Search
  • Follow NativePlanet
Share
» »ಮೋಕ್ಷ ಪ್ರಾಪ್ತಿಗಾಗಿ ಇಲ್ಲಿ ಹೆಣಗಳೂ ಸರದಿಯಲ್ಲಿ ನಿಲ್ಲುತ್ತವೆ!

ಮೋಕ್ಷ ಪ್ರಾಪ್ತಿಗಾಗಿ ಇಲ್ಲಿ ಹೆಣಗಳೂ ಸರದಿಯಲ್ಲಿ ನಿಲ್ಲುತ್ತವೆ!

ಸಾಮಾನ್ಯವಾಗಿ ಮನುಷ್ಯರು ತೀರಿಕೊಂಡರೆ ಅವರ ಧರ್ಮದ ಪ್ರಕಾರ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಮನುಷ್ಯರು ತೀರಿಕೊಂಡರೆ ಚಿತೆಗೆ ಬೆಂಕಿ ಹಾಕುವ ಮೂಲಕ ಅಂತ್ಯ ಸಂಸ್ಕಾರ ನಡೆಸಲಾಗುವುದು.

ಮೋಕ್ಷ ಪ್ರಾಪ್ತಿ

ಮೋಕ್ಷ ಪ್ರಾಪ್ತಿ

PC: Edwin Lord Weeks

ಇಂದು ನಾವು ಒಂದು ಪ್ರಮುಖ ಅಂತ್ಯಸಂಸ್ಕಾರ ನಡೆಸುವ ಘಾಟ್‌ ಬಗ್ಗೆ ತಿಳಿಸಲಿದ್ದೇವೆ. ಈ ಘಾಟ್‌ನಲ್ಲಿ ಅಂತ್ಯಸಂಸ್ಕಾರ ನಡೆಸಿದ್ರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ. ಹಾಗಾಗಿ ಪ್ರತಿಯೊಬ್ಬರು ಇಲ್ಲೇ ಅಂತ್ಯ ಸಂಸ್ಕಾರ ನಡೆಸಬೇಕೆಂದು ತಮ್ಮ ಕುಟುಂಬದ ಮೃತ ವ್ಯಕ್ತಿಯ ಶರೀರವನ್ನು ಕರೆತರುತ್ತಾರೆ.

ಬಿಜಾಪುರದಲ್ಲಿರುವ ಇಷ್ಟೊಂದು ದೊಡ್ಡ ನೀರಿನ ಟ್ಯಾಂಕ್ ಈಗ ಏನಾಗಿದೆ ನೋಡಿಬಿಜಾಪುರದಲ್ಲಿರುವ ಇಷ್ಟೊಂದು ದೊಡ್ಡ ನೀರಿನ ಟ್ಯಾಂಕ್ ಈಗ ಏನಾಗಿದೆ ನೋಡಿ

ಮಣಿಕರ್ಣಿಕಾ ಘಾಟ್

ಮಣಿಕರ್ಣಿಕಾ ಘಾಟ್

PC: Dennis Jarvis

ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ಕೆಲ ಸ್ಥಳಗಳು ಅತಿ ಪವಿತ್ರ ಸ್ಥಳಗಳಾಗಿದ್ದು ಅಂತಹ ಸ್ಥಳಗಳಲ್ಲಿ ಮನುಷ್ಯನ ಅಂತ್ಯಕ್ರಿಯೆ ನಡೆಸಿದಾಗ ಆ ಮನುಷ್ಯನು ನೇರವಾಗಿ ಮೋಕ್ಷ ಹೊಂದುತ್ತಾನೆ ಎಂಬ ಪ್ರಬಲವಾದ ವಿಶ್ವಾಸ ಹೊಂದಿದ್ದಾರೆ. ಅಂತಹ ಒಂದು ಸ್ಥಳವಾಗಿದೆ ಮಣಿಕರ್ಣಿಕಾ ಘಾಟ್.

 ಮೃತದೇಹಗಳೂ ಲೈನ್‌ನಲ್ಲಿ ನಿಲ್ಲುತ್ತವೆ

ಮೃತದೇಹಗಳೂ ಲೈನ್‌ನಲ್ಲಿ ನಿಲ್ಲುತ್ತವೆ

PC:WP:NFCC#4

ವಾರಣಾಸಿಯಲ್ಲಿ ಅಂತ್ಯಕ್ರಿಯೆ ನಡೆಸುವ ಘಾಟ್‌ನಲ್ಲಿ ಪ್ರಮುಖವಾದುದು ಮಣಿಕರ್ಣೀಕಾ ಘಾಟ್. ಇಲ್ಲಿನ ಘಾಟ್‌ಗೆ ಎಷ್ಟು ಬೇಡಿಕೆ ಇದೆ ಎಂದರೆ . ಸಾಮಾನ್ಯವಾಗಿ ನಾವು ರೇಷನ್‌ ಅಂಗಡಿಗಳಲ್ಲಿ , ಬ್ಯಾಂಕ್‌ಗಳಲ್ಲಿ ಸಾಲು ನಿಂತಿರುವುದನ್ನು ಕಾಣುತ್ತೇವೆ. ಇಲ್ಲಿ ನ ವಿಶೇಷತೆ ಎಂದರೆ ಮನುಷ್ಯರು ಸತ್ತ ಮೇಲೂ ಸರದಿಯಲ್ಲಿ ನಿಲ್ಲಬೇಕು. ಮೃತದೇಹಗಳು ತಮ್ಮ ಸರದಿ ಬರುವ ವರೆಗೂ ಕಾಯಬೇಕು.

ಎಡಕಲ್ಲು ಗುಡ್ಡ ಸಿನಿಮಾದ ಶೂಟಿಂಗ್ ನಡೆದ ಎಡಕಲ್ಲು ಗುಹೆಗೆ ಹೋಗಿದ್ದೀರಾ?ಎಡಕಲ್ಲು ಗುಡ್ಡ ಸಿನಿಮಾದ ಶೂಟಿಂಗ್ ನಡೆದ ಎಡಕಲ್ಲು ಗುಹೆಗೆ ಹೋಗಿದ್ದೀರಾ?

ಶಿವನ ಕೃಪೆ

ಶಿವನ ಕೃಪೆ

PC: Sujay25

ಈ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆದರೆ ಆ ತೀರಿ ಹೋದ ಮನುಷ್ಯನ ಆತ್ಮ ನೇರವಾಗಿ ಶಿವನ ಕೃಪೆ ಪಡೆದು ಮೋಕ್ಷ ಪಡೆಯುತ್ತಾನೆ ಎಂಬ ನಂಬಿಕೆಯಿದೆ. ಭಯ ಮಿಶ್ರಿತ ಭಾವನೆಯನ್ನು ಮನದಲ್ಲಿ ಮೂಡಿಸುತ್ತದೆ. ಆದರೂ ಸಹ ಒಂದು ರೀತಿಯ ಕುತೂಹಲ ಕೆರಳಿಸುವ ತಾಣವಾಗಿ ಮಣಿಕರ್ಣಿಕಾ ಘಾಟ್ ಪ್ರವಾಸಿಗರ ಗಮನಸೆಳೆಯುತ್ತದೆ.

ಕಿವಿಯ ಓಲೆಗಳು ಬಿದ್ದಿದ್ದು ಇಲ್ಲೇ

ಕಿವಿಯ ಓಲೆಗಳು ಬಿದ್ದಿದ್ದು ಇಲ್ಲೇ

PC: wikipedia

ಸತಿ ದೇವಿಯ ಮೃತ ಶರೀರವು ಸುದರ್ಶನ ಚಕ್ರದಿಂದ ತುಂಡುಗಳಾಗಿ ಭೂಮಿಯ ವಿವಿಧೆಡೆ ಬೀಳುವಾಗ ಅವಳ ಕಿವಿಯ ಓಲೆಗಳು ಈ ಸ್ಥಳದಲ್ಲಿ ಬಿದ್ದಿತ್ತೆನ್ನಲಾಗಿದೆ . ಹಾಗಾಗಿ ಇದೊಂದು ಧಾರ್ಮಿಕ ತಾಣವೂ ಆಗಿದೆ.

ತಲುಪುವುದುಹೇಗೆ?

ತಲುಪುವುದುಹೇಗೆ?

PC: Edward Lear

ಮಣಿಕರ್ಣಿಕಾ ಘಾಟ್ ಇಂದಿಗೂ ವಾರಣಾಸಿಯಲ್ಲಿರುವ ಒಂದು ವಿಚಿತ್ರ ಅನುಭೂತಿ ನೀಡುವ ತಾಣವಾಗಿದೆ. ಉತ್ತರ ಪ್ರದೇಶದಲ್ಲಿರುವ ವಾರಣಾಸಿಗೆ ದೇಶದ ವಿವಿಧ ಪ್ರಮುಖ ನಗರಗಳಿಂದ ಬಸ್‌ ವ್ಯವಸ್ಥೆ ಇದೆ. ಉತ್ತಮ ರೈಲು ಹಾಗೂ ರಸ್ತೆ ಸಂಪರ್ಕ ಹೊಂದಿದೆ. ಜೊತೆಗ ವಿಮಾನದಲ್ಲಿ ಬರುವುದಾದರೆ ವಾರಣಾಸಿ ವಿಮಾನನಿಲ್ದಾಣದಿಂದ ಲೋಕಲ್ ಬಸ್ ಹಿಡಿಯಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X