Search
  • Follow NativePlanet
Share
» »ಸಕ್ಕರೆ ನಾಡು ಮಂಡ್ಯದ ಬೆಲ್ಲದಂತಹ ಆಕರ್ಷಣೆಗಳು

ಸಕ್ಕರೆ ನಾಡು ಮಂಡ್ಯದ ಬೆಲ್ಲದಂತಹ ಆಕರ್ಷಣೆಗಳು

By Vijay

ಕರ್ನಾಟಕ ರಾಜ್ಯದಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಬೆಳೆಯುವ ಮಂಡ್ಯ ಜಿಲ್ಲೆಯು "ಸಕ್ಕರೆ ನಾಡು" ಎಂದೆ ಜನಜನಿತವಾಗಿದೆ. ದಂತ ಕಥೆಯೊಂದರ ಪ್ರಕಾರ, ಹಿಂದೆ ಈ ಪ್ರದೇಶದಲ್ಲಿ ಮಾಂಡವ್ಯ ಎಂಬ ಋಷಿಯು ವಾಸಿಸುತ್ತಿದ್ದರಿಂದ ಇದಕ್ಕೆ ಮಂಡ್ಯ ಎಂಬ ಹೆಸರು ಬಂತು. ಆದರೆ ಕೆಲವು ವಿದ್ವಾಂಸರು ಹಾಗೂ ಶೈಕ್ಷಣಿಕ ತಜ್ಞರು ಇಲ್ಲಿ ದೊರೆತಿರುವ ಅತಿ ಪ್ರಾಚೀನ ಶಾಸನಗಳ ಆಧಾರಗಳ ಮೂಲಕ ಹೇಳುವುದೆನೆಂದರೆ, ಮೊದಲು ಇದು "ಮಂಟಯ" ಎಂದು ಕರೆಯಲಾಗುತ್ತಿದ್ದು ಕಾಲ ಕ್ರಮೇಣವಾಗಿ ಮಂಡ್ಯ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು.

ಮಂಟಯ ಎಂದರೆ ಅತಿ ಪುರಾತನ ಸಮಯದಲ್ಲಿ ಜನವಸತಿಯಿರುವ ಪ್ರದೇಶ ಎಂದಾಗುತ್ತದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಮಂಡ್ಯ ಜಿಲ್ಲೆಯು ಸಾಕಷ್ಟು ಆಕರ್ಷಕವಾದ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಭೀಮೇಶ್ವರಿ, ಮುತ್ತತ್ತಿ, ಸಂಗಮ, ಮೇಲುಕೋಟೆ ಹೀಗೆ ಹತ್ತು ಹಲವಾರು ಪ್ರವಾಸಿ ಕ್ಷೇತ್ರಗಳನ್ನು ಈ ಜಿಲ್ಲೆಯಲ್ಲಿ ಕಾಣಬಹುದಾಗಿದೆ. ಜಿಲ್ಲೆಯ ಜಿಲ್ಲಾ ಕೇಂದ್ರವಾದ ಮಂಡ್ಯ ಪಟ್ಟಣವು ರಾಜಧಾನಿ ಬೆಂಗಳೂರು ನಗರದಿಂದ 120 ಕಿ.ಮೀ ಗಳಷ್ಟು ದೂರದಲ್ಲಿದ್ದು ಬಸ್ಸು ಹಾಗೂ ರೈಲಿನ ಮುಖಾಂತರವಾಗಿ ಸುಲಭವಾಗಿ ತಲುಪಬಹುದು.

ಮಂಡ್ಯ ಜಿಲ್ಲೆಯಲ್ಲಿ ಯಾವೆಲ್ಲ ಆಕರ್ಷಣೆಗಳಿವೆ ಎಂಬುದರ ಕುರಿತು ಒಂದೊಂದಾಗಿ ತಿಳಿಯಿರಿ ಹಾಗೂ ಸಮಯ ಸಿಕ್ಕಾಗ ಮರೆಯದೆ ಭೇಟಿ ನೀಡಿ. ನಿಮ್ಮ ಪ್ರಯಾಣ ಸುಖಕರವಾಗಿರಲಿ.

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ಮದ್ದೂರು ಎಂಬ ಈ ಪುಟ್ಟ ಪಟ್ಟಣವು ದೊರೆಯುತ್ತದೆ. ಮಂಡ್ಯ ಜಿಲ್ಲೆಯಲ್ಲಿರುವ ಈ ಮದ್ದೂರು ಪಟ್ಟಣವು "ಮದ್ದೂರು ವಡೆ" ಗಳಿಗಾಗಿ ಬಹು ಪ್ರಖ್ಯಾತಿ ಪಡೆದಿದೆ.

ಚಿತ್ರಕೃಪೆ: Charles Haynes

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಂಡ್ಯ ನಗರದಿಂದ 37 ಕಿ.ಮೀ ದೂರದಲ್ಲಿರುವಮಳವಳ್ಳಿ ರೇಷ್ಮೆ ಉದ್ಯಮದ ಅತಿ ಪ್ರಮುಖ ಕೇಂದ್ರವಾಗಿ ಜನಪ್ರಿಯತೆಗಳಿಸಿದೆ.

ಚಿತ್ರಕೃಪೆ: Pradeep Kumbhashi

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಳೆಗಾಲದ ಸಮಯದಲ್ಲಿ ಎರಡು ವೈಭಯುತವಾದ ಕಾವೇರಿ ಜಲಪಾತಗಳನ್ನು ಮಂಡ್ಯ ಜಿಲ್ಲೆಯಲ್ಲಿ ಕಾಣಬಹುದು. ಮಳವಳ್ಳಿಯಿಂದ 20 ಕಿ.ಮೀ ಸಾಗಿದಾಗ ಶಿವನಸಮುದ್ರ ಎಂಬಲ್ಲಿ ಕಾವೇರಿ ನದಿಯು ಎರಡು ಹೋಳುಗಳಲ್ಲಿ ಬೇರ್ಪಟ್ಟು ಹರಿದು ಪಶ್ಚಿಮದಲ್ಲಿ ಗಗನಚುಕ್ಕಿ ಜಲಪಾತವಾಗಿಯೂ ನಂತರ ಒಂದುವರೆ ಕಿ.ಮೀ ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಭರಚುಕ್ಕಿ ಜಲಪಾತವಾಗಿಯೂ ಹರಿಯುವುದನ್ನು ಕಾಣಬಹುದು.

ಚಿತ್ರಕೃಪೆ: Gopal Venkatesan

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಜೂನ್ ಮಧ್ಯದಿಂದ ಸೆಪ್ಟಂಬರ್ ವರೆಗಿನ ಸಮಯವು ಈ ಜಲಪಾತಗಳ ಅದ್ಭುತ ನೋಟವನ್ನು ಸವಿಯಲು ಯೋಗ್ಯವಾದ ಸಮಯವಾಗಿದೆ. ಭರಚುಕ್ಕಿ ಜಲಪಾತ.

ಚಿತ್ರಕೃಪೆ: Gopal Venkatesan

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಂಡ್ಯದಿಂದ ಸುಮಾರು 50 ಕಿ.ಮೀ ಗಳಷ್ಟು ದೂರದಲ್ಲಿರುವ ಭೀಮೇಶ್ವರಿಯು ಕಾವೇರಿ ನದಿ ಹಾಗೂ ಅಲ್ಲಿ ನಡೆಯುವ ಮೀನುಗಾರಿಕಾ ಶಿಬಿರದಿಂದಾಗಿ ಪ್ರಖ್ಯಾತಿಗಳಿಸಿದೆ. ಅಲ್ಲದೆ ಈ ಸುಂದರ ಸ್ಥಳದ ನದಿಯ ಪರಿಸರದಲ್ಲಿ ಅನೇಕ ರಿಸಾರ್ಟುಗಳಿದ್ದು ಸಾಹಸಮಯ ಚಟುವಟಿಕೆಗಳನ್ನು ಇಲ್ಲಿ ಒದಗಿಸಲಾಗುತ್ತದೆ.

ಚಿತ್ರಕೃಪೆ: Ashwin Kumar

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಭೀಮೇಶ್ವರಿಯ ಕಾವೇರಿ ನದಿಯಲ್ಲಿ ತೆಪ್ಪಗಳಲ್ಲಿ ಕುಳಿತು ಚಲಿಸುವಾಗ...

ಚಿತ್ರಕೃಪೆ: Ashwin Kumar

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಂಡ್ಯದಿಂದ 20 ಕಿ.ಮೀ ದೂರವಿರುವ ಮಹಾಭಾರತದ ನಂಟನ್ನು ಹೊಂದಿರುವ ಪಾಂಡವಪುರ ತನ್ನಲ್ಲಿರುವ ಕುಂತಿ ಬೆಟ್ಟಕ್ಕೆ ಹೆಸರುವಾಸಿ. ಸ್ಥಳೀಯ ಪುರಾಣದ ಪ್ರಕಾರ ಅಜ್ಞಾತವಾಸದಲ್ಲಿದ್ದ ಪಾಂಡವರು ಹಾಗೂ ತಾಯಿ ಕುಂತಿ ಇಲ್ಲಿ ಕೆಲ ಸಮಯ ಕಳೆದಿದ್ದರೆನ್ನಲಾಗಿದೆ.

ಚಿತ್ರಕೃಪೆ: Aditya Patawari

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆಯಲ್ಲಿರುವ ಮತ್ತೊಂದು ಪ್ರವಾಸಿ ತಾಣವೆಂದರೆ ಮೇಲುಕೋಟೆ. ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ಜಯಲಲಿತ ಅವರು ಹುಟ್ಟಿದ್ದು ಈ ಸ್ಥಳದಲ್ಲಿಯೆ. ಇದೊಂದು ಧಾರ್ಮಿಕ ಕೇಂದ್ರವಾಗಿದ್ದು, ಚೆಲುವರಾಯಸ್ವಾಮಿ ದೇವಸ್ಥಾನದಿಂದಾಗಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Pradeep Kumbhashi

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ದೇಗುಲದಲ್ಲಿರುವ ಪವಿತ್ರವಾದ ಕಲ್ಯಾಣಿ.

ಚಿತ್ರಕೃಪೆ: Ranganatha C

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮೇಲುಕೋಟೆಯ ಗುಡ್ಡದ ಮೇಲೆ ಮತ್ತೊಂದು ಪ್ರಸಿದ್ಧವಾದ ದೇಗುಲವನ್ನು ಕಾಣಬಹುದಾಗಿದೆ. ಅದುವೆ ಯೋಗ ನರಸಿಂಹಸ್ವಾಮಿ ದೇವಾಲಯ. ನರಸಿಂಹ ಸ್ವಾಮಿಗೆ ಮುಡಿಪಾಗಿರುವ ಈ ದೇವಸ್ಥಾನದ ವಿಗ್ರಹವನ್ನು ಸ್ವತಃ ಪ್ರಹ್ಲಾದನೆ ಪ್ರತಿಷ್ಠಾಪಿಸಿದ್ದಾನೆಂದು ಇಲ್ಲಿನ ಸ್ಥಳೀಯ ಪುರಾಣ ಹೇಳುತ್ತದೆ.

ಚಿತ್ರಕೃಪೆ: HPNadig

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜಪೇಟೆಯನ್ನು "ಹೊಯ್ಸಳ ದೇವಾಲಯಗಳ ಮಾತೃ ಭೂಮಿ " ಎಂದೆ ಕರೆಯಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಹೊಸಹೊಳಲುವಿನಲ್ಲಿರುವ ಲಕ್ಷ್ಮಿನಾರಾಯಣ ದೇವಸ್ಥಾನವು ಹೊಯ್ಸಳ ವಾಸ್ತು ಶೈಲಿಯ ಅಮೋಘವಾದ ದೇವಸ್ಥಾನವಾಗಿದೆ. ಈ ದೇವಾಲಯವು ತನ್ನ ಅದ್ಭುತವಾದ ಕೆತ್ತನೆಗಳಿಗಾಗಿ ಸುಪ್ರಸಿದ್ಧವಾಗಿದೆ. ಹೊಸಹೊಳಲು ಕೃಷ್ಣರಾಜಪೇಟೆಯಿಂದ ಸುಮಾರು ಮೂರು ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Prometheus55

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆಯಲ್ಲಿರುವ ಕಿಕ್ಕೇರಿ ಗ್ರಾಮವು ಬ್ರಹ್ಮೇಶ್ವರ ದೇವಾಲಯದಿಂದಾಗಿ ಪ್ರಸಿದ್ಧಿ ಪಡೆದಿದೆ. ಕೃಷ್ಣರಾಜಪೇಟೆಯಿಂದ 14 ಕಿ.ಮೀ ದೂರದಲ್ಲಿರುವ ಕಿಕ್ಕೇರಿಯ ಈ ದೇವಸ್ಥಾನವು 1171 ರಲ್ಲಿ ಅಂದರೆ ಒಂದನೇಯ ನರಸಿಂಹನ ಆಡಳಿತಾವಧಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಅಮೋಘವಾದ ಹೊಯ್ಸಳ ವಾಸ್ತುಶಿಲ್ಪದಿಂದ ಆಕರ್ಷಿಸುತ್ತದೆ.

ಚಿತ್ರಕೃಪೆ: Dineshkannambadi

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಂಡ್ಯ ಪಟ್ಟಣದ ಈಶಾನ್ಯ ದಿಕ್ಕಿಗೆ ಸುಮಾರು 25 ಕಿ.ಮೀ ದೂರದಲ್ಲಿರುವ ಬಸರಳು ಗ್ರಾಮವು 12 ನೇಯ ಶತಮಾನದ ಮಲ್ಲಿಕಾರ್ಜುನ ದೇವಸ್ಥಾನದಿಂದಾಗಿ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಹೊಯ್ಸಳ ದೊರೆ ಎರಡನೇಯ ನರಸಿಂಹನ ಆಡಳಿತ ಕಾಲದಲ್ಲಿ ಈ ದೇವಸ್ಥಾನದ ನಿರ್ಮಾಣವಾಗಿದ್ದು ನೋಡಲು ಅದ್ಭುತವಾದ ಮನ ತಣಿಸುವ ಕೆತ್ತನೆಗಳಿಂದ ಕೂಡಿದೆ.

ಚಿತ್ರಕೃಪೆ: Dineshkannambadi

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆಯ ಮದ್ದೂರಿನಿಂದ ಕೇವಲ ಒಂದು ಕಿ.ಮೀ ದೂರದಲ್ಲಿರುವ ಶಿವಪುರವು ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಕ್ಷೇತ್ರ. ಏಕೆಂದರೆ ಈ ಒಂದು ತಾಣದಲ್ಲಿ ಬ್ರಿಟೀಷರ ಆಡಳಿತವಿದ್ದಾಗ ಸ್ವಾತಂತ್ರ್ಯ ಹೋರಾಟಗಾರರು 1938, ಎಪ್ರಿಲ್ 10 ಹಾಗೂ 12 ರ ಮಧ್ಯದಲ್ಲಿ ಭಾರತೀಯ ಧ್ವಜ ಹಾರಿಸುವುದು ನಿಷೇಧವಿದ್ದರೂ ಸಹ ಜೀವಕ್ಕೆ ಭಯಪಡದೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ತಮ್ಮ ದೇಶಪ್ರೇಮವನ್ನು ಮೆರೆದಿದ್ದರು. ನಂತರ ಇದು "ಶಿವಪುರ ಸತ್ಯಾಗ್ರಹ" ಎಂದೆ ಪ್ರಸಿದ್ಧವಾಯಿತು. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Nagarjun Kandukuru

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ನೀವು ಪಕ್ಷಿ ಪ್ರಿಯ, ಕ್ಯಾಮೆರಾ ಪ್ರಿಯ ಪ್ರವಾಸಿಗರಾಗಿದ್ದಲ್ಲಿ ಮಂಡ್ಯ ಜಿಲ್ಲೆಯಲ್ಲಿದ್ದಾಗ ಮದ್ದೂರಿನಿಂದ ಕೇವಲ ಹತ್ತು ಕಿ.ಮೀ ಚಲಿಸಿದರೆ ಸಾಕು. ನಿಮಗೊಂದು ಪಕ್ಷಿಗಳ ಮಾಯಾ ಜಗತ್ತು ದೊರೆಯುತ್ತದೆ. ಅದುವೆ ಕೊಕ್ಕರೆ ಬೆಳ್ಳೂರು. ಇದು ಕೊಕ್ಕರೆಗಳ ಅನನ್ಯ ಲೋಕವಾಗಿದೆ. ಇಲ್ಲಿ ಕ್ರೇನ್, ಪೆಲಿಕನ್ ಮುಂತಾದ ದೊಡ್ಡ ಗಾತ್ರದ ಹಕ್ಕಿಗಳು ಜಗತ್ತಿನ ವಿವಿಧ ಖಂಡಗಳಿಂದ ಇಲ್ಲಿಗೆ ವಲಸೆ ಬರುತ್ತಿರುತ್ತವೆ. ಅಕ್ಟೋಬರ್ ನಿಂದ ಮಾರ್ಚ್ ಇಲ್ಲಿಗೆ ಭೇಟಿ ನೀಡಲು ಯೋಗ್ಯವಾದ ಸಮಯವಾಗಿದೆ.

ಚಿತ್ರಕೃಪೆ: Koshy Koshy

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಂಡ್ಯದ ಮಳವಳ್ಳಿ ಹತ್ತಿರ ಕಾವೇರಿ ನದಿಗುಂಟ ಚಲಿಸುವಾಗ ಮುತ್ತತ್ತಿ ಎಂಬ ಸೊಗಸಾದ ತಾಣವು ಕಂಡುಬರುತ್ತದೆ. ಬೆಂಗಳೂರಿನಿಂದ ವಿಕೆಂಡ್ ಟ್ರಿಪ್ ಮಾಡುವವರಿಗಂತೂ ಇದೊಂದು ಒಳ್ಳೆಯ ತಾಣ. ಆಂಜನೇಯನ ದೇಗುಲವೊಂದನ್ನು ಇಲ್ಲಿ ಕಾಣಬಹುದಾಗಿದ್ದು ಸುತ್ತ ಮುತ್ತಲಿನ ಹಳ್ಳಿ ಜನರು ಈ ದೇವಸ್ಥಾನಕ್ಕೆ ಅಪಾರವಾಗಿ ಭೇಟಿ ನೀಡುತ್ತಿರುತ್ತಾರೆ. ಇದು ಮಳವಳ್ಳಿಯಿಂದ 35 ಕಿ.ಮೀ ದೂರವಿದ್ದು ತಂಗಲು ಅರಣ್ಯ ವಸತಿ ಗೃಹದ ಸೌಲಭ್ಯ ದೊರಕುತ್ತದೆ.

ಚಿತ್ರಕೃಪೆ: Rayabhari

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಕಾವೇರಿ ಅರಣ್ಯ ಧಾಮದ ಭಾಗವಾಗಿರುವ ದಟ್ಟವಾದ ಕಾಡನ್ನು ಮುತ್ತತ್ತಿಯ ಸುತ್ತು ಮುತ್ತು ಕಾಣಬಹುದಾಗಿದ್ದು ವಿವಿಧ ಪ್ರಾಣಿ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ. ಚಿತ್ರದಲ್ಲಿರುವುದು ಮಲಬಾರ್ ದೊಡ್ಡ ಗಾತ್ರದ ಅಳಿಲು.

ಚಿತ್ರಕೃಪೆ: shrikant rao

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಂಡ್ಯ ಪಟ್ಟಣದಿಂದ 42 ಕಿ.ಮೀ ದೂರದಲ್ಲಿ ಮತ್ತೊಂದು ಐತಿಹಾಸಿಕ ಪ್ರಮುಖ ಪಟ್ಟಣವಿದೆ. ಅದುವೆ ನಾಗಮಂಗಲ. ನಾಗಮಂಗಲವು ತನ್ನಲ್ಲಿರುವ ಸೌಮ್ಯಕೇಶವ ದೇವಾಲಯದಿಂದಾಗಿ ಖ್ಯಾತಿ ಪಡೆದಿದೆ. ಮೂಲ ದೇವಾಲಯವು 12 ನೇಯ ಶತಮಾನದಲ್ಲಿ ನಿರ್ಮಾಣವಾಗಿದ್ದರೂ ನಂತರದ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಹಲವು ನವೀಕರಣಗಳನ್ನು ಇದಕ್ಕೆ ಮಾಡಲಾಯಿತು.

ಚಿತ್ರಕೃಪೆ: Dineshkannambadi

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಂಡ್ಯದಿಂದ 27 ಕಿ.ಮೀ ದೂರದಲ್ಲಿ ಶ್ರೀ ರಂಗನಾಥ ಸ್ವಾಮಿ ನೆಲೆಸಿರುವ ಪವಿತ್ರವಾದ ಸ್ಥಳವೊಂದಿದೆ. ಅದುವೆ ಶ್ರೀರಂಗಪಟ್ಟಣ. ಇಲ್ಲಿರುವ ಶ್ರೀರಂಗನಾಥನ ಪುರಾತನ ದೇವಾಲಯವು ಅಪಾರವಾದ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಸೆಳೆಯುತ್ತದೆ.

ಚಿತ್ರಕೃಪೆ: Gopal Venkatesan

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಬಹು ಪ್ರಖ್ಯಾತ ಶ್ರೀರಂಗಪಟ್ಟಣವು ಮಂಡ್ಯ ಜಿಲ್ಲೆಯಲ್ಲಿದ್ದರೂ ಮೈಸೂರು ನಗರದಿಂದ ಕೇವಲ 20 ಕಿ.ಮೀ ಗಳಷ್ಟು ದೂರದಲ್ಲಿದೆ. ಇಲ್ಲಿ ಕಾಣಬಹುದಾದ ಮತ್ತೊಂದು ಆಕರ್ಷಣೆ ಟಿಪ್ಪು ಸುಲ್ತಾನನ ಬೇಸಿಗೆ ರಜೆಯ ಅರಮನೆಯಾದ ದರಿಯಾ ದೌಲತ್.

ಚಿತ್ರಕೃಪೆ: Brian Snelson

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಹೂಗಳ ಉದ್ಯಾನ ಹಾಗೂ ಕಾರಂಜಿಗಳಿಂದ ಕಂಗೊಳಿಸುವ ಶ್ರೀರಂಗಪಟ್ಟಣದ ದರಿಯಾ ದೌಲತ್ ಅರಮನೆ.

ಚಿತ್ರಕೃಪೆ: Steve Haslam

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಶ್ರೀರಂಗಪಟ್ಟಣದಿಂದ ಮೂರು ಕಿ.ಮೀ ದಕ್ಷಿಣಕ್ಕೆ ಸಾಗಿದರೆ ಎರಡು ಪದರುಗಳಲ್ಲಿ ಹರಿಯುತ್ತಿರುವ ಕಾವೇರಿ ನದಿಯು ಸಂಗಮ ಹೊಂದುವ ಸ್ಥಳ ದೊರಕುತ್ತದೆ. ಇದು ಸಂಗಮ ಎಂಬ ಹೆಸರಿನಿಂದಲೆ ಪ್ರಸಿದ್ಧಿಪಡೆದ ಸ್ಥಳವಾಗಿದೆ.

ಚಿತ್ರಕೃಪೆ: Jens Hoffmann

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಶ್ರೀರಂಗಪಟ್ಟಣಕ್ಕೆ ಹತ್ತಿರದಲ್ಲಿ ಕರಿಘಟ್ಟ ಎಂಬ ಗುಡ್ಡ ಪ್ರದೇಶವಿದೆ. ಇದೊಂದು ಸೊಗಸಾದ ಪ್ರದೇಶವಾಗಿದ್ದು ಇದರ ಮೇಲಿನಿಂದ ನೋಡಿದಾಗ ನಾಲ್ಕೂ ದಿಕ್ಕುಗಳಲ್ಲೂ ಯಾವ ಅಡೆ ತಡೆಯಿಲ್ಲದ ಅನಂತ ಪರಿಸರವು ಪ್ರಶಾಂತವಾಗಿ ಚಾಚಿರುವುದನ್ನು ಕಾಣಬಹುದು. ಚಾರಣಕ್ಕೆ ಯೋಗ್ಯವಾಗಿರುವ ಈ ಸ್ಥಳದಲ್ಲಿ ವೆಂಕಟೇಶ್ವರನ ದೇವಸ್ಥಾನವೊಂದನ್ನು ಕಾಣಬಹುದಾಗಿದ್ದು, ಶ್ರೀರಂಗಪಟ್ಟಣದಿಂದ ಕೇವಲ ಆರು ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Nagesh Kamath

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆಯಲ್ಲಿ ಅತಿ ಗುರುತರವಾದ ಪ್ರಸಿದ್ಧ ಪ್ರವಾಸಿ ಕ್ಷೇತ್ರವೆಂದರೆ ರಂಗನತಿಟ್ಟು. ಇದನ್ನು ಜನಪ್ರಿಯವಾಗಿ "ಕರ್ನಾಟಕದ ಪಕ್ಷಿ ಕಾಶಿ" ಎಂದೆ ಸಂಭೋದಿಸಲಾಗುತ್ತದೆ. ಇದು ರಾಜ್ಯದಲ್ಲೆ ಅತಿ ದೊಡ್ಡದಾದ ಪಕ್ಷಿಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚಿತ್ರಕೃಪೆ: Vijay S

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

40 ಎಕರೆಗಳಷ್ಟು ವಿಶಾಲವಾಗಿ ಚಾಚಿರುವ ಈ ಪಕ್ಷಿಧಾಮವು ಕಾವೇರಿ ನದಿಯಲ್ಲುಂಟಾದ ಆರು ಚಿಕ್ಕ ದ್ವೀಪಗಳನ್ನು ಒಳಗೊಂಡಿದೆ.

ಚಿತ್ರಕೃಪೆ: Seshadri Dhanakoti

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ರಂಗನತಿಟ್ಟು ಪಕ್ಷಿಧಾಮದ ಕೆಲವು ಮನಮೋಹಕ ಚಿತ್ರಗಳು.

ಚಿತ್ರಕೃಪೆ: Vijay S

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ರಂಗನತಿಟ್ಟು ಪಕ್ಷಿಧಾಮದ ಕೆಲವು ಮನಮೋಹಕ ಚಿತ್ರಗಳು.

ಚಿತ್ರಕೃಪೆ: Vijay S

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ರಂಗನತಿಟ್ಟು ಪಕ್ಷಿಧಾಮದ ಕೆಲವು ಮನಮೋಹಕ ಚಿತ್ರಗಳು.

ಚಿತ್ರಕೃಪೆ: Vijay S

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ರಂಗನತಿಟ್ಟು ಪಕ್ಷಿಧಾಮದ ಕೆಲವು ಮನಮೋಹಕ ಚಿತ್ರಗಳು.

ಚಿತ್ರಕೃಪೆ: Seshadri Dhanakoti

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆಯ ಮತ್ತೊಂದು ಪ್ರಮುಖವಾದಂತಹ ಆಕರ್ಷಣೆ ಎಂದರೆ ಕೃಷ್ಣರಾಜಸಾಗರ ಜಲಾಶಯ. ಇದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಿಂದ ಕೇವಲ 18 ಕಿ.ಮೀ ಗಳಷ್ಟು ದೂರದಲ್ಲಿದೆ. ಜನಪ್ರಿಯವಾಗಿ ಕೆ.ಆರ್.ಎಸ್ ಎಂತಲೂ ಕರೆಯಲ್ಪಡುವ ಈ ಆಣೆಕಟ್ಟು ಕರ್ನಾಟಕದ ಹೆಮ್ಮೆಯ ಇಂಜಿನೀಯರ್ ಆದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸಮರ್ಥ ನಾಯಕತ್ವದಲ್ಲಿ 1924 ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲ್ಪಟ್ಟಿತು.

ಚಿತ್ರಕೃಪೆ: Vaishu2

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಈ ಆಣೆಕಟ್ಟಿಗೆ ಹೊಂದಿಕೊಂಡಂತೆ ಒಂದು ಸುಂದರವಾದ ಹಾಗೂ ವಿಶಾಲವಾದ ಉದ್ಯಾನವನ್ನು ನೋಡಬಹುದಾಗಿದ್ದು ಇದನ್ನು ಬೃಂದಾವನ ಉದ್ಯಾನ ಎಂದು ಕರೆಯಲಾಗುತ್ತದೆ. ಮೈಸೂರಿನಿಂದ ಕೇವಲ 20 ಕಿ.ಮೀ ಗಳಷ್ಟು ಅಂತರದಲ್ಲಿದೆ ಈ ಸುಂದರ ಉದ್ಯಾನ.

ಚಿತ್ರಕೃಪೆ: Vasanth Mohan

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಬೃಂದಾವನ ಉದ್ಯಾನದ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Prince Gladson

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಬೃಂದಾವನ ಉದ್ಯಾನದ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Vasanth Mohan

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಬೃಂದಾವನ ಉದ್ಯಾನದ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Vasanth Mohan

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಬೃಂದಾವನ ಉದ್ಯಾನದ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Vasanth Mohan

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಬೃಂದಾವನ ಉದ್ಯಾನದ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Vasanth Mohan

ಮಂಡ್ಯ ಜಿಲ್ಲೆ:

ಮಂಡ್ಯ ಜಿಲ್ಲೆ:

ಬೃಂದಾವನ ಉದ್ಯಾನದ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Vasanth Mohan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X