Search
  • Follow NativePlanet
Share
» »ಮಾಥೇರಾನ್ : ಕುದುರೆಗಳೆ ಸಂಚಾರ ಮಾಧ್ಯಮ

ಮಾಥೇರಾನ್ : ಕುದುರೆಗಳೆ ಸಂಚಾರ ಮಾಧ್ಯಮ

By Vijay

"ಠಂಡಾ ಠಂಡಾ...ಕೂಲ್ ಕೂಲ್" ಇದು ನೀವು ಕೇಳಿರಬಹುದಾದ ಒಂದು ಹಿಂದಿ ಜಾಹಿರಾತಿನ ಹಾಡು. ಇದನ್ನು ಭಾವಪೂರ್ಣದಿಂದ ಅವಲೋಕಿಸಿದಾಗ, ತಂಪು ತಂಪಾದ ಮನಸ್ಸಿಗೆ ಹಿಡಿಸುವಂಥದ್ದು ಎಂದು ನಾವು ಕನ್ನಡದಲ್ಲಿ ಅರ್ಥೈಸಿಕೊಳ್ಳಬಹುದು. ಆ ಹಿಂದಿ ಜಾಹೀರಾತು ನಿರ್ದಿಷ್ಟ ಒಂದು ವಸ್ತುವಿಗೆ ಸಮರ್ಪಿತವಾಗಿದ್ದರೆ ಈ ಲೇಖನವು ಮಾತ್ರ ತಂಪು ತಂಪಾದ ಮಾಥೇರಾನ್ ಎಂಬ ಸ್ಥಳಕ್ಕೆ ಮುಡಿಪಾಗಿದೆ.

ಹೌದು ಮಹಾರಾಷ್ಟ್ರ ರಾಜ್ಯದಲ್ಲಿರುವ ಮಾಥೇರಾನ್ ಒಂದು ತಂಪು ತಂಪಾದ ಹಚ್ಚ ಹಸಿರಿನಿಂದ ಕೂಡಿದ ಸುಂದರ ಗಿರಿಧಾಮ ಪ್ರದೇಶ. ಕೇವಲ ಬೇಸಿಗೆಯಲ್ಲದೆ ಮಳೆಗಾಲದ ಸಂದರ್ಭದಲ್ಲೂ ಅಪಾರವಾದ ಪ್ರಕೃತಿ ಸೊಬಗಿನಿಂದ, ಇಬ್ಬನಿಯ ಹಾಸಿಗೆಯಿಂದ ಇದರ ವಾತಾವರಣ ನಾಚಿಕೆಯ ಶೃಂಗಾರ ಹೊತ್ತ ಹೆಣ್ಣಿನಂತೆ ಕಂಗೊಳಿಸುತ್ತದೆ.

ಮಾಥೇರಾನ್ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಕರ್ಜಾತ್ ತಾಲೂಕಿನ ಒಂದು ಪುರಸಭೆಯಾಗಿದೆ. ಮುಂಬೈನಿಂದ 100 ಕಿ.ಮೀ ಹಾಗೂ ಪುಣೆಯಿಂದ 120 ಕಿ.ಮೀ ದೂರದಲ್ಲಿರುವ ಮಾಥೇರಾನ್ ಒಂದು ಅಮೋಘ ಪ್ರವಾಸಿ ತಾಣವಾಗಿದ್ದು, ಎರಡೂ ಮಹಾನಗರಗಳಿಂದ ರಸ್ತೆ ಹಾಗೂ ರೈಲಿನ ಸಂಪರ್ಕ ಹೊಂದಿದೆ.

ಮಾಥೇರಾನ್:

ಮಾಥೇರಾನ್:

ಈ ಸುಂದರ ಗಿರಿಧಾಮ ಪ್ರದೇಶವು 1850 ರಲ್ಲಿ ಅಂದಿನ ಠಾಣೆಯ ಕಲೇಕ್ಟರ್ ಆಗಿದ್ದ ಬ್ರಿಟೀಷ್ ಆಡಳಿತದ ಹ್ಯೂಗ್ ಮಾಲೆಟ್ ಅವರಿಂದ ಶೋಧಿಸಲ್ಪಟ್ಟಿದೆ. ಇಂದು ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು ಇದನ್ನು ಒಂದು ಸೂಕ್ಷ್ಮ ಪರಿಸರ ಅಥವಾ ಶಾಸ್ತ್ರೀಯ ಪರಿಸರದ ಪ್ರದೇಶವನ್ನಾಗಿ ಘೋಷಿಸಿದೆ.

ಚಿತ್ರಕೃಪೆ: Aniket Thakur

ಮಾಥೇರಾನ್:

ಮಾಥೇರಾನ್:

ಮುಂಬೈ ಹಾಗೂ ಪುಣೆ ನಗರ ನಿವಾಸಿಗಳ ವಾರಾಂತ್ಯ ರಜೆಗಳ ನೆಚ್ಚಿನ ತಾಣಗಳ ಪೈಕಿ ಒಂದಾಗಿರುವ ಮಾಥೇರಾನ್ ಪಶ್ಚಿಮ ಘಟ್ಟಗಳ ದಟ್ಟ ಹಸಿರಿನ ಕಾನನದಲ್ಲಿ ಎಲೆ ಮರೆಯ ಕಾಯಿಯಂತೆ ನೆಲೆಸಿದ್ದು ಪ್ರವಾಸಿಗರ ಪಾಲಿನ ಸ್ವರ್ಗವಾಗಿದೆ.

ಚಿತ್ರಕೃಪೆ: praveensagarc

ಮಾಥೇರಾನ್:

ಮಾಥೇರಾನ್:

ಈ ಸ್ಥಳದ ಮತ್ತೊಂದು ವಿಶೇಷತೆಯೆಂದರೆ, ಬಹುಶಃ ಜಗತ್ತಿನಲ್ಲಿರುವ ಕೇವಲ ಕೆಲವೆ ಕೆಲವು ಪ್ರದೇಶಗಳ ಹಾಗೆ ಇಲ್ಲಿ ವಾಹನಗಳ ಚಲನ ವಲನಕ್ಕೆ ನಿರ್ಬಂಧ ಹೇರಲಾಗಿದೆ. ಆದ್ದರಿಂದ ಈ ಸ್ಥಳಕ್ಕೆ ಭೇಟಿ ನೀಡಿದಾಗ ನಿಮಗೆ ಸುಮಾರು ನೂರಾರು ವರ್ಷಗಳ ಹಿಂದಿನ ವಾಹನಗಳಿಲ್ಲದ ಸಮಯದ ಅನುಭವವಾಗಬಹುದು.

ಚಿತ್ರಕೃಪೆ: Aditya Patawari

ಮಾಥೇರಾನ್:

ಮಾಥೇರಾನ್:

ವಾಹನಗಳ ಸಂಚಾರ ಇರದೆ ಇರುವುದರಿಂದ ಈ ಸ್ಥಳವು ಶಾಂತಿಮಯವೂ, ಸುಂದರವೂ ಹಾಗೂ ಶುದ್ಧವಾಗಿಯೂ ಇರುವುದು ಕಂಡುಬರುತ್ತದೆ. ಅಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ಸುಂದರ ಗಿರಿಧಾಮಕ್ಕೆ ವರ್ಷಪೂರ್ತಿ ಭೇಟಿ ನೀಡುತ್ತಲೆ ಇರುತ್ತಾರೆ.

ಚಿತ್ರಕೃಪೆ: Ajay Panachickal

ಮಾಥೇರಾನ್:

ಮಾಥೇರಾನ್:

ಪಶ್ಚಿಮ ಘಟ್ಟಗಳ ದಟ್ಟವಾದ ಕಾಡಿನ ಹಾಸಿಗೆಯಲ್ಲಿ ಆವರಿಸಿರುವ ಈ ಗಿರಿಧಾಮದಲ್ಲಿ ಹಲವಾರು ಸುಂದರ ವೀಕ್ಷಣಾ ಕೇಂದ್ರಗಳಿವೆ. ಬೆಟ್ಟ ಗುಡ್ಡಗಳ, ರೋಮಾಂಚನಗೊಳಿಸುವ ಪ್ರಕೃತಿಯ, ಉಸಿರು ಬಿಗಿ ಹಿಡಿಯುವಂತೆ ಮಾಡುವ ಕಣಿವೆ, ಪ್ರಪಾತಗಳ ರಮಣಿಯ ನೋಟಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ.

ಚಿತ್ರಕೃಪೆ: McKay Savage

ಮಾಥೇರಾನ್:

ಮಾಥೇರಾನ್:

ನಿರ್ದಿಷ್ಟವಾಗಿ ಹೇಳಬೇಕೆಂದರೆ ಒಟ್ಟಾರೆ 38 ವೀಕ್ಷಣಾ ಕೇಂದ್ರಗಳು ಈ ಗಿರಿಧಾಮ ಪ್ರದೇಶದಲ್ಲಿದೆ. ಈ ವೀಕ್ಷಣಾ ಕೇಂದ್ರಗಳಿಂದ ಕೇವಲ ಸುತ್ತಮುತ್ತಲಿನ ಪರಿಸರ ಹಾಗು ಹತ್ತಿರದಲ್ಲಿರುವ ಪುರಾತನ ರಚನೆ, ಪಟ್ಟಣಗಳಲ್ಲದೆ ವಿಹಂಗಮವಾದ ಸೂರ್ಯೋದಯ ಹಾಗೂ ಸೂರ್ಯಾಸ್ತಗಳ ನೋಟವನ್ನೂ ಸವಿಯಬಹುದು.

ಚಿತ್ರಕೃಪೆ: timeflicks

ಮಾಥೇರಾನ್:

ಮಾಥೇರಾನ್:

ಇಲ್ಲಿರುವ ಹಲವಾರು ಗಮ್ಯ ವೀಕ್ಷಣಾ ಕೇಂದ್ರಗಳ ಪೈಕಿ ಕೆಲ ಗುರುತರವಾದ ವೀಕ್ಷಣಾ ಕೇಂದ್ರಗಳೆಂದರೆ, ವನ್ ಥ್ರಿ ಹಿಲ್ ಪಾಯಿಂಟ್, ಹಾರ್ಟ್ ಪಾಯಿಂಟ್, ಪಾರ್ಕ್ಯೂಪೈನ್ ಪಾಯಿಂಟ್, ಮಂಕಿ ಪಾಯಿಂಟ್, ರಾಮ್‍ಬಾಗ್ ಪಾಯಿಂಟ್ ಹೀಗೆ ಮುಂತಾದವು.

ಚಿತ್ರಕೃಪೆ: Harsha S

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ಮೂಲತಃ ಒಂದು ಗಿರಿ ಪ್ರದೇಶವಾಗಿದ್ದು ಕೆಳ ಸ್ತರದಲ್ಲಿರುವ ನೇರಲ್ ಎಂಬ ಪುಟ್ಟ ಪಟ್ಟಣದೊಂದಿಗೆ ಸಂಪರ್ಕ ಹೊಂದಿದೆ. ಒಂದು ಡಾಂಬರೀಕೃತ ರಸ್ತೆಯು ನೇರಲ್ ಪಟ್ಟಣವನ್ನು ದಸ್ತುರಿ ನಾಕಾ ಎಂಬ ಸ್ಥಳದೊಂದಿಗೆ ಬೆಸೆಯುತ್ತದೆ.

ಚಿತ್ರಕೃಪೆ: Harsha S

ಮಾಥೇರಾನ್:

ಮಾಥೇರಾನ್:

ದಸ್ತುರಿ ನಾಕಾ ಮಾಥೇರಾನ್ ನಿಂದ ಸುಮಾರು 8 ಕಿ.ಮೀ ಗಳಷ್ಟು ದೂರದಲ್ಲಿದೆ. ಅಲ್ಲದೆ ವಾಹನಗಳು ಇಲ್ಲಿಯವರೆಗೆ ಮಾತ್ರ ತೆರಳಬಹುದಾಗಿದ್ದು, ಇದರ ಮುಂದೆ ಚಲಿಸಲು ಅನುಮತಿ ಇರುವುದಿಲ್ಲ. ಆದರೆ ನೇರಲ್ ದಿಂದ ಪುಟಾಣಿ ರೈಲು ಮಾಥೇರಾನ್ ನೊಂದಿಗೆ ಸಂಪರ್ಕ ಸಾಧಿಸುತ್ತದೆ. ಯಾವುದೆ ವಾಹನ ಸಂಚಾರವಿಲ್ಲದಿದ್ದರೂ ಮಾಥೇರಾನ್ ಗೆ ತೆರಳಲು ಅನುಕೂಲವಾಗುವಂತೆ ಮಾಥೇರಾನ್ ಬೆಟ್ಟದ ಪುಟ್ಟ ರೈಲು ಮಾತ್ರ ಉಪಲಬ್ಧವಿದೆ.

ಚಿತ್ರಕೃಪೆ: Anuradha Sengupta

ಮಾಥೇರಾನ್:

ಮಾಥೇರಾನ್:

ನ್ಯಾರೋವ್ ಗೇಜ್ ಹಳಿಗಳ ಮೇಲೆ ಸಾಗುವ ಈ ರೈಲು ನೇರಲ್ ನಿಂದ ಮಾಥೇರಾನ್ ನ ಒಟ್ಟಾರೆಯ ದೂರವಾದ 12 ಮೈಲಿಯನ್ನು ತಲುಪಲು ಸುಮಾರು ಒಂದು ಘಂಟೆಯಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಪ್ರದೇಶದ ಅತಿ ಉತ್ತಮ ನೋಟಗಳನ್ನು ರೈಲಿನ ಮೂಲಕ ಸಾಗುವಾಗ ವೀಕ್ಷಿಸುತ್ತ ಆನಂದಿಸಬಹುದು.

ಚಿತ್ರಕೃಪೆ: Magiceye

ಮಾಥೇರಾನ್:

ಮಾಥೇರಾನ್:

ಮತ್ತೊಂದು ಆಸಕ್ತಿಕರ ವಿಷಯವೆಂದರೆ ಮಾಥೇರಾನ್ ಗಿರಿಧಾಮದಲ್ಲಿ ಬಗೆ ಬಗೆಯ ಔಷಧೀಯ ಗುಣವುಳ್ಳ ಗಿಡ ಮೂಲಿಕೆಗಳಿವೆ. ಅಲ್ಲದೆ ಮಂಗಗಳ ಸಂತತಿಯೂ ಇಲ್ಲಿ ಅಪಾರ. ಇಲ್ಲಿನ ಚರ್ಲೊಟ್ಟೆ ಕೆರೆಯು ಪ್ರದೇಶದ ನೀರಿನ ಬೇಡಿಕೆಗೆ ಪ್ರಮುಖ ಆಗರವಾಗಿದೆ. ಚಿತ್ರದಲ್ಲಿರುವುದು ಮಾಥೇರಾನ್ ರೈಲು ನಿಲ್ದಾಣ.

ಚಿತ್ರಕೃಪೆ: Magiceye

ಮಾಥೇರಾನ್:

ಮಾಥೇರಾನ್:

ಕೆಲ ವಿಶಿಷ್ಟ ಗಿಡ ಮೂಲಿಕೆಗಳು.

ಚಿತ್ರಕೃಪೆ: Jayesh Patil

ಮಾಥೇರಾನ್:

ಮಾಥೇರಾನ್:

ಕೆಲ ವಿಶಿಷ್ಟ ಗಿಡ ಮೂಲಿಕೆಗಳು.

ಚಿತ್ರಕೃಪೆ: Jayesh Patil

ಮಾಥೇರಾನ್:

ಮಾಥೇರಾನ್:

ಕೆಲ ವಿಶಿಷ್ಟ ಗಿಡ ಮೂಲಿಕೆಗಳು.

ಚಿತ್ರಕೃಪೆ: Jayesh Patil

ಮಾಥೇರಾನ್:

ಮಾಥೇರಾನ್:

ಕೆಲ ವಿಶಿಷ್ಟ ಗಿಡ ಮೂಲಿಕೆಗಳು.

ಚಿತ್ರಕೃಪೆ: Jayesh Patil

ಮಾಥೇರಾನ್:

ಮಾಥೇರಾನ್:

ಕೆಲ ವಿಶಿಷ್ಟ ಗಿಡ ಮೂಲಿಕೆಗಳು.

ಚಿತ್ರಕೃಪೆ: Jayesh Patil

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನಗರದಲ್ಲಿ ಯಾವುದೆ ರೀತಿಯ ವಾಹನಗಳಿಗೆ ಪ್ರವೇಶವಿಲ್ಲ ಕೇವಲ ನಗರ ಸಭೆಯ ಅಂಬುಲೇನ್ಸ್ ಹೊರತುಪಡಿಸಿ. ನಗರದ ತುಂಬೆಲ್ಲ ಸಂಚಾರ ಮಾಡಬೇಕೆಂದಿದ್ದರೆ ಕುದುರೆ ಅಥವಾ ಕೈ ರಿಕ್ಷಾಗಳ ಮೊರೆ ಹೋಗಬೇಕು. ಇಲ್ಲದಿದ್ದರೆ ನಡೆಯುವುದು ಉತ್ತಮ.

ಚಿತ್ರಕೃಪೆ: Magiceye

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನ ವಾತಾವರಣವನ್ನು ಪರಿಚಯಿಸುವ ಕೆಲ ಅದ್ಭುತ ಹಾಗೂ ಸುಂದರ ಚಿತ್ರಗಳು. ನಗರದ ನೀರಿನ ಪ್ರಮುಖ ಮೂಲ ಚಾರ್ಲೋಟ್ ಕೆರೆ.

ಚಿತ್ರಕೃಪೆ: Alosh Bennett

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನ ವಾತಾವರಣವನ್ನು ಪರಿಚಯಿಸುವ ಕೆಲ ಅದ್ಭುತ ಹಾಗೂ ಸುಂದರ ಚಿತ್ರಗಳು. ಮಾಥೇರಾನ್ ಪಟ್ಟಣದ ಎಂ.ಜಿ ರಸ್ತೆ.

ಚಿತ್ರಕೃಪೆ: Magiceye

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನ ವಾತಾವರಣವನ್ನು ಪರಿಚಯಿಸುವ ಕೆಲ ಅದ್ಭುತ ಹಾಗೂ ಸುಂದರ ಚಿತ್ರಗಳು. ಮಾಥೇರಾನ್ ಗೆ ಸಾಗುವ ಪುಟ್ಟ ಹಳಿಗಳು (ನ್ಯಾರೋವ್ ಗೇಜ್).

ಚಿತ್ರಕೃಪೆ: Magiceye

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನ ವಾತಾವರಣವನ್ನು ಪರಿಚಯಿಸುವ ಕೆಲ ಅದ್ಭುತ ಹಾಗೂ ಸುಂದರ ಚಿತ್ರಗಳು.

ಚಿತ್ರಕೃಪೆ: Harsha S

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನ ವಾತಾವರಣವನ್ನು ಪರಿಚಯಿಸುವ ಕೆಲ ಅದ್ಭುತ ಹಾಗೂ ಸುಂದರ ಚಿತ್ರಗಳು. ಮಾಥೇರಾನ್ ಪ್ರವೇಶಿಸಲು ಹೆಬ್ಬಾಗಿಲಾಗಿರುವ ದಸ್ತುರಿ ನಾಕಾದಲ್ಲಿ ನಿಲುಗಡೆಗೊಂಡ ವಾಹನಗಳು. ಇದರ ನಂತರದಿಂದ ವಾಹನಗಳು ಚಲಿಸಲು ಅನುಮತಿ ಇರುವುದಿಲ್ಲ.

ಚಿತ್ರಕೃಪೆ: Magiceye

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನ ವಾತಾವರಣವನ್ನು ಪರಿಚಯಿಸುವ ಕೆಲ ಅದ್ಭುತ ಹಾಗೂ ಸುಂದರ ಚಿತ್ರಗಳು.

ಚಿತ್ರಕೃಪೆ: praveensagarc

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನ ವಾತಾವರಣವನ್ನು ಪರಿಚಯಿಸುವ ಕೆಲ ಅದ್ಭುತ ಹಾಗೂ ಸುಂದರ ಚಿತ್ರಗಳು.

ಚಿತ್ರಕೃಪೆ: praveensagarc

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನ ವಾತಾವರಣವನ್ನು ಪರಿಚಯಿಸುವ ಕೆಲ ಅದ್ಭುತ ಹಾಗೂ ಸುಂದರ ಚಿತ್ರಗಳು.

ಚಿತ್ರಕೃಪೆ: praveensagarc

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನ ವಾತಾವರಣವನ್ನು ಪರಿಚಯಿಸುವ ಕೆಲ ಅದ್ಭುತ ಹಾಗೂ ಸುಂದರ ಚಿತ್ರಗಳು.

ಚಿತ್ರಕೃಪೆ: I for Detail.

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನ ವಾತಾವರಣವನ್ನು ಪರಿಚಯಿಸುವ ಕೆಲ ಅದ್ಭುತ ಹಾಗೂ ಸುಂದರ ಚಿತ್ರಗಳು.

ಚಿತ್ರಕೃಪೆ: Anuradha Sengupta

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನ ವಾತಾವರಣವನ್ನು ಪರಿಚಯಿಸುವ ಕೆಲ ಅದ್ಭುತ ಹಾಗೂ ಸುಂದರ ಚಿತ್ರಗಳು.

ಚಿತ್ರಕೃಪೆ: Jayesh Patil

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನ ವಾತಾವರಣವನ್ನು ಪರಿಚಯಿಸುವ ಕೆಲ ಅದ್ಭುತ ಹಾಗೂ ಸುಂದರ ಚಿತ್ರಗಳು.

ಚಿತ್ರಕೃಪೆ: Anuradha Sengupta

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ನ ವಾತಾವರಣವನ್ನು ಪರಿಚಯಿಸುವ ಕೆಲ ಅದ್ಭುತ ಹಾಗೂ ಸುಂದರ ಚಿತ್ರಗಳು.

ಚಿತ್ರಕೃಪೆ: Sankarshan Mukhopadhyay

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X