Search
  • Follow NativePlanet
Share
» »ಸಕಲೇಶಪುರದಲ್ಲಿರುವ ಈ ಕೋಟೆಯಲ್ಲಿ ಶ್ರೀರಂಗ ಪಟ್ಟಣ ತಲುಪುವ ಸುರಂಗವಿದೆಯಂತೆ

ಸಕಲೇಶಪುರದಲ್ಲಿರುವ ಈ ಕೋಟೆಯಲ್ಲಿ ಶ್ರೀರಂಗ ಪಟ್ಟಣ ತಲುಪುವ ಸುರಂಗವಿದೆಯಂತೆ

ಟ್ರಕ್ಕಿಂಗ್ ಪ್ರೀಯರಿಗೆ ಸಕಲೇಶಪುರದಲ್ಲೊಂದಿದೆ ಬೆಸ್ಟ್ ಟ್ರಕ್ಕಿಂಗ್ ಸ್ಪಾಟ್. ಸಕಲೇಶಪುರದ ಬಳಿ ಒಂದು ಕೋಟೆ ಇದೆ. ಸಮುದ್ರಮಟ್ಟದಿಂದ ಸುಮಾರು 3,240 ಅಡಿ ಎತ್ತರದಲ್ಲಿದೆ ಈ ಕೋಟೆ. ಟಿಪ್ಪುವಿನಿಂದ ನಿರ್ಮಿತವಾದ ಈ ಕೋಟೆಯನ್ನು ಮದ್ದುಗುಂಡುಗಳ ಸಂಗ್ರಹಕ್ಕಾಗಿ ಬಳಸಲಾಗುತ್ತಿತ್ತು. ಆ ಕೋಟೆಯೇ ಮಂಜರಾಬಾದ್ ಕೋಟೆ.

ಎಲ್ಲಿದೆ ಈ ಕೋಟೆ?

ಎಲ್ಲಿದೆ ಈ ಕೋಟೆ?

PC: wikipedia

ಮಂಜರಾಬಾದ್‌ಕೋಟೆಬೆಂಗಳೂರು-ಮಂಗಳೂರುಹೆದ್ದಾರಿಯಲ್ಲಿಹಾಸನಜಿಲ್ಲೆಯಸಕಲೇಶಪುರದಿಂದ ಮುಂದಕ್ಕೆ 5 ಕಿ.ಮೀ ದೂರದಲ್ಲಿರುವ ದೋಣಿಗಾಲ್ ಎಂಬ ಊರಿನ ಸಣ್ಣ ಗುಡ್ಡದ ಮೇಲೆ ಇದೆ. ಇದುಶಿರಾಡಿ ಘಾಟಿಹಾಗುಬಿಸಿಲೆ ಘಾಟಿರಸ್ತೆಗಳ ಕವಲಿನಲ್ಲಿ ಇದೆ.

ಇದನ್ನೂ ಓದಿ:ಗಾಂಧೀಜಿ ಹತ್ಯೆಯಾದ ಜಾಗ ಈಗ ಏನಾಗಿದೆ ನೋಡಿ ...ಇದನ್ನೂ ಓದಿ:ಗಾಂಧೀಜಿ ಹತ್ಯೆಯಾದ ಜಾಗ ಈಗ ಏನಾಗಿದೆ ನೋಡಿ ...

ಟಿಪ್ಪು ಸುಲ್ತಾನ್ ನಿರ್ಮಿಸಿದ ಕೋಟೆ

ಟಿಪ್ಪು ಸುಲ್ತಾನ್ ನಿರ್ಮಿಸಿದ ಕೋಟೆ

PC: wikipedia

ಈ ಕೋಟೆಯು ಮೈಸೂರಿನ ದೊರೆ ಟಿಪ್ಪು ಸುಲ್ತಾನನಿಂದ ನಿರ್ಮಾಣಗೊಂಡಿತು. ಇದರ ನಿರ್ಮಾಣದ ಉದ್ದೇಶ ಸಕಲೇಶಪುರದ ಬಳಿ ಹಾದು ಹೋಗುವ ಹಾದಿಗಳು ಸಮುದ್ರ ತೀರಗಳಿಗೆ ಸಂಪರ್ಕ ಕಲ್ಪಿಸುವುದರಿಂದಾಗಿ, ಸುತ್ತಮುತ್ತಲ ಪ್ರದೇಶಗಳ ರಕ್ಷಣೆಯ ದೃಷ್ಟಿಯಿಂದ ನಿರ್ಮಾಣ ಮಾಡಲಾಯಿತು.

ಸಕ್ಷತ್ರಾಕಾರದಲ್ಲಿದೆ ಈ ಕೋಟೆ

ಸಕ್ಷತ್ರಾಕಾರದಲ್ಲಿದೆ ಈ ಕೋಟೆ

ಈ ನಕ್ಷತ್ರಾಕಾರದ ಕೋಟೆಯ ನಿರ್ಮಾಣ 1785ರಲ್ಲಿ ಶುರುವಾಗಿ 1792ರಲ್ಲಿ ಅಂತ್ಯ ಕಂಡಿತು. ಈ ಕೋಟೆಯಲ್ಲಿ ಹಲವಾರು ಕೊಠಡಿಗಳಿವೆ. ಇವುಗಳಲ್ಲಿ ಕೆಲವನ್ನು ಕುದುರೆಗಳನ್ನು ಕಟ್ಟುವ ಲಾಯವನ್ನಾಗಿ ಬಳಸಿದರೆ, ಉಳಿದವುಗಳನ್ನು ಅಡಿಗೆ ಮನೆಯಾಗಿ ಮತ್ತು ಸೈನಿಕರ ಶೌಚಾಲಯವಾಗಿ ಬಳಸಲಾಗುತ್ತಿತ್ತು. ಪ್ರವಾಸಿಗರು ಇಲ್ಲಿ ಒಂದು ಸುರಂಗ ಮಾರ್ಗವನ್ನು ಕಾಣಬಹುದು. ಅದು ಶ್ರೀರಂಗ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುತ್ತದೆಯಂತೆ. ಮೊದಲಿಗೆ ಇದು ಆ ಉದ್ದೇಶಕ್ಕೆ ಬಳಕೆಯಾಗಿದ್ದರು, ನಂತರ ಇದು ಶವಗಳನ್ನು ಬಿಸಾಡುವುದಕ್ಕೆ ಬಳಕೆಯಾಗುತ್ತಿತ್ತು.

ಮದ್ದುಗುಂಡುಗಳ ಸಂಗ್ರಹಾರವಾಗಿತ್ತು

ಮದ್ದುಗುಂಡುಗಳ ಸಂಗ್ರಹಾರವಾಗಿತ್ತು

PC: wikipedia

ಟಿಪ್ಪು ಸುಲ್ತಾನನ ಕಾಲದಲ್ಲಿ ಈ ಕೋಟೆಯು ಮದ್ದುಗುಂಡುಗಳ ಸಂಗ್ರಹಗಾರವನ್ನಾಗಿ ಬಳಸಲಾಗುತ್ತಿತ್ತು. ಅಲ್ಲದೆ ಬ್ರಿಟೀಷರ ಸೈನ್ಯವನ್ನು ಮಂಗಳೂರಿನತ್ತ ಹೋಗದಂತೆ ತಡೆಯುವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಮಂಜರಾಬಾದ್ ಕೋಟೆಯು ಒಂದು ಸಣ್ಣ ಗುಡ್ದದ ಮೇಲೆ ಕಟ್ಟಲಾಗಿದೆ. ಇತರ ಕೋಟೆಗಳಿಗೆ ಹೋಲಿಸಿದರೆ ಈ ಕೋಟೆ ಒಂದೆ ಒಂದು ಮಟ್ಟದ ನಿರ್ಮಾಣ ಮಾದರಿ ಅನುಸರಿಸಿದೆ. ಇತರ ಕೋಟೆಗಳು ಹಲವು ಮಟ್ಟದ ಮಾದರಿ ಅನುಸರಿಸಿರುತ್ತವೆ. ಈ ಕೋಟೆಯು ಪಶ್ಚಿಮ ಘಟ್ಟದ ಭವ್ಯ ನೋಟವನ್ನು ಒದಗಿಸುತ್ತದೆ. ಈ ಕೋಟೆಯು ಶಿಲುಬೆ ರಚನೆಯ ಹೊಂಡಗಳನ್ನು ಹೊಂದಿದ್ದು, ಅವುಗಳು ಈ ಕೋಟೆಯ ಏಕೈಕ ನೀರಿನ ಆಕರಗಳಾಗಿವೆ.

250 ಮೆಟ್ಟಿಲುಗಳಿವೆ

250 ಮೆಟ್ಟಿಲುಗಳಿವೆ

ಸುಮಾರು 250 ಮೆಟ್ಟಿಲುಗಳನ್ನು ಏರಿ ಮಂಜರಾಬಾದ್ ಕೋಟೆಯನ್ನು ತಲುಪಬಹುದು. ಸಮುದ್ರ ಮಟ್ಟದಿಂದ ಸುಮಾರು 3240 ಅಡಿ ಎತ್ತರದಲ್ಲಿದ್ದು, ಸುಮಾರು 5 ಎಕರೆ ಪ್ರದೇಶದಲ್ಲಿ ಎಂಟು ಕೋನದ ನಕ್ಷಾತ್ರಾಕಾರದಲ್ಲಿ ನಿರ್ಮಿಸಲ್ಪಟ್ಟಿದೆ . ಇದನ್ನು ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದ್ದು ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಜಾಗ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗು ಶೌಚಾಲಯಗಳಿವೆ. ಈ ಕೋಟೆಯಲ್ಲಿ ಹಲವಾರು ಸುರಂಗ ಮಾರ್ಗಗಳು ಇವೆಯೆಂದು ಹೇಳಲಾಗುತ್ತದೆ. ಅವು ಶ್ರೀರಂಗಪಟ್ಟಣದವರೆಗೂ ತಲುಪಿಸುತ್ತದೆ ಎಂದು ಹೇಳಲಾಗುತ್ತದೆ.

Read more about: india travel fort karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X