India
Search
  • Follow NativePlanet
Share
» »ಮಂಗಳೂರು - ಕರ್ನಾಟಕದ ಗೇಟ್ ವೇ

ಮಂಗಳೂರು - ಕರ್ನಾಟಕದ ಗೇಟ್ ವೇ

ಸುಂದರವಾದ ಹಾಗು ಎತ್ತರವಾದ ಪಶ್ಚಿಮಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನೀಲಿ ನೀರಿನ ಮಧ್ಯೆ ಇರುವ ಸುಂದರವಾದ ಪಟ್ಟವೆಂದರೆ ಅದು ಮಂಗಳೂರು ಇದನ್ನು ಕರ್ನಾಟಕದ ಗೇಟ್ ವೇ ಎಂದು ಕರೆಯಲಾಗುತ್ತದೆ. ಮಂಗಳಾದೇವಿ ಈ ಪ್ರದೇಶದಲ್ಲಿರುವುದರಿಂದಾಗಿ ಇಲ್ಲಿಗೆ ಮಂಗಳೂರು ಎಂಬ ಹೆಸರು ಬಂದಿದ್ದು, ಇದು ಸದ್ದುಗದ್ದಲಗಳಿಂದ ಕೂಡಿದ ಬಂದರು ನಗರವಾಗಿದೆ.

ಈ ಬಂದರು ನಗರಕ್ಕೆ 14ನೇ ಶತಮಾನಕ್ಕಿಂತಲೂ ಹಳೆಯ ಇತಿಹಾಸವಿದೆ ಅಲ್ಲದೆ ಇಲ್ಲಿಯ ಸ್ಥಳೀಯ ಆಡಳಿತಗಾರರು ಪರ್ಷಿಯನ್ ಕೊಲ್ಲಿಯಲ್ಲಿನ ಸಾಮ್ರಾಜ್ಯಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಸ್ಥಾಪಿಸುತ್ತಿದ್ದರೆನ್ನಲಾಗುತ್ತಿದ್ದರು, ತನ್ನ ಆಯಕಟ್ಟಿನ ಸ್ಥಳವನ್ನು ಗಮನದಲ್ಲಿಟ್ಟುಕೊಂಡು, ಮಂಗಳೂರು ಹಲವಾರು ಆಡಳಿತಗಾರರ ಆಳ್ವಿಕೆಗೆ ಒಳಗಾಗಿತ್ತು. ಪೋರ್ಚುಗೀಸರು, ಬ್ರಿಟಿಷರು ಮತ್ತು ಮೈಸೂರು ಅರಸರಾದ ಹೈದರಾಲಿ ಮತ್ತು ಟಿಪ್ಪುಸುಲ್ತಾನರು ನಗರವನ್ನು ವಶಪಡಿಸಿಕೊಳ್ಳಲು ಕಠೋರವಾದ ಯುದ್ಧಗಳನ್ನು ಮಾಡಿದರು.

ಹೀಗೆ ಹಲವಾರು ಆಡಳಿತಗಾರರಿಂದ ಆಳ್ವಿಕೆಗೊಳಗಾದ ಈ ಸುಂದರವಾದ ಮಂಗಳೂರು ನಗರದಲ್ಲಿ ಈ ಆಡಳಿತಗಾರರು ಬಿಟ್ಟು ಹೋದ ಕೆಲವು ಕುರುಹುಗಳನ್ನು ಇನ್ನೂ ಕಾಣಬಹುದಾಗಿದೆ. ಮಂಗಳೂರು ಇಂದು ವಿವಿಧ ಸಂಸ್ಕೃತಿಗಳ ಸಮ್ಮಿಲನವಾಗಿರುವ ಈ ನಗರವು ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ ಅಷ್ಟೇ ಅಲ್ಲದೆ ಭಾರತದ ಕಾಫಿ ಮತ್ತು ಗೋಡಂಬಿ ರಫ್ತಿನ ಪ್ರಮುಖ ಭಾಗವಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಕೃತಿ ಪ್ರೇಮಿಗಳಿಗೆ ಸ್ವರ್ಗ ಸದೃಶವೆನಿಸುವ ಮಂಗಳೂರಿನ ನೈಸರ್ಗಿಕ ಸೌಂದರ್ಯತೆಯು ಬಣ್ಣಿಸಲಸಾಧ್ಯವಾದುದಾಗಿದೆ. 132.45 ಚದರ ಕಿ.ಮೀ ವಿಸ್ತೀರ್ಣದ ಈ ನಗರವು ನೇತ್ರಾವತಿ ಮತ್ತು ಗುರುಪುರ ಎಂಬ ಎರಡು ನದಿಗಳ ಹಿನ್ನೀರಿನ ಪ್ರದೇಶಗಳಲ್ಲಿ ಹರಡಿಕೊಂಡಿದೆ. ಅರಬ್ಬೀ ಸಮುದ್ರದ ಕರಾವಳಿಯು ತೂಗಾಡುವ ಮರಗಳಿಂದ ಹಾಗೂ ಹೊಂಬಣ್ಣದ ಮರಳಿನಿಂದ ಕೂಡಿದ ಕಡಲತೀರಗಳಿಂದ ಕೂಡಿದೆ. ಈ ಬೆರಗುಗೊಳಿಸುವ ಪಟ್ಟಣವು ಇದು ನಗರದಲ್ಲಿ 6 ಲಕ್ಷ ನಿವಾಸಿಗಳನ್ನು ಹೊಂದಿದೆ ಅಷ್ಟೇ ಅಲ್ಲದೆ ಈ ಪಟ್ಟಣವು ಹಸಿರು ಬೆಟ್ಟಗಳ ಹೊದಿಕೆ ಮತ್ತು ಕೆಂಪು ಹೆಂಚಿನ ಛಾವಣಿಗಳನ್ನು ಹೊಂದಿರುವ ಸಾಂಪ್ರದಾಯಿಕ ಮನೆಗಳಿಂದ ಕೂಡಿದ್ದು ಅದ್ಬುತವಾಗಿ ಕಾಣುತ್ತದೆ.

mangalorecover

ಇಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯಗಳು

ಮಂಗಳೂರು ವಿವಿಧ ಧರ್ಮ ಜಾತಿ ಪಂಗಡಗಳ ಜನರನ್ನು ತನ್ನಲ್ಲಿ ಹೊಂದಿದ್ದು ಭಾಷೆಗಳಲ್ಲೂ ವೈವಿಧ್ಯತೆಯನ್ನು ಹೊಂದಿದೆ. ಇಲ್ಲಿ ತುಳು, ಕೊಂಕಣಿ ಬ್ಯಾರಿ, ಮತ್ತು ಕನ್ನಡ ಈ ನಾಲ್ಕು ಭಾಷೆಗಳು ಪ್ರಮುಖವಾದುದಾಗಿದೆ. ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುವ ಈ ಸ್ಥಳವು ಯಕ್ಷಗಾನ, ಕೃಷ್ಣ ಜನ್ಮಾಷ್ಟಮಿ, ಮತ್ತು ಕರಡೈವೇಷ ನೃತ್ಯಗಳಂತಹ ಕೆಲವು ನಿಜವಾದ ವಿಶಿಷ್ಟ ಸಾಂಪ್ರದಾಯಿಕ ಶೈಲಿಗಳನ್ನು ಒದಗಿಸಿಕೊಡುತ್ತಾ ಅದ್ಬುತವಾದ ಅನುಭವವನ್ನು ನೀಡುತ್ತದೆ. ಮಂಗಳೂರಿನ ದಸರಾ ಉತ್ಸವದ ಆಚರಣೆಗಳ ವೈಭವವು ಹೆಸರುವಾಸಿಯಾಗಿದ್ದು, ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸುತ್ತದೆ.

gokarnatheshwaratemple

ಮಂಗಳೂರಿನಲ್ಲಿರುವ ಪ್ರವಾಸಿ ತಾಣಗಳು ಮತ್ತು ಅಲ್ಲಿರುವಾಗ ನೋಡಬಹುದಾದ ಮತ್ತು ಮಾಡಬಹುದಾದ ಚಟುವಟಿಕೆಗಳು

ನೈಸರ್ಗಿಕ ಸೌಂದರ್ಯ ಮತ್ತು ಪಾರಂಪರಿಕ ತಾಣಗಳಂತಹ ಹಲವಾರು ವಿಷಯಗಳನ್ನು ಮಂಗಳೂರು ಒದಗಿಸಿಕೊಡುತ್ತದೆ. ಇಲ್ಲಿರುವ ಮಂಗಳಾದೇವಿ ದೇವಾಲಯವು ರಾಜ್ಯದಾದ್ಯಂತದ ಯಾತ್ರಿಗಳಿಂದ ಭೇಟಿ ನೀಡಲ್ಪಡುತ್ತದೆ. ಅಷ್ಟೇ ಅಲ್ಲದೆ ಇಲ್ಲಿಯ ಇನ್ನಿತರ ಹಲವಾರು ಹಳೇಯ ದೇವಾಲಯಗಳು ಮತ್ತುಹಲವಾರು ಸುಂದರ ಕಟ್ಟಡಗಳು ಮಂಗಳೂರಿಗೆ ಮತ್ತಷ್ಟು ಮೆರುಗನ್ನು ಕೊಡುವುದರ ಜೊತೆಗೆ ಇಲ್ಲಿರುವ ಕದ್ರಿ ಮಂಜುನಾಥ ದೇವಾಲಯ, ಸೈಂಟ್ ಅಲೋಶಿಯಸ್ ಚಾಪೆಲ್ ರೊಸಾರಿಯೊ ಕ್ಯಾಥೆಡ್ರಲ್ ಮತ್ತು ಜಾಮಾ ಮಸೀದಿ ಇತ್ಯಾದಿಗಳು ಇಲ್ಲಿ ಭೇಟಿಕೊಡಲು ಅತ್ಯುತ್ತಮವಾದ ಸ್ಥಳಗಳಾಗಿವೆ.

ಹೊಂಬಣ್ಣ ಮರಳು ಮತ್ತು ಸೂರ್ಯನ ಕಿರಣಗಳ ಜೊತೆಗೆ ಇರಲು ಇಷ್ಟಪಡುವವರಿಗಾಗಿ ಇಲ್ಲಿ ಮನಮೋಹಕ ಕಡಲತೀರಗಳಿವೆ ಅವುಗಳಲ್ಲಿ ಸೋಮೇಶ್ವರ ಮತ್ತು ತಣ್ಣೀರ್ ಬಾವಿ ಕಡಲತೀರಗಳು ಪ್ರಮುಖವಾದವುಗಳಾಗಿವೆ. ಮಂಗಳೂರಿನ ಸ್ಥಳಗಳು ಯುಗಯುಗಗಳಿಂದಲೂ ಹಲವಾರು ಸಂದರ್ಶಕರನ್ನು ಆಕರ್ಷಿಸಿತ್ತಲೇ ಬಂದಿದೆ ಇದು ಇಂದಿಗೂ ಮುಂದುವರೆದಿದ್ದು ಈ ಸುಂದರ ನಗರವು ಜನಪ್ರಿಯ ತಾಣವಾಗಿಯೇ ಉಳಿದಿದೆ.

ಮಂಗಳೂರಿಗೆ ತಲುಪುವುದು ಹೇಗೆ?

ಮಂಗಳೂರು ವಾಯುಮಾರ್ಗಗಳು, ರೈಲು ಮತ್ತು ರಸ್ತೆ ಸಾರಿಗೆಗಳ ಮೂಲಕ ಉತ್ತಮವಾದ ಸಂಪರ್ಕವನ್ನು ಹೊಂದಿದೆ.

ಚಳಿಗಾಲವು ಮಂಗಳೂರಿಗೆ ಪ್ರವಾಸವನ್ನು ಯೋಜಿಸಲು ಸೂಕ್ತವಾದ ಸಮಯವಾಗಿದೆ. ಡಿಸೆಂಬರ್ ನಿಂದ ಮಾರ್ಚ್ ವರೆಗೆ ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ತಿಂಗಳುಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X