Search
  • Follow NativePlanet
Share
» »ಪ್ರಸಿದ್ಧಿಗಳಿಸುತ್ತಿರುವ ಆಕರ್ಷಕ ಮಂಗಳೂರು ದಸರಾ!

ಪ್ರಸಿದ್ಧಿಗಳಿಸುತ್ತಿರುವ ಆಕರ್ಷಕ ಮಂಗಳೂರು ದಸರಾ!

By Vijay

ವರ್ಷಪೂರ್ತಿ ಯಾವುದಾದರೊಂದು ಹಬ್ಬ, ಹರಿದಿನಗಳಿಂದ ಎಲ್ಲೆಡೆ ಉತ್ಸಾಹ ಇರುವಂತೆ ಕಾಣಬಹುದಾದ ಸ್ಥಳಗಳು ಭಾರತದಲ್ಲಿ ಅಪಾರ. ಯಾವ ರಾಜ್ಯವೆ ಆಗಲಿ, ಜಿಲ್ಲೆಯೆ ಆಗಲಿ ಪ್ರತಿಯೊಂದು ಸ್ಥಳವು ತಮ್ಮದೆ ಆದ ನಾಡ ಉತ್ಸವದಂತಹ ಯಾವುದಾದರೂ ಹಬ್ಬಗಲಿಗೆ ಹೆಸರುವಾಸಿಯಾಗಿಯೆ ಇರುತ್ತವೆ.

ಅದರಂತೆ ಕರ್ನಾಟಕವೂ ಸಹ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಅದರಲ್ಲೂ ವಿಶೇಷವಾಗಿ ಮೈಸೂರು ನಗರ. ಹೌದು, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂತಲೆ ಕರೆಯಲ್ಪಡುವ ಮೈಸೂರು ದಸರಾ ಉತ್ಸವಕ್ಕೆ ಮೊದಲಿನಿಂದಲೂ ವಿಶ್ವವಿಖ್ಯಾತಿಗಳಿಸಿದ ಸುಂದರ ನಗರವಾಗಿದೆ. ಮೈಸೂರು ದಸರಾ ಸಾಮಾನ್ಯವಾಗಿ ದೇಶದಲ್ಲೆ ಹೆಚ್ಚು ಪ್ರಸಿದ್ಧಿ ಪಡೆದ ಉತ್ಸವವಾಗಿದೆ.

ಈ ರೀತಿ ತಯಾರಿ ಮಾಡಿದರೆ ಮಾತ್ರ ಅದ್ಭುತ ದಸರಾ ಉತ್ಸವ!

ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಕರ್ನಾಟಕದ ಕರಾವಳಿಯ ಸುಂದರ ನಗರವೊಂದು ಇದೆ ದಸರಾ ಹಬ್ಬಕ್ಕೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಈ ನಗರದ ದಸರಾ ಹಬ್ಬ ಉತ್ಸವವು ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಪ್ರಮಾಣದಲ್ಲಿ ಜನರನ್ನು ಆಕರ್ಷಿಸುತ್ತಿದೆ.

ಹೌದು, ಅದೆ ಕರ್ನಾಟಕದ ಆಕರ್ಷಕ ಬಂದರು ನಗರಿ ಮಂಗಳೂರು ದಸರಾ ಉತ್ಸವ/ದಸರಾ ಹಬ್ಬ. ಮೈಸೂರು ದಸರಾ ಹಬ್ಬಕ್ಕೆ ಅತ್ಯಂತ ಶ್ರೀಮಂತವಾದ ಐತಿಹಾಸಿಕ ಹಿನ್ನಿಲೆಯಿದ್ದರೆ ಮಂಗಳೂರು ದಸರೆಯು ತನ್ನದೆ ಆದ ಹತ್ತು ದಿನಗಳ ಕಾಲ ವಿಶಿಷ್ಟ ಆಚರಣೆಯಿಂದಾಗಿ ಜನರನ್ನು ಚುಂಬಕದಂತೆ ಆಕರ್ಷಿಸುತ್ತದೆ.

ಅದ್ಭುತ

ಅದ್ಭುತ

ಮಂಗಳೂರು ದಸರಾ ಉತ್ಸವದಲ್ಲಿ ಕರಾವಳಿಯ ಸೊಬಗು, ಸಂಪ್ರದಾಯ, ಆಚರಣೆಗಳು ಹಾಸು ಹೊಕ್ಕಾಗಿದ್ದುದರಿಂದಲೆ ಇದೊಂದು ಅನನ್ಯ ದಸರಾ ಉತ್ಸವವಾಗಿ ಜನರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: alexrudd

ಎಲ್ಲೆಡೆ ಸಂಭ್ರಮ

ಎಲ್ಲೆಡೆ ಸಂಭ್ರಮ

ಹತ್ತು ದಿನಗಳ ಕಾಲ ಮಂಗಳೂರಿನ ಹಾದಿ ಬೀದಿಗಳು ಮದುವಣಗಿತ್ತಿಯಂತೆ ಸಿಂಗರಿಸಿಕೊಳ್ಳುತ್ತವೆ. ಈ ಉತ್ಸವದ ಅತಿ ಪ್ರಮುಖ ವಿಶೇಷತೆಯೆಂದರೆ ಹುಲಿ ವೇಷ/ಹುಲಿ ಕುಣಿತ, ಜಿಂಕೆ ಕುಣಿತ/ಜಿಂಕೆ ವೇಷ. ತುಳು ಭಾಷೆಯಲ್ಲಿ ಇದನ್ನು ಪಿಲಿಯೆಸಾ ಎಂದೂ ಸಹ ಕರೆಯುತ್ತಾರೆ.

ಚಿತ್ರಕೃಪೆ: alexrudd

ಹುರುಪು-ಉತ್ಸಾಹ

ಹುರುಪು-ಉತ್ಸಾಹ

ನವರಾತ್ರಿ ಉತ್ಸವ ಎಂತಲೂ ಕರೆಯಲ್ಪಡುವ ಈ ಸಮಯದಲ್ಲಿ ಸುಮಾರು ಹತ್ತು ದಿನಗಳ ಕಾಲ ಎಲ್ಲೆಡೆ ಹುರುಪು-ಉತ್ಸಾಹಗಳು ನರ್ತಿಸುತ್ತಿರುವುದನ್ನು ಕಾಣಬಹುದು. ಅಲ್ಲದೆ ನಗರದಲ್ಲಿರುವ ಎಲ್ಲ ಚಿಕ್ಕ ಪುಟ್ಟ ದೇವಾಲಯಗಳೂ ಸಹ ಅಲಂಕರಿಸಿಕೊಂಡು ಮಹಾಪೂರದಂತೆ ಬರುವ ಭಕ್ತರನ್ನು ಸ್ವಾಗತಿಸುತ್ತವೆ.

ಚಿತ್ರಕೃಪೆ: alexrudd

ತಂಡಗಳ ರಚನೆ

ತಂಡಗಳ ರಚನೆ

ಯುವ ಜನಾಂಗದಲ್ಲಂತೂ ಹೆಚ್ಚಿನ ಮಟ್ಟದ ಉತ್ಸಾಹ ಕಾಣಬಹುದು. ಐದರಿಂದ ಹತ್ತು ಜನರ ತಂಡಗಳಂತೆ ರಚಿಸಿ ಅದರಲ್ಲಿ ಮೂರ್ನಾಲ್ಕು ಜನರು ಹುಲಿ ವೇಷನೊ, ಜಿಂಕೆಯ ವೇಷನೊ ತೊಟ್ಟು ಕುಣಿಯುತ್ತ ಇನ್ನುಳಿದ ಯುವಕರ ಗುಂಪು ಡೊಳ್ಳು-ನಗಾರಿ ಬಾರಿಸುತ್ತ ಬೀದಿ ಬೀದಿ ಅಲೆಯುತ್ತಾರೆ.

ಚಿತ್ರಕೃಪೆ: alexrudd

ವಿಜಯದಶಮಿಯಂದು

ವಿಜಯದಶಮಿಯಂದು

ವಿಜಯದಶಮಿ ಮಂಗಳೂರು ದಸರಾದ ಪ್ರಮುಖ ಘಟ್ಟ ಈ ದಿನದಂದೆ ಪ್ರಖ್ಯಾತ ಮಂಗಳೂರು ದಸರಾ ಮೆರವಣಿಗೆ ಏರ್ಪಡುತ್ತದೆ. ಈ ಅದ್ಭುತ ಮೆರವಣಿಗೆಯನ್ನು ಅಲ್ಲಿ ಭೇಟಿ ನೀಡಿಯೆ ಕಣ್ತುಂಬಿಕೊಳ್ಳಬೇಕು. ಅಷ್ಟು ರಂಗು ರಂಗಾಗಿ, ಮನಮೋಹಕವಾಗಿರುತ್ತದೆ ಈ ಮೆರವಣಿಗೆ.

ಚಿತ್ರಕೃಪೆ: alexrudd

ಮನೆಮಾಡುವ ಸಂಭ್ರಮ

ಮನೆಮಾಡುವ ಸಂಭ್ರಮ

ಈ ಸಂದರ್ಭದ ವಿಶೇಷವೆಂದರೆ ಕೇವಲ ಮೆರವಣಿಗೆಯ ಸ್ಥಳದಲ್ಲೆ ಮಾತ್ರವಲ್ಲದೆ, ನಗರದ ಸಮಸ್ತ ನಾಗರಿಕರೆಲ್ಲರೂ ತಮ್ಮ ಮನದಿಂದ ಇದರಲ್ಲಿ ಪಾಲ್ಗೊಂಡು ತಮ್ಮ ತಮ್ಮ ಮನೆಗಳನ್ನು, ಅಂಗಡಿಗಳನ್ನು, ಕಟ್ಟಡಗಳನ್ನು ವಿವಿಧ ಬಣ್ಣಗಳ ಲೈಟುಗಳಿಂದ ಸಿಂಗಾರಿಸುತ್ತಾರೆ.

ಚಿತ್ರಕೃಪೆ: alexrudd

ಹರ್ಷೋದ್ಗಾರ

ಹರ್ಷೋದ್ಗಾರ

ಎಲ್ಲಿ ನೋಡಿದರಲ್ಲಿ ಜಗಮಗಿಸುವ ಪ್ರಕಾಶ, ನೆರೆದ ಜನಸ್ತೋಮ, ಹರ್ಷೋದ್ಗಾರ, ಸಂಭ್ರಮ, ಆನಂದ ಮುಗಿಲು ಮುಟ್ಟಿದಂತಿರುತ್ತದೆ. ಅಂತಹ ಆಕರ್ಷಣೆ ಮಂಗಳೂರು ದಸರಾ ಹಬ್ಬಕ್ಕೂ ಸಹ ಇರುವುದು ವಿಶೇಷ.

ಚಿತ್ರಕೃಪೆ: alexrudd

ಗಣೇಶ, ಶಾರದೆಯೂ ಸೈ

ಗಣೇಶ, ಶಾರದೆಯೂ ಸೈ

ಮಂಗಳೂರು ದಸರಾದ ಪ್ರಮುಖ ಮೆರವಣಿಗೆಯಲ್ಲಿ ನವ ದುರ್ಗೆಯರ ವಿಗ್ರಹಗಳನ್ನು ಮೆರವಣಿಗೆ ಮಾಡಲಾಗುತ್ತದೆ. ನವದುರ್ಗೆಯರ ಜೊತೆ ಗಣೇಶ ಹಾಗೂ ಶಾರದೆಯರ ವಿಗ್ರಗಳನ್ನೂ ಸಹ ಕೊಂಡೊಯ್ಯಲಾಗುತ್ತದೆ.

ಚಿತ್ರಕೃಪೆ: Srbezawada

ಅಂದ-ಚೆಂದ

ಅಂದ-ಚೆಂದ

ಮೂರ್ತಿಗಳನ್ನು ಹೊತ್ತ ವಾಹನಗಳಂತೂ ಸಾಕ್ಷಾತ್ ದೇವ ರಥಗಳಂತೆ ಕಂಗೊಳಿಸುತ್ತವೆ. ವಿವಿಧ ಪುಷ್ಪಾಲಂಕಾರ, ಜಗಮಗಿಸುವ ವಸ್ತುಗಳಿಂದ ಸಿಂಗರಿಸಲ್ಪಟ್ಟಿದ್ದು ಕಣ್ಕೊರೆಯುವಂತಹ ಪ್ರಕಾಶಗಳಿಂದ ಭೂಷಿತವಾಗಿರುತ್ತವೆ.

ಚಿತ್ರಕೃಪೆ: alexrudd

ಜನಸಾಗರದಿಂದ ಕೂಡಿರುತ್ತದೆ

ಜನಸಾಗರದಿಂದ ಕೂಡಿರುತ್ತದೆ

ಇನ್ನೂ ತನ್ನ ಹೆಸರಿನಿಂದಲೆ ನಗರಕ್ಕೆ ಹೆಸರು ಕರುಣಿಸಿದ ನಗರದ ಪುರಾತನ ಮಂಗಳಾದೇವಿಯ ದೇವಾಲಯವು ದಸರಾ ಸಂದರ್ಭದಲ್ಲಂತೂ ಜನರಿಂದ ತುಂಬು ತುಳುಕುತ್ತದೆ. ದಸರೆಯ ಹಬ್ಬವನ್ನು ಇಲ್ಲಿ ಬಲು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಸಾಂದರ್ಭಿಕ.

ಚಿತ್ರಕೃಪೆ: Ssriram mt

ನಿತ್ಯವೂ ವಿಧ ವಿಧ

ನಿತ್ಯವೂ ವಿಧ ವಿಧ

ದಸರೆಯ ಸಂದರ್ಭದಲ್ಲಿ ದೇವಾಲಯವು ನಿತ್ಯವೂ ಹಲವಾರು ವಿಧ ವಿಧವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ವಿಜಯದಶಮಿಯ ದಿನದಂದು ದೇವಿಯ ಉತ್ಸವ ಮೂರ್ತಿಯನ್ನು ಕೊಂಡೊಯ್ದು ವಿಶೇಷ ರಥ ಯಾತ್ರೆಯನ್ನು ಮಾಡಲಾಗುತ್ತದೆ.

ಚಿತ್ರಕೃಪೆ: alexrudd

ಕುದ್ರೋಳಿ

ಕುದ್ರೋಳಿ

ಮಂಗಳೂರಿನ ಕುದ್ರೋಳಿಯಲ್ಲಿರುವ ಶಿವನಿಗೆ ಮುಡಿಪಾದ ಗೋಕರ್ಣನಾಥೇಶ್ವರ ದೇವಾಲಯ, ದಸರೆಯ ಸಂದರ್ಭದಲ್ಲಿ ಅತ್ಯದ್ಭುತವಾಗಿ ಸಿಂಗರಿಸಲ್ಪಡುವುದಲ್ಲದೆ ನಗರ ಪ್ರಮುಖ ಕೇಂದ್ರಬಿಂದುವಾಗಿ ಎಲ್ಲರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Karunakar Rayker

ಕೇಂದ್ರಬಿಂದು

ಕೇಂದ್ರಬಿಂದು

2012 ರಲ್ಲಿ ಶತವರ್ಷಗಳನ್ನು ಪೂರೈಸಿರುವ ಈ ದೇವಾಲಯ ಬರ ಬರುತ್ತ ಮಂಗಳೂರಿನಲ್ಲಿ ದಸರೆಯ ಸಂದರ್ಭದಲ್ಲಿ ಭೇಟಿ ನೀಡಬೇಕಾದ ಪ್ರಮುಖ ಆಕರ್ಷಣೆಯಾಗಿ ಹೆಸರುವಾಸಿಯಾಗುತ್ತಿದೆ. ತನ್ನ ಅದ್ವಿತೀಯ ಪ್ರಕಾಶಿಸುವ ಅಲಂಕಾರದಿಂದ ಈ ಸಂದರ್ಭದಲ್ಲಿ ದೇವಸ್ಥಾನ ಎಲ್ಲರ ಮನ ಕದಿಯುತ್ತದೆ.

ಚಿತ್ರಕೃಪೆ: Karunakar Rayker

ಹೇಗೆಲ್ಲ ತೆರಳಬಹುದು

ಹೇಗೆಲ್ಲ ತೆರಳಬಹುದು

ಮಂಗಳೂರು ಬೆಂಗಳೂರಿನಿಂದ 355 ಕಿ.ಮೀ ಗಳಷ್ಟು ದೂರದಲ್ಲಿದ್ದು ವಿಮಾನ, ರೈಲು ಹಾಗೂ ಬಸ್ಸುಗಳ ಮೂಲಕ ಉತ್ತಮವಾದ ಸಂಪರ್ಕ ಹೊಂದಿದೆ. ಅಲ್ಲದೆ ಕರ್ನಾಟಕದ ಇತರೆ ಪ್ರಮುಖ ನಗರಗಳಿಂದಲೂ ಸಹ ಮಂಗಳೂರಿಗೆ ರೈಲು ಹಾಗೂ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Tanuja R Y

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X