Search
  • Follow NativePlanet
Share
» »ಸದಾ ನೆನಪಿನಲ್ಲುಳಿಯುವ ನಲಿವಿನ ಮನಾಲಿ

ಸದಾ ನೆನಪಿನಲ್ಲುಳಿಯುವ ನಲಿವಿನ ಮನಾಲಿ

By Vijay

ಯಾವಾಗಲೂ ನಲಿವಿನಿಂದ ಕೂಡಿರುವ, ದೇಶದಲ್ಲೆ ಪ್ರವಾಸಿ ದೃಷ್ಟಿಯಿಂದ ಪ್ರಖ್ಯಾತವಾಗಿರುವ ಪ್ರಮುಖ ಹಾಗೂ ಜನಪ್ರೀಯ ಸ್ಥಳಗಳ ಪೈಕಿ ಒಂದಾಗಿದೆ ಉತ್ತರ ಭಾರತದಲ್ಲಿರುವ ಮನಾಲಿ ತಾಣ. ಹೌದು, ಕುಲ್ಲು-ಮನಾಲಿ ಎಂದು ಅವಳಿ ಪ್ರವಾಸಿ ತಾಣಗಳಾಗಿ ಪ್ರಸಿದ್ಧವಾಗಿರುವ ಮನಾಲಿಯು ಕುಲು ಕಣಿವೆಯ ಬಳಿಯಲ್ಲಿ ನೆಲೆಸಿರುವ ಸುಂದರ ಗಿರಿಧಾಮ ಪ್ರದೇಶವಾಗಿದೆ.

ಈಗಲೇ ಎಲ್ಲ ಗೊಐಬಿಬೊ ಕೂಪನ್ನುಗಳನ್ನು ಉಚಿತವಾಗಿ ಪಡೆಯಿರಿ

ದಕ್ಷಿಣ ಭಾರತದ ಸಾಕಷ್ಟು ಜನರು ಇಷ್ಟ ಪಡುವ ಹಾಗೂ ಭೇಟಿ ನೀಡಲು ಬಯಸುವ ಸ್ಥಳವಾಗಿರುವ ಮನಾಲಿಯು ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಕುಲ್ಲು ಜಿಲ್ಲೆಯಲ್ಲಿ ಸ್ಥಿತವಿದೆ. ಬಯಸ್ ನದಿ ಕಣಿವೆಯ ವ್ಯಾಪ್ತಿಯಲ್ಲಿರುವ ಈ ಅದ್ಭುತ ಪ್ರಾಕೃತಿಕ ಸೊಬಗಿನ ಗಿರಿಧಾಮವು ಹಿಮಾಚಲದ ರಾಜಧಾನಿ ನಗರವಾದ ಶಿಮ್ಲಾದ ಉತ್ತರಕ್ಕೆ ಸುಮಾರು 270 ಕಿ.ಮೀ ಗಳಷ್ಟು ದೂರದಲ್ಲಿದೆ.

ವಿಶೇಷ ಲೇಖನ : ಏನೀದು ಕುಲ್ಲು ಮನಾಲಿ ಸರ್ಕ್ಯೂಟ್?

ಕಡಿಮೆ ಜನಸಂಖ್ಯೆಯಿರುವ ಈ ಸುಂದರ ಹಾಗೂ ಪುಟ್ಟ ಗಿರಿಧಾಮವು ತನ್ನ ಹಸಿರು ಹಸಿರಾದ ವನಸಂಪತ್ತು ಹಾಗೂ ವರ್ಷದ ನಿರ್ದಿಷ್ಟ ಸಮಯದಲ್ಲಿ ಹಿಮದ ರೂಪದಲ್ಲಿ ಶ್ವೇತ ವರ್ಣದ ಹಾಸಿಗೆಯನ್ನು ಹೊದ್ದು ಆಕರ್ಷಣೀಯವಾಗಿ ಕಾಣುತ್ತದೆ. ಹಿಂದೆ ಲಡಾಖ್ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ನಡೆಸುವವರಿಗೆ ಈ ಪಟ್ಟಣವು ಪ್ರವೇಶ ದ್ವಾರವಾಗಿತ್ತು. ಇಂದು ಇದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ.

ಮನಾಲಿಗೆ ತಲುಪುವ ಬಗೆ ಮನಾಲಿ ಹೋಟೆಲುಗಳು

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಮನಾಲಿಯು ಒಂದು ಚಿಕ್ಕ ಹಾಗೂ ಚೊಕ್ಕದಾದ ಪಟ್ಟಣವಾಗಿದೆ. 2001ರ ಜನಗಣತಿಯ ಪ್ರಕಾರ, ಇಲ್ಲಿದ್ದ ಜನಸಂಖ್ಯೆ ಕೇವಲ 8,096.

ಚಿತ್ರಕೃಪೆ: Saad Faruque

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಮನಾಲಿಯ ವಾತಾವರಣವು ವರ್ಷಪೂರ್ತಿ ತಂಪು ತಂಪಾಗಿರುತ್ತದೆ. ಚಳಿಗಾಲದ ಸಂದರ್ಭದಲ್ಲಿ ಅತಿ ಹೆಚ್ಚಿನ ಚಳಿಯಿದ್ದರೆ ಬೇಸಿಗೆಯಲ್ಲಿ ಉಷ್ಣತೆಯು ಹಿತ್ಮಯವಾಗಿರುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ತಾಪಮಾನ ಕನಿಷ್ಠ -15 °C ರಿಂದ ಗರಿಷ್ಠ 05 °C ಡಿಗ್ರಿ ಸೆಲ್ಶಿಯಸ್ ಇದ್ದು ಬೇಸಿಗೆಯಲ್ಲಿ ಕನಿಷ್ಠ 04 °C ರಿಂದ ಗರಿಷ್ಠ 15 °C ಡಿಗ್ರಿ ಸೆಲ್ಶಿಯಸ್ ವರೆಗಿರುತ್ತದೆ.

ಚಿತ್ರಕೃಪೆ: David Bacon

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ನವಂಬರ್ ನಿಂದ ಫೆಬ್ರುವರಿವರೆಗಿನ ಸಮಯದಲ್ಲಿ ಮನಾಲಿಯು ಸಾಮಾನ್ಯವಾಗಿ ಹಿಮ ಪಾತವನ್ನು ಅನುಭವಿಸುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮನಾಲಿಯ ವಾತಾವರಣದಲ್ಲಿ ಸ್ಥಿರತೆಯು ಕಂಡುಬರುವುದಿಲ್ಲ ಹಾಗೂ ಇಲ್ಲಿಗೆ ಭೇಟಿ ನೀಡುವಾಗ ಪ್ರವಾಸಿಗರು ಬೆಚ್ಚಗಿನ ಬಟ್ಟೆಗಳನ್ನು ಕೊಂಡೊಯ್ಯಲೇಬೇಕು.

ಚಿತ್ರಕೃಪೆ: David Bacon

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಮನಾಲಿಗೆ ಮನಾಲಿ ಎಂಬ ಹೆಸರು ಮೂಲವಾಗಿ ಹಿಂದೂ ಧರ್ಮದ ನ್ಯಾಯ ಪುರುಷ ಮನು ಎಂಬಾತನಿಂದ ಬಂದುದಾಗಿದೆ ಎಂದು ಹೇಳಲಾಗುತ್ತದೆ. ಮನು - ಆಲಯ (ಮನು ವಾಸಿಸುತ್ತಿದ್ದ ಆಲಯ) ಎಂಬುದೆ ಕ್ರಮೇಣವಾಗಿ ಮನಾಲಿ ಎಂಬ ಹೆಸರನ್ನು ಪಡೆಯಿತೆನ್ನಲಾಗುತ್ತದೆ.

ಚಿತ್ರಕೃಪೆ: David Bacon

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ದಂತಕಥೆಯ ಪ್ರಕಾರ, ಮನು ಋಷಿಯು ಹಿಂದೆ ಪ್ರವಾಹ ಉಂಟಾಗಿ ನಶಿಸಿ ಹೋದ ಜನರಾಶಿಯನ್ನು ಮತ್ತೆ ಪುನರುಜ್ಜೀವನಗೊಳಿಸುವ ಸಲುವಾಗಿ ಹೊರಬಂದು ಮನಾಲಿಯಲ್ಲಿ ತಮ್ಮ ಪಾದಗಳನ್ನು ಊರಿದ್ದರು ಎನ್ನಲಾಗಿದೆ.

ಚಿತ್ರಕೃಪೆ: ryguywy

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಮೊದಲಿಗೆ ಮನಾಲಿಯಲ್ಲಿ ಸ್ಥಳೀಯ ಬೇಟೆಗಾರರಾದ ರಕ್ಷಾ ಎನ್ನುವವರು ವಿರಳ ಸಂಖ್ಯೆಯಲ್ಲಿ ಇಲ್ಲಿ ವಾಸಿಸುತ್ತಿದ್ದರು. ನಂತರ ಕಂಗ್ರಾ ಕಣಿವೆಯಿಂದ ವಲಸೆ ಬಂದ ಕುರಿಗಾಹಿಗಳು ಇಲ್ಲಿ ವಾಸಿಸಲು ಪ್ರಾರಂಭಿಸಿ ವ್ಯವಸಾಯವನ್ನು ತಮ್ಮ ಪ್ರಧಾನ ಚಟುವಟಿಕೆಯನ್ನಾಗಿ ಮಾಡಿಕೊಂಡರು.

ಚಿತ್ರಕೃಪೆ: David Bacon

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಇಂದಿಗೂ ಈ ಸಮುದಾಯವನ್ನು ಇಲ್ಲಿ ಕಾಣಬಹುದಾಗಿದ್ದು ಇವರ ಜೊತೆ ಕುಲ್ಲು ಪ್ರದೇಶಕ್ಕೆ ಮಾತ್ರವೆ ಸೀಮಿತವಾದ ನೌರ್ ಎಂಬ ಜಾತಿಯ ಜನರನ್ನೂ ಸಹ ಕಾಣಬಹುದು. ಮನಾಲಿಯ ಪ್ರಮುಖ ಆದಾಯ ಪ್ರವಾಸೋದ್ಯ್ಮ ಹಾಗೂ ಇಲ್ಲಿ ಬೆಳೆಯಲಾಗುವ ಸೇಬು, ಪೀರ್, ಪ್ಲಮ್ ಮುಂತಾದ ಹಣ್ಣುಗಳ ಮೇಲೆ ಅವಲಂಬಿತವಾಗಿದೆ.

ಚಿತ್ರಕೃಪೆ: David Bacon

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಇನ್ನೊಂದು ವಿಶೇಷವೆಂದರೆ ಸೇಬುಗಳು ಮೊದಲಿಗೆ ಈ ಪ್ರದೇಶದಲ್ಲಿ ಬ್ರಿಟೀಷರು ಪರಿಚಯಿಸಿದರು. ಇಲ್ಲಿನ ವಾತಾವರಣದಲ್ಲಿ ಸೇಬುಗಳು ಯಾವ ರೀತಿ ಬೆಳೆಯುತ್ತಿದ್ದವೆಂದರೆ ಒಮ್ಮೊಮ್ಮೆ ಸೇಬು ಗಿಡಗಳ ಟೊಂಗೆಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆದ ಸೇಬುಗಳ ಭಾರ ತಾಳಲಾರದೆ ಕುಸಿಯುತ್ತಿದ್ದವಂತೆ. ಇಂದು ಸೇಬುಗಳು ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾಗಿದೆ.

ಚಿತ್ರಕೃಪೆ: Vyacheslav Argenberg

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಸುಮಾರು 1980 ರ ಸಮಯದಲ್ಲಿ ಕಾಶ್ಮೀರ ಕಣಿವೆ ಪ್ರದೇಶಗಳಲ್ಲಿ ಉಗ್ರಗಾಮಿ ಚಟುವಟಿಕೆಗಳು ಏರ ತೊಡಗಿದಾಗ ಮನಾಲಿಯ ಪ್ರವಾಸೋದ್ಯ ವೇಗವಾಗಿ ಪ್ರಗತಿ ಕಂಡಿತು. ಜಮ್ಮು ಕಾಶ್ಮೀರ ಪ್ರವಾಸಗಳಿಗೆ ತೆರಳುತ್ತಿದ್ದ ಬಹುತೇಕ ಪ್ರವಾಸಿಗರು ಇಲ್ಲಿನ ತಂಪಾದ ಹಾಗೂ ಹಿತಕರವಾದ ವಾತಾವರಣಕ್ಕೆ ಆಕರ್ಷಿತರಾಗಿ ಮನಾಲಿಗೆ ಬರಲಾರಂಭಿಸಿದರು. ಅಂದಿನಿಂದ ಮನಾಲಿಯು ಪ್ರವಾಸಿ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಕಾಣಲಾರಂಭಿಸಿತು. ಸೇಬು ಗಿಡಗಳು.

ಚಿತ್ರಕೃಪೆ: Jishnu2602

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಒಂದೊಮ್ಮೆ ಹಳ್ಳಿ ಪ್ರದೇಶವಾಗಿದ್ದ ಮನಾಲಿಯು ಇಂದು ಜನರಿಂದ ತುಂಬಿದ ಹಾಗೂ ಪ್ರವಾಸಿಗರ ಒಡನಾಟವಿರುವ ಪ್ರಸಿದ್ಧ ಪ್ರವಾಸಿ ಪಟ್ಟಣವಾಗಿ ಮಾರ್ಪಾಟಾಗಿದೆ. ಸಾಕಷ್ಟು ಹೋಟೆಲುಗಳು ಹಾಗೂ ರಿಸಾರ್ಟುಗಳು ಪಟ್ಟಣದ ತುಂಬೆಲ್ಲ ತಲೆ ಎತ್ತಿ ಪ್ರವಾಸಿಗರನ್ನು ಕರೆಯುತ್ತಿವೆ.

ಚಿತ್ರಕೃಪೆ: Kprateek88

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಮನಾಲಿಯು ತನ್ನ ಬಳಿಯಲ್ಲಿರುವ ಕೆಲ ಪ್ರಮುಖ ಪ್ರವಾಸಿ ಆಕರ್ಷಣೆಗಳಿಗೆ ಬಹು ಜನಪ್ರೀಯವಾಗಿದೆ. ಮನಾಲಿಗೆ ಭೇಟಿ ನೀಡುವವರು ಈ ಆಕರ್ಷಣೆಗಳನ್ನು ನೋಡಲು ಮರೆಯಲೇ ಬಾರದು. ಮನಾಲಿಯಲ್ಲಿರುವ ಕೆಲ ಪ್ರವಾಸಿ ಆಕರ್ಷಣೆಗಳು ಮುಂದಿನ ಸ್ಲೈಡುಗಳಲ್ಲಿ. ಮನಾಲಿ ಹಿಮಪಾತದ ಸಂದರ್ಭದಲ್ಲಿ.

ಚಿತ್ರಕೃಪೆ: David Bacon

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಸೋಲಂಗ್ ಕಣಿವೆ: ಮನಾಲಿಯಿಂದ 14 ಕಿ.ಮೀ ಗಳಷ್ಟು ದೂರದಲ್ಲಿರುವ ಸೋಲಂಗ್ ಕಣಿವೆಯು ಒಂದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿದೆ. ಕಣಿವೆಯ ವಿಶೇಷತೆ ಎಂದರೆ ಬೇಸಿಗೆಯ ಸಮಯದಲ್ಲಿ ಹಸಿರಿನಿಂದ ಕೂಡಿದ ಹಿತಕರವಾದ ವಾತಾವರಣ ಮಂತ್ರಮುಗ್ಧಗೊಳಿಸಿದರೆ ಚಳಿಗಾಲದಲ್ಲಿ ಹಿಮಪಾತವಾಗಿ ಸ್ಕೇಟಿಂಗ್ ನಂತಹ ಸಾಹಸಮಯ ಚಟುವಟಿಕೆಗಳು ಕ್ರಿಯಾಶಿಲವಾಗುತ್ತವೆ.

ಚಿತ್ರಕೃಪೆ: Sabyasachi Baidya

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ರೊಹ್ತಂಗ್ ಪಾಸ್ : ರೊಹ್ತಂಗ್ ರಹದಾರಿ ಮನಾಲಿಯಿಂದ ಭೇಟಿ ನೀಡಬಹುದಾದ ಮತ್ತೊಂದು ಸುಂದರ ಆಕರ್ಷಣೆ. ಈ ರಹದಾರಿಯು ಮನಾಲಿಯನ್ನು ಲಾಹೌಲ್-ಸ್ಪಿತಿ ಹಾಗೂ ಲಡಾಖ್ ನೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ರಸ್ತೆ ಪ್ರವಾಸ ಅಥವಾ ಮೋಟರ್ ಬೈಕ್ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಅದ್ಭುತ ಮಾರ್ಗವಾಗಿದೆ.

ಚಿತ್ರಕೃಪೆ: TheWanderer7562

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಹಿಡಿಂಬಾ ದೇವಿ ದೇವಾಲಯ : ಮನಾಲಿಯಲ್ಲಿ ಭೇಟಿ ನೀಡಬಹುದಾದ ಒಂದು ವಿಶಿಷ್ಟ ದೇವಾಲಯ. ಇದು ನಾಲ್ಕು ಸ್ತರಗಳಲ್ಲಿ ಪಿರಮಿಡ್ ಆಕಾರದ ಗೋಪುರ ಹೊಂದಿದೆ. ಇದರ ಸುತ್ತಮುತ್ತಲಿನ ಪರಿಸರವು ನಯನಮನೋಹರವಾಗಿದೆ. ಈ ದೇವಾಲಯವು ಭೀಮನ ಮಡದಿ ಹಾಗೂ ಘಟೋದ್ಗಜನ ತಾಯಿಯಾದ ಹಿಡಿಂಬೆಗೆ ಮುಡಿಪಾಗಿರುವುದು ವಿಶೇಷ.

ಚಿತ್ರಕೃಪೆ: Biswarup Ganguly

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಈ ದೇವಾಲಯದಿಂದ ನಡಿಗೆಯ ಮೂಲಕ ಸ್ವಲ್ಪ ದೂರ ಕ್ರಮಿಸಿದರೆ ಘಟೋದ್ಗಜನಿಗೆ ಮುಡಿಪಾದ ದೇವಾಲಯವೂ ಸಹ ಕಾಣಸಿಗುತ್ತದೆ.

ಚಿತ್ರಕೃಪೆ: Biswarup Ganguly

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಭೃಗು ಕೆರೆ : ಮನಾಲಿ ಬಳಿಯಿರುವ ಬಿಸಿ ನೀರಿನ ಬುಗ್ಗೆಗಳಿ ಪ್ರಸಿದ್ಧವಾದ ವಸಿಷ್ಠ ದೇವಾಲಯದಿಂದ ಚಾರಣ ಮಾರ್ಗದ ಮೂಲಕ ತಲುಪಬಹುದಾದ ಭೃಗು ಕೆರೆಯು ಅತ್ಯಂತ ನಯನ ಮನೋಹರ ಕೆರೆಯಾಗಿದೆ. ಇಲ್ಲಿಂದ ಕಣಿವೆಯ ನೋಟವು ನೋಡುಗರನ್ನು ಮೂಕವಿಸ್ಮಿತಗೊಳಿಸುವುದರಲ್ಲಿ ಸಂಶಯವಿಲ್ಲ.

ಚಿತ್ರಕೃಪೆ: Kartik.a.rokde

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಮನಾಲಿ ಪ್ರಕೃತಿಧಾಮವು ಮನಾಲಿಯಲ್ಲಿರುವ ಮಗದೊಂದು ಆಕರ್ಷಣೀಯ ಸ್ಥಳವಾಗಿದೆ. ಮನಾಲಿ ಪಟ್ಟಣದಿಂದ ಕೇವಲ ಎರಡು ಕಿ.ಮೀ ಗಳಷ್ಟು ದೂರದಲ್ಲಿರುವ ಈ ಧಾಮವು ಅಪೂರ್ವವಾದ ಪ್ರಕೃತಿ ಸೌಂದರ್ಯಕ್ಕೆ, ಹಾಯಾದ ವಿಶ್ರಾಂತಿಗೆ ಹಾಗೂ ವಿಹಾರ ನಡಿಗೆಗೆ ಹೆಚ್ಚು ಹೆಸರುವಾಸಿಯಾಗಿದೆ.

ಚಿತ್ರಕೃಪೆ: PabloEvans

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಮನಾಲಿಯಲ್ಲಿರುವ ಒಂದು ಶಾಲೆ.

ಚಿತ್ರಕೃಪೆ: Vyacheslav Argenberg

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಮನಾಲಿಯ ಪರಿಸರದಿಂದ ಕಂಡುಬರುವ ಅದ್ಭುತ ನೋಟ. ಪ್ರಕೃತಿಯ ಪ್ರಶಾಂತತೆಯ ಕಾಂತಿಯನ್ನು ನೋಡಿದವನೆ ಧನ್ಯ.

ಚಿತ್ರಕೃಪೆ: PabloEvans

ಮರೆಯಲಾಗದ ಮನಾಲಿ:

ಮರೆಯಲಾಗದ ಮನಾಲಿ:

ಮನಾಲಿಯನ್ನು ದೆಹಲಿ ಹಾಗೂ ಚಂಡೀಗಡ್ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ದೆಹಲಿಯಿಂದ ರಾಷ್ಟ್ರೀಯ ಹೆದ್ದಾರಿ 1 ರ ಮೂಲಕ ಚಂಡೀಗಡ್ ವರೆಗೂ ನಂತರ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 21 ರ ಮೂಲಕ ಬಿಲಾಸಪುರ, ಮಂಡಿ ಹಾಗೂ ಕುಲ್ಲು ಪಟ್ಟಣಗಳ ಮಾರ್ಗವಾಗಿ ಮನಾಲಿಯನ್ನು ತಲುಪಬಹುದಾಗಿದೆ. ಮನಾಲಿಯು ದೆಹಲಿ ಹಾಗೂ ಚಂಡೀಗಡ್ ಗಳಿಂದ ಕ್ರಮವಾಗಿ 592 ಕಿ.ಮೀ ಹಾಗೂ 327 ಕಿ.ಮೀ ಗಳಷ್ಟು ದೂರದಲ್ಲಿದ್ದು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: PabloEvans

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more