Search
  • Follow NativePlanet
Share
» »ಪಂಚಕುಲಾದ ಮಾನಸಾದೇವಿ ಸನ್ನಿಧಿ!

ಪಂಚಕುಲಾದ ಮಾನಸಾದೇವಿ ಸನ್ನಿಧಿ!

ಹರ್ಯಾಣ ರಾಜ್ಯದ ಚಂಡೀಗಢ್ ನಗರದಿಂದ ನಾಲ್ಕಿಉ ಕಿ.ಮೀ ದೂರದಲ್ಲಿರುವ ಪಂಚಕುಲಾ ಪ್ರದೇಶದ ಬಿಲಾಸಪುರ ಎಂಬ ಗ್ರಾಮದ ಬಳಿ ಇರುವ ಮಾನಸಾ ದೇವಿ ದೇವಾಲಯವು ಸಾಕಷ್ಟು ಹೆಸರುವಾಸಿಯಾಗಿದೆ

By Vijay

ಮಾನಸಾದೇವಿ, ಹಿಂದುಗಳು ನಂಬುವಂತೆ ಶಕ್ತಿ ದೇವಿಯ ಒಂದು ಅವತಾರವೆ ಎನ್ನಲಾಗಿದೆ. ಆದರೆ ಈ ದೇವಿಯ ಕಥೆ ತುಸು ವಿಚಿತ್ರವಾಗಿದೆ. ಹೆಚ್ಚಾಗಿ ಉತ್ತರ ಭಾರತದಲ್ಲೆ ಆರಾಧಿಸಲ್ಪಡುವ ಈ ದೇವಿಯು ಕೆಲವು ಕಥೆಯ ಪ್ರಕಾರ ಶಿವನ ಮಗಳಾಗಿದ್ದರೆ, ಇನ್ನೊಂದು ನಂಬಿಕೆಯ ಪ್ರಕಾರ ಕಶ್ಯಪ ಮುನಿಗಳ ಪುತ್ರಿ ಎಂದು ಹೇಳಲಾಗುತ್ತದೆ.

ಹೆಚ್ಚಾಗಿ ಆದಿವಾಸಿಗಳೆ ಈಕೆಯನ್ನು ಹಿಂದೆ ಬಹುವಾಗಿ ಪೂಜಿಸುತ್ತಿದ್ದರು ಎನ್ನಲಾಗಿದೆ. ಅಷ್ಟೆ ಅಲ್ಲ, ಈಕೆಯನ್ನು ನಾಗಗಳ ದೇವಿ ಎಂದೂ ಸಹ ಕರೆಯಲಾಗುತ್ತದೆ. ಇಂದಿಗೂ ನಂಬುವಂತೆ ಯಾರು ಈಕೆಯನ್ನು ಪೂಜಿಸುವವರೊ ಅವರ ಸಕಲ ಇಷ್ಟಾರ್ಥಗಳನ್ನು ದೇವಿ ಈಡೇರಿಸುತ್ತಾಳೆಂಬ ವಿಚಾರವಿದೆ.

ಪಂಚಕುಲಾದ ಮಾನಸಾದೇವಿ ಸನ್ನಿಧಿ!

ಮಾನಸಾದೇವಿ, ಚಿತ್ರಕೃಪೆ: wikipedia

ಅದರಂತೆ, ಹಾವು ಕಡಿತಕ್ಕೊಳಗಾದವರು, ಸಂತಾನ ಭಾಗ್ಯವಿಲ್ಲದಿರುವವರು ಹೆಚ್ಚಾಗಿ ಈ ದೇವಿಯನ್ನು ಆರಾಧಿಸುತ್ತಾರೆ. ಏಕೆಂದರೆ ಈ ದೇವಿಯು ಯಾರು ತನ್ನನ್ನು ಪೂಜಿಸುವರೊ ಅವರ ಸಕಲ ಆಸೆಗಳನ್ನು ಪೂರೈಸುವಳು ಹಾಗೂ ಯಾರು ಈಕೆಯನ್ನು ಧಿಕ್ಕರಿಸುವರೊ ಅವರಿಗೆ ಎಲ್ಲಿಲ್ಲದ ಕಷ್ಟಗಳು ಬರುವಂತೆ ಮಾಡುತ್ತಾಳಂತೆ ಈ ದೇವಿ.

ಪುರಾಣದಲ್ಲಿ ಉಲ್ಲೇಖಿಸಿರುವಂತೆ ಮಾನಸಾ ದೇವಿಯು ಕಶ್ಯಪ ಮುನಿಗಳ ಪುತ್ರಿ. ಒಮ್ಮೆ ಲೋಕದಲ್ಲಿ ಹಾವು ಹಾಗೂ ಇತರೆ ಜಂತುಗಳ ಹಾವಳಿ ತಡೆಯಲಾರದಷ್ಟು ಹೆಚ್ಚಾಯಿತು. ಈ ಸಂದರ್ಭದಲ್ಲಿ ಎಲ್ಲರೂ ಕಶ್ಯಪ ಮುನಿಗಳಲ್ಲಿ ಪ್ರಾರ್ಥಿಸಿದಾಗ, ಕಶ್ಯಪರು ತಮ್ಮ ತಪೋಬಲದಿಂದ ಮನಸಿನಲ್ಲೆ ದೇವಿಯೊಬ್ಬಳನ್ನು ರೂಪಿಸಿಕೊಂಡು ಅವಳಿಗೆ ಮೂರ್ತ ರೂಪ ನೀಡಿದರು. ಆಕೆಯೆ ಮಾನಸಾ ದೇವಿ.

ಪಂಚಕುಲಾದ ಮಾನಸಾದೇವಿ ಸನ್ನಿಧಿ!

ಚಿತ್ರಕೃಪೆ: Barthateslisa

ಹೀಗೆ ಅವತಾರ ತಳೆದ ಮಾನಸಾ ದೇವಿ, ಬ್ರಹ್ಮನಿಂದ ಮಂತ್ರಶಕ್ತಿಗಳನ್ನು ಪಡೆದು ಸರ್ಪಗಳಿಗೆ ದೇವಿಯಾಗಿ ಲೋಕದಲ್ಲಿ ಸಮತೋಲನವುಂಟಾಗುವಂತೆ ಮಾಡಿದಳು. ಹೀಗೆ ಮುಂದುವರೆವ ಅವಳ ಕಥೆ ಕೊನೆಗೆ ಅವಳು ಜರತ್ಕರು ಎಂಬ ಮುನಿಯೊಂದಿಗೆ ವಿವಾಹವಾಗಿ ಆಸ್ತಿಕನೆಂಬ ಪುತ್ರನನ್ನು ಪಡೆದಳು. ಆಸ್ತಿಕನು ಜರತ್ಕರುವಿನ ಹಿರಿಯರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿ ಅವರಿಗೆ ಮೋಕ್ಷ ದೊರಕಿಸಿಕೊಟ್ಟನು.

ಈ ರೀತಿಯಾಗಿ ಮಾನಸಾ ದೇವಿ ಅಂದರೆ ಮನಸ್ಸಿನಿಂದ ಉತ್ಪತ್ತಿಯಾದ ದೇವಿಯಾಗಿ ಪ್ರಸಿದ್ಧಳಾಗಿದ್ದಾಳೆ. ಯಾರು ಈ ಮಾನಸ ದೇವಿ ಬಳಿ ಅತಿ ಪವಿತ್ರ ಭಾವನೆಯ ಮನಸ್ಸಿನಿಂದ ಪ್ರಾರ್ಥಿಸುತ್ತಾರೊ ಅವರೆಲ್ಲ ಬಯಕೆಗಳನ್ನು ಈ ಚಾಚು ತಪ್ಪದೆ ನೆರವೇರಿಸುತ್ತಾಳೆಂಬ ಅಚಲವಾದ ನಂಬಿಕೆ ಇಂದಿಗೂ ಭಕ್ತರಲ್ಲಿದೆ. ಹಾಗಾಗಿ ಬಹಳಷ್ಟು ಜನರು ಈಕೆಯ ಭೇಟಿಗಾಗಿ ಇಲ್ಲಿಗೆ ಬರುತ್ತಾರೆ.

ಪಂಚಕುಲಾದ ಮಾನಸಾದೇವಿ ಸನ್ನಿಧಿ!

ಯಜ್ಞ ಶಾಲೆ, ಚಿತ್ರಕೃಪೆ: Ekabhishek

ಈ ಲೇಖನದಲ್ಲಿ ತಿಳಿಸಲಾಗಿರುವ ಮಾನಸಾ ದೇವಿ ದೇವಾಲಯವು ಬಿಲಾಸಪುರ ಎಂಬ ಹಳ್ಳಿಯ ಬಳಿ ಸ್ಥಿತವಿದೆ. ಈ ಹಳ್ಳಿಯು ಹರಿಯಾಣ ರಾಜ್ಯದ ಪಂಚಕುಲಾ ಜಿಲ್ಲೆಯ ಪಂಚಕುಲಾ ನಗರದಿಂದ ಕೆಲವೆ ಕೆಲವು ಕಿ.ಮೀ ಗಳಷ್ಟು ದೂರದಲ್ಲಿದೆ. ಇನ್ನೂ ಪಂಚಕುಲಾ ಚಂಡೀಗಢ್ ನಗರದಿಂದ ಕೇವಲ ನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿದೆ.

ನವರಾತ್ರಿ ಹಬ್ಬದ ಸಮಯದಲ್ಲಿ ಈ ದೇವಾಲಯಕ್ಕೆ ಜನಸಾಗರವೆ ಹರಿದುಬರುತ್ತದೆ. ಒಂಭತ್ತು ದಿನಗಳ ಆ ಉತ್ಸವದಲ್ಲಿ ಏನಿಲ್ಲವೆಂದರೂ ಲಕ್ಷಾನುಗಟ್ಟಲೆಯ ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಗಡ ಗಡ ನಡುಗಿಸುವ ವನಶಂಕರಿ ದೇವಿ!

ನೂರು ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಈ ದೇವಾಲಯ ಸಂಕೀರ್ಣವು ಯಜ್ಞ ಶಾಲೆಯಂತರ ಇತರೆ ರಚನೆಗಳನ್ನು ಒಳಗೊಂಡಿದೆ. ಶಿವಾಲಿಕ್ ಪರ್ವತಗಳ ಬುಡದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದ್ದು ಸುತ್ತಲೂ ಅದ್ಭುತವಾದ ರಮಣೀಯ ಪರಿಸರದಿಂದ ಕಂಗೊಳಿಸುತ್ತದೆ.

ಕೆಲವು ಅದ್ಭುತ ಕಾಳಿ ದೇವಾಲಯಗಳು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X