Search
  • Follow NativePlanet
Share
» »ಮನುಷ್ಯನನ್ನು ಜೀವಂತ ಸಮಾಧಿ ಮಾಡಿ ನಿರ್ಮಿಸಲಾದ ಕೋಟೆ ಇದು !

ಮನುಷ್ಯನನ್ನು ಜೀವಂತ ಸಮಾಧಿ ಮಾಡಿ ನಿರ್ಮಿಸಲಾದ ಕೋಟೆ ಇದು !

ಮೆಹ್ರಾನ್‌ಘಡ್ ಅಥವಾ ಮೆಹ್ರಾನ್ ಕೋಟೆ, ರಾಜಸ್ಥಾನದ ಜೋಧ್‌ಪುರ್‌ನಲ್ಲಿ ನೆಲೆಗೊಂಡಿದೆ. ಇದು ಭಾರತದಲ್ಲಿನ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಸುಮಾರು 1460 ರಲ್ಲಿ ರಾವ್ ಜೋಧಾ ನಿರ್ಮಿಸಿದ ಈ ಕೋಟೆಯು ನಗರದ ಮೇಲೆ 410 ಅಡಿ (125 ಮೀ) ಎತ್ತರದಲ್ಲಿದೆ ಮತ್ತು ದಟ್ಟವಾದ ಗೋಡೆಗಳನ್ನು ಭವ್ಯವಾಗಿ ಸುತ್ತುವರೆದಿದೆ.

ಏಳು ದ್ವಾರಗಳು

ಜೈಪುರ್ ಮತ್ತು ಬಿಕಾನೆರ್ ಸೈನ್ಯಗಳ ಮೇಲೆ ಜಯಗಳಿಸುವ ನೆನಪಿಗಾಗಿ ಮಹಾರಾಜ ಮಾನ್ ಸಿಂಗ್ರವರು ನಿರ್ಮಿಸಿದ ಏಳು ದ್ವಾರಗಳನ್ನು ನಿರ್ಮಿಸಿದರು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಜೈ ಪಾಲ್ , ಫತೇಹ್ ಪೋಲ್, ದಂಡ ಕಾಮ್ಗ್ರಾ ಪೋಲ್ , ಲೋಹಾ ಪಾಲ್.

ಭಕುರ್ಚೆರಿಯಾ ಬೆಟ್ಟ

ಮೆಹ್ರಾನ್ಗಡ ಕೋಟೆ ಇರುವ ಬೆಟ್ಟವನ್ನು ಪಕ್ಷಿಗಳ ಪರ್ವತವಾದ ಭಕುರ್ಚೆರಿಯಾ ಎಂದು ಕರೆಯಲಾಗುತ್ತಿತ್ತು. ಕೋಟೆ ನಿರ್ಮಾಣದ ಹಿಂದೆ ಒಂದು ದಂತಕಥೆ ಇದೆ. ಇದರ ಪ್ರಕಾರ, ಬೆಟ್ಟದ ಮೇಲೆ ಏಕೈಕ ಸನ್ಯಾಸಿ ವಾಸಿಸುತ್ತಿದ್ದರು. ಅಲ್ಲಿ ಕೋಟೆ ನಿರ್ಮಿಸಬೇಕಾದರೆ ಪಕ್ಷಿಗಳ ಅಧಿಪತಿಯಾದ ಚೀರ್ಯಾ ನಾಥ್ಜಿ ಎಂಬ ಹೆಸರಿನ ಸನ್ಯಾಸಿಗಯನ್ನು ಅವರು ಸ್ಥಳಾಂತರಿಸಬೇಕಾಗಿತ್ತು.

ಸನ್ಯಾಸಿ ನೀಡಿದ ಶಾಪ

ಆ ಸನ್ಯಾಸಿಯು ಅಗಾಧ ಸಂಖ್ಯೆಯ ಸ್ಥಳೀಯ ಅನುಯಾಯಿಗಳನ್ನು ಹೊಂದಿದ್ದರು. ಆದ್ದರಿಂದ ಪ್ರಾಂತ್ಯದಲ್ಲಿ ಬಹಳ ಪ್ರಭಾವಶಾಲಿಯಾಗಿದ್ದರು. ಅವರನ್ನು ಆ ಜಾಗ ಖಾಲಿ ಮಾಡುವಂತೆ ಕೋರಿದಾಗ ಅದಕ್ಕೆ ನಿರಾಕರಿಸಿದರು. ಕೊನೆಗೆ ಬಲವಂತವಾಗಿ ಅವರನ್ನು ಸ್ಥಳಾಂತರಿಸಬೇಕಾಯಿತು.

ಬರಗಾಲದ ಶಾಪ

ಸನ್ಯಾಸಿಯು ರಾವ್‌ಜೋಧಾಗೆ ಶಾಪವನ್ನು ನೀಡುತ್ತಾರೆ. ಆ ರಾಜ್ಯದಲ್ಲಿ ಬರಗಾಲ ಉಂಟಾಗಲಿ ಎಂದು ಶಾಪ ನೀಡುತ್ತಾರೆ. ರಾವ್ ಜೋಧಾ ಸನ್ಯಾಸಿಯನ್ನು ಸಮಾಧಾನ ಪಡಿಸಲು ಸನ್ಯಾಸಿಗೆ ಒಂದು ಮನೆ ಹಾಗೂ ಮಂದಿರದ ನಿರ್ಮಾಣವೂ ಮಾಡುತ್ತಾರೆ. ಆ ಸನ್ಯಾಸಿಯ ಶಾಪದ ಕಾರಣದಿಂದಾಗಿ ಇಂದಿಗೂ ಮೂರು, ನಾಲ್ಕು ವರ್ಷಕ್ಕೊಮ್ಮೆ ಬರಗಾಲ ಉಂಟಾಗುತ್ತದೆ.

ಜೀವಂತ ಸಮಾಧಿ

ಇನ್ನು ಆ ಕೋಟೆ ಸುಭದ್ರವಾಗಿರಲು, ಮಂಗಳಕರವಾಗಲು ರಾವ್ ಜೋಧಾ ಕೋಟೆಯ ಅಡಿಪಾಯದಲ್ಲಿ 'ರಾಜಾ ರಾಮ್ ಮೇಘವಾಲ್ ಎನ್ನುವ ವ್ಯಕ್ತಿಯನ್ನು ಜೀವಂತ ಸಮಾಧಿಮಾಡುತ್ತಾರೆ. 'ರಾಜಾ ರಾಮ್ ಮೇಘವಾಲ್' ಅವರ ತ್ಯಾಗಕ್ಕೆ ಪ್ರತಿಯಾಗಿ ಅವರ ಕುಟುಂಬವನ್ನು ಎಂದು ಭರವಸೆ ನೀಡಲಾಯಿತು. ಇಂದಿನವರೆಗೂ ಅವನ ವಂಶಸ್ಥರು ರಾಜ್ ಬಾಗ್‌ನಲ್ಲಿ ವಾಸಿಸುತ್ತಿದ್ದಾರೆ.

ವಸ್ತು ಸಂಗ್ರಹಾಲಯ

ಮೆಹ್ರಾನ್‌ಘಡ್‌ ಕೋಟೆಯಲ್ಲಿನ ವಸ್ತು ಸಂಗ್ರಹಾಲಯವು ರಾಜಸ್ಥಾನದ ಅತ್ಯಂತ ಹೆಚ್ಚು ಸಂಗ್ರಹವಾಗಿರುವ ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಿದೆ. ಕೋಟೆಯ ವಸ್ತುಸಂಗ್ರಹಾಲಯದ ಒಂದು ವಿಭಾಗದಲ್ಲಿ ಹಳೆಯ ರಾಜಮನೆತನದ ವಸ್ತುಗಳನ್ನು ಕಾಣಬಹುದು.

ಭೇಟಿಗೆ ಸೂಕ್ತ ಸಮಯ

ಮೆಹ್ರಾನ್‌ಘಡ್‌ ಕೋಟೆಗೆ ಭೇಟಿ ನೀಡುವುದಾದರೆ ಸೆಪ್ಟೆಂಬರ್‌ನಿಂದ ಮಾರ್ಚ್‌ ತಿಂಗಳಲ್ಲಿ ಭೇಟಿ ನೀಡುವುದು ಸೂಕ್ತ. ಇನ್ನು ಈ ಕೋಟೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5ಗಂಟೆ ವರೆಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು.

ತಲುಪುವುದು ಹೇಗೆ?

ವಿಮಾನದಲ್ಲಿ
ಪ್ರಮುಖ ನಗರಗಳಾದ ದೆಹಲಿ, ಉದೈಪುರ್, ಜೈಪುರ, ಮುಂಬೈ ಮತ್ತು ಕೊಲ್ಕತ್ತಾದಿಂದ ಫ್ಲೈಟ್ ಸೇವೆಗಳನ್ನು ಆಗಾಗ್ಗೆ ಲಭ್ಯವಿದೆ.

ಬಸ್ಸಿನ ಮೂಲಕ
ರಾಜಸ್ಥಾನ ಸರ್ಕಾರವು ಜೋಧ್ಪುರಕ್ಕೆ ನಿರಂತರ ಬಸ್ ಸೇವೆಗಳನ್ನು ನಡೆಸುತ್ತಿದೆ. ಹೆಚ್ಚಿನ ಸಂಖ್ಯೆಯ ಐಷಾರಾಮಿ ಮತ್ತು ಸಾಮಾನ್ಯ ಬಸ್ಸುಗಳು ಸಹ ಲಭ್ಯವಿವೆ.

ರೈಲಿನಿಂದ
ಜೋಧಪುರ್ ಭಾರತದ ಎಲ್ಲಾ ಪ್ರಮುಖ ನಗರಗಳಿಂದ ಸಂಪರ್ಕ ಹೊಂದಿದೆ. ಇದರ ಜೊತೆಗೆ, ಕೋಲ್ಕತಾ, ಮುಂಬೈ ಜೈಪುರ ಮತ್ತು ದೆಹಲಿಯಿಂದ ದೈನಂದಿನ ಸೇವೆಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X