Search
  • Follow NativePlanet
Share
» »ಮಾಥೆರಾನ್‌ನ ಅದ್ಭುತ ತಾಣಗಳಲ್ಲಿ ವಾಹನಕ್ಕೆ ಎಂಟ್ರಿ ಇಲ್ಲ, ಕುದುರೆ ಸವಾರಿನೇ ಎಲ್ಲಾ

ಮಾಥೆರಾನ್‌ನ ಅದ್ಭುತ ತಾಣಗಳಲ್ಲಿ ವಾಹನಕ್ಕೆ ಎಂಟ್ರಿ ಇಲ್ಲ, ಕುದುರೆ ಸವಾರಿನೇ ಎಲ್ಲಾ

ಮಹಾರಾಷ್ಟ್ರದಲ್ಲಿರುವ ಮಾಥೆರಾನ್‌ ಒಂದು ಅದ್ಭುತ ಗುಡ್ಡ ಪ್ರದೇಶವಾಗಿದೆ. ಇದು ಅತಿ ಸಣ್ಣದು ಹಾಗೂ ತುಂಬಾ ಜನಪ್ರಿಯವಾದದ್ದು. ಸುಮಾರು 2,650 ಅಡಿ ಎತ್ತರದ ಈ ಪ್ರವಾಸಿ ತಾಣವು ಪಶ್ಚಿಮ ಘಟ್ಟದ ಸರಣಿಯಲ್ಲಿದೆ. ಮಾಥೆರಾನ್‌ನ ಪ್ರಶಾಂತ ಪರಿಸರವು ಮುಂಬೈ, ಪುಣೆಯಂಥಾ ಬ್ಯುಸಿ ನಗರಗಳಿಂದ ಪ್ರತ್ಯೇಕವಾಗಿದೆ.

ಇತಿಹಾಸದ ಪ್ರಕಾರ

ಇತಿಹಾಸದ ಪ್ರಕಾರ

PC: Sharmagourav27

1850 ರಲ್ಲಿ ಹಗ್‌ ಪಾಂಲಿಟ್ಜ್‌ ಮ್ಯಾಲೆಟ್‌ ಎನ್ನುವವರು ಈ ಪ್ರದೇಶವನ್ನು ಕಂಡುಹಿಡಿದರು. ಪಂಚ್‌ಗಣಿಯ ರೀತಿಯಲ್ಲೇ ಬ್ರಿಟೀಷರು ಈ ಪ್ರದೇಶವನ್ನು ತಮ್ಮ ರಜಾಕಾಲದ ದಿನ ಕಳೆಯುವ ಪ್ರದೇಶವನ್ನಾಗಿಸಿದ್ದರು. ಮುಂಬೈನಂತಹ ನಗರದಲ್ಲಿ ರಾತ್ರಿಯಲ್ಲೂ ಮಿನುಗುವ ಕೃತಕ ಬೆಳಕಿನಿಂದ ದೂರವಾದ ಈ ಪ್ರದೇಶವು ಅದ್ಭುತವಾದ ಪ್ರದೇಶವೆನಿಸುತ್ತದೆ.

ಮಾಥೆರಾನ್‌ನಲ್ಲಿನ ಆಕರ್ಷಣೆಗಳು

ಮಾಥೆರಾನ್‌ನಲ್ಲಿನ ಆಕರ್ಷಣೆಗಳು

PC: Udaykumar PR

ಇತರ ಎಲ್ಲಾ ಗುಡ್ಡ ಪ್ರದೇಶದ ರೀತಿಯಲ್ಲೇ ಮಾಥೆರಾನ್‌ ಕೂಡಾ ಹಲವು ವೀಕ್ಷಣಾ ತಾಣವನ್ನು ಹೊಂದಿದೆ. 38 ಅಧಿಕೃತ ತಾಣಗಳ ಪೈಕಿ, ಪನೋರಮಾ ಪಾಯಿಂಟ್‌ನಲ್ಲಿ ನೀವು ಇಡೀ ಪ್ರದೇಶವನ್ನು 360 ಡಿಗ್ರಿ ಕೋನದಲ್ಲಿ ನೋಡಬಹುದು. ಇಲ್ಲಿ ಕಾಣುವ ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ನೋಡಿದ ಪ್ರವಾಸಿಗರು ನಿಸರ್ಗದ ಮೇಲೆ ಅವ್ಯಕ್ತ ಪ್ರೀತಿಯಲ್ಲಿ ಬೀಳುತ್ತಾರೆ.

ಪ್ರಮುಖ ಪಾಯಿಂಟ್‌ಗಳು

ಪ್ರಮುಖ ಪಾಯಿಂಟ್‌ಗಳು

PC:Nicholas

ಇಲ್ಲಿರುವ ಪ್ರಬಲ್‌ ಕೋಟೆಯು ಒಂದು ಐತಿಹಾಸಿಕ ಕೋಟೆಯಾಗಿದ್ದು, ಇನ್ನೊಂದು ಪ್ರಮುಖ ಪಾಯಿಂಟ್‌ ಆಗಿರುವ ಲೂಸಿಯಾ ಪಾಯಿಂಟ್‌ನಿಂದ ಸ್ಪಷ್ಟವಾಗಿ ನೋಡಬಹುದು. ಈ ಕೋಟೆ ಸದ್ಯದಲ್ಲಿ ಅವಶೇಷದ ರೀತಿಯಲ್ಲಿದೆ. ಆದರೆ ಹಿಂದೊಂದು ಕಾಲದಲ್ಲಿ ಇದು ತುಂಬಾ ಸುಂದರವಾಗಿತ್ತು. ಇನ್ನೂ ಕೆಲವು ಪ್ರಮುಖ ಪಾಯಿಂಟ್‌ಗಳೆಂದರೆ, ಮಂಕಿ ಪಾಯಿಂಟ್, ಪಾರ್ಕ್ಯುಪೈನ್ ಪಾಯಿಂಟ್ ಮತ್ತು ಒನ್‌ಟ್ರೀ ಹಿಲ್‌ ಪಾಯಿಂಟ್. ಬ್ರಿಟೀಷ್‌ ಕಾಲದ ಕಟ್ಟಡಗಳು ಮತ್ತು ವಾಸ್ತುಶಿಲ್ಪಕ್ಕೆ ಮಾಥೆರಾನ್ ಸಾಕ್ಷಿಯಾಗಿದೆ. ಬಹುತೇಕ ಈ ಎಲ್ಲಾ ಕಟ್ಟಡಗಳನ್ನೂ ಕೂಡಾ ಐತಿಹಾಸಿಕವೆಂದು ಗುರುತಿಸಲಾಗಿದೆ. ರಿಲ್ಯಾಕ್ಸ್ ಮಾಡೋದಿಕ್ಕೆ ಸೂಕ್ತವಾದ ಜಾಗವೆಂದರೆ, ಚಾರ್ಲೆಟ್‌ ಕೆರೆ. ಇಲ್ಲಿ ಹಕ್ಕಿ ವೀಕ್ಷಣೆ ಮಾಡಬಹುದು, ನಿಮ್ಮ ಆತ್ಮೀಯರ ಜೊತೆ ಒಂದು ಸಣ್ಣ ತಿರುಗಾಟಕ್ಕೆ ಗಾರ್ಡನ್‌ ಕೂಡಾ ಇದೆ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC: Gaurav Raval

ಈ ಪ್ರದೇಶಕ್ಕೆ ಭೇಟಿ ನೀಡಿದಾಗ ನೀವು ಪಿಸಾರ್ನಾಥ ದೇವಸ್ಥಾನಕ್ಕೆ ಹೋಗುವುದನ್ನು ಮರೆಯಬೇಡಿ. ಮಾರ್ಬ್‌ ಡ್ಯಾಮ್ ಕೂಡಾ ಇನ್ನೊಂದು ಜಲಾವೃತ ಪ್ರದೇಶವಾಗಿದ್ದು ನೀವು ಮಿಸ್‌ ಮಾಡಿಕೊಳ್ಳುವ ಹಾಗಿಲ್ಲ. ಮಾಥೆರಾನ್‌ನ ನಿಸರ್ಗ ಮಾಥೆರಾನ್‌ನ ಕಾಡು ದಟ್ಟವಾಗಿದ್ದು, ವಿಭಾಗಿಸಲಾಗದಂತಹದ್ದಾಗಿದೆ. ಈ ಇಡೀ ಪ್ರದೇಶದಲ್ಲಿ ಮಂಗಗಳು ಯಥೇಚ್ಛವಾಗಿ ಕ್ರಿಯಾಶೀಲವಾಗಿರುವುದನ್ನು ಪ್ರವಾಸಿಗರು ನೋಡಬಹುದಾಗಿದೆ.

ವಾಹನಗಳಿಗೆ ಪ್ರವೇಶ ಇಲ್ಲ

ವಾಹನಗಳಿಗೆ ಪ್ರವೇಶ ಇಲ್ಲ

PC:Marwada

ಮಾಥೆರಾನ್‌ ಬಗ್ಗೆ ಆಸಕ್ತಿಕರ ಸಂಗತಿಯೆಂದರೆ, ವಾಹನಗಳಿಗೆ ಪ್ರವೇಶ ನೀಡದ ಕೆಲವೇ ಕೆಲವು ಪ್ರದೇಶಗಳಲ್ಲಿ ಇದೂ ಒಂದು. ನೈಸರ್ಗಿಕವಾಗಿ ಇದು ಪ್ರಭಾವೀ ಪರಿಸರವಾಗಿದೆ ಮತ್ತು ಯಾವುದೇ ವಾಹನಗಳು ಇಲ್ಲಿ ಕಾಣದಿರುವುದರಿಂದ ಪ್ರವಾಸಿಗರಿಗೆ ಆತ್ಮೀಯವೆನ್ನಿಸುತ್ತದೆ. ಯಾವುದೇ ವಾಹನಗಳು ಇಲ್ಲದ್ದರಿಂದ ಪರಿಸರ ಮಾಲಿನ್ಯವಿರುವುದಿಲ್ಲ ಮತ್ತು ಶಬ್ದ ಕೂಡಾ ಇರುವುದಿಲ್ಲ. ಇದರ ಪರಿಣಾಮವಾಗಿ ಈ ಶಾಂತ ಗುಡ್ಡ ಪ್ರದೇಶವು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಕುದುರೆ ಸವಾರಿ

ಕುದುರೆ ಸವಾರಿ

PC: Xxdomiainxx

ಇದರಿಂದಾಗಿಯೇ ಕುದುರೆ ಸವಾರಿಯು ಇಲ್ಲಿ ಕಡ್ಡಾಯ ಮತ್ತು ಇದರಿಂದ ಪ್ರವಾಸಿಗರು ತಪ್ಪಿಸಿಕೊಳ್ಳುವುದು ಅಸಾಧ್ಯ. ಇಲ್ಲಿ ಸ್ವಯಂಚಾಲಿತ ಗಾಡಿಗಳೂ ಇವೆ. ಇದೊಂದೇ ಗಾಡಿಗೆ ಇಲ್ಲಿ ಪ್ರವೇಶ ನೀಡಲಾಗಿದೆ. ಮಾಥೆರಾನ್‌ನ ಹಲವು ಮಾರುಕಟ್ಟೆಯಲ್ಲಿ ಖರೀದಿ ಮಾಡಲಿಚ್ಚಿಸುವವರು ತಿರುಗಾಡಬಹದು. ಇಲ್ಲಿ ಪ್ರವಾಸಿಗರಿಗೆಂದೇ ಮಾರಾಟಕ್ಕಿಡಲಾದ ಕಲಾವಸ್ತುಗಳಿಂದ ಹಿಡಿದು ಮೂರ್ತಿಗಳವರೆಗೆ ಎಲ್ಲವೂ ಲಭ್ಯವಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Xxdomiainxx

ಭಾರತದ ಎಲ್ಲಾ ಪ್ರಮುಖ ನಗರಗಳಿಂದಲೂ ಮಾಥೆರಾನ್‌ ಸೂಕ್ತ ಸಂಪರ್ಕವನ್ನು ಹೊಂದಿದೆ. ನೀವು ವಿಮಾನದ ಮೂಲಕ, ರಸ್ತೆಯ ಮೂಲಕ ಅಥವಾ ರೈಲಿನ ಮೂಲಕ ಇಲ್ಲಿಗೆ ಪ್ರಯಾಣಿಸುವ ಇಷ್ಟವಿದ್ದಲ್ಲಿ, ಎಲ್ಲಾ ಮೂಲಗಳಿಂದಲೂ ಕೂಡಾ ಸೂಕ್ತ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ಮಾಥೆರಾನ್‌ಗೆ ನೇರಾಲ್‌ನಿಂದ ರೈಲು ಸಂಪರ್ಕವಿದೆ.

ನೀವು ವಿಮಾನದ ಮೂಲಕ ಪ್ರಯಾಣಿಸುವ ಯೋಜನೆ ಮಾಡಿದ್ದರೆ, ಸಮೀಪದ ವಿಮಾನ ನಿಲ್ದಾಣವು ಪುಣೆ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ನೀವು ರಸ್ತೆಯಲ್ಲಿ ಪ್ರಯಾಣ ಮಾಡಿದರೆ ಘಾಟಿ ಪ್ರದೇಶಗಳ ಅನುಭವವಾಗುತ್ತದೆ. ಈ ಪ್ರದೇಶಕ್ಕೆ ನೀವು ಡ್ರೈವ್ ಮಾಡುವ ಆಯ್ಕೆ ಉತ್ತಮವಾದದ್ದು, ಆದರೆ ಘಟ್ಟ ಪ್ರದೇಶಗಳು ಚಾಲಕರಿಗೆ ತುಂಬಾ ಕಷ್ಟಕರವಾದದ್ದಾಗಿದೆ. ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ. ನಗರದ ಬೇಸಿಗೆ, ಜೀವನದ ಬ್ಯುಸಿ ಜೀವನ ಶೈಲಿ ಹಾಗೂ ನಗರದ ಟ್ರಾಫಿಕ್‌ ಮತ್ತು ಮಾಲಿನ್ಯದಿಂದ ಹೊರಗುಳಿಯಲು ಇಷ್ಟಪಟ್ಟಲ್ಲಿ ಮಾಥೆರಾನ್‌ ಉತ್ತಮ ತಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more