Search
  • Follow NativePlanet
Share
» »ಲೋಣಾವಲಾ ಜಿನಪ್ರೀಯತೆಯ ರಹಸ್ಯ!

ಲೋಣಾವಲಾ ಜಿನಪ್ರೀಯತೆಯ ರಹಸ್ಯ!

By Vijay

ಲೋಣಾವಲಾ ಮಹಾರಾಷ್ಟ್ರದಲ್ಲಿ ಸಾಕಷ್ಟು ಹೆಸರುಗಳಿಸಿರುವ ಗಿರಿಧಾಮ. ಮುಂಬೈ, ಪುಣೆ ನಿವಾಸಿಗಳಿಗೆ ವೆಕೆಂಡ್ ಬಂತೆಂದರೆ ಸಾಕು ಲೋಣಾವಲಾಗೆ ಭೇಟಿ ನೀಡಲು ಹಾತೊರೆಯುತ್ತಾರೆ. ಹಾಗಂದ ಮಾತ್ರಕ್ಕೆ ಬೇರೆ ಭಾಗಗಳಿಂದ ಇಲ್ಲಿಗೆ ಜನರು ಬರುವುದಿಲ್ಲವೆಂದೇನಿಲ್ಲ.

ನಿಮಗಿಷ್ಟವಾಗಬಹುದಾದ : ಮಹಾರಾಷ್ಟ್ರದ ಮೈನಡುಗಿಸುವಂತಹ 30 ಕೋಟೆಗಳು

ಲೋಣಾವಲಾ ಮುಖ್ಯವಾಗಿ ತನ್ನ ಸೃಷ್ಟಿ ಸೌಂದರ್ಯದಿಂದ ಹೆಸರುವಾಸಿಯಾಗಿದೆ. ಚಾರಣ ಮಾರ್ಗಗಳಿವೆ, ಕೋಟೆ ತಾಣಗಳಿವೆ, ದಟ್ಟ ಹಸಿರಿನಿಂದ ಕೂಡಿದ ಭೂದೃಶ್ಯಗಳಿವೆ, ಮೈದಾನಗಳಿವೆ, ಬೆಟ್ಟಗಳಿವೆ, ಕೆರೆಗಳಿವೆ, ಜಲಪಾತ ಕೇಂದ್ರಗಳಿವೆ, ವೀಕ್ಷಣಾ ತಾಣಗಳಿವೆ ಹೀಗೆ ಸಾಕಷ್ಟು ಆಕರ್ಷಣೆಗಳಿಂದ ಎಲ್ಲ ವರ್ಗದ ಎಲ್ಲ ವಯಸ್ಸಿನ ಜನರನ್ನು ಈ ಸುಂದರ ಗಿರಿಧಾಮ ಸೆಳೆಯುತ್ತದೆ.

ಪುಣೆ ಜಿಲ್ಲೆಯಲ್ಲಿರುವ ಲೋಣಾವಲಾ ಪುಣೆ ನಗರ ಕೇಂದ್ರದಿಂದ 64 ಕಿ.ಮೀ ಹಾಗೂ ಮುಂಬೈ ನಗರಕೇಂದ್ರದಿಂದ 96 ಕಿ.ಮೀ ಗಳಷ್ಟು ದೂರದಲ್ಲಿದೆ. ಪುಣೆ ಹಾಗೂ ಮುಂಬೈ ಈ ಎರಡೂ ನಗರಗಳಿಂದಲೂ ಲೋಣಾವಲಾಗೆ ತಲುಪಲು ಬಸ್ಸು ಹಾಗೂ ರೈಲು ಲಭ್ಯವಿದೆ. ಲೋಣಾವಲಾದ ಕೆಲವು ಸುಂದರ ಚಿತ್ರಗಳು ಹಾಗೂ ಮಾಹಿತಿ ನಿಮಗಾಗಿ.

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಲೋಣಾವಲಾ ಮೂಲತಃ ಒಂದು ಗಿರಿಧಾಮ ಪ್ರದೇಶವಾಗಿದ್ದು ಪಶ್ಚಿಮಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಬರುತ್ತದೆ. ಇದರ ಜೊತೆ ಜೊತೆಯಾಗೆ ಇರುವ ಖಂಡಾಲಾ ಜೊತೆಗೆ ಸೇರಿ ಇವು ಅವಳಿ ಪ್ರವಾಸಿ ಆಕರ್ಷಣೆಗಳಾಗಿ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಚಿತ್ರಕೃಪೆ: Alosh Bennett

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಇದು ಗಿರಿಧಾಮ ಪ್ರದೇಶವಾಗಿರುವುದರಿಂದ ವರ್ಷದ ಎಲ್ಲಾ ಸಮಯದಲ್ಲೂ ಲೋಣಾವಲಾಗೆ ಭೇಟಿ ನೀಡಬಹುದಾದರೂ ವಿಶೇಷವಾಗಿ ಮಳೆಗಾಲ ಹಾಗೂ ನಂತರದ ಸಮಯದಲ್ಲಿ ಇಲ್ಲಿ ಪ್ರವಾಸಿ ಚಟುವಟಿಕೆಗಳು ತೀಕ್ಷ್ಣಗೊಳ್ಳುತ್ತವೆ. ಕಾರಣ ಇಲ್ಲಿನ ಸೌಂದರ್ಯ ನೂರ್ಮಡಿಗೊಳ್ಳುವುದೆ ಇದಕ್ಕೆ ಕಾರಣವಾಗಿದೆ.

ಚಿತ್ರಕೃಪೆ: Amogh Sarpotdar

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಲೋಣಾವಲಾಗೆ ಭೇಟಿ ನೀಡಿದರೆ ಅದರ ಸುತ್ತಮುತ್ತಲಿನಲ್ಲಿ ಕೆಲವು ಭವ್ಯ ಆಕರ್ಷಣೆಗಳಿವೆ. ಈ ಆಕರ್ಷಣೆಗಳು ಏಷ್ಟೊಂದು ಅದ್ಭುತವಾಗಿದೆಯೆಂದರೆ ನೋಡುತ್ತ ನೋಡುತ್ತ ಪ್ರಕೃತಿ ಮಾತೆಗೆ ಮನದಾಳದಿಂದ ಧನ್ಯವಾದಗಳನ್ನು ಅರ್ಪಿಸಿರುತ್ತೇವೆ.

ಚಿತ್ರಕೃಪೆ: Arjun Singh Kulkarni

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ರಾಜಮಾಚಿ ವೀಕ್ಷಣಾ ಕೇಂದ್ರ : ಲೋಣಾವಲಾದಿಂದ ಆರುವರೆ ಕಿ.ಮೀ ಗಳಷ್ಟು ದೂರದಲ್ಲಿದೆ ಈ ಸುಂದರ ವೀಕ್ಷಣಾ ಕೇಂದ್ರ. ಇಲ್ಲಿಂದ ಸಹ್ಯಾದ್ರಿಯ ಮನಮೋಹಕ ನೋಟವಂತೂ ವರ್ಣಿಸಲಸಾಧ್ಯ.

ಚಿತ್ರಕೃಪೆ: Kandoi.sid

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಛತ್ರಪತಿ ಶಿವಾಜಿ ಮಹಾರಾಜನ ಕೋಟೆಯಾಗಿದ್ದ ರಾಚ ಮಾಚಿ ಎಂದಿಗೂ ಮರೆಯಲಾಗ ಸುಂದರ ಚಾರಣದ ತಲುಪಬಹುದಾದ ರೋಮಾಂಚಕ ಬೆಟ್ಟ ಕೋಟೆಯಾಗಿದೆ.

ಚಿತ್ರಕೃಪೆ: Rishanimates

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಲೋಣಾವಲಾದಲ್ಲಿ ಕುಟುಂಬ ಸಮೇತರಾಗಿ ಹಾಯಾಗಿ ಸಮಯ ಕಳೆಯಲು ಉದ್ಯಾನ, ಕೃತಕ ಜಲಪಾತ ತಾಣಗಳಿವೆ. ವಾಲ್ವಾನ್ ಡ್ಯಾಮ್ ಮತ್ತು ಟಾಟಾ ಉದ್ಯಾನ ಲೋಣಾವಲಾದಲ್ಲಿ.

ಚಿತ್ರಕೃಪೆ: BeefyBrian

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಲೋಣಾವಲಾದಲ್ಲಿರುವ ವಾಲ್ವಾನ್ ಜಲಾಶಯ. ಮಳೆಗಾಲದ ಸಮ್ದರ್ಭದಲ್ಲಿ ಇದರಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ನೀರು ಸೇರಿ ಸುತ್ತಲೂ ಸುಂದರವಾದ ಭೂದೃಶ್ಯಾವಳಿಗಳನ್ನು ಕಾಣಬಹುದು.

ಚಿತ್ರಕೃಪೆ: BeefyBrian

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಲೋಣಾವಲಾ ಕೆರೆ ಇಲ್ಲಿರುವ ಇನ್ನೊಂದು ನಯನ ಮನೋಹರ ಆಕರ್ಷಣೆ. ವಿಶೇಷವೆಂದರೆ ಮಳೆಗಾಲದ ಸಂದರ್ಭದಲ್ಲಿ ಮಾತ್ರವೆ ಈ ಕೆರೆ ಮದುವಣಗಿತ್ತಿಯಂತೆ ಸಿಂಗರಿಸಿಕೊಳ್ಳುತ್ತದೆ. ಉಳಿದ ಸಮಯದಲ್ಲಿ ಹೆಚ್ಚಾಗಿ ಒಣಗಿಹೋಗುತ್ತದೆ ಈ ಕೆರೆ.

ಚಿತ್ರಕೃಪೆ: Bvanarse

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಖಂಡಾಲಾ : ಲೋಣಾವಲಾದಿಂದ ಕೇವಲ ಐದು ಕಿ.ಮೀ ದೂರದಲ್ಲಿರುವ ಖಂಡಾಲಾ ಬೆಟ್ಟ ಪ್ರದೇಶಗಳು ರೋಮಾಂಚಕ ತಾಣವಾಗಿದ್ದು ಇಲ್ಲಿಯೂ ಸಾಕಷ್ಟು ಅದ್ಭುತಗಳನ್ನು ನೋಡಬಹುದಾಗಿದೆ. ಅಲ್ಲದೆ ಖಂಡಾಲಾ ಮುಂಬೈ ನಿವಾಸಿಗರ ನೆಚ್ಚಿನ ವಾರಾಂತ್ಯರ ರಜಾ ತಾಣವಾಗಿದೆ.

ಚಿತ್ರಕೃಪೆ: Vishalsdhumal

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಡ್ಯೂಕ್ಸ್ ನೋಸ್ : ಸ್ಥಳೀಯವಾಗಿ ಅಂದರೆ ಮರಾಠಿಯಲ್ಲಿ ಇದನ್ನು ನಾಗಫಣಿ ಎಂದು ಕರೆಯುತ್ತಾರೆ ಕಾರಣ, ಇದು ಹಾವಿನ ಹೆಡೆಯಂತೆ ಕಂಡುಬರುತ್ತದೆ. ಅಲ್ಲದೆ ವೆಲ್ಲಿಂಗ್ಟನ್ ನ ಡ್ಯೂಕ್ ನ ಮೂಗು ಸಹ ಈ ಮೊನಚಾದ ಬೆಟ್ಟದಂತಿದ್ದಿದ್ದರಿಂದ ಇದಕ್ಕೆ ಡ್ಯೂಕ್ ನೋಸ್ ಎಂಬ ಹೆಸರು ಬಂದಿದೆ. ಇದನ್ನು ಅದ್ಭುತ ಚಾರಣದ ಮೂಲಕ ತಲುಪಬಹುದು.

ಚಿತ್ರಕೃಪೆ: Alewis2388

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಅಮೃತಾಂಜನ್ ಪಾಯಿಂಟ್ : ಇದು ಲೋಣಾವಲಾ-ಖಂಡಾಲಾದಲ್ಲಿರುವ ಮತ್ತೊಂದು ವೀಕ್ಷಣಾ ಕೇಂದ್ರ. ಇಲ್ಲಿಂದ ಖಂಡಾಲಾ ಕಣಿವೆ, ಡ್ಯುಕ್ಸ್ ನೋಸ್ ಮುಂತಾದ ಆಕರ್ಷಣೆಗಳನ್ನು ಸುಂದರವಾಗಿ ಕಾಣಬಹುದು.

ಚಿತ್ರಕೃಪೆ: Vishalsdhumal

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಲೋಣಾವಲಾದಲ್ಲಿ ನೋಡಬಹುದಾದ ಮತ್ತೊಂದು ಪ್ರೇಕ್ಷಣೀಯ ಸ್ಥಳವೆಂದರೆ ಟೈಗರ್ಸ್ ಲೀಪ್ ಅಥವಾ ವೀಕ್ಷಣಾ ಕೇಂದ್ರ. ಮಳೆಗಾಲದ ಸಮಯದಲ್ಲಿ ಇಲ್ಲೊಂದು ಸುಂದರ ಜಲಪಾತ ಸೃಷ್ಟಿಯಾಗಿ ಭೇಟಿ ನೀಡುವವರಿಗೆ ಸಾಕಷ್ಟು ಉತ್ಸಾಹವನ್ನು ಕರುಣಿಸುತ್ತದೆ. ಸಾಕಷ್ಟು ಜನರು ಈ ಜಲಪಾತಕ್ಕೆ ತಲೆ ಒಡ್ಡಿ ಕುಣಿದು ಕುಪ್ಪಳಿಸುತ್ತಾರೆ.

ಚಿತ್ರಕೃಪೆ: Sobarwiki

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ನೀವೇನಾದರೂ ಇತಿಹಾಸ ಪ್ರಿಯ ಪ್ರವಾಸಿಗರಾಗಿದ್ದಲ್ಲಿ ಲೋಣಾವಲಾಗೆ ಭೆಟಿ ನೀಡಿದ್ದಾಗ ಇಲ್ಲಿರುವ ಕಾರ್ಲಾ ಗುಹೆಗಳಿಗೆ ಭೇಟಿ ನೀಡಲು ಮರೆಯದಿರಿ.

ಚಿತ್ರಕೃಪೆ: Pradeep717

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಇದೊಂದು ಗುಹೆಗಳ ಸಂಕೀರ್ಣವಾಗಿದ್ದು ಬೆಟ್ಟಗಳಲ್ಲಿಯೆ ಕೆತ್ತಲಾದ ಗುಹಾ ರಚನೆಗಳಿಗಾಗಿ ಹೆಸರುವಾಸಿಯಾಗಿದೆ. ಎರಡರಿಂದ ಮೂರನೇಯ ಶತಮಾನದ ಸಂದರ್ಭದಲ್ಲಿ ಬೌದ್ಧ ಸನ್ಯಾಸಿಗಳಿಂದ ನಿರ್ಮಿತವಾದ ಗುಹೆಗಳಿವು ಎಂದು ಹೇಳಲಾಗಿದ್ದು ಇಲ್ಲಿ ಏಕವೀರಾ ದೇವಿಯ ದೇಗುಲವಿರುವುದನ್ನೂ ಸಹ ನೋಡಬಹುದು.

ಚಿತ್ರಕೃಪೆ: Sowpar

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಲೋಣಾವಲಾಗೆ ಹತ್ತಿರದಲ್ಲಿರುವ ಲೋಹಗಡ್ ಕೋಟೆ ತಾಣವು ಮೈಜುಮ್ಮೆನಿಸುವಂತಹ ಚಾರಣ ಆಕರ್ಷಣೆಯುಳ್ಳ ಬೆಟ್ಟ ಕೋಟೆಯಾಗಿದೆ. ಈ ಕೋಟೆಗೆ ಲೋಣಾವಲಾದಿಂದ ಚಾರಣ ಕೈಗೊಳ್ಳುವುದೆ ಒಂದು ರೋಮಾಂಚಕ ಅನುಭವ.

ಚಿತ್ರಕೃಪೆ: vivek Joshi

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಲೋಹಗಡ್ ಕೋಟೆ ತಾಣವು ಪಶ್ಚಿಮ ಘಟ್ಟದಲ್ಲಿರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಉತ್ತಮ ಪ್ರಮಾಣದ ಮಳೆಯನ್ನು ಪಡೆಯುತ್ತದೆ ಹಾಗೂ ಈ ಸಂದರ್ಭದಲ್ಲಿ ಪ್ರದೇಶವು ಹೆಚ್ಚು ಜಾರುವುದರಿಂದ ಚಾರಣ ಮಾಡುವವರು ಹೆಚ್ಚಿನ ಮುಂಜಾಗೃತೆಯನ್ನು ವಹಿಸಬೇಕಾಗಿರುವುದು ಅವಶ್ಯಕ.

ಚಿತ್ರಕೃಪೆ: Anant Rohankar

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಬುಶಿ ಆಣೆಕಟ್ಟು : ಲೋಣಾವಲಾದಲ್ಲಿರುವ ಬುಶಿ ಆಣೆಕಟ್ಟು ನೋಡಲು ಆಕರ್ಷಕವಾಗಿದೆ. ಮಳೆಗಾಲದಲ್ಲಿ ವಿಶೇಷವಾಗಿ ಕಂಡುಬರುವ ಈ ಜಲಾಶಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Sobarwiki

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಕೊರೈಗಡ್ ಲೋಣಾವಲಾದಲ್ಲಿರುವ ಮತ್ತೊಂದು ಸುಂದರ ಪರ್ವತ ದುರ್ಗ. ಮಳೆಗಾಲದಲ್ಲಿ ಸೊಂಪಾಗಿ ಬೆಳೆಯುವ ಹಸಿರು ಸಂಪತ್ತಿನಿಂದ ವೈಭವದ ಕಳೆ ಪಡೆಯುತ್ತದೆ ಈ ಸುಂದರ ಚಾರಣ ತಾಣ.

ಚಿತ್ರಕೃಪೆ: solarisgirl

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಲೋಣಾವಲಾ ಬೆಟ್ಟಗಳ ಮಧ್ಯೆ ಹಾದು ಹೋಗಿರುವ, ನೋಡುಗರಿಗೆ ಅದ್ಭುತವಾಗಿ ಕಾಣುವ ಮುಂಬೈ-ಪುಣೆ ಹೆದ್ದಾರಿ ಮಾರ್ಗ.

ಚಿತ್ರಕೃಪೆ: Chaithanya

ಲೋಣಾವಲಾ ಸೌಂದರ್ಯ:

ಲೋಣಾವಲಾ ಸೌಂದರ್ಯ:

ಸಾಮಾನ್ಯವಾಗಿ ಮಳೆಗಾಲದ ಸಂದರ್ಭದಲ್ಲಿ ಮುಂಬೈ-ಪುಣೆ ಮಧ್ಯೆ ಸಂಚರಿಸುವ ಜನರು ಲೋಣಾವಲಾದ ಬಳಿ ಸ್ವಲ್ಪ ಕಾಲವಾದರೂ ಇಳಿದು ಪ್ರಕೃತಿಯ ರಮ್ಯ ನೋಟವನ್ನು ಆಸ್ವಾದಿಸಿಯೆ ಮುನ್ನಡೆಯುತ್ತಾರೆ. ಅಲ್ಲದೆ ಸಾಕಷ್ಟು ಕುತುಂಬಗಳು, ಸ್ನೇಹಿತ ವರ್ಗದವರು ಈ ಸಮಯದಲ್ಲಿ ಲೋಣಾವಲಾ ಪ್ರವಾಸ ಮಾಡದೆ ಇರಲಾರರು. ಹೇಗಾದರೂ ಸಮಯ ಬಂದಿದೆ ನೀವೂ ಹೊರಡಿ.

ಚಿತ್ರಕೃಪೆ: Amol Koldhekar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X