Search
  • Follow NativePlanet
Share
» »ಮೇಘಾಲಯ : ಮೋಡಗಳ ನಿವಾಸ

ಮೇಘಾಲಯ : ಮೋಡಗಳ ನಿವಾಸ

By Vijay

ಮೇಘಾಲಯ ಈಶಾನ್ಯ ಭಾರತದಲ್ಲಿರುವ ಒಂದು ಸುಂದರ ಹಾಗೂ ಸಣ್ಣದಾದ ರಾಜ್ಯ. ಶಾಸ್ತ್ರೀಯವಾಗಿ ಹೇಳಬೇಕೆಂದರೆ, "ಮೇಘಾಲಯ " ಎಂಬ ಶಬ್ದದ ಅರ್ಥವು "ಮೋಡಗಳ ನಿವಾಸ " ಎಂದಾಗುತ್ತದೆ. ಹೆಸರೆ ಹೇಳುವಂತೆ ಇಲ್ಲಿ ಮೇಘಗಳು ಅರ್ಥಾತ್ ವರುಣ ದೇವರ ಅಸ್ತ್ರಗಳು ಸದಾ ನಾಟ್ಯವಾಡುತ್ತಿರುತ್ತವೆ.

ಆದ್ದರಿಂದಲೆ ಜಗತ್ತಿನಲ್ಲೆ ಹೆಚ್ಚಾಗಿ ಮಳೆಯಾಗುವ ಪ್ರಮುಖ ಎರಡು ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದೆ. ಅವುಗಳೆ ಚೀರಾಪುಂಜಿ ಹಾಗೂ ಮಾವ್ಸಿನ್ರಾಮ್. ಪ್ರಸ್ತುತ ಮಾವ್ಸಿನ್ರಾಮ್ ನಲ್ಲಿ ಚೀರಾಪುಂಜಿಗಿಂತಲೂ ಹೆಚ್ಚು ಮಳೆ ಸುರಿಯುತ್ತದೆ. ಇನ್ನು ಈ ರೀತಿ ಮಳೆಯಾಗುವ ರಾಜ್ಯವೆಂದರೆ ಕೇಳಬೇಕೆ...ಪ್ರಕೃತಿಯು ಸದಾ ಹಸಿರಿನಿಂದ ತುಂಬಿ ತುಳುಕುತ್ತಿರುತ್ತದೆ ಇಲ್ಲಿ.

ಮೇಘಾಲಯ ರಾಜ್ಯವು ದೇಶದ ಈಶಾನ್ಯಭಾಗದಲ್ಲಿ ನೆಲೆಸಿದ್ದು ಪೂರ್ವದಿಂದ ಪಶ್ಚಿಮಕ್ಕೆ 300 ಕಿ.ಮೀ ಉದ್ದ ಹಾಗೂ 100 ಕಿ.ಮೀ ಗಳಷ್ಟು ಅಗಲವಾಗಿ ವ್ಯಾಪಿಸಿದೆ. ಶ್ರೀಮಂತ ಪ್ರಕೃತಿ ಸಂಪತ್ತು, ವೈವಿಧ್ಯಮಯ ಸಸ್ಯ ಹಾಗೂ ಕೀಟ ಸಂಪತ್ತುಗಳನ್ನು ಈ ರಾಜ್ಯದ ನಾನಾ ಭಾಗಗಳಲ್ಲಿ ಯಥೇಚ್ಚವಾಗಿ ಕಾಣಬಹುದಾಗಿದೆ.

ಮೇಘಾಲಯ ಪಶ್ಚಿಮ ಬಂಗಾಳ, ಆಸ್ಸಾಂ ಹಾಗೂ ತ್ರಿಪುರಾಗಳೊಂದಿಗೆ ಉತ್ತಮವಾದ ಸಂಪರ್ಕ ಹೊಂದಿದೆ. ರಾಜ್ಯದಲ್ಲಿ ರೈಲು ನಿಲ್ದಾಣವು ಮೆಂಡಿಪಥರ್ ಎಂಬಲ್ಲಿದ್ದು ಇದು ಅಸ್ಸಾಮಿನ ದುಧ್ನೋಯ್ ದೊಂದಿಗೆ ಸಂಪರ್ಕಿಸುತ್ತದೆ. ಇನ್ನು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯು ಶಿಲ್ಲಾಂಗ್ ಅನ್ನು ಗುವಾಹಟಿಯೊಂದಿಗೆ ಸಂಪರ್ಕಿಸುತ್ತದೆ. ಅಲ್ಲದೆ ಕೊಲ್ಕತ್ತಾ, ಅಗರ್ತಲಾಗಳಿಂದ ಶಿಲ್ಲಾಂಗ್ ನಿಂದ 30 ಕಿ.ಮೀ ದೂರವಿರುವ ವಿಮಾನ ನಿಲ್ದಾಣಕ್ಕೆ ವಿಮಾನಗಳು ಲಭ್ಯವಿದೆ.

ಪ್ರಸ್ತುತ ಲೇಖನವು ಮೇಘಾಲಯ ರಾಜ್ಯದಲ್ಲಿ ಕಂಡುಬರುವ ಭೂದೃಶ್ಯಾವಳಿಗಳ ಕುರಿತು ಚಿತ್ರಗಳ ಮುಖೇನ ಬೆಳುಕು ಚೆಲ್ಲುತ್ತದೆ. ಇಲ್ಲಿರುವ ಸ್ಥಳಗಳ ಕುರಿತು ತಿಳಿಯಬೇಕಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ.

ಮೇಘಾಲಯ:

ಮೇಘಾಲಯ:

ಮೇಘಾಲಯವು ಉತ್ತರದಲ್ಲಿ ಆಸ್ಸಾಂ ರಾಜ್ಯ ಹಾಗೂ ದಕ್ಷಿಣದಲ್ಲಿ ಬಾಂಗ್ಲಾ ದೇಶದೊಂದಿಗೆ ಗಡಿ ಹಂಚಿಕೊಂಡಿದೆ. "ಪೂರ್ವಭಾರತದ (ಪ್ರಾಚೀನ) ಸ್ಕಾಟ್ಲೆಂಡ್‌" ಎಂದು ಕರೆಯಲಾದ ಶಿಲ್ಲಾಂಗ್‌, ಮೇಘಾಲಯ ರಾಜ್ಯದ ರಾಜಧಾನಿ.

ಚಿತ್ರಕೃಪೆ: Rajesh Dutta

ಮೇಘಾಲಯ:

ಮೇಘಾಲಯ:

ಮೇಘಾಲಯ ರಾಜ್ಯದ ಮೂರನೆಯ ಒಂದು ಭಾಗವು ಕಾಡುಪ್ರದೇಶವಾಗಿದೆ. ಮೇಘಾಲಯದ ಉಪ-ಉಷ್ಣ ಅರಣ್ಯಗಳ ಪರಿಸರವನ್ನು ರಾಜ್ಯದ ತುಂಬೆಲ್ಲ ಕಾಣಬಹುದಾಗಿದೆ. ಇಲ್ಲಿರುವ ಬೆಟ್ಟ-ಗುಡ್ಡಗಳು, ಕಾಡುಗಳು, ಉತ್ತರ ಹಾಗೂ ದಕ್ಷಿಣದಲ್ಲಿರುವ ತಗ್ಗುಪ್ರದೇಶದ ಕಾಡುಗಳಿಗಿಂತಲೂ ಭಿನ್ನವಾಗಿವೆ.

ಚಿತ್ರಕೃಪೆ: Rajesh Dutta

ಮೇಘಾಲಯ:

ಮೇಘಾಲಯ:

ಅಲ್ಲದೆ ಮೇಘಾಲಯದಲ್ಲಿರುವ ಕಾಡುಗಳು ವೈವಿಧ್ಯಮಯ ಪ್ರಾಣಿ ಪಕ್ಷಿಗಳು, ಕೀಟಗಳು ಹಾಗೂ ಸಸ್ಯ ಸಂಪತ್ತುಗಳಿಗೆ ಹೆಸರುವಾಸಿಯಾಗಿದೆ. ಆದ್ದರಿಂದ ಪ್ರವಾಸೋದ್ಯಮವು ನಿಧಾನವಾಗಿ ಈ ರಾಜ್ಯದಲ್ಲಿ ಬೆಳೆಯುತ್ತಿದೆ.

ಚಿತ್ರಕೃಪೆ: Pankaj Kaushal

ಮೇಘಾಲಯ:

ಮೇಘಾಲಯ:

ಹಿಂದೆ ಮೇಘಾಲಯ ರಾಜ್ಯಕ್ಕೆ ಪ್ರವೇಶಿಸಲು ವಿದೇಶೀ ಪ್ರವಾಸಿಗರು ವಿಶೇಷವಾದ ಅನುಮತಿಯನ್ನು ಪಡೆಯಬೇಕಿತ್ತು. ಆದರೆ, 1955ರಲ್ಲಿ ಇದನ್ನು ಹಿಂತೆಗೆದುಕೊಳ್ಳಲಾಯಿತು. ದೇಶದಲ್ಲಿ ಕಂಡುಬರುವ ಅತ್ಯಂತ ಸುಂದರ ಪ್ರಕೃತಿ ಭೂಸೌಂದರ್ಯ ಹೊಂದಿರುವ ರಾಜ್ಯಗಳಲ್ಲಿ ಮೇಘಾಲಯವೂ ಒಂದು.

ಚಿತ್ರಕೃಪೆ: Rajesh Dutta

ಮೇಘಾಲಯ:

ಮೇಘಾಲಯ:

ವಿವಿಧ ಅಸಕ್ತಿಗಳನ್ನು ಹೊಂದಿರುವ ವಿವಿಧ ರೀತಿಯ ಪ್ರವಾಸಿಗರನ್ನು ಆಕರ್ಷಿಸಲು ಮೇಘಾಲಯದಲ್ಲಿ ಸಾಕಷ್ಟು ಪ್ರವಾಸಿ ತಾಣಗಳು ಕಂಡುಬರುತ್ತವೆ. ಇಂದು ಭಾರತ ದೇಶವು ಆಧುನಿಕತೆಯ ಅಮಲಿನಲ್ಲಿ ಸಾಕಷ್ಟು ಹಸಿರು ಸಂಪತ್ತನ್ನು ಕಳೆದುಕೊಳ್ಳುತ್ತಿದೆ. ದಟ್ಟವಾದ ಕಾಡು ಪ್ರದೇಶಗಳಿರುವ ಕೆಲವೆ ಕೆಲವು ತಾಣಗಳಲ್ಲಿ ಮೇಘಾಲಯವು ಪ್ರಮುಖವಾಗಿದೆ.

ಚಿತ್ರಕೃಪೆ: Joshua Singh

ಮೇಘಾಲಯ:

ಮೇಘಾಲಯ:

ಆದ್ದರಿಂದ ಮೇಘಾಲಯವು ರಾಷ್ಟ್ರದಲ್ಲಿನ ಪ್ರಮುಖ ಪರಿಸರ ಪ್ರವಾಸೀ ತಾಣಗಳಲ್ಲೊಂದಾಗಿದೆ. ಮೇಘಾಲಯದಲ್ಲಿರುವ ಉಪ-ಉಷ್ಣ ಕಾಡುಗಳು ಹಲವು ಬಗೆಯ ಸಸ್ಯ-ವನ್ಯಜೀವಿಗಳಿಗೆ ಆಸರೆಯಾಗಿವೆ. ಮೇಘಾಲಯದಲ್ಲಿ ಎರಡು ರಾಷ್ಟ್ರೀಯ ಉದ್ಯಾನಗಳು ಹಾಗೂ ಮೂರು ಅಭಯಾರಣ್ಯಗಳಿವೆ.

ಚಿತ್ರಕೃಪೆ: Rajesh Dutta

ಮೇಘಾಲಯ:

ಮೇಘಾಲಯ:

ಪರ್ವತಾರೋಹಣ, ಟ್ರೆಕಿಂಗ್‌, ಹೈಕಿಂಗ್‌, ಜಲ-ಸಾಹಸ ಕ್ರೀಡೆಗಳು (ವಾಟರ್‌ ಸ್ಪೋರ್ಟ್ಸ್‌) ಇತ್ಯಾದಿ ಸೇರಿದಂತೆ ವಿವಿಧ ಸಾಹಸ- ಪ್ರಧಾನ ಪ್ರವಾಸಗಳಿಗೆ ಮೇಘಾಲಯವು ಪ್ರಸಿದ್ಧವಾಗಿದ್ದು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತದೆ. ಮೇಘಾಲಯ ರಾಜ್ಯದಲ್ಲಿ ಹಲವು ಟ್ರೆಕಿಂಗ್‌ ಮಾರ್ಗಗಳಲ್ಲಿ ಸಾಗುವಾಗ, ಕಾಡುಪಾಪಗಳು (ಸ್ಲೋ ಲೊರಿಸ್‌), ವಿವಿಧ ಬಗೆಯ ಜಿಂಕೆಗಳು ಹಾಗೂ ಕರಡಿಗಳಂತಹ ಅಪರೂಪದ ಪ್ರಾಣಿಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: t.saldanha

ಮೇಘಾಲಯ:

ಮೇಘಾಲಯ:

ಉಮಿಯಮ್‌ ಕೆರೆ ಒಂದು ಪ್ರಖ್ಯಾತ ಪ್ರವಾಸಿ ಆಕರ್ಷಣೆಯ ಕೆರೆಯಾಗಿದ್ದು ಇಲ್ಲಿ ಜಲಕ್ರೀಡೆಗಳನ್ನು ಆಸ್ವಾದಿಸಬಹುದಾಗಿದೆ. ಇಲ್ಲಿ ವಿವಿಧ ರೀತಿಯ ಮಾನವಚಾಲಿತ ಹಾಗೂ ಮೋಟರ್ ಒಳಗೊಂಡ ಎಲ್ಲ ರೀತಿಯ ದೋಣಿಗಳು ದೊರೆಯುತ್ತವೆ. ಇದನ್ನು ಬಾರಾಪಾನಿ (ಬಡಾ ಪಾನಿ) ಎಂದೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Tharaq Andrews

ಮೇಘಾಲಯ:

ಮೇಘಾಲಯ:

ತನ್ನದೆ ಆದ ವಿಶಿಷ್ಟ ಸಂಸ್ಕೃತಿ-ಸಂಪ್ರದಾಯವನ್ನು ಹೊಂದಿರುವ ಮೇಘಾಲಯವು ಈಶಾನ್ಯ ಭಾರತದ ಅವಿಭಾಜ್ಯ ಅಂಗವಾಗಿದ್ದು ಪ್ರವಾಸಿ ಕ್ಷೇತ್ರದಲ್ಲಿ ತನ್ನದೆ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಿದೆ. ಆದರೂ ಕೆಲವು ಗುರುತರವಾದ ಅಭಿವೃದ್ಧಿಗಳು ಈ ರಾಜ್ಯದಲ್ಲಿ ಆಗಬೇಕಿದೆ.

ಚಿತ್ರಕೃಪೆ: Tharaq Andrews

ಮೇಘಾಲಯ:

ಮೇಘಾಲಯ:

ಮೇಘಾಲಯ ರಾಜ್ಯದಲ್ಲಿರುವ ಚೀರಾಪುಂಜಿ ಈಶಾನ್ಯ ಭಾರತದಲ್ಲೆ ಅತಿ ಜನಪ್ರಿಯವಾದಂತಹ ಪ್ರವಾಸೀ ತಾಣವಾಗಿದೆ. ಈ ಪ್ರದೇಶದ ಕುರಿತು ಪರಿಚಯದ ಅಗತ್ಯವೇನಿಲ್ಲ, ಏಕೆಂದರೆ ಜಗತ್ತಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಇದು ಮೊದಲು ಪ್ರಥಮ ಸ್ಥಾನದಲ್ಲಿತ್ತು. ಇಂದಿಗೂ ಕೂಡ ಇದು ಹೆಚ್ಚು ಮಳೆ ಬೀಳುವ ಪ್ರದೇಶವೆ ಆಗಿದೆ. ಇಲ್ಲಿಂದ ಸುಮಾರು 80 ಕಿ.ಮೀ ಗಳಷ್ಟು ದೂರವಿರುವ ಮಾವ್ಸಿನ್ರಾಮ್ ಅತಿ ಹೆಚ್ಚು ಮಳೆ ಪಡೆಯುವ ಸ್ಥಳವಾಗಿದೆ.

ಚಿತ್ರಕೃಪೆ: Tharaq Andrews

ಮೇಘಾಲಯ:

ಮೇಘಾಲಯ:

ರಾಜ್ಯದಲ್ಲಿ ಚಿರಪರಿಚಿತ ಜಲಪಾತಗಳ ಪೈಕಿ ಎಲಿಫೆಂಟ್‌ ಜಲಪಾತ, ಶಾದ್ಥುಮ್‌ ಜಲಪಾತ, ಬಿಷಪ್‌ ಜಲಪಾತ, ನೊಹ್ಕಾಲಿಕಾಯ್‌ ಜಲಪಾತ ತಾಣಗಳು ಪ್ರಸಿದ್ಧವಾಗಿವೆ. ಅಲ್ಲದೆ ಮಾವ್ಸಿನ್ರಾಮ್‌ ಬಳಿಯಿರುವ ಜಾಕ್ರೆಮ್‌ನ ಬಿಸಿ ನೀರಿನ ಬುಗ್ಗೆಗಳು ಕುತೂಹಲಕರ ತಾಣವಾಗಿದ್ದು ರೋಗಗಳನ್ನು ವಾಸಿಮಾಡುವ ಹಾಗೂ ಔಷಧೀಯ ಗುಣಗಳನ್ನು ಹೊಂದಿವೆಯೆಂದು ನಂಬಲಾಗಿದೆ.

ಚಿತ್ರಕೃಪೆ: t.saldanha

ಮೇಘಾಲಯ:

ಮೇಘಾಲಯ:

ಮೇಘಾಲಯದಲ್ಲಿ ಹಲವು ನೈಸರ್ಗಿಕ ಹಾಗೂ ಕೃತಕ ಕೆರೆಗಳನ್ನು ಕಾಣಬಹುದಾಗಿದೆ. ಗುವಾಹಾಟಿ-ಶಿಲ್ಲಾಂಗ್‌ ರಸ್ತೆಯಲ್ಲಿರುವ ಉಮಿಯಮ್‌ ಕೆರೆಯು 'ಬಡಾ ಪಾನಿ' (ದೊಡ್ಡ ಪ್ರಮಾಣದ ನಿರುಳ್ಳ ಕೆರೆ) ಎಂದು ಖ್ಯಾತವಾಗಿದೆ. ಇದು ಒಂದು ಆಕರ್ಷಕ ಪ್ರವಾಸಿ ತಾಣವೂ ಸಹ ಹೌದು.

ಚಿತ್ರಕೃಪೆ: Tharaq Andrews

ಮೇಘಾಲಯ:

ಮೇಘಾಲಯ:

ಮೇಘಾಲಯದಲ್ಲಿ ಹಲವು ಹೆಸರುವಾಸಿಯಾದ ಉದ್ಯಾನಗಳಿವೆ; ಥಂಗ್‌ಖಾರಂಗ್‌ ಉದ್ಯಾನ, ಇಕೊ-ಪಾರ್ಕ್‌, ಸಸ್ಯಶಾಸ್ತ್ರೀಯ ತೋಟ ಹಾಗೂ ಲೇಡಿ ಹೈದರಿ ಉದ್ಯಾನಗಳು ಪ್ರಖ್ಯಾತಿ ಪಡೆದಿವೆ. ಶಿಲ್ಲಾಂಗ್‌ನಿಂದ 96 ಕಿ.ಮೀ ದೂರದಲ್ಲಿರುವ ಡಾಕಿ ಎಂಬ ಪಟ್ಟಣವು ಬಾಂಗ್ಲಾದೇಶಕ್ಕೆ ಪ್ರವೇಶ ದ್ವಾರವಾಗಿದೆ. ಇಲ್ಲಿ ಮೇಘಾಲಯದ ಅತ್ಯುನ್ನತ ಪರ್ವತಶ್ರೇಣಿಗಳು ಹಾಗೂ ಬಾಂಗ್ಲಾದೇಶದ ಗಡಿ ನೆಲೆಗಳ ರಮಣೀಯವಾದ ಭೂದೃಶ್ಯಾವಳಿಗಳು ಕಾಣಸಿಗುತ್ತವೆ. ಚಿತ್ರದಲ್ಲಿರುವುದು ಮೇಘಾಲಯ ರಾಜ್ಯದ ಗಡಿಯಿಂದ ಕಂಡುಬರುವ ಬಾಂಗ್ಲಾ ದೇಶದ ಭೂದೃಶ್ಯ.

ಚಿತ್ರಕೃಪೆ: Ashwin Kumar

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು. ನೊಹ್ಕಾಲಿಕಾಯ್ ಜಲಪಾತ.

ಚಿತ್ರಕೃಪೆ: Pankaj Kaushal

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು.

ಚಿತ್ರಕೃಪೆ: Masrur Ashraf

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು.

ಚಿತ್ರಕೃಪೆ: Masrur Ashraf

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು.

ಚಿತ್ರಕೃಪೆ: Kinshuk Kashyap

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು.

ಚಿತ್ರಕೃಪೆ: Ashwin Kumar

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು.

ಚಿತ್ರಕೃಪೆ: Arup Malakar

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು.

ಚಿತ್ರಕೃಪೆ: Ashwin Kumar

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು. ವೈವಿಧ್ಯಮಯ ಕೀಟ ಲೋಕ.

ಚಿತ್ರಕೃಪೆ: Pankaj Kaushal

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು. ವೈವಿಧ್ಯಮಯ ಕೀಟ ಲೋಕ.

ಚಿತ್ರಕೃಪೆ: t.saldanha

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು. ವೈವಿಧ್ಯಮಯ ಕೀಟ ಲೋಕ.

ಚಿತ್ರಕೃಪೆ: t.saldanha

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು. ವೈವಿಧ್ಯಮಯ ಕೀಟ ಲೋಕ.

ಚಿತ್ರಕೃಪೆ: t.saldanha

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು. ವೈವಿಧ್ಯಮಯ ಕೀಟ ಲೋಕ.

ಚಿತ್ರಕೃಪೆ: t.saldanha

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು. ವೈವಿಧ್ಯಮಯ ಕೀಟ ಲೋಕ.

ಚಿತ್ರಕೃಪೆ: t.saldanha

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು. ವೈವಿಧ್ಯಮಯ ಕೀಟ ಲೋಕ.

ಚಿತ್ರಕೃಪೆ: t.saldanha

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು. ವೈವಿಧ್ಯಮಯ ಕೀಟ ಲೋಕ.

ಚಿತ್ರಕೃಪೆ: t.saldanha

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು. ವೈವಿಧ್ಯಮಯ ಕೀಟ ಲೋಕ.

ಚಿತ್ರಕೃಪೆ: t.saldanha

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು.

ಚಿತ್ರಕೃಪೆ: t.saldanha

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು.

ಚಿತ್ರಕೃಪೆ: t.saldanha

ಮೇಘಾಲಯ:

ಮೇಘಾಲಯ:


ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು.

ಚಿತ್ರಕೃಪೆ: Ashwin Kumar

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು.

ಚಿತ್ರಕೃಪೆ: Nori Syamsunder Rao

ಮೇಘಾಲಯ:

ಮೇಘಾಲಯ:

ಮೇಘಾಲಯದ ಅತಿ ಸುಂದರ ಪರಿಸರವನ್ನು ಸಾದರಪಡಿಸುವ ಚಿತ್ರಗಳು. ಎಲಿಫಂಟ್ ಫಾಲ್ಸ್.

ಚಿತ್ರಕೃಪೆ: Ashwin Kumar

ಮೇಘಾಲಯ:

ಮೇಘಾಲಯ:

ಚಿತ್ರದಲ್ಲಿರುವುದು ಮೇಘಾಲಯದ ಪೂರ್ವ ಖಾಸಿ ಜಿಲ್ಲೆಯ ಮಾವ್ಲಿನ್ನಾಂಗ್ ಹಳ್ಳಿ. ಇದು ಏಷಿಯಾದಲ್ಲೆ ಅತಿ ಸ್ವಚ್ಛವಾದ ಹಳ್ಳಿ ಎಂಬ ಬಿರುದನ್ನು ಪಡೆದಿದೆ.

ಚಿತ್ರಕೃಪೆ: Ashwin Kumar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X