Search
  • Follow NativePlanet
Share
» » ಬೆಂಕಿ ಇಲ್ಲದೆಯೇ ರೊಟ್ಟಿ ಬೇಯುತ್ತದೆ ಇಲ್ಲಿ, ಮಣಿಕರಣದ ಮಹಿಮೆ ಅಪಾರ

ಬೆಂಕಿ ಇಲ್ಲದೆಯೇ ರೊಟ್ಟಿ ಬೇಯುತ್ತದೆ ಇಲ್ಲಿ, ಮಣಿಕರಣದ ಮಹಿಮೆ ಅಪಾರ

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಾರ್ವತಿ ನದಿ ಸಮೀಪದಲ್ಲಿ ರುವ ಮಣಿಕರಣವು ಪವಿತ್ರ ತೀರ್ಥ ಸ್ಥಳವಾಗಿದೆ. ಇದು ಹಿಂದೂಗಳು ಹಾಗೂ ಸಿಖರ ಪವಿತ್ರ ಸ್ಥಳವಾಗಿದೆ . ಇಲ್ಲಿನ ಬಿಸಿ ನೀರಿನಲ್ಲಿ ಎಂತಹಾ ಔಷಧೀಯ ಗುಣವಿದೆಯೆಂದರೆ ರೋಗಗಳೆಲ್ಲಾ ನಿವಾರಣೆಯಾಗುತ್ತದಂತೆ. ಹಾಗಾಗಿ ಸಾವಿರಾರು ಜನರು ಇಲ್ಲಿಗೆ ಆಗಮಿಸುತ್ತಾರೆ.

ಬಿಸಿ ನೀರಿನಲ್ಲಿದೆ ಔಷಧೀಯ ಗುಣ

ಬಿಸಿ ನೀರಿನಲ್ಲಿದೆ ಔಷಧೀಯ ಗುಣ

PC:Aman Gupta

ಇಲ್ಲಿ ಅನೇಕ ಮಂದಿರಗಳಿವೆ, ಗುರುದ್ವಾರವಿದೆ. ಕುಲ್ಲುವಿನಿಂದ 35ಕಿ.ಮೀ ದೂರದಲ್ಲಿದೆ. ಮಣಿಕರಣದಲ್ಲಿ ಮಂಜು ಬೀಳುತ್ತದೆ. ಆದರೆ ಇಲ್ಲಿನ ಬಿಸಿ ನೀರಿನಿಂದಾಗಿ ನೀವು ಚಳಿಗಾಲದಲ್ಲೂ ಸ್ನಾನ ಮಾಡಬಹುದು. ದೇಶ ವಿದೇಶಗಳಿಂದ ಅನೇಕ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಹೆಚ್ಚಾಗಿ ಚರ್ಮ ರೋಗ ಇರುವವರು ಇಲ್ಲಿ ಸ್ನಾನ ಮಾಡ ಬರುತ್ತಾರೆ. ಇದೇ ನೀರಿನಿಂದ ಅನ್ನ , ಚಹಾ ಮಾಡಲಾಗುತ್ತದೆ. ಇಲ್ಲಿನ ನೀರಿನಲ್ಲಿ ಚಹಾ ಮಾಡಿದರೆ ಸ್ವಲ್ಪ ಸಕ್ಕರೆ ಹಾಕಿದ್ರೂ ದುಪ್ಪಟ್ಟು ಸಿಹಿಯಾಗುತ್ತದಂತೆ.

ಐಆರ್‌ಸಿಟಿಸಿ ನೀಡುತ್ತಿದೆ 12 ದಿನದ ಜಮ್ಮುಕಾಶ್ಮೀರ ಪ್ಯಾಕೇಜ್ ಐಆರ್‌ಸಿಟಿಸಿ ನೀಡುತ್ತಿದೆ 12 ದಿನದ ಜಮ್ಮುಕಾಶ್ಮೀರ ಪ್ಯಾಕೇಜ್

ನೀರಿನಲ್ಲಿ ಬೆಂದ ರೋಟಿ

ನೀರಿನಲ್ಲಿ ಬೆಂದ ರೋಟಿ

PC:Nataraja

ಪಂಜಾಬ್‌ನಿಂದ ಬಹುಸಂಖ್ಯಾತ ಜನರು ಇಲ್ಲಿ ಬರುತ್ತಾರೆ. ಬಹಳಷ್ಟು ಜನರು ಇಲ್ಲಿನ ನೀರನ್ನು ಕುಡಿಯುತ್ತಾರೆ. ಗುರುನಾನಕ್‌ ತನ್ನ ಶಿಷ್ಯರೊಂದಿಗೆ ಇಲ್ಲಿ ಬಂದಾಗ ಶಿಷ್ಯರಿಗೆ ಹಸಿವಾಗುತ್ತದೆ. ಊರಿನ ಜನಗಳಿಂದ ರೋಟಿಗೆ ಹಿಟ್ಟನ್ನು ದಾನವಾಗಿ ಪಡೆಯುತ್ತಾರೆ. ಆದರೆ ರೋಟಿ ಬೇಯಿಸಲು ಬೆಂಕಿ ಇರೋದಿಲ್ಲ. ಕೊನೆಗೆ ಗುರುನಾನಕರ ಆಜ್ಞೆಯಂತೆ ಆ ರೋಟಿಯನ್ನು ನೀರಿನಲ್ಲಿ ಹಾಕಲಾಯಿತು. ಆಶ್ಚರ್ಯವೆಂವಂತೆ ಆ ರೋಟಿಗಳೆಲ್ಲವೂ ಬೆಂದು ನೀರಿನಿಂದ ಮೇಲಕ್ಕೆ ತೇಲಲಾರಂಭಿಸಿದವು ಎನ್ನುತ್ತದೆ ಪುರಾಣ.

ಮೋಕ್ಷ ಪ್ರಾಪ್ತಿ

ಮೋಕ್ಷ ಪ್ರಾಪ್ತಿ

PC: John Hill

ಯಾವುದೇ ವ್ಯಕ್ತಿ ಶಿವನ ಹೆಸರಲ್ಲಿ ಧಾನ ಮಾಡುತ್ತಾರೋ ಅವರ ಮುಳುಗಿ ಹೋಗಿರುವ ವಸ್ತುಗಳೆಲ್ಲಾ ಮತ್ತೆ ಕೈ ಸೇರುತ್ತದೆ ಎನ್ನಲಾಗುತ್ತದೆ. ಇಲ್ಲಿನ ಬಿಸಿ ನೀರಿನ ಬುಗ್ಗೆಯಲ್ಲಿ ಮುಳುಗಿ ಏಳೋದರಿಂದ ಮೋಕ್ಷ ಪ್ರಾಪ್ತಿಯಾಗುತ್ತಂತೆ. ಮಣಿಕರಣದಲ್ಲಿ ರಾಮ, ಕೃಷ್ಣ, ವಿಷ್ಣುವಿನ ಶಿವನ ಮಂದಿರವಿದೆ. ಕುಲ್ಲುವಿನ ರಾಜ ಅರೋಧ್ಯೆಯಿಂದ ರಾಮನ ಮೂರ್ತಿ ತಂದು ಇಲ್ಲಿ ಸ್ಥಾಪಿಸಿದ್ದರಂತೆ.

ಮಣಿಕರಣ ಎಂಬ ಹೆಸರು ಬಂದಿದ್ದು ಹೇಗೆ?

ಮಣಿಕರಣ ಎಂಬ ಹೆಸರು ಬಂದಿದ್ದು ಹೇಗೆ?

PC:Tegbains

ಮಣಿಕರಣ ಶಿವ ಹಾಗೂ ಪಾರ್ವತಿ ತಪಸ್ಸು ಮಾಡಿದ ಸ್ಥಳ ಇದಾಗಿದೆ. ಪಾರ್ವತಿ ಜಲಕ್ರೀಡೆಯಾಡುವಾಗ ಪಾರ್ವತಿಯ ಕಿವಿಯೋಲೆಯ ಮಣಿ ನೀರಿನಲ್ಲಿ ಬೀಳುತ್ತದೆ. ಶಿವ ತನ್ನ ಗಣಗಳನ್ನು ಮಣಿ ಹುಡುಕಲು ಕಳಿಸಿದರೂ ಮಣಿಸಿಗೋದಿಲ್ಲ. ಶಿವನ ಮೂರನೇ ಕಣ್ಣಿನಿಂದ ನೈನಾ ದೇವಿ ಪ್ರತ್ಯಕ್ಷವಾಗಿ ಆ ಮಣಿ ಪಾತಾಳ ಲೋಕದಲ್ಲಿ ಶೇಷನಾಗನದಲ್ಲಿರುವುದಾಗಿ ತಿಳಿಸುತ್ತಾಳೆ.

ಈ ದೇವಾಲಯದಲ್ಲಿ ಎಣ್ಣೆಯಿಂದಲ್ಲ, ಬರೀ ನೀರಿನಿಂದ ದೀಪ ಬೆಳಗಿಸ್ತಾರಂತೆ ! ಈ ದೇವಾಲಯದಲ್ಲಿ ಎಣ್ಣೆಯಿಂದಲ್ಲ, ಬರೀ ನೀರಿನಿಂದ ದೀಪ ಬೆಳಗಿಸ್ತಾರಂತೆ !

ಶೇಷನಾಗನ ಬಳಿಯಿದ್ದ ಮಣಿ

ಶೇಷನಾಗನ ಬಳಿಯಿದ್ದ ಮಣಿ

PC:Jayantanth

ಎಲ್ಲಾ ದೇವತೆಗಳು ನಾಗದೇವನಲ್ಲಿಗೆ ಹೋಗಿ ಪ್ರಾರ್ಥಿಸುತ್ತಾರೆ. ಕೊನೆಗೆ ಶೇಷನಾಗ ಮಣಿಯನ್ನು ಹಿಂದಿರುಗುಗಿಸುತ್ತಾನೆ. ಮಣಿಯನ್ನು ಪಡೆದು ಶಿವ ಹಾಗೂ ಪಾರ್ವತಿ ಪ್ರಸನ್ನರಾಗುತ್ತಾರೆ. ಹಾಗಾಗಿ ಇಲ್ಲಿಗೆ ಮಣಿಕರಣ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X