Search
  • Follow NativePlanet
Share
» »ಮನಸೆಳೆವ ಜಗನ್ನಾಥ ಪುರಿ ಮಂದಿರ ಮತ್ತು ರಥ ಯಾತ್ರೆ

ಮನಸೆಳೆವ ಜಗನ್ನಾಥ ಪುರಿ ಮಂದಿರ ಮತ್ತು ರಥ ಯಾತ್ರೆ

By Vijay

ಭಾರತದ ಪೂರ್ವದ ಬಂಗಾಳ ಕೊಲ್ಲಿಯಲ್ಲಿ ಹೆಮ್ಮೆಯಿಂದ ನಿಂತಿರುವ ರಾಜ್ಯಗಳಲ್ಲಿ ಒಂದಾಗಿದೆ ಒಡಿಶಾ. ಈ ರಾಜ್ಯವು ಸಾಕಷ್ಟು ಪ್ರವಾಸಿ ಮಹತ್ವ ಪಡೆದಿರುವ ರಾಜ್ಯವಾಗಿದ್ದು ಹಲವು ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದೆ.

ಇಲ್ಲಿ ಕಂಡುಬರುವ ಧಾರ್ಮಿಕ ಆಕರ್ಷಣೆಗಳಲ್ಲಿ ಬಹು ಪ್ರಮುಖವಾಗಿದೆ ಜಗನ್ನಾಥ ಮಂದಿರ ಅಥವಾ ದೇವಾಲಯ. ಜಗನ್ನಾಥ ವಿಷ್ಣುವಿನ ಒಂದು ರೂಪ. ಈ ಪ್ರಖ್ಯಾತ ದೇವಾಲಯವು ರಾಜ್ಯದ ಒಂದು ಸುಂದರ ನಗರವಾದ ಪುರಿಯಲ್ಲಿದೆ.

ಈ ದೇವಾಲಯ ಎಷ್ಟೊಂದು ಪ್ರಸಿದ್ಧವಾಗಿದೆ ಎಂದರೆ ಪುರಿ ನಗರವನ್ನು ಜಗನ್ನಾಥ ಪುರಿ ಅಥವಾ ಪುರಿ ಜಗನ್ನಾಥ ಎಂತಲೆ ಕರೆಯುತ್ತಾರೆ. ಇದು ಒಡಿಶಾದ ರಾಜಧಾನಿ ಭುವನೇಶ್ವರದಿಂದ ಸುಮಾರು 60 ಕಿ.ಮೀ. ದೂರದಲ್ಲಿದೆ.

ಪುರಿ ಜಗನ್ನಾಥ ಮಂದಿರದ ಮತ್ತೊಂದು ವಿಶೇಷವೆಂದರೆ ಇಲ್ಲಿ ಅತಿ ಸಡಗರದಿಂದ, ವಿಶ್ವವೆ ಬೆರುಗುಗೊಂಡು ನೋಡುವಂತೆ ಆಚರಿಸಲಾಗುವ ವಾರ್ಷಿಕ ರಥ ಯಾತ್ರೆ. ಹಿಂದುಗಳು ನಡೆದುಕೊಳ್ಳುವ ನಾಲ್ಕು ಪವಿತ್ರ ಧಾಮಗಳಾದ ಚಾರ್ ಧಾಮ್ ಕ್ಷೇತ್ರಗಳ ಪೈಕಿ ಜಗನ್ನಾಥವೂ ಸಹ ಒಂದು. ನಂಬಿಕೆಯಂತೆ ಪುರಿಗೆ ಭೇಟಿ ನೀಡದಿದ್ದರೆ ಭಾರತದಲ್ಲಿ ತೀರ್ಥಯಾತ್ರೆ ಪೂರ್ಣಗೊಳ್ಳುವುದಿಲ್ಲವಂತೆ.

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಪುರಿಯಲ್ಲಿ ಜರುಗುವ ಜಗನ್ನಾಥನಿಗೆ ಸಂಬಂಧಿಸಿದ ರಥ ಯಾತ್ರೆಯು ವಿಶಿಷ್ಟವಾಗಿಯೂ ಮಹತ್ವದ್ದಾಗಿಯೂ ಇದೆ. ಇದು ಮೂಲವಾಗಿ ಜಗನ್ನಾಥನು ಮಾವಸಿಯ ಸನ್ನಿಧಿ ಮೂಲಕ ಗುಂಡಿಚಾ ಮಂದಿರಕ್ಕೆ ಭೇಟಿ ನೀಡಿ ಕೆಲ ಸಮಯ ತಂಗಿ ಮತ್ತೆ ಮರಳುವುದರ ಸಂಕೇತವಾಗಿದೆ.

ಚಿತ್ರಕೃಪೆ: I, G-u-t

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಇದೊಂದು ವಾರ್ಷಿಕ ಉತ್ಸವವಾಗಿದ್ದು ಪ್ರತಿ ವರ್ಷ ಆಶಾಢ ಶುಕ್ಲ ಪಕ್ಷದ ದ್ವಿತಿಯಾದಂದು ಪ್ರಾರಂಭಗೊಳ್ಳುತ್ತದೆ. ಅಂದರೆ ಜುಲೈ ಸಂದರ್ಭದಲ್ಲಿ ಈ ಅದ್ಭುತ ವಾರ್ಷಿಕ ಉತ್ಸವಕ್ಕೆ ಚಾಲನೆ ದೊರೆಯುತ್ತದೆ.

ಚಿತ್ರಕೃಪೆ: Ilya Mauter

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ರಥ ಯಾತ್ರೆಯ ಭಾಗವಾಗಿ ಜಗನ್ನಾಥ, ಬಾಲಭದ್ರ ಹಾಗೂ ಸುಭದ್ರರ ಉತ್ಸವ ಮೂರ್ತಿಗಳನ್ನು ದೇವಾಲಯಗಳ ಆಕಾರದಲ್ಲಿ ನಿರ್ಮಿಸಿ ಸಿಂಗರಿಸಲಾದ ಮೂರು ರಥಗಳಲ್ಲಿ ಮೆರವಣಿಗೆ ಮಾಡುತ್ತ ಗುಂಡಿಚಾ ಮಂದಿರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ನಂತರ ಅಲ್ಲಿ ಒಂಭತ್ತು ದಿನಗಳ ಕಾಲ ತಂಗಿ ಮತ್ತೆ ಮುಖ್ಯ ದೇವಾಲಯಕ್ಕೆ ಮರಳಲಾಗುತ್ತದೆ.

ಚಿತ್ರಕೃಪೆ: Bpkp

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಹೀಗೆ ಜಗನ್ನಾಥನು ಹಿತಿರುಗುವ ಜಾತ್ರೆಯನ್ನು ಬಹುದಾ ಜಾತ್ರೆ ಎಂದು ಕರೆಯುತ್ತಾರೆ ಹಾಗೂ ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಅದ್ಭುತ ಉತ್ಸವದಲ್ಲಿ ಜಗತ್ತಿನ ನಾನಾ ಭಾಗಗಳಿಂದ ಬಂದು ಪಾಲ್ಗೊಳ್ಳುತ್ತಾರೆ.

ಚಿತ್ರಕೃಪೆ: I, G-u-t

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಈ ಉತ್ಸವ ಅಂದರೆ ರಥ ಯಾತ್ರೆಯ ಪ್ರಾರಂಭದಲ್ಲಿ ಜಗನ್ನಾಥನ ಮುಖ್ಯ ದೇವಾಲಯದಲ್ಲಿರುವ ಜಗನ್ನಾಥನ ಪ್ರತಿಮೆ ಹಾಗೂ ಸುದರ್ಶನ ಚಕ್ರ, ಬಾಲಭದ್ರ ಹಾಗೂ ಸುಭದ್ರಳ ಪ್ರತಿಮೆಗಳನ್ನು ವಿಧಿ ವಿಧಾನಗಳ ಮೂಲಕ ಅವುಗಳ ಸ್ಥಾನದಿಂದ ತೆಗೆದು ಭವ್ಯವಾಗಿ ನಿರ್ಮಿಸಲಾದ ರಥಗಳಲ್ಲಿ ಪ್ರಷ್ಠಾಪಿಸಿ ಮೆರವಣಿಗೆ ಒಯ್ಯಲಾಗುತ್ತದೆ.

ಚಿತ್ರಕೃಪೆ: Krupasindhu Muduli

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಈ ಉತ್ಸವದ ಇತಿಹಾಸ ಹನ್ನೊಂದನೇಯ ಶತಮಾನದವರೆಗೂ ಕರೆದೊಯ್ಯುತ್ತದೆ ಅಲ್ಲದೆ, ಈ ಆಚರಣೆಯ ಕುರಿತು ಬ್ರಹ್ಮ ಪುರಾಣ, ಪದ್ಮ ಪುರಾಣ, ಸ್ಕಂದ ಪುರಾಣ ಹಾಗೂ ಕಪಿಲ ಸಂಹಿತದಲ್ಲಿ ಉಲ್ಲೇಖಿಸಲಾಗಿರುವುದನ್ನು ಕಾಣಬಹುದು.

ಚಿತ್ರಕೃಪೆ: Radeeh

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಈ ರಥ ಯಾತ್ರೆಯನ್ನು ಬಲು ಅದ್ದೂರಿಯಿಂದ ನೆರವೇರಿಸಲಾಗುತ್ತದೆ ಹಾಗೂ ರಥಗಳನ್ನು ನೆರೆದ ಭಕ್ತ ಸಮೂಹವೆ ಎಳೆದೊಯ್ಯುತ್ತಾರೆ. ಹೀಗಾಗಿ ರಥಗಳನ್ನು ಎಳೆಯಲು ಒಂದು ರೀತಿಯ ಸ್ಪರ್ಧೆಯೆ ಏರಪಟ್ಟಿದೆ ಎನ್ನುವುದರ ಮಟ್ಟಿಗೆ ಜನಸಂದಣಿ ಉಂಟಾಗಿರುತ್ತದೆ.

ಚಿತ್ರಕೃಪೆ: Kajal121

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಜಗನ್ನಾಥನನ್ನು ಬಾಲಭದ್ರ ಹಾಗೂ ಸುಭದ್ರರ ಜೊತೆ ಪ್ರಮುಖವಾಗಿ ಗುಂಡಿಚಾ ದೇವಾಲಯಕ್ಕೆ ಕರೆದೊಯ್ಯಲು ಬಡಾ ದಂಡಾ ಎಂಬ ರಾಜ ವೈಭವದ ಮಾರ್ಗದ ಮೂಲಕ ಕರೆದೊಯ್ಯಲಾಗುತ್ತದೆ. ಗುಂಡಿಚಾ ದೇವಾಲಯ ಜಗನ್ನಾಥ ಮಂದಿರದಿಂದ ಮೂರು ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Kamalakanta777

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಗುಂಡಿಚಾ ದೇವಾಲಯ ವರ್ಷದ ಬಹುತೇಕ ಸಮಯ ಸಾಕಷ್ಟು ಜನರಿಂದ ಭೇಟಿ ನೀಡಲ್ಪಡದೆ ಹೋದರೂ ಈ ರಥ ಯಾತ್ರೆಯ ಸಂದರ್ಭದಲ್ಲಿ ಒಂಭತ್ತು ದಿನಗಳ ಕಾಲ ಜನರಿಂದ ಕಿಕ್ಕಿರಿದು ತುಂಬಿರುತ್ತದೆ. ಜಗನ್ನಾಥನ ಹಲವು ಚಿತ್ರಗಳು ದೇವಾಲಯದೆಲ್ಲೆಡೆ ರಾರಾಜಿಸುತ್ತವೆ.

ಚಿತ್ರಕೃಪೆ: Aditya Mahar

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ರಥ ಯಾತ್ರೆಯಲ್ಲಿ ಬಳಸಲಾಗುವ ಮೂರು ರಥಗಳನ್ನು ನಿರ್ದಿಷ್ಟವಾದ ಹೆಸರುಗಳಿಂದ ಕರೆಯಲಾಗುತ್ತದೆ. ಜಗನ್ನಾಥನಿರುವ ಮುಖ್ಯ ರಥಕ್ಕೆ ನಂದಿಘೋಷ ಎಂದು ಕರೆದರೆ ಬಾಲಭದ್ರನಿರುವ ರಥಕ್ಕೆ ತಳಧ್ವಜ ಹಾಗೂ ಸುಭದೆಯಿರುವ ರಥಕ್ಕೆ ದರ್ಪದಲನ ಎಂಬ ಹೆಸರುಗಲಿಂದ ಕರೆಯಲಾಗುತ್ತದೆ.

ಚಿತ್ರಕೃಪೆ: ASIM CHAUDHURI

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಒಂದೊಮ್ಮೆ ಜಗನ್ನಾಥನನ್ನು ಗುಂಡಿಚಾ ಮಂದಿರಕ್ಕೆ ಕರೆದೊಯ್ದರೆಂದರೆ ಅಲ್ಲಿನ ಬ್ರಾಹ್ಮಣರಿಂದ ಕೆಲವು ಶಾಸ್ತ್ರೋಕ್ತವಾದ ವಿಧಿ ವಿಧಾನಗಳ ಪೂಜೆಗಳು ನಡೆಯುತ್ತವೆ. ಇನ್ನೊಂದು ವಿಶೆಷವೆಂದರೆ ಸಾಮಾನ್ಯವಾಗಿ ಜಗನ್ನಾಥನ ಮುಖ್ಯ ದೇವಾಲಯದಲ್ಲಿ ಕಾರ್ಯನಿರ್ವಹಿಸುವ ದೇವದಾಸಿಯರು ಗುಂದಿಚಾ ಮಂದಿರದಲ್ಲಿ ಕಾರ್ಯನಿರ್ವಹಿಸುತ್ತಾರೆ. ಆದರೆ ಮುಖ್ಯ ದೇವಾಲಯದಲ್ಲಿರುವ ಲಕ್ಷಿಯನ್ನು ಮಾತ್ರ ಇಲ್ಲಿ ಕರೆತರಲಾಗುವುದಿಲ್ಲ.

ಚಿತ್ರಕೃಪೆ: Chinmayee Mishra

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ರಥ ಯಾತ್ರೆಯ ಸಂದರ್ಭದಲ್ಲಿ ಐದನೆಯ ದಿನವನ್ನು ಹೇರಾ ಪಂಚಮಿ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಸಂಖ್ಯಾತ ಭಕ್ತಾದಿಗಳು ನೆರೆದಿರುತ್ತಾರೆ. ಲಕ್ಷ್ಮಿಯನ್ನು ರಥ ಯಾತ್ರೆಯ ಸಂದರ್ಭದಲ್ಲಿ ಜಗನ್ನಾಥ ಬಿಟ್ಟು ಹೋದ ಕಾರಣ ಆಕೆ ರೋಷಗೊಂಡು ಸುವರ್ಣ ಲಕ್ಷ್ಮಿಯಾಗಿ ಗುಂಡಿಚಾ ಮಂದಿರಕ್ಕೆ ಭೇಟಿ ನೀಡುವುದೆ ಹೇರಾ ಪಂಚಮಿಯ ಸಂಕೇತ ಹಾಗೂ ವಿಶೇಷವಾಗಿದೆ.

ಚಿತ್ರಕೃಪೆ: Dreamodisha

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಈ ಸಂದರ್ಭದಲ್ಲಿ ಲಕ್ಷ್ಮಿ ದೇವಿಯನ್ನು ಸ್ವಾಗತಿಸಿ ಆಕೆಯನ್ನು ಜಗನ್ನಾಥನ ಮುಂದೆ ಕೂರಿಸುತ್ತಾರೆ. ಇಬ್ಬರ ದಿವ್ಯ ದರ್ಶನ ಪಡೆಯಲು ಸಾಕಷ್ಟು ಭಕ್ತಾದಿಗಳು ಇಲ್ಲಿ ಸೇರಿರುತ್ತಾರೆ. ನಂತರ ಲಕ್ಷ್ಮಿಯು ಸಾಂಕೇತಿಕವಾಗಿ ಜಗನ್ನಾಥನಿಗೆ ಮನೆಗೆ ಮರಳಲು ಕೇಳಿಕೊಳ್ಳುತ್ತಾಳೆ ಹಾಗೂ ಜಗನ್ನಾಥನು ಆಕೆಯ ಪ್ರಾರ್ಥನೆಗೆ ಒಪ್ಪಿಕೊಳ್ಳುತ್ತಾನೆ.

ಚಿತ್ರಕೃಪೆ: Iamharishjoshi

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ನಂತರ ಸಂಜೆ ಲಕ್ಷ್ಮಿ ಮರಳುವಾಗ ಜಗನ್ನಾಥ ತನ್ನನ್ನು ಬಿಟ್ಟು ಹೋದುದರ ಸೆಡಿಗಾಗಿ ಅವನ ರಥವಾದ ನಂದಿಘೋಷದ ಒಂದು ಭಾಗವನ್ನು ನಾಶಗೊಳಿಸುತ್ತಾಳೆ. ಇದನ್ನು ಸಹ ಆಚರಣೆಯಲ್ಲಿ ಅನುಷ್ಠಾನ ಮಾಡಲಾಗಿದ್ದು ಇದನ್ನು ರಥ ಭಂಗಾ ಎಂದು ಕರೆಯುತ್ತಾರೆ. ನಂತರ ಲಕ್ಷ್ಮಿಯು ಬಂದ ಮಾರ್ಗ ಬಿಟ್ಟು ರಹಸ್ಯ ಮಾರ್ಗವೊಂದರ ಮೂಲಕ ಮುಖ್ಯ ದೇವಾಲಯಕ್ಕೆ ತೆರಳುತ್ತಾಳೆ.

ಚಿತ್ರಕೃಪೆ: Rangan Datta Wiki

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಇದಾದ ನಂತರ ದಕ್ಷಿಣ ಮೋಡ ಆಚರಿಸಲಾಗುತ್ತದೆ. ಹಿಂತಿರುಗುವ ಕಾರ್ಯದ ಅಂಗವಾಗಿ ರಥಗಳನ್ನು ದಕ್ಷಿಣಾಭಿಮುಖವಾಗಿ ಮುಖ್ಯ ದೇವಾಲಯದ ಎದುರು ದಿಕ್ಕಿನಲ್ಲಿ ನಿಲ್ಲಿಸಲಾಗುತ್ತದೆ. ಈ ದಿನದಿಂದ ಮೂರು ದಿನಗಳ ಕಾಲ ರಾಸ ಲೀಲೆಯ ಉತ್ಸವವನ್ನು ಆಚರಿಸಲಾಗುತ್ತದೆ.

ಚಿತ್ರಕೃಪೆ: Kajal121

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಕೊನೆಯದಾಗಿ ಬಹುದಾ ಯಾತ್ರೆ ಆರಂಭಗೊಳ್ಳುತ್ತದೆ. ಇದು ಜಗನ್ನಾಥನು ಮತ್ತೆ ತನ್ನ ಮುಖ್ಯ ದೇವಾಲಯಕ್ಕೆ ಹಿಂತಿರುಗುವುದರ ಸಂಕೇತವಾಗಿದೆ. ಹೀಗೆ ಒಂಭತ್ತು ದಿನಗಳ ಕಾಲ ಪುರಿಯ ರಥ ಯಾತ್ರೆಯು ಅತಿ ವಿಜೃಂಭಣೆಯಿಂದ ಸಂಪನ್ನಗೊಳ್ಳುತ್ತದೆ.

ಚಿತ್ರಕೃಪೆ: I, G-u-t

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಇನ್ನೂ ಪುರಿ ಜಗನ್ನಾಥ ಮಂದಿರವು ನೋಡಲು ವಿಶೇಷವಾಗಿದ್ದು ಸಾಕಷ್ಟು ಜನರು ಈ ಅದ್ಭುತ ವಿನ್ಯಾಸದ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Os Rúpias

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಈ ದೇವಾಲಯದಲ್ಲಿರುವ ಮುಖ್ಯ ದೇವರೆಂದರೆ ಜಗನ್ನಾಥ ದೇವರು(ಹೆಸರೇ ಸೂಚಿಸುವಂತೆ ಜಗದ ಒಡೆಯ), ಬಾಲಭದ್ರ ದೇವರು ಮತ್ತು ಸುಭದ್ರ ದೇವತೆ. ದೇವಸ್ಥಾನವು ತನ್ನ ಭವ್ಯ ಸೆಳವಿನಿಂದ ಪ್ರಾಚೀನ ಯುಗವನ್ನು ನೆನಪಿಸುವಂತಿದೆ.

ಚಿತ್ರಕೃಪೆ: Achilli Family | Journeys

ಆಸಕ್ತಿಕರ ಪುರಿ ಜಗನ್ನಾಥ:

ಆಸಕ್ತಿಕರ ಪುರಿ ಜಗನ್ನಾಥ:

ಘಂಟೆಯ ನಿನಾದ, 65 ಅಡಿ ಎತ್ತರದ ಅದ್ಭುತ ಪಿರಾಮಿಡ್ ಮಾದರಿ ಕಟ್ಟಡ, ಪ್ರತೀ ಗೋಡೆಗಳ ಮೇಲೆ ವಿವರಗಳನ್ನು ತುಂಬಾ ಜಾಗರೂಕತೆಯಿಂದ ಕೆತ್ತಲಾಗಿದೆ. ಕಂಬಗಳು ಕೃಷ್ಣ ದೇವರ ಜೀವನವನ್ನು ಬಿಂಬಿಸುತ್ತವೆ.

ಚಿತ್ರಕೃಪೆ: Djrusty

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X