರೈಲ್ವೆ ನಿಲ್ದಾಣವಾಗಿದೆ. ಮಂಗಳೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಕರ್ನಾಟಕದ ಮೂಲೆ ಮೂಲೆಗಳಿಂದ ಕೊಲ್ಲೂರಿಗೆ ಬಸ್ಸುಗಳು ಸುಲಭವಾಗಿ ಲಭ್ಯವಿರುತ್ತದೆ.

ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಕೊಲ್ಲೂರಿನ ಸೌಂದರ್ಯವನ್ನು ಅನ್ವೇಷಿಸಲು ಸೂಕ್ತ ಸಮಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X