Search
  • Follow NativePlanet
Share
» »ಮಣಿ ಮಹೇಶ್‌ ಕೈಲಾಸ ಪರ್ವತದ ಮಣಿಯ ರಹಸ್ಯ ಗೊತ್ತಾ?

ಮಣಿ ಮಹೇಶ್‌ ಕೈಲಾಸ ಪರ್ವತದ ಮಣಿಯ ರಹಸ್ಯ ಗೊತ್ತಾ?

ಶಿವನ ಚಮತ್ಕಾರಗಳಿಗೆ ಸಂಬಂಧಿದ ಅನೇಕ ಸ್ಥಳಗಳಿವೆ ವಿಶ್ವದಲ್ಲಿದೆ. ಅದರಲ್ಲಿ ಮುಖ್ಯವಾದುದು ಪಂಚ ಕೈಲಾಸ. ಇಂದು ನಾವು ಮಣಿ ಮಹೇಶ್‌ ಕೈಲಾಶ ಬಗ್ಗೆ ತಿಳಿಸಲಿದ್ದೇವೆ. ಈ ಪರ್ವತದ ತುದಿಯಲ್ಲಿ ಒಂದು ಮಣಿ ಇದೆಯಂತೆ. ಹಾಗಾಗಿ ಈ ಪರ್ವತಕ್ಕೆ ಮಣಿಮಹೇಶ್ ಪರ್ವತ ಎಂದು ಕರೆಯಲಾಗುತ್ತದೆ.

ಮಣಿ ಮಹೇಶ್‌ ಪರ್ವತ

ಮಣಿ ಮಹೇಶ್‌ ಪರ್ವತ

PC: Hiranmay

ಈ ಪರ್ವತದ ಬಗ್ಗೆ ಅನೇಕರು ಒಂದೊಂದು ಕಥೆ ಹೇಳುತ್ತಾರೆ. ಪಾರ್ವತಿಯ ಜೊತೆ ಮದುವೆಯಾದ ನಂತರ ಶಿವನು ಮಣಿ ಮಹೇಶ್‌ ಪರ್ವತದ ರಚನೆ ಮಾಡಿದನು ಎನ್ನಲಾಗುತ್ತದೆ. ಇದನ್ನು ಗಿರಿಜೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಮಣಿ ಮಹೇಶ್ ಪರ್ವತದಲ್ಲಿ ಶಿವನು ವರ್ಷಾನುಗಟ್ಟಲೇ ತಪಸ್ಸು ಮಾಡಿದ್ದರು. ಶಿವನು ಇಲ್ಲಿ ವಾಸ ಮಾಡಲು ರೂಪಧಾರಣೆ ಮಾಡಿದ್ದನು ಅದಕ್ಕಾಗಿ ಮಣಿಮಹೇಶ್‌ ಪರ್ವತವನ್ನು ಸೃಷ್ಠಿಸಿದನು ಎನ್ನಲಾಗುತ್ತದೆ. ಈ ಪರ್ವತದ ಮೇಲ್ಭಾಗ ಯಾವಾಗಲೂ ಮೋಡದಿಂದ ಮುಚ್ಚಿರುತ್ತದೆ. ಇದರ ತುದಿ ಅಷ್ಟು ಸುಲಭವಾಗಿ ಕಾಣಲು ಸಿಗುವುದಿಲ್ಲ.

ಮಹಾತ್ಮರ ಈ ಪುಣ್ಯ ಭೂಮಿಗೆ ಹೋದರೆ ದೇಶಪ್ರೇಮ ಉಕ್ಕುವುದಂತೂ ಗ್ಯಾರಂಟಿ

ಕೈಲಾಸದ ದರ್ಶನ

ಕೈಲಾಸದ ದರ್ಶನ

PC:Jaryal007

ಮೋಡ ಚದುರಿದಾಗ ಅಪರೂಪಕ್ಕೆ ಮಣಿ ಪರ್ವತದ ತುದಿಯ ದರ್ಶನವಾಗುತ್ತದೆ. ಅಲ್ಲಿ ತ್ರಿಶೂಲ, ನಂದಿ, ಓಂ ಆಕಾರಗಳೆಲ್ಲಾ ಕಾಣಿಸುತ್ತದೆ. ಮೋಡ ಚದುರಿದಾಗ ಕೈಲಾಸದ ದರ್ಶನವಾಗುತ್ತದೆ. ಅರ್ಧ ರಾತ್ರಿಯಲ್ಲಿ ಮೋಡ ಆ ಪರ್ವತದಿಂದ ಸರಿದಾಗ ಅಲ್ಲಿರುವ ಮಣಿಯಿಂದಾಗಿ ಇಡೀ ಪರ್ವತವು ಚಿನ್ನದಂತೆ ಹೊಳೆಯುತ್ತದೆ. ಕೈಲಾಶ ಪರ್ವತ ಕಲ್ಲಿನದಲ್ಲ ಬದಲಾಗಿ ಚಿನ್ನದ ಪರ್ವತದಂತೆ ಕಾಣುತ್ತದೆ.

ಪರ್ವತ ಯಾರೂ ಹತ್ತಿಲ್ಲ

ಪರ್ವತ ಯಾರೂ ಹತ್ತಿಲ್ಲ

PC: Hiranmay

ಈ ಪರ್ವತವನ್ನು ಈವರೆಗೂ ಯಾರೂ ಹತ್ತಲಿಲ್ಲ. ಈ ಪರ್ವತವನ್ನು ಹತ್ತಿದವರು ಯಾರೂ ಹಿಂದುಳಿದಿಲ್ಲ. ಯಾರು ನಿಜವಾದ ಶೃದ್ಧೆಯಿಂದ ಶಿವನನ್ನು ಪ್ರಾರ್ಥಿಸುತ್ತಾರೋ ಅವರಿಗಷ್ಟೇ ಈ ಪರ್ವತ ಹತ್ತಲು ಸಾಧ್ಯವಾಗುತ್ತದೆ ಎನ್ನಲಾಗುತ್ತದೆ. ಈ ಮೊದಲು ಈ ಪರ್ವತ ಹತ್ತಲು ಪ್ರಯತ್ನಿಸಿದವರು ಕಲ್ಲಾಗಿದ್ದಾರೆ ಎನ್ನಲಾಗುತ್ತದೆ.

ಹಿಮಾಲಯದ ಈ ಆಶ್ರಮದೊಳಗೆ ಇರುವವರಿಗೆ ಯಾರಿಗೂ ಸಾವಿಲ್ಲವಂತೆ!

ನೀರಿನ ಕುಂಡ

ನೀರಿನ ಕುಂಡ

PC: Ashish3724

ಹರರ್ಸರ್‌ನಿಂದ ಮಣಿಮಹೇಶ್ವರನಲ್ಲಿ ಗೆ 13ಕಿ.ಲೋ ದೂರವಿದೆ. ಶಿವಘಾಟ್ ಸಿಗುತ್ತದೆ. ಈ ಪರ್ವತದಲ್ಲಿ ಕಿವಿ ಕೊಡುವುದರಿಂದ ಡೋಲಿನ ಶಬ್ಧ ಕೇಳಿಸುತ್ತದೆ. ಸ್ವಲ್ಪ ಮುಂದೆ ಸಾಗಿದರೆ ಒಂದು ಕುಂಡ ಸಿಗುತ್ತದೆ. ಇಲ್ಲಿ ಮಹಿಳೆಯರು ಸ್ನಾನ ಮಾಡುವ ಪರಂಪರೆ ಇದೆ. ಆದರೆ ಪುರಷರು ಈ ಕುಂಡವನ್ನು ಇಣುಕಿಯೂ ನೋಡಬಾರದು. ಇಲ್ಲಿಗೆ ಬರುವ ಪ್ರವಾಸಿಗರ ಪ್ರಮುಖ ಆಕರ್ಷಣೆಯೆಂದರೆ ಮಣಿ ಮಹೇಶ್ವರ್ ಪರ್ವತ ಹಾಗೂ ಮಣಿ ಮಹೇಶ್ವರ್ ನದಿ.

ಮಣಿ ಮಹೇಶ್ ಕೆರೆ

ಮಣಿ ಮಹೇಶ್ ಕೆರೆ

PC:Truewebsolution

13 ಸಾವಿರ ಮಣಿ ಮಹೇಶ್ ಕೆರೆ ಇದೆ. ಇಲ್ಲಿ ಹೆಚ್ಚಿನವರು ಸ್ನಾನ ಮಾಡುತ್ತಾರೆ. ರಾಧಾಷ್ಟಮಿ ದಿನ ಹಿಂದೂಗಳು ಈ ಕೆರೆಯನ್ನು ದಾಟುತ್ತಾರೆ. ಮಣಿ ಮಹೇಶ್ವರ್ ಮಂದಿರದ ಪೂಜಾರಿ ಈ ಕೆರೆಯಲ್ಲಿ ಹಾರಿ ಹೊರಬರುತ್ತಾರೆ. ಈ ಪೂಜಾರಿಯನ್ನು ಮುಟ್ಟಲು ಅನೇಕರು ತಾಮುಂದು ತಾಮುಂದು ಎಂದು ಮುನ್ನುಗ್ಗುತ್ತಾರೆ. ಯಾಕೆಂದರೆ ಆಗ ಆ ಪೂಜಾರಿಯ ಮುಖಾಂತರ ದೇವರು ಮಾತನಾಡುತ್ತಾರೆ ಎನ್ನುತ್ತಾರೆ.

ಮಣಿ ರಹಸ್ಯ

ಮಣಿ ರಹಸ್ಯ

ಆ ಪರ್ವತದ ತುದಿಯಲ್ಲಿ ಹೊಳೆಯುವುದನ್ನು ಮಣಿ ಎನ್ನಲಾಗುತ್ತದೆ. ಆದರೆ ಆ ರಹಸ್ಯ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಸಮುದ್ರಮಟ್ಟದಿಂದ ಸುಮಾರು 18 ಸಾವಿರ ಫೀಟ್ ಎತ್ತರದಲ್ಲಿರುವ ಈ ಪರ್ವತವನ್ನು ಅಭಿಜೀತ್ ಎನ್ನುವ 20 ವರ್ಷದ ಯುವಕನೊಬ್ಬ ಈ ಪರ್ವತವನ್ನು ಏರುವಲ್ಲಿ ಯಶಸ್ವಿಯಾಗಿದ್ದ. ಅಲ್ಲಿನ ಕೆಲವು ಫೋಟೋಗಳನ್ನೂ ಕ್ಲಿಕ್ಕಿಸಿದ್ದ ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X