Search
  • Follow NativePlanet
Share
» »ಪ್ರಕೃತಿ ಸೌಂದರ್ಯದ ಅತ್ಯುತ್ತಮ ನೋಟವನ್ನು ಸವಿಯಬೇಕಾ?

ಪ್ರಕೃತಿ ಸೌಂದರ್ಯದ ಅತ್ಯುತ್ತಮ ನೋಟವನ್ನು ಸವಿಯಬೇಕಾ?

ಮಾನ್ಸೂನ್ ಮಳೆಗಾಲವು ಆರಂಭವಾಗುತ್ತಿದ್ದಂತೆ ದೇಶದಾದ್ಯಂತ ಪ್ರಕೃತಿಯಲ್ಲಿ ತನ್ನದೇ ಆದ ಮಹತ್ತರ ಬದಲಾವಣೆ ಆಗುತ್ತದೆ. ಇದು ಪ್ರಕೃತಿ ಪ್ರೇಮಿಗಳು, ವನ್ಯಜೀವಿಗಳ ಸೆರೆಹಿಡಿಯಬಯಸುವ ಛಾಯಾಗ್ರಾಹಕರನ್ನು ಅತ್ಯಧಿಕ ಸಂಖ್ಯೆಯಲ್ಲಿ ಸೆಳೆಯುತ್ತದೆ. ಈ ಸಮಯವು ಕೆಲವು ಅಪರೂಪದ ಪ್ರಾಣಿಗಳು ತಮ್ಮ ವಾಸಸ್ಥಳದಿಂದ ಹೊರಗೆ ಬರುವಂತೆ ಮಾಡುತ್ತದೆ.

ಅಲ್ಲದೆ ತಂಪಾದ ಗಾಳಿ ಮತ್ತು ಮಳೆಯ ಆನಂದವನ್ನು ಪಡೆಯಲು ಬಾನಾಡಿಗಳು ಆಕಾಶದೆತ್ತರಕ್ಕೆ ಹಾರಾಡುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ ಈ ವನ್ಯಜೀವಿ ಅಭಯಾರಣ್ಯಗಳು ಇಲ್ಲಿಗೆ ಬರುವವರಿಗೆ ರಸದೌತಣವನ್ನು ನೀಡುವುದರಲ್ಲಿ ಸಂಶಯವಿಲ್ಲ. ಇಲ್ಲಿದೆ ನಿಮಗಾಗಿ ಕೆಲವು ಮಾನ್ಸೂನ್ ನಲ್ಲಿ ಭೇಟಿ ಕೊಡಬಹುದಾದ ಭಾರತದಲ್ಲಿಯ ಕೆಲವು ಅಭಯಾರಣ್ಯಗಳು.

Wildlife Sanctuary

1. ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಕರ್ನಾಟಕ

ಒಣ ಹಾಗೂ ತೇವಾಂಶದಿಂದ ಒಳಗೊಂಡ ಅರಣ್ಯಗಳಿಂದ ಆವೃತ್ತವಾಗಿರುವ ಬಂಡಿಪುರ ರಾಷ್ಟ್ರೀಯ ಉದ್ಯಾನವನವು ಹಲವಾರು ಅಪರೂಪದ ಹಾಗೂ ವಿದೇಶೀ ಪಕ್ಷಿಗಳು ಮತ್ತು ಪ್ರಾಣಿಗಳ ಸಾಂಪ್ರದಾಯಿಕ ನೆಲೆಯಾಗಿದೆ ಎನ್ನಬಹುದಾಗಿದೆ. ಈ ಅರಣ್ಯಕ್ಕೆ ಕಬಿನಿ ನದಿಯ ನೀರು ಮೂಲವಾಗಿ ಹರಿದು ಬರುತ್ತದೆ.

ಜೊತೆಗೆ ಹಲವಾರು ವನ್ಯಜೀವಿಗಳಿಗೆ ನೆಲೆಯಾಗುವುದರ ಮೂಲಕ ವನ್ಯಜೀವಿ ಛಾಯಾಗ್ರಾಹಕರು , ಸಫಾರಿಗೆ ಹೋಗಬಯಸುವವರಿಗೆ, ಮತ್ತು ಅರಣ್ಯದ ರೋಚಕ ಅನುಭವವನ್ನು ಪಡೆಯುವ ಅನ್ವೇಷಕರಿಗೆ ಈ ಅಭಯಾರಣ್ಯವು ಮಾಂತ್ರಿಕತೆಯ ಮೋಡಿಯನ್ನು ಮಾಡುತ್ತದೆ. ಬಂಡೀಪುರ ಅಭಯಾರಣ್ಯವು ಭಾರತದಲ್ಲಿ ಮಾನ್ಸೂನ್ ಸಮಯದಲ್ಲಿ ಭೇಟಿ ನೀಡಬಹುದಾದಂತಹ ಅತ್ಯಂತ ಜನಪ್ರಿಯ ಸ್ಥಳಗಳಲ್ಲೊಂದಾಗಿದೆ.

2. ಸತ್ಯಮಂಗಲಮ್ ವನ್ಯಜೀವಿ ಅಭಯಾರಣ್ಯ, ತಮಿಳು ನಾಡು

ಸತ್ಯಮಂಗಲ ವನ್ಯಜೀವಿ ಅಭಯಾರಣ್ಯವು ತಮಿಳುನಾಡಿನ ಅತ್ಯಂತ ದೊಡ್ಡ ಅರಣ್ಯವೆಂದು ಪರಿಗಣಿಸಲಾಗಿದೆ. ಈ ಅರಣ್ಯವು ಕುಖ್ಯಾತ ಡಕಾಯಿತ ಅಪಹರಣಕಾರ ಮತು ಕೊಲೆಗಡುಕ ವೀರಪ್ಪನ್ ನ ಆಶ್ರಯ ತಾಣವಾಗಿತ್ತು. ಅಲ್ಲದೆ ಅವನು ಈ ಪ್ರದೇಶದಲ್ಲಿ ಆನೆದಂತ ಮತ್ತು ಗಂಧದ ಮರದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರದೇಶವಾಗಿದೆ.

ಇಲ್ಲಿಯ ದಿಂಬಂ ನಲ್ಲಿ ಸರಕಾರಿ ವಸತಿ ಗೃಹ, ಹಾಸನೂರ್ ಮತ್ತು ಕಾಟೇಜ್ ಗಳಲ್ಲಿ ತಂಗಬಹುದಾಗಿದೆ. ಈ ಅರಣ್ಯದ ಒಳ ಪ್ರದೇಶವಾದ ತಲವಾಡಿ ಶ್ರೇಣಿಯಲ್ಲಿ ಪ್ರಸಿದ್ದ ದೇವಾಲಯಗಳಾದ ಬನ್ನಾರಿ ಅಮ್ಮನ್ ಮತ್ತು ಕೊಂಗಲ್ಲಿ ದೇವಾಲಯಗಳಿವೆ.

3. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ, ಉತ್ತರಾಖಂಡ

1936 ರಲ್ಲಿ ಸ್ಥಾಪಿಸಲಾದ, ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು ಭಾರತದ ಅತ್ಯಂತ ಹಳೆಯ ರಾಷ್ಟ್ರೀಯವಾಗಿದೆ. ಈ ಉದ್ಯಾನವನವು ಜಗತ್ರ್ಪಸಿದ್ದ. ಬೆಂಗಾಲಿ ಹುಲಿಗಳಿಗೆ ಹೆಸರುವಾಸಿಯಾಗಿದ್ದು ಭಾರತದ ಅತ್ಯಂತ ಹೆಸರುವಾಸಿಯಾದ ಅಭಯಾರಣ್ಯಗಳಲ್ಲಿ ಒಂದೆನಿಸಿದೆ.

ಈ ಅರಣ್ಯವು ಸರಿ ಸುಮಾರು 300 ಕಾಡು ಆನೆಗಳು , 200 ಹುಲಿಗಳು ಮತ್ತು ಹಲವಾರು ಅಪರೂಪದ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿರುವುದು ಮಾತ್ರವಲ್ಲದೆ ಈ ಅರಣ್ಯವು ಸುಮಾರು 488 ತಳಿಯ ಸಸ್ಯಗಳನ್ನೂ ಹೊಂದಿದೆ.

4. ಬಾಂಧವಗಢ ರಾಷ್ಟ್ರೀಯ ಉದ್ಯಾನವನ, ಮಧ್ಯಪ್ರದೇಶ

ಒಂದು ಕಾಲದಲ್ಲಿ ಮಹಾರಾಜರ ಭೇಟೆಯಾಡುವ ಪ್ರದೇಶವಾಗಿದ್ದ ಬಾಂಧವಗಢ ರಾಷ್ಟ್ರೀಯ ಉದ್ಯಾನವನವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೆಂಗಾಳಿ ಹುಲಿಯಗಳನ್ನು ಹೊಂದಿದೆ. ಅಲ್ಲದೆ ಇದು ಸುಮಾರು 45 ವಿವಿಧ ತಳಿಯ ಪ್ರಾಣಿಗಳು ಮತ್ತು 250 ಬಗೆಯ ಪಕ್ಷಿಗಳನ್ನು ಹೊಂದಿದೆ. ಲಂಗೂರ್, ಜಿಂಕೆ, ಬಾರ್ಕಿಂಗ್ ಜಿಂಕೆಗಳು, ಕಾಡು ಹಂದಿಗಳು ಭಾರತೀಯ ಕಾಡೆಮ್ಮೆ ಮತ್ತು ಸಾಂಬಾರ್, ಮುಂತಾದ ಪ್ರಾಣಿಗಳೂ ಕೂಡಾ ಈ ವನ್ಯಪ್ರದೇಶದ ಪ್ರಮುಖ ಆಕರ್ಷಣೆಗಳಾಗಿವೆ.

ಈ ಅರಣ್ಯವು ಹಿಂದೂ ಪುರಾಣದಲ್ಲೊಂದಾದ ಮಹಾಕಾವ್ಯ ರಾಮಾಯಣಕ್ಕೂ ಇಲ್ಲಿಯ ಹುಲಿಗಳಿಗೂ ಸಂಭಂದವಿದೆ ಎನ್ನಲಾಗುತ್ತದೆ. ಇವೆಲ್ಲ ಕಾರಣಗಳಿಂದಾಗಿ ಈ ರಾಷ್ಟ್ರೀಯ ವನ್ಯಜೀವಿ ಅಭಯಾರಣ್ಯವು ಭಾರತದಲ್ಲಿ ಭೇಟಿ ನೀಡಬಹುದಾದ ತಾಣಗಳಲ್ಲೊಂದೆನಿಸಿದೆ.

5. ರಣಥಂಬೂರ್ ರಾಷ್ಟ್ರೀಯ ಉದ್ಯಾನವನ, ಸವಾಯಿ ಮಾಧೊಪುರ್, ರಾಜಸ್ಥಾನ

ನಿಷ್ಕಲ್ಮಶವಾದ ಪ್ರಕೃತಿಯನ್ನು ಒಳಗೊಂಡ ಈ ಅರಣ್ಯ ಪ್ರದೇಶವು ಅನೇಕ ಅಪರೂಪದ ವನ್ಯಜೀವಿಗಳು ಮತ್ತು ಇತಿಹಾಸಗಳಿಗೆ ನೆಲೆಯಾಗಿದೆ . ರಣಥಂಬೂರ್ ರಾಷ್ಟ್ರೀಯ ಉದ್ಯಾನವನವು ಇತಿಹಾಸದ ಅನ್ವೇಷಕರು ಮತ್ತು ವನ್ಯಜೀವಿ ಛಾಯಾಗ್ರಾಹಕರಿಗೆ ಅತ್ಯುತ್ತಮವಾದ ಸ್ಥಳವಾಗಿದೆ. ಈ ವನ ಪ್ರದೇಶವೂ ಕೂಡಾ ಅನೇಕ ಸಂಖ್ಯೆಯಲ್ಲಿ ಹುಲಿಗಳನ್ನು ಹೊಂದಿದೆ.

ಈ ಪ್ರದೇಶವು ಒಂದು ಕಾಲದಲ್ಲಿ ಮಹಾರಾಜರ ಭೇಟೆಯ ಪ್ರದೇಶವಾಗಿತ್ತು. ಈ ಮನಮೋಹಕ ಅಭಯಾರಣ್ಯದ ಹೊರತಾಗಿಯೂ ಇಲ್ಲಿ 10ನೇ ಶತಮಾನದ ಹಳೆಯ ರಣಥಂಬೂರ್ ಕೋಟೆ ಮತ್ತು ಛತ್ರಿಗಳ ಅವಶೇಷಗಳು ಮತ್ತು ಪುರಾತನ ದೇವಾಲಯವನ್ನು ಒಳಗೊಂಡಿದೆ.

6.ವಲ್ಲನಾಡು ಬ್ಲಾಕ್ ಬಕ್ (ಕೃಷ್ಣ ಮೃಗ) ಅಭಯಾರಣ್ಯ

ಭಾರತದ ದಕ್ಷಿಣಭಾಗದಲ್ಲಿರುವ ವಲ್ಲನಾಡು ಅಭಯಾರಣ್ಯವು ಅತ್ಯಂತ ಹೆಚ್ಚಿನ ಕೃಷ್ಣ ಮೃಗವನ್ನು ಹೊಂದಿರುವಂತಹ ಸ್ಥಳವಾಗಿದೆ. ತಿರುನೆಲ್ ವೆಲಿ ಈ ಅರಣ್ಯಪ್ರದೇಶಕ್ಕೆ ಹತ್ತಿರವಿರುವ ನಗರವಾಗಿದ್ದು ಇಲ್ಲಿ ಅಭಯಾರಣ್ಯಕ್ಕೆ ಭೇಟಿ ನೀಡ ಬಯಸುವವರಿಗೆ ತಂಗಲು ಹೋಟೇಲುಗಳಲ್ಲಿ ವಸತಿ ಸೌಕರ್ಯವು ಲಭ್ಯವಾಗುತ್ತದೆ.

ತೂತುಕುಡಿಯಿಂದ ತಿರುನೆಲ್ ವೆಲಿಗೆ ಬಸ್ಸುಗಳು ಮತ್ತು ಟ್ಯಾಕ್ಸಿಗಳ ಸೇವೆಯು ನಿರಂತರವಾಗಿ ಇಲ್ಲಿ ಸಿಗುತ್ತದೆ ಅಲ್ಲದೆ ಸರಕಾರಿ ಸರ್ಕ್ಯೂಟ್ ವಸತಿಗಳುತಿರುನೆಲ್ ವೆಲಿ ಮತ್ತು ತೂತುಕುಡಿ ಯಲ್ಲಿ ಸಿಗುತ್ತವೆ ಅಲ್ಲದೆ ತಮಿಳುನಾಡು ಪ್ರವಾಸಿ ವಸತಿಗೃಹಗಳೂ ಕೂಡಾ ಈ ಪ್ರದೇಶದಲ್ಲಿ ಲಭ್ಯವಿರುತ್ತದೆ.

Read more about: wildlife sanctuary karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X