Search
  • Follow NativePlanet
Share
» »ಚೆನ್ನೈನಲ್ಲಿ ಉತ್ತಮ ಶಾಪಿಂಗ್ ಎಲ್ಲೆಲ್ಲಿ

ಚೆನ್ನೈನಲ್ಲಿ ಉತ್ತಮ ಶಾಪಿಂಗ್ ಎಲ್ಲೆಲ್ಲಿ

ದಕ್ಷಿಣ ಭಾರತದ ಮೆಟ್ರೊಪಾಲಿಟನ್ ನಗರ ಹಾಗೂ ತಮಿಳುನಾಡು ರಾಜಧಾನಿಯಾಗಿ ಚೆನ್ನೈ ನಗರ ಚೆನ್ನೈನ ಆಕರ್ಷಕ ಆಕರ್ಷಣೆಗಳು ಒಂದು ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಮಹಾನಗರವಾಗಿದೆ. ಸಾಮಾನ್ಯವಾಗಿ ಎಲ್ಲಾ ಮಹಾನಗರಗಳಲ್ಲಿ ಕಂಡುಬರುವಂತೆ ಇಲ್ಲಿಯೂ ಕೂಡ ತಕ್ಕ ಮಟ್ಟಿಗೆ ಬಹು ಸಂಸ್ಕೃತಿ ಜನಜೀವನವನ್ನು ಕಾಣಬಹುದು. ಮಹಾನಗರ ಬೇರೆ ಇರುವುದರಿಂದ ಜನಸಂಖ್ಯೆಯೂ ಕೂಡ ಸಾಕಷ್ಟು ಪ್ರಮಾಣದಲ್ಲಿದೆ.

ವಿಶೇಷ ಲೇಖನ : ಮನಸೆಳೆವ ಆಕರ್ಷಣೆಗಳ ತಮಿಳುನಾಡು

ಮಹಾನಗರಗಳಲ್ಲಿ ಬಹು ಜನರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಇಷ್ಟಪಡುವ ಚಟುವಟಿಕೆಯೆಂದರೆ ಶಾಪಿಂಗ್ ಅಂದರೆ ಖರೀದಿ ಮಾಡುವುದು. ಸ್ಪರ್ಧೆಯು ಹೆಚ್ಚಾಗಿರುವುದರಿಂದ ಗುಣಮಟ್ಟದ ಸರಕುಗಳು ಕೈಗೆಟುಕುವ ಬೆಲೆಯಲ್ಲಿ ಸಿಕ್ಕರೂ ಅಚ್ಚರಿ ಪಡಬೇಕಾಗಿಲ್ಲ. ಅದಕ್ಕೆಂತಲೆ ನಾಯಿ ಕೊಡಗಳಂತೆ ಅಲ್ಲಲ್ಲಿ ಶಾಪಿಂಗ್ ಮಾಲ್ ಗಳು ತೆರೆದಿರುವುದೆ ಒಂದು ಉದಾಹರಣೆ.

ವಿಶೇಷ ಲೇಖನ : ಭಾರತದ ಬೃಹತ್ ಶಾಪಿಂಗ್ ಮಾಲ್‍ಗಳು

ಈ ವಿಷಯಕ್ಕೆ ಚೆನ್ನೈ ಕೂಡ ಹೊರತಾಗಿಲ್ಲ. ಇಲ್ಲಿಯೂ ಸಹ ಸಾಕಷ್ಟು ಶಾಪಿಂಗ್ ಮಾಲ್‍ಗಳನ್ನು ನಗರದ ವಿವಿಧೆಡೆಗಳಲ್ಲಿ ಕಾಣಬಹುದಾಗಿದೆ. ಸಾಮಾನ್ಯವಾಗಿ ಯಾವುದೆ ಒಂದು ಸ್ಥಳವು ಕೆಲ ವಿಶೇಷ ವಸ್ತುಗಳಿಗೊಸ್ಕರ ಹೆಸರುವಾಸಿಯಾಗಿರುತ್ತದೆ. ನಮ್ಮ ಬೆಂಗಳೂರಿನ ಅವೆನ್ಯೂ ಬೀದಿ ಹೇಗೆ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ ವಿವಿಧ ಪುಸ್ತಕಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆಯೊ ಅದೆ ರೀತಿಯಲ್ಲಿ ಕೆಲವು ಸ್ಥಳಗಳು ವಿವಿಧ ರೀತಿಯ ಶಾಪಿಂಗ್ ಗಳಿಗೆ ಹೆಸರುವಾಸಿಯಾಗಿರುತ್ತವೆ.

ಪ್ರಸ್ತುತ ಲೇಖನವು ಚೆನ್ನೈನಲ್ಲಿ ಶಾಪಿಂಗ್ ಮಾಡಲು ಹೆಸರುವಾಸಿಯಾದ ಕೆಲ ಸಾಂಪ್ರದಾಯಿಕ ಹಾಗೂ ಪ್ರಸಿದ್ಧ ಸ್ಥಳಗಳ ಕುರಿತು ತಿಳಿಸುತ್ತದೆ.

ಚಿತ್ರಕೃಪೆ: Ravichandar84

ಪಾಂಡಿ ಬಜಾರ್ : ಚೆನ್ನೈನ ಟಿ.ನಗರ ಪ್ರದೇಶದಲ್ಲಿ ಈ ಮಾರುಕಟ್ಟೆ ಸ್ಥಿತವಿದೆ. ಇದೊಂದು ಸಮಗ್ರ ವಸ್ತುಗಳ ಮಾರುಕಟ್ಟೆಯಾಗಿದ್ದು, ಆಟಿಕೆಗಳಿಂದ ಹಿಡಿದು ಅಲಂಕಾರಿಕ ವಸ್ತುಗಳು, ವೈವಿಧ್ಯಮಯ ವಿನ್ಯಾಸಗಳ ಪಾದರಕ್ಷೆಗಳಿಂದ ಹಿಡಿದು ಎಲೆಕ್ಟ್ರಾನಿಕ್ ಉತ್ಪನ್ನಗಳವರೆಗೆ ಎಲ್ಲವೂ ಒಂದೆ ಸ್ಥಳದಲ್ಲಿ ಸಿಗುವ ದೊಡ್ಡ ಮಾರುಕಟ್ಟೆಯಾಗಿದೆ. ಬಟ್ಟೆ ಬರೆಗಳಿರಲಿ, ಕಾಸ್ಮೆಟಿಕ್ ವಸ್ತುಗಳಿರಲಿ ಪ್ರತಿಯೊಂದನ್ನು ಸುಲಭವಾಗಿ ಈ ಮಾರುಕಟ್ಟೆಯಲ್ಲಿ ಕಾಣಬಹುದು.

ಚಿತ್ರಕೃಪೆ: L.vivian.richard

ಅನ್ನಾ ಸಲೈ (ಮೌಂಟ್ ರಸ್ತೆ): ಚೆನ್ನೈನಲ್ಲಿರುವ ಅನ್ನಾ ಸಲೈ (ಮೌಂಟ್ ರಸ್ತೆ) ರಸ್ತೆಯು ಒಂದು ಅದ್ಭುತವಾದ ಶಾಪಿಂಗ್ ಸ್ಥಳವಾಗಿದೆ. ರಸ್ತೆಯು ಸಣ್ಣ ದೊಡ್ಡ ಶಾಪಿಂಗ್ ಸಂಕೀರ್ಣವಿರುವ ಕಟ್ಟಡಗಳಿಂದ ತುಂಬಿದೆ. 8 ಕಿ.ಮೀ ಉದ್ದದ ಈ ರಸ್ತೆಯ ಮೇಲೆ ಆಭರಣಗಳಿಂದ ಹಿಡಿದು ಗುಣಮಟ್ಟದ ಖಾದ್ಯದವರೆಗೆ ಪ್ರತಿಯೊಂದು ಸಿಗುತ್ತವೆ.

ಚಿತ್ರಕೃಪೆ: Ashok Prabhakaran

ಪಣಗಲ್ ಪಾರ್ಕ್: ಈ ಸ್ಥಳದಲ್ಲಿರುವ ದಕ್ಷಿಣ ಉಸ್ಮಾನ್ ರಸ್ತೆ ಹಾಗೂ ರಂಗನಾಥನ್ ಬೀದಿಗಳಲ್ಲಿ ಸಾಕಷ್ಟು ಅಂಗಡಿ ಮುಗ್ಗಟ್ಟುಗಳನ್ನು ಕಾಣಬಹುದು. ಇಲ್ಲಿ ಆಭರಣಗಳ ಅಂಗಡಿಗಳನ್ನು ವಿಶೇಷವಾಗಿ ಕಾಣಬಹುದು ಹಾಗೂ ರೇಷ್ಮೆ ಸೀರೆಗಳ ಮಾರಾಟಕ್ಕೂ ಸಹ ಈ ಪ್ರದೇಶ ಹೆಸರುವಾಸಿಯಾಗಿದೆ.

ಟಿ.ನಗರ: ತ್ಯಾಗರಾಜ ನಗರ ಚೆನ್ನೈ ಮಹಾನಗರದ ಪ್ರಮುಖ ಪ್ರದೇಶಗಳ ಪೈಕಿ ಒಂದಾಗಿದ್ದು ಎಲ್ಲ ಬಗೆಯ ವಸ್ತುಗಳು ದೊರಕುವ ಜನಪ್ರಿಯ ಶಾಪಿಂಗ್ ಸ್ಥಳವಾಗಿದೆ. ಚಿಕ್ಕ ಪುಟ್ಟ ವ್ಯವಹಾರ ಕೇಂದ್ರಗಳು, ಲಾಡ್ಜಿಂಗ್ ಹಾಗೂ ಬೋರ್ಡಿಂಗ್ ಕಟ್ಟಡಗಳು, ಹೋಟೆಲುಗಳಿದ್ದು ಅದಕ್ಕೆ ಪೂರಕವಾಗುವಂತಹ ಅನೇಕ ಅಂಗಡಿ ಮುಗ್ಗಟ್ಟುಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: McKay Savage

ಅನ್ನಾ ನಗರ : ಚೆನ್ನೈನ ವೈಭವಯುತ ಸ್ಥಳಗಳ ಪೈಕಿ ಅನ್ನಾ ನಗರವೂ ಕೂಡ ಒಂದು. ಸಾಕಷ್ಟು ಕಾರ್ಪೋರೇಟ್ ಕಂಪನಿಗಳಿರುವ ಈ ಪ್ರದೇಶದಲ್ಲಿ ಬ್ರ್ಯಾಂಡೆಡ್ ಉತ್ಪನ್ನಗಳ ಮಾರಾಟ ಮಳಿಗೆಗಳಿಗೇನೂ ಕಮ್ಮಿ ಇಲ್ಲ. ಚೆನ್ನೈ ನಗರದ ಪಶ್ಚಿಮ ಭಾಗದಲ್ಲಿರುವ ಈ ಪ್ರದೇಶವು ದುಬಾರಿ ಶಾಪಿಂಗ್ ಸ್ಥಳವೂ ಸಹ ಹೌದು.

ಚಿತ್ರಕೃಪೆ: McKay Savage

ಜಾರ್ಜ್ ಟೌನ್ : ಇದು ನಗರದ ಹೆಚ್ಚಿನ ಜನಸಂದಣಿಯಿಂದ ಕೂಡಿರುವ ಮಾರುಕಟ್ಟೆ ಪ್ರದೇಶವಾಗಿದ್ದು ಅಗ್ಗದಿಂದ ಹಿಡಿದು ದುಬಾರಿ ಬೆಲೆಯ ಎಲ್ಲ ವಸ್ತುಗಳನ್ನು ಇಲ್ಲಿ ಕೊಳ್ಳಬಹುದು. ಇಲ್ಲಿರುವ ಬರ್ಮಾ ಬಜಾರ್ ಒಂದು ಪ್ರಸಿದ್ಧ ಮಾರುಕಟ್ಟೆ ಸಂಕೀರ್ಣವಾಗಿದ್ದು ಆಧುನಿಕ ಫೋನುಗಳು, ಕ್ಯಾಮೇರಾಗಳು ಉತ್ತಮ ಬೆಲೆಯಲ್ಲಿ ದೊರಕುತ್ತವೆ. ಇಲ್ಲಿ ಶುದ್ಧ ರೇಷ್ಮೆ ಸೀರೆಗಳೂ ಸಹ ಹೆಸರುವಾಸಿಯಾಗಿವೆ.

https://www.flickr.com/photos/seeveeaar/3230230420

ಚಿತ್ರಕೃಪೆ: Wikitom2

ಎಗ್ಮೋರ್ : ಕೆಲ ಪ್ರವಾಸಿ ಆಕರ್ಷಣೆಗಳು, ಉತ್ತಮ ಅಂಗಡಿ ಮುಗ್ಗಟ್ಟುಗಳನ್ನು ಹೊಂದಿರುವ ನಗರದ ಎಗ್ಮೋರ್ ಪ್ರದೇಶವು ಚೆನ್ನೈ ನಗರದಲ್ಲಿ ಶಾಪಿಂಗ್ ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ ಆಧುನಿಕ ಶಾಪಿಂಗ್ ಪ್ಲಾಜಾಗಳು ಹಾಗೂ ಸ್ಥಳೀಯ ಅಂಗಡಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದು. ಇದು ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲೂ ಸಹ ಒಂದಾಗಿದೆ.

https://www.flickr.com/photos/seeveeaar/3230230420

ಚಿತ್ರಕೃಪೆ: Simply CVR

ಮೈಲಾಪೋರ್ : ಶಾಸ್ತ್ರೀಯ ನೃತ್ಯಗಳಿಗೆ ಬೇಕಾಗುವ ಪರಿಕರಗಳ ಖರೀದಿಗೆ ಅತ್ಯಂತ ಹೆಸರುವಾಸಿಯಾದ ಸ್ಥಳ ಮೈಲಾಪೋರ್. ಬಗೆ ಬಗೆಯ ವಸ್ತ್ರ, ಆಭರಣಗಳನ್ನು ಇಲ್ಲಿರುವ ಪ್ರಸಿದ್ಧ ಕಾಪಾಲೀಶ್ವರರ್ ದೇವಾಲಯದ ಮುಂಭಾಗದಲ್ಲಿ ಕಂಡು ಬರುವ ಅಂಗಡಿಗಳಲ್ಲಿ ಖರೀದಿಸಬಹುದಾಗಿದೆ. ಕಾಂಚೀಪುರಂ ರೇಷ್ಮೆ ಸೀರೆ, ಸಾಂಪ್ರದಾಯಿಕ ವಸ್ತುಗಳು ಹಾಗೂ ಕೈಯಿಂದ ತಯಾರಿಸಲಾದ ಕಲಾಕೃತಿಗಳ ಖರೀದಿಗೆ ಈ ಸ್ಥಳವು ಹೆಸರುವಾಸಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X