Search
  • Follow NativePlanet
Share
» »ಮೇಕೆ ಹೆಂಗೋ ದಾಟಿತು, ಆದರೆ ನೀವು ಹುಷಾರು!

ಮೇಕೆ ಹೆಂಗೋ ದಾಟಿತು, ಆದರೆ ನೀವು ಹುಷಾರು!

By Vijay

ಏನಿದು ವಿಚಿತ್ರವಾಗಿದೆಯಲ್ಲ ಈ ತಲೆ ಬರಹ ಅನಿಸುತ್ತಿದೆಯಲ್ಲವೆ? ಹೌದು ಒಂದು ಸ್ಥಳ ಪುರಾಣದಂತೆ ಚಿಕ್ಕದಾದ ಕಾಲುವೆ ರೀತಿಯ ಬಂಡೆಗಳ ಮಧ್ಯೆ ಹರಿಯುವ ನದಿಯೊಂದನ್ನು ಗಬಕ್ಕನೆ ಮೇಕೆ ಒಂದು ಒಂದು ನೆಗೆತದಲ್ಲಿ ದಾಟಿ ತದನಂತರ ಈ ಸ್ಥಳಕ್ಕೆ ಮೇಕೆದಾಟು ಎಂಬ ಹೆಸರು ಬಂದಿತಂತೆ.

ನಿಮಗಿಷ್ಟವಾಗಬಹುದಾದ : ಕಾವೇರಿಯು ವೈಭವದಿಂದ ಧುಮಕುವ ಚುಂಚನಕಟ್ಟೆ

ಪ್ರಸ್ತುತ ಲೇಖನದಲ್ಲಿ ಬೆಂಗಳೂರು ಬಳಿಯಿರುವ ಹಾಗೂ ವಾರಾಂತ್ಯ ಸಮಯದಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲು ವಾಸಿಸುವ ನೆಚ್ಚಿನ ಪಿಕ್ನಿಕ್ ಸ್ಥಳವಾದ ಕನಕಪುರದ ಮೇಕೆದಾಟು ಕುರಿತು ತಿಳಿಸಲಾಗಿದೆ. ಮೇಕೆದಾಟುವಿನ ಪರಿಸರ, ಕಾವೇರಿಯ ಗಂಭೀರವಾಗಿ ಹರಿಯುವ ಕೆಲವು ಚಿತ್ರಗಳನ್ನು ಈ ಮೂಲಕ ನೋಡಿ ಆನಂದಿಸಿ.

ಮೇಕೆದಾಟು ಪ್ರವಾಸ:

ಮೇಕೆದಾಟು ಪ್ರವಾಸ:

ಮೇಕೆದಾಟು ಒಂದು ವಿಹಾರಸ್ಥಳವಾಗಿದ್ದು ಬೆಂಗಳೂರು ನಗರ ಕೇಂದ್ರದಿಂದ ಸುಮಾರು 90 ಕಿ. ಮೀ. ದೂರದಲ್ಲಿದೆ. ಕಾಲೇಜು ಹುಡುಗರ, ಹಲವು ಕಾರ್ಪೊರೇಟ್ ಕಂಪನಿಗಳ ನೌಕರರ ನೆಚ್ಚಿನ ಪಿಕ್ನಿಕ್ ತಾಣವಾಗಿರುವ ಮೇಕೆದಾಟು ವಾರಾಂತ್ಯಗಳಲ್ಲಿ ಸಾಕಷ್ಟು ಪ್ರವಾಸಿಗರನ್ನು ಪಡೆಯುತ್ತದೆ.

ಚಿತ್ರಕೃಪೆ: Karthik Prabhu

ಮೇಕೆದಾಟು ಪ್ರವಾಸ:

ಮೇಕೆದಾಟು ಪ್ರವಾಸ:

ಕನ್ನಡ ಭಾಷೆಯಲ್ಲಿ, ಮೇಕೆ ಹಾರುವಷ್ಟು ಅಂದರೆ ಒಂದೇ ನೆಗೆತದಲ್ಲಿ ಕ್ರಮಿಸುವ ಅಗಲದಷ್ಟು ಉದ್ದದ ಕಂದಕದಲ್ಲಿ ಕಾವೇರಿ ನದಿ ಗಂಭೀರವಾಗಿ ಹರಿಯುವುದರಿಂದ ಮೇಕೆದಾಟು ಎಂದು ಇದನ್ನು ಕರೆಯುತ್ತಾರೆ.

ಚಿತ್ರಕೃಪೆ: Karthik Prabhu

ಮೇಕೆದಾಟು ಪ್ರವಾಸ:

ಮೇಕೆದಾಟು ಪ್ರವಾಸ:

ಕಡಿದಾದ ಬಂಡೆಗಳ ಮಧ್ಯೆ ಹರಿಯುವ ಕಾವೇರಿನದಿ, ನಂತರ ಆಳವಾದ ಕಂದರಕ್ಕೆ ಧುಮುಕುತ್ತದೆ. ಅದರ ಅಗಲ ಅಷ್ಟೇನು ಹೆಚ್ಚಾಗಿಲ್ಲ. ಕೇವಲ ಮೇಕೆ ಹಾರಿದಾಟುವಷ್ಟು ಜಾಗಮಾತ್ರ.

ಚಿತ್ರಕೃಪೆ: Karthik Prabhu

ಮೇಕೆದಾಟು ಪ್ರವಾಸ:

ಮೇಕೆದಾಟು ಪ್ರವಾಸ:

ಮೇಕೆದಾಟುವನ್ನು ತಲುಪುವುದು ತುಸು ಕಷ್ಟಕರವಾಗಿದೆ. ಮೊದಲಿಗೆ ಕಾವೇರಿ-ಅರ್ಕಾವತಿ ನದಿಗಳು ಸೇರುವ ಸಂಗಮದವರೆಗೆ ಕಾರು ಇಲ್ಲವೆ ಬೈಕ್ ಮೂಲಕ ಸಾಗಬೇಕು. ನಂತರ ಸಂಗಮದ ನದಿಯನ್ನು ಅಲ್ಲಿ ಬಾಡಿಗೆಗೆ ದೊರೆಯುವ ತೆಪ್ಪದಲ್ಲಿ ಕುಳಿತು ಆ ಬದಿಗೆ ತೆರಳ ಬೇಕು.

ಚಿತ್ರಕೃಪೆ: Rayabhari

ಮೇಕೆದಾಟು ಪ್ರವಾಸ:

ಮೇಕೆದಾಟು ಪ್ರವಾಸ:

ಸಂಗಮದಲ್ಲಿ ನೀರು ಬಲು ಕಡಿಮೆಯಿದ್ದರೆ ಅದರಲ್ಲೆ ನಡೆದುಕೊಂಡೆ ಆ ದಂಡೆಗೆ ತಲುಪಬಹುದು. ನಂತರ ಆ ದಂಡೆಯಿಂದ ನಾಲ್ಕು ಕಿ.ಮೀ ಗಳಷ್ಟು ಚಾರಣ ಮಾಡುತ್ತ ಮೇಕೆದಾಟುವಿಗೆ ತಲುಪಬೇಕು. ಪ್ರವಾಸಿ ಋತುವಿನಲ್ಲಿ ಇಲ್ಲಿಂದ ಒಂದು ಬಸ್ಸು ಸಹ ದೊರೆಯುತ್ತದೆ ನಿಮ್ಮನ್ನು ಮೇಕೆದಾಟುವಿನವರೆಗೆ ಕರೆದುಕೊಂಡು ಹೋಗಲು.

ಚಿತ್ರಕೃಪೆ: ArunCyriac

ಮೇಕೆದಾಟು ಪ್ರವಾಸ:

ಮೇಕೆದಾಟು ಪ್ರವಾಸ:

ಮಳೆಗಾಲದ ಸಮಯದಲ್ಲಿ ಮೇಕೆದಾಟುವಿನಲ್ಲಿ ಬಲು ಜಾಗರೂಕತೆಯನ್ನು ವಹಿಸಲೇಬೇಕು. ಕಲ್ಲು ಬಂಡೆಗಳು ಸಾಕಷ್ಟು ಜಾರುತ್ತವೆ. ಅಲ್ಲದೆ ಕಾವೇರಿ ನದಿ ಚಿಕ್ಕದಾಗಿ ಕಂಡರೂ ಅದರ ರಭಸ ಹಾಗೂ ವೇಗವನ್ನು ಊಹಿಸಿಕೊಳ್ಳುವುದು ಅಸಾಧ್ಯ.

ಚಿತ್ರಕೃಪೆ: ArunCyriac

ಮೇಕೆದಾಟು ಪ್ರವಾಸ:

ಮೇಕೆದಾಟು ಪ್ರವಾಸ:

ಎಂತಹ ಈಜು ಬಲ್ಲವರಾಗಿದ್ದರೂ ಸ್ವಲ್ಪ ಆಯ ತಪ್ಪಿ ಏನಾದರೂ ಈ ನದಿಯಲ್ಲಿ ಬಿದ್ದರೆ ಸಾವು ನಿಶ್ಚಿತ. ಹಾಗಾಗಿ ಜಾಗರೂಕತೆಯನ್ನು ವಹಿಸಲೇಬೇಕು. ಈ ತಾಣದ ಸೌಂದರ್ಯವನ್ನು ಸವಿಯುತ್ತ, ನದಿಯ ರಭಸವನ್ನು ಅರಿಯುತ್ತ ಪ್ರಕೃತಿಗೆ ಧನ್ಯವಾದ ಹೇಳುತ್ತ ಮೇಕೆದಾಟುವಿನ ಸೌಂದರ್ಯವನ್ನು ಸವಿಯಬಹುದು.

ಚಿತ್ರಕೃಪೆ: Renjith Sasidharan

ಮೇಕೆದಾಟು ಪ್ರವಾಸ:

ಮೇಕೆದಾಟು ಪ್ರವಾಸ:

ಮೇಕೆದಾಟುವನ್ನು ಕನಕಪುರ, ಸಾಥನೂರು, ಸಂಗಮದ ಮೂಲಕ ತೆರಳಬಹುದು. ಬೆಂಗಳೂರಿನ ಸಿಟಿ ಮಾರುಕಟ್ಟೆ ಬಸ್ಸು ನಿಲ್ದಾಣದಿಂದ ಕನಕಪುರದವರೆಗೆ ಬಸ್ಸುಗಳು ದೊರೆಯುತ್ತವೆ. ಕನಕಪುರದಿಂದ ಸಂಗಮಕ್ಕೆ ಹೆಚ್ಚು ಬಸ್ಸುಗಳಿಲ್ಲ. ಹೀಗಾಗಿ ನೀವು ಸ್ವಂತ ಅಥವಾ ಬಾಡಿಗೆ ವಾಹನಗಳ ಮೂಲಕ ತೆರಳುವುದು ಲೇಸು.

ಚಿತ್ರಕೃಪೆ: Nagarjun Kandukuru

ಮೇಕೆದಾಟು ಪ್ರವಾಸ:

ಮೇಕೆದಾಟು ಪ್ರವಾಸ:

ಕಾವೇರಿಯು ಇಲ್ಲಿ ಒಂದೊಂದು ಸ್ಥಳಗಳಲ್ಲಿ ಕಡಿದಾಗಿ, ಅಗಲವಾಗಿ ಹರಿಯುವುದನ್ನು ನೋಡಿದಾಗ ರೋಮಾಂಚನ ಉಂಟಾಗುತ್ತದೆ.

ಚಿತ್ರಕೃಪೆ: Thejaswi

ಮೇಕೆದಾಟು ಪ್ರವಾಸ:

ಮೇಕೆದಾಟು ಪ್ರವಾಸ:

ಈ ಮೇಕೆಗಳ ಪೂರ್ವಜರಿಂದಲೇ ಈ ಸ್ಥಳಕ್ಕೆ ಈ ಹೆಸರು ಬಂದಿರಬಹುದೇ!!

ಚಿತ್ರಕೃಪೆ: Shuba

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X