Search
  • Follow NativePlanet
Share
» »ಈ ಶಿವನ ದೇವಾಲಯದಲ್ಲಿ ಚರ್ಮದ ವಸ್ತುವನ್ನು ಧರಿಸುವಂತಿಲ್ಲ

ಈ ಶಿವನ ದೇವಾಲಯದಲ್ಲಿ ಚರ್ಮದ ವಸ್ತುವನ್ನು ಧರಿಸುವಂತಿಲ್ಲ

ಯಮುನಾ ನದಿ ತೀರದಲ್ಲಿ ಮಂಕಾಮೇಶ್ವರ ದೇವಸ್ಥಾನವನ್ನು ರಾಮನು ನಿರ್ಮಿಸಿದನು. ಇಡೀ ದೇವಾಲಯವು ಮೋಡಿಮಾಡುವ ವಾತಾವರಣದೊಂದಿಗೆ ಅತ್ಯಂತ ಶಾಂತಿಯುತ ಸ್ಥಳವಾಗಿದೆ.

ನಮ್ಮ ದೇಶದಲ್ಲಿ ಎಷ್ಟೇಲ್ಲಾ ದೇವಸ್ಥಾನಗಳಿವೆ. ಪ್ರತಿಯೊಂದು ದೇವಸ್ಥಾನವೂ ಒಂದೊಂದು ವಿಶೇಷತೆಯನ್ನು ಹೊಂದಿರುತ್ತದೆ. ಹಾಗೆಯೇ ವಿಶೇಷ ಆಚರಣೆಗಳನ್ನೂ ಹೊಂದಿರುತ್ತದೆ. ಅಂತಹದ್ದೇ ಒಂದು ವಿಶೇಷ ಆಚರಣೆಗಳುಳ್ಳ ದೇವಾಲಯದ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಯಾರೂ ಚರ್ಮದ ವಸ್ತುಗಳನ್ನು ಧರಿಸುವಂತಿಲ್ಲ, ಅದು ಬೆಲ್ಟ್ ಆಗಿರಬಹುದು ಪರ್ಸ್‌ ಅಥವಾ ಕೈ ಪಟ್ಟಿ, ಚಪ್ಪಲಿ ಹೀಗೇ ಏನೇ ಆಗಿರಬಹುದು. ಚರ್ಮದ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಹಾಗೆಯೇ ಪ್ಯಾಂಟ್‌, ಸಲ್ವಾರ್‌ ಕೂಡಾ ಧರಿಸುವಂತಿಲ್ಲ.

ರಾಮನು ನಿರ್ಮಿಸಿದ ದೇವಾಲಯ

ರಾಮನು ನಿರ್ಮಿಸಿದ ದೇವಾಲಯ

ಮಂಕಮೇಶ್ವರ ದೇವಸ್ಥಾನವು ಶಿವ ದೇವಸ್ಥಾನವಾಗಿದ್ದು, ಇಲ್ಲಿ ಮನಃಪೂರ್ವಕವಾಗಿ ಪ್ರಾರ್ಥಿಸಿದರೆ ಇಚ್ಛೆಗಳು ಈಡೇರುತ್ತದೆ ಎಂದು ನಂಬಲಾಗಿದೆ. ಯಮುನಾ ನದಿ ತೀರದಲ್ಲಿ ಮಂಕಾಮೇಶ್ವರ ದೇವಸ್ಥಾನವನ್ನು ರಾಮನು ನಿರ್ಮಿಸಿದನು. ಇಡೀ ದೇವಾಲಯವು ಮೋಡಿಮಾಡುವ ವಾತಾವರಣದೊಂದಿಗೆ ಅತ್ಯಂತ ಶಾಂತಿಯುತ ಸ್ಥಳವಾಗಿದೆ.

ಮಂಕಮೇಶ್ವರ ದೇವಾಲಯ

ಮಂಕಮೇಶ್ವರ ದೇವಾಲಯ

PC: youtube
ಶಿವನನ್ನು ಪೂಜಿಸುವ ಪ್ರಾಚೀನ ದೇವಾಲಯಗಳಲ್ಲಿ ಮಂಕಮೇಶ್ವರ ದೇವಸ್ಥಾನ ಕೂಡ ಒಂದು. ಹಿಂದೂ ಪುರಾಣದ ಪ್ರಕಾರ, ಕೃಷ್ಣನು ಮಥುರಾದಲ್ಲಿ ಜನಿಸಿದಾಗ ಮಂಕಮೇಶ್ವರ ದೇವಾಲಯದ ಒಳಗೆ ಸ್ವತಃ ಶಿವನೇ ಶಿವಲಿಂಗವನ್ನು ಸೃಷ್ಟಿಸಿದನೆಂದು ನಂಬಲಾಗಿದೆ. ಆಗ್ರಾದಲ್ಲಿರುವ ಮಂಕಮೇಶ್ವರ ದೇವಸ್ಥಾನವು ಶಿವನಿಗೆ ಸಮರ್ಪಿತವಾದ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ.

ಪುರಾಣದ ಪ್ರಕಾರ

ಪುರಾಣದ ಪ್ರಕಾರ

ಕೃಷ್ಣನ ಮಗುವಿನ ಅವತಾರವನ್ನು ನೋಡಲು ಶಿವನು ಕೈಲಾಸದಿಂದ ಮಂಕಮೇಶ್ವರ ದೇವಾಲಯದಲ್ಲಿ ನೆಲೆಸಿದನು. ಕೃಷ್ಣನು ಶಿವನ ತೊಡೆ ಮೇಲೆ ಆಡಿದರೆ ಅಲ್ಲಿ ಶಿವಲಿಂಗವನ್ನು ನಿರ್ಮಿಸುವುದಾಗಿ ಹೇಳುತ್ತಾನೆ. ಶಿವನ ರೂಪವನ್ನು ಕಂಡು ಯಶೋಧೆಯು ತನ್ನ ಕಂದನಿಂದ ದೂರವಿರುವಂತೆ ಶಿವನಿಗೆ ಆದೇಶಿಸುತ್ತಾಳೆ. ಹಾಗಾಗಿ ಶಿವ ದೂರದ ಆಲದ ಮರದ ಕೆಳಗೆ ನಿಂತಿರುತ್ತಾನೆ. ಇದನ್ನೆಲ್ಲಾ ಕಂಡ ಪುಟ್ಟ ಕೃಷ್ಣನು ಆಲದ ಮರದತ್ತ ಕೈ ತೋರಿಸಿ ಅಳಲಾರಂಭಿಸುತ್ತಾನೆ. ಆಗ ಯಶೋಧೆ ಶಿವನಲ್ಲಿ ಕ್ಷಮೆ ಯಾಚಿಸಿ ಕೃಷ್ಣನಿಗೆ ಆಶೀರ್ವದಿಸುವಂತೆ ಕೋರುತ್ತಾಳೆ. ಶಿವನು ಆ ಸ್ಥಳದಲ್ಲಿ ಶಿವಲಿಂಗವನ್ನು ಸೃಷ್ಠಿಸುತ್ತಾನೆ.

ಬೆಳ್ಳಿಯಿಂದ ಮುಚ್ಚಲಾಗಿರುವ ಶಿವಲಿಂಗ

ಬೆಳ್ಳಿಯಿಂದ ಮುಚ್ಚಲಾಗಿರುವ ಶಿವಲಿಂಗ

ಈ ದೇವಾಲಯದಲ್ಲಿರುವ ಶಿವ ಲಿಂಗವು ಬೆಳ್ಳಿ ಲೋಹದೊಂದಿಗೆ ಮುಚ್ಚಲ್ಪಟ್ಟಿದೆ. ಈ ದೇವಾಲಯವು ಶಿವನ ಪ್ರತಿಮೆಯನ್ನು ಹೊಂದಿರುವ ಗರ್ಭಗುಡಿಗಳನ್ನು ಹೊಂದಿದೆ. 2004 ರಲ್ಲಿ ಶ್ರೀ ಕೃಷ್ಣ ಪ್ರತಿಮೆಯನ್ನು ಶ್ರೀ ನಾನಾಜಿ ಮತ್ತು ಮಥುರಾದ ಶ್ರೀ ದ್ವಾರಕಾದೀಶ್ ನಾಥ್ ಮಾರ್ಗದರ್ಶಿ ತತ್ವಗಳ ಅಡಿಯಲ್ಲಿ ದೇವಾಲಯದಲ್ಲಿ ರಚಿಸಲಾಯಿತು.

ಇತರ ದೇವರ ಗುಡಿಗಳು

ಇತರ ದೇವರ ಗುಡಿಗಳು

ಶಿವ ದೇವಸ್ಥಾನದ ಹಿಂದೆ ಸಂಕೀರ್ಣದಲ್ಲಿ ಹಲವಾರು ಸಣ್ಣ ಸಣ್ಣ ದೇವಾಲಯಗಳಿವೆ. ಈ ದೇವಾಲಯಗಳು ದೇವತೆ ಸರಸ್ವತಿ, ಗಾಯತ್ರಿ ಮತ್ತು ಗಂಗಾ, ಹನುಮಾನ್, ರಾಮ ಮತ್ತು ನರಸಿಂಹ ಮುಂತಾದ ಹಲವಾರು ದೇವತೆಗಳಿಗೆ ಮೀಸಲಾಗಿವೆ.

ಚರ್ಮದ ವಸ್ತುಗಳನ್ನು ಧರಿಸಬಾರದು

ಇದು ಮಂಕಮೇಶ್ವರ ದೇವಾಲಯದ ಒಂದು ಆಚರಣೆಯಾಗಿದ್ದು, ಚರ್ಮದ ವಸ್ತುಗಳು, ಸಲ್ವಾರ್ ಸೂಟ್‌ಗಳನ್ನು, ಪೈಜಾಮಾಗಳು ಮತ್ತು ಪ್ಯಾಂಟ್‌ಗಳಳನ್ನು ಧರಿಸಬಾರದು. ಜನರು ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಮಾತ್ರ ಧರಿಸಬೇಕು, ಅದು ಧೋತಿ ಮತ್ತು ಸೀರೆ. ಶ್ರಾವಣ ತಿಂಗಳಲ್ಲಿ ಹಾಗೂ ಸೋಮವಾರ ಮಂಗಳಕರವಾಗಿದ್ದು, ಆ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶಿವನನ್ನು ಪೂಜಿಸಲು ಇಲ್ಲಿಗೆ ಬರುತ್ತಾರೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ


ಆಗ್ರಾ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿ ಮತ್ತು ಆಗ್ರಾ ಕೋಟೆಗೆ 1 ಕಿ.ಮೀ. ದೂರದಲ್ಲಿ, ಶ್ರೀ ಮಂಕಮೇಶ್ವರ ದೇವಸ್ಥಾನವು ಆರಾದಲ್ಲಿನ ಜಾಮಾ ಮಸೀದಿ ಬಳಿಯ ರಾವತ್ಪಾರದಲ್ಲಿದೆ.

ದೇವಸ್ಥಾನ ಯಾವಾಗ ತೆರೆದಿರುತ್ತದೆ

ದೇವಸ್ಥಾನ ಯಾವಾಗ ತೆರೆದಿರುತ್ತದೆ

ಬೇಸಿಗೆಗಾಲದಲ್ಲಿ ದೇವಸ್ಥಾನವು ಬೆಳಗ್ಗೆ 4.40ರಿಂದ ರಾತ್ರಿ 10.30 ರವರೆಗೆ ತೆರೆದಿರುತ್ತದೆ. ಚಳಿಗಾಲದಲ್ಲಿ 5.10 ರಿಂದ 10 ಗಂಟೆಯ ವರೆಗೆ ತೆರೆದಿರುತ್ತದೆ. ಸೋಮವಾರದಂದು ರಾತ್ರಿ 11 ಗಂಟೆಯ ವರೆಗೆ ದೇವಸ್ಥಾನ ತೆರೆದಿರುತ್ತದೆ. ಮಂಗಳಾರತಿ ಬೆಳಗ್ಗೆ 5 ಗಂಟೆಗೆ ನಡೆಯುತ್ತದೆ. ಹಾಗೂ ಅಭಿಷೇಕ ಆರತಿ ಬೆಳಗ್ಗೆ 6 ಗಂಟೆಗೆ ನಡೆಯುತ್ತದೆ.

ತಲುಪುವುದು ಹೇಗೆ?

ಆಗ್ರಾ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿದೆ ಮತ್ತು ಆಗ್ರಾ ಕೋಟೆಯಿಂದ 1 ಕಿ.ಮೀ ದೂರದಲ್ಲಿದೆ. ಮಂಕಾಮೇಶ್ವರ ಮಂದಿರವು ಆಗ್ರದಲ್ಲಿನ ಜಾಮಾ ಮಸೀದಿ ಸಮೀಪದ ರಾವತ್ಪಾರದಲ್ಲಿದೆ. ಸುಂದರವಾದ ದೇವಸ್ಥಾನವನ್ನು ಸುಲಭವಾಗಿ ತಲುಪಲು ಕ್ಯಾಬ್ ಅಥವಾ ಆಟೋವನ್ನು ಬಾಡಿಗೆಗೆ ಪಡೆಯಬಹುದು.ಪಿಡಬ್ಲ್ಯುಡಿ ಬಸ್‌ ನಿಲ್ದಾಣದಿಂದ ಸ್ವಲ್ಪವೇ ಕಾಲ್ಸಡಿಗೆಯಲ್ಲಿ ನೀವು ಈ ದೇವಾಲಯವನ್ನು ತಲುಪಬಹುದು.

ಆಗ್ರಾ ಕೋಟೆ

ಆಗ್ರಾ ಕೋಟೆ

PC:Reflectionsbyprajakta
ಆಗ್ರಾದಲ್ಲಿ ಸಾಕಷ್ಟು ಪ್ರಮುಖ ಪ್ರವಾಸಿ ತಾಣಗಳಿವೆ. ಐತಿಹಾಸಿಕ ಸ್ಮಾರಕಗಳಿವೆ. ಅವುಗಳಲ್ಲಿ ಆಗ್ರಾ ಕೋಟೆಯೂ ಒಂದು. ಆಗ್ರಾ ಕೋಟೆಯನ್ನು ಲಾಲ್ ಕಿಲಾ ಅಥವಾ ಕೆಂಪು ಕೋಟೆ ಎಂದೂ ಕರೆಯುತ್ತಾರೆ. ಇದು ಆಗ್ರಾದಲ್ಲಿ ಯಮುನಾ ನದಿಯ ದಡದಲ್ಲಿದೆ, ಇದು ಆಗ್ರಾ ನಗರಕ್ಕೆ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಉತ್ತರ ಪ್ರದೇಶದ ಈ ಕೋಟೆಯು UNESCO ವಿಶ್ವ ಪರಂಪರೆ ಮತ್ತು ಭಾರತದ ಅತ್ಯುತ್ತಮ ಕೋಟೆಗಳಲ್ಲಿ ಒಂದಾಗಿದೆ.

ತಾಜ್ ಮಹಲ್

ತಾಜ್ ಮಹಲ್

PC: wikicommons
ವಿಶ್ವದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ತಾಜ್ ಮಹಲ್ ಉತ್ತರ ಪ್ರದೇಶ ರಾಜ್ಯದ ಆಗ್ರಾದಲ್ಲಿ ಯಮುನಾ ನದಿಯ ದಕ್ಷಿಣದ ದಂಡೆಯಲ್ಲಿದೆ. ತಾಜ್ ಮಹಲ್ 1983 ರಲ್ಲಿ UNESCO ವಿಶ್ವ ಪರಂಪರೆ ತಾಣವಾಗಿ ಘೋಷಿಸಲ್ಪಟ್ಟಿತು ಮತ್ತು ಇದು ಆಧುನಿಕ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿದೆ. ಇದು ವಾರ್ಷಿಕವಾಗಿ ನಾಲ್ಕು ದಶಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತದೆ. ತಾಜ್ ಮಹಲ್ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಮುಘಲ್ ಮೇರುಕೃತಿಗಳಲ್ಲಿ ಒಂದಾಗಿದೆ ಮತ್ತು ಇದು ಭಾರತೀಯ, ಪರ್ಷಿಯನ್ ಮತ್ತು ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X