Search
  • Follow NativePlanet
Share
» »ಮಾಟ,ಮಂತ್ರ ಶಕ್ತಿಗಳ ತವರು ಮಯಾಂಗ್

ಮಾಟ,ಮಂತ್ರ ಶಕ್ತಿಗಳ ತವರು ಮಯಾಂಗ್

By Vijay

ಇದೊಂದು ಭಾರತದ ನಿಗೂಢ ಸ್ಥಳವಾಗಿಯೂ ಹೆಸರುವಾಸಿಯಾಗಿದೆ. ಇನ್ನೇನು ಆಧುನಿಕತೆ ಪ್ರಾರಂಭವಾಯಿತು ಎನ್ನುವ ಕಾಲದವರೆಗೆ ಇಲ್ಲಿ ಅವ್ಯಾಹತವಾಗಿ ತಾಂತ್ರಿಕ ಆರಾಧನೆ, ಮಟ್ಟ ಮಂತ್ರದ ಪೂಜೆಗಳು ಎಗ್ಗಿಲ್ಲದೆ ಜರುಗುತ್ತಿದ್ದವು. ಇದನ್ನು "ಭಾರತದ ತಾಂತ್ರಿಕ ಆರಾಧನೆಗಳ ತೊಟ್ಟಿಲು" ಎಂತಲೂ ಸಹ ಕರೆಯಲಾಗುತ್ತದೆ.

ನಿಮಗಿಷ್ಟವಾಗಬಹುದಾದ : ಭಾರತದ ರಹಸ್ಯಮಯ ಹಾಗು ಪಿಶಾಚಗ್ರಸ್ತ ಸ್ಥಳಗಳು

ಹೌದು ಸ್ಥಳದ ಹೆಸರು ಮಯಾಂಗ್. ಮಾಟ ಮಂತ್ರದ ಭೂಮಿ ಎಂತಲೂ ಕರೆಸಿಕೊಳ್ಳುವ ಈ ಸ್ಥಳ ಅಸ್ಸಾಂ ರಾಜ್ಯದ ಮೋರಿಗಾಂವ್ ಜಿಲ್ಲೆಯಲ್ಲಿದೆ. ಅಸ್ಸಾಂ ರಾಜ್ಯದ ಅತಿ ದೊಡ್ಡ ನಗರ ಪ್ರದೇಶವಾದ ಗುವಾಹಟಿಯಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಈ ಸ್ಥಳವು ಬ್ರಹ್ಮಪುತ್ರ ನದಿ ತಟದ ಮೇಲಿದೆ.

ಮಾಟ,ಮಂತ್ರ ಶಕ್ತಿಗಳ ತವರು ಮಯಾಂಗ್

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Jugal Bharali

ಇಂದು ಈ ಸ್ಥಳವು ತನ್ನ ನಿಗೂಢ ಇತಿಹಾಸ, ದಟ್ಟ ಹಸಿರಿನಿಂದ ಕೂಡಿದ ಕಾಡುಗಳು ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಸಾಕಷ್ಟು ಜನರು ಇದರ ಇತಿಹಾಸದಿಂದ ಕುತೂಹಲಗೊಂಡು ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಕಾಡಿನ ರಮಣೀಯ ಪರಿಸರವು ಭೇಟಿ ನೀಡಿದವರು ಮಂತ್ರಮುಗ್ಧಗೊಳ್ಳುವಂತೆ ಮಾಡುತ್ತದೆ.

ಮಾಟ,ಮಂತ್ರ ಶಕ್ತಿಗಳ ತವರು ಮಯಾಂಗ್

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: wikipedia

ಸ್ಥಳ ಪುರಾಣದ ಪ್ರಕಾರ, ಈ ಸ್ಥಳಕ್ಕೆ ಹೆಸರು ಸಂಸ್ಕೃತದ ಮಾಯಾ ಎಂಬ ಶಬ್ದದಿಂದ ಬಂದಿದೆಯಂತೆ. ಇನ್ನೂ ಕೆಲವರು ಹೇಳುವ ಪ್ರಕಾರ, ಮಣಿಪುರದ ಮೋಯಿರಾಂಗ್ ಸಮುದಾಯದ ಜನರು ಇಲ್ಲಿಗೆ ಬಂದು ವಾಸಮಾಡುತ್ತಿದ್ದರು. ಕ್ರಮೇಣವಾಗಿ ಮೋಯಿರಾಂಗ್ ಹೋಗೆ ಮಯಾಂಗ್ ಎಂಬ ಹೆಸರು ಬಂದಿತೆನ್ನಲಾಗುತ್ತದೆ.

ಮಾಟ,ಮಂತ್ರ ಶಕ್ತಿಗಳ ತವರು ಮಯಾಂಗ್

ಚಿತ್ರಕೃಪೆ: R4robin

ಇಲ್ಲಿ ಹಿಂದಿನಿಂದಲೂ ಮಾಟ ಮಂತ್ರ ಮುಂತಾದ ಆಚರಣೆಗಳನ್ನು ಮಾಡಲಾಗುತ್ತಿತ್ತು. ನಂತರ ತಲೆಯಿಂದ ತಲೆಗೆ ಈ ಪದ್ಧತಿಗಳು ವರ್ಗಾಯಿಸಲ್ಪಟ್ಟವು ಎಂದು ಹೇಳಲಾಗುತ್ತದೆ. ಇಲ್ಲಿನ ಜನರು ಹೇಳುವಂತೆ ಇಂದಿಗೂ ಸಹ ಇಲ್ಲಿನ ದಟ್ಟವಾದ ಕಾಡುಗಳಲ್ಲಿ ಮೋಹಿನಿ, ಡಾಕಿಣಿ ಹೀಗೆ ಹಲವು ಪಿಶಾಚಿಗಳು ಆಶ್ರಯ ಪಡೆದಿವೆಯಂತೆ. ಮಾಯಾ ಶಕ್ತಿಗಳ ಒಡೆಯ ಘಟೋದ್ಗಜ ಈ ಪ್ರದೇಶದಲ್ಲಿಯೆ ಇದ್ದನಂತೆ.

ಮಾಟ,ಮಂತ್ರ ಶಕ್ತಿಗಳ ತವರು ಮಯಾಂಗ್

ಚಿತ್ರಕೃಪೆ: Travelling Slacker

ಕೆಲವರು ಹೇಳುವಂತೆ ಹಿಂದೆ ಇಲ್ಲಿ ಮನುಷ್ಯರು ಇದ್ದಕ್ಕಿದ್ದಂತೆ ಗಾಳಿಯಲ್ಲಿ ಅದೃಶ್ಯರಾದ, ಪ್ರಾಣಿಗಳಾಗಿ ಬದಲಾದ, ಕ್ರೂರ ಪ್ರಾಣಿಗಳೂ ಪಳಗಿದ ಘಟನೆಗಳು ನಡೆದಿವೆಯಂತೆ! ಹಿಂದೊಮ್ಮೆ ನರಬಲಿಗಳು ಇಲ್ಲಿ ಸಾಮಾನ್ಯವಾಗಿತ್ತೆಂಬುದಕ್ಕೆ ಸಾಕಷ್ಟು ಪುರಾವೆಗಳೂ ಸಹ ದೊರಕಿವೆ. ಹೀಗಾಗಿ ಇಂದು ಈ ಸ್ಥಳವು ಸಾಕಷ್ಟು ಜನರಿಗೆ ಒಂದು ರೀತಿಯಲ್ಲಿ ಕುತೂಹಲವನ್ನುಂಟು ಮಾಡಿದೆ.

ರೂಪಕುಂಡ ಎಂಬ ರಹಸ್ಯ ಕೆರೆ

ಅಲ್ಲದೆ, ಇಲ್ಲಿನ ಕಾಡು ಪರಿಸರವು ಸಾಕಷ್ಟು ಪ್ರಶಾಂತತೆಯಿಂದ ಕೂಡಿದ್ದು ಕಲ್ಮಶರಹಿತ ವಾತಾವರಣವು ಭೇಟಿ ನೀಡಿದವರಿಗೆ ನವಚೈತನ್ಯವನ್ನುಂಟು ಮಾಡುತ್ತದೆ. ಆದ್ಭುತ ಪ್ರಕೃತಿ, ಸುಂದರವಾಗಿ ಕಂಡುಬರುವ ಭೂದೃಶ್ಯಗಳು, ಹೊಲ ಗದ್ದೆಗಳು ಎಂಥವರನ್ನೂ ಮೂಕವಿಸ್ಮಿತರನ್ನಾಗುವಂತೆ ಮಾಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X