Search
  • Follow NativePlanet
Share
» »ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಡುಪಿಯಿಂದ ಕೇವಲ 6 ಕಿ.ಮೀ ದೂರದಲ್ಲಿರುವ ಒಂದು ಸುಂದರವಾದ ಸಮುದ್ರ ತೀರದ ಪಟ್ಟಣ ಮಲ್ಪೆ. ಬೆಂಗಳೂರಿನಿಂದ ಮಾಲ್ಪೆ ಬೀಚ್‍ಗೆ ಸುಮಾರು 407 ಕಿ.ಮೀ ದೂರದಲ್ಲಿದೆ. ಈ ಬೀಚ್ ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ

ಮಾಲ್ಪೆ ಒಂದು ಸುಂದರವಾದ ಹಾಗು ಅದ್ಭುತವಾದ ದ್ವೀಪವಾಗಿದೆ. ದೇಶದಲ್ಲಿಯೇ ಸುರಕ್ಷಿತವಾದ ಕಡಲ ತೀರಗಳಲ್ಲಿ ಇದು ಒಂದು. ಸಂಜೆಯ ಸಮಯದಲ್ಲಿ ಅದ್ಭುತವಾದ ಸೂರ್ಯಾಸ್ತವಾಗುವ ದೃಶ್ಯವನ್ನು ಕಂಡು ಆನಂದಿಸಬಹುದಾಗಿದೆ. ಈ ದೃಶ್ಯ ವೈಭವವನ್ನು ಕಾಣಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಅಷ್ಟಕ್ಕು ಈ ಬೀಚ್ ಇರುವುದು ಕರ್ನಾಟಕದ ಉಡುಪಿಯಲ್ಲಿ. ಭಾರತ ದೇಶವನ್ನು ತನ್ನ ಸಮುದ್ರ ಮಾರ್ಗದಿಂದ ಕಂಡು ಹಿಡಿದ ನಾವಿಕ ವಾಸ್ಕೋಡಿಗಾಮನಿಗೆ, ಈ ಮಾಲ್ಪೆ ಬೀಚ್‍ಗೆ ಸಂಬಂಧವಿದೆ.

ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಡುಪಿಯಿಂದ ಕೇವಲ 6 ಕಿ.ಮೀ ದೂರದಲ್ಲಿರುವ ಒಂದು ಸುಂದರವಾದ ಸಮುದ್ರ ತೀರದ ಪಟ್ಟಣ ಮಲ್ಪೆ. ಬೆಂಗಳೂರಿನಿಂದ ಮಾಲ್ಪೆ ಬೀಚ್‍ಗೆ ಸುಮಾರು 407 ಕಿ.ಮೀ ದೂರದಲ್ಲಿದೆ. ಈ ಬೀಚ್ ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್ ಎಂದು ಪ್ರಖ್ಯಾತಿ ಪಡೆದಿದೆ.

ಪ್ರಸ್ತುತ ಲೇಖನದ ಮೂಲಕ ಈ ಮಾಲ್ಪೆ ಬೀಚ್‍ನ ಬಗ್ಗೆ ಕುತೂಹಲಕಾರಿ ವಿಷಯವನ್ನು ತಿಳಿಯೋಣ.

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ವಾಸ್ಕೋಡಿಗಾಮ ಕಾಲಿಕಾಟ್‍ಗೆ ತೆರಳುವಾಗ ದಟ್ಟವಾಗಿ ಬೆಳೆದ ಕೊಬ್ಬರಿ ತೋಟಗಳು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪ್ರಕೃತಿಯ ಪ್ರದೇಶವನ್ನು ಕಂಡನು. ಇಂತಹ ಸೌಂದರ್ಯಕ್ಕೆ ಮಂತ್ರಮುಗ್ಧನಾದ ವಾಸ್ಗೋಡಿಗಾಮ ಮೇರಿಮಾತ ದ್ವೀಪ ಎಂದು ನಾಮಕರಣ ಮಾಡಿದನು. ಕಾಲ ಉರುಳಿದ ನಂತರ ಪ್ರಸ್ತುತ ಸೆಂಟ್ ಮೆರಿಸ್ ದ್ವೀಪ ಎಂದು ಕರೆಯುತ್ತಾರೆ.

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ಸೆಂಟ್ ಮೆರಿಸ್ ದ್ವೀಪಗಳು ಅಥವಾ ಕೊಬ್ಬರಿ ದ್ವೀಪಗಳು ಇರುವ ಮತ್ತೊಂದು ವಿಷೇಶವೆಂದರೆ ಅಲ್ಲಿರುವ ಸ್ತಂಭಗಳು. ಸ್ತಂಭಗಳಾ ? ಎಂದು ಯೋಚಿಸುತ್ತಿದ್ದೀರಾ? ಸ್ತಂಭಗಳು ಎಂದರೆ ಅಲ್ಲಿನ ಕಲ್ಲಿನ ಶಿಲೆಗಳು. ಈ ಕಲ್ಲಿನ ಶಿಲೆಗಳು ಅಗ್ನಿ ಪರ್ವತಗಳ ಮೂಲಕ ಹೊಡೆದುಕೊಂಡ ನಂತರ ಸೃಷ್ಟಿಯಾಗುವಿಕೆಯೇ ಈ ಕಲ್ಲಿನ ಶಿಲೆಗಳು ಎಂದು ಶಾಸ್ತ್ರಕಾರರು ಹೇಳುತ್ತಾರೆ.

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ಮಾಲ್ಪೆ ಕಡಲತೀರದಿಂದ ಸೆಂಟ್ ಮೆರಿಸ್ ದ್ವೀಪಕ್ಕೆ ಸೇರಿಕೊಳ್ಳಬೇಕಾದರೆ ಫೆರ್ರಿ, ಲಾಂಚಿಯ ಮೂಲಕ ತಲುಪಬೇಕು. ಮುಂಜಾನೆಯಿಂದ ಸಂಜೆಯವರೆವಿಗೂ ಪ್ರವಾಸಿಗರು ಬೀಚ್‍ನಲ್ಲಿ ಅಡ್ಡಾಡಬಹುದು. ಆದರೆ ಸಂಜೆಯಾಗುತ್ತಿದ್ದಂತೆ ಎಲ್ಲಾ ಪ್ರವಾಸಿಗನು ಕೂಡ ಹಿಂದುರುಗಬೇಕು. ರಾತ್ರಿಯ ಸಮಯದಲ್ಲಿ ಅಲ್ಲಿ ತಂಗಲು ಅಧಿಕಾರಿಗಳು ಅನುಮತಿ ನೀಡುವುದಿಲ್ಲ.

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್, ಮಾಲ್ಪೆ ಎಂದು ಖ್ಯಾತಿಯನ್ನು ಪಡೆದಿದೆ. ದಿನದ ಯಾವ ಸಮಯದಲ್ಲಿಯಾದರು ಮೊದಲ 30 ನಿಮಿಷ ಉಚಿತವಾಗಿ ಅಂರ್ತಜಾಲ ಒದಗಿಸುತ್ತದೆ. ಸರ್ಕಾರದಿಂದ ಬಿ.ಎಸ್.ಎನ್.ಎಲ್ ಈ ಸೌಕರ್ಯವನ್ನು ಒದಗಿಸುತ್ತಿದೆ.

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ಇಲ್ಲಿ ದರಿಯಾ ಬಹುದೂರ್ ಘಡ್ ಕೋಟೆ ಮಾಲ್ಪೆ ದ್ವೀಪದಲ್ಲಿನ ಒಂದು ಸುಂದರವಾದ ದ್ವೀಪವಾಗಿದೆ. ಚಿಕ್ಕದಾಗಿದ್ದರು ನೋಡಿ ಆನಂದಿಸಬೇಕಾಗಿರುವ ತಾಣ ಹೆಚ್ಚಾಗಿದೆ. ಮಾಲ್ಪೆಯಿಂದ ಕೋಟೆಗೆ ಸೇರಿಕೊಳ್ಳಲು ಬೋಟ್ ಸೌಕರ್ಯ ಕೂಡ ಇದೆ. ಅದು ಕೂಡ ಕಡಿಮೆ...

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ಮಾಲ್ಪೆ ತನ್ನ ಪ್ರಶಾಂತವಾದ ವಾತಾವರಣದಿಂದಾಗಿ ನೀರಿನಿಂದಾಗಿ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ನೀಲಿಯಾದ ಗಗನಕ್ಕೆ ಕೆಲವು ಚಿಕ್ಕ ಚಿಕ್ಕ ಬೆಟ್ಟಗಳ ಮೇಲೆ ಕುಳಿತು ಮಾಲ್ಪೆ ಬೀಚ್‍ನ ಸೊಬಗನ್ನು ಒಮ್ಮೆಯೇ ಸೊರೆ ಮಾಡಿಕೊಳ್ಳಬಹುದು. ಸೆಂಟ್ ಮೆರಿಸ್ ದ್ವೀಪಗಳಿಗೆ ತೆರಳುವಾಗ ಅಥವಾ ಹಿಂದಿರುಗುವಾಗ ಈ ದ್ವೀಪಗಳನ್ನು ಕಾಣುತ್ತಾ ಆನಂದಿಸಬಹುದಾಗಿದೆ.

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ಇಲ್ಲಿ ವಿಶೇಷವೆನೆಂದರೆ ವಾದಭಂಡೇಶ್ವರ ದೇವಾಲಯವು ಇದೆ. ಮನರಂಜನೆ, ಪ್ರವಾಸ, ಆಧ್ಯಾತ್ಮಿಕ ಎಲ್ಲವೂ ಒಟ್ಟಿಗೆ ನಿಮಗೆ ಇಲ್ಲಿ ದೊರೆಯುತ್ತದೆ. ಈ ದೇವಾಲಯವು ತನ್ನ ಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ವಾದಭಂಡೇಶ್ವರ ದೇವಾಲಯವು ಮಾಲ್ಪೆ ಬೀಚ್‍ಗೆ ಸಮೀಪದಲ್ಲಿದೆ. ಬಲರಾಮಕೃಷ್ಣನಿರುವ ಈ ದೇವಾಲಯವನ್ನು ಅನಂತೇಶ್ವರ ದೇವಾಲಯ ಎಂದು ಕೂಡ ಕರೆಯುತ್ತಾರೆ.

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಮಾಲ್ಪೆ ಸಮೀಪದಲ್ಲಿನ ವಿಮಾನ ನಿಲ್ದಾಣವೆಂದರೆ ಅದು 50 ಕಿ.ಮೀ ದೂರದಲ್ಲಿನ ಮಂಗಳೂರು ವಿಮಾನ ನಿಲ್ದಾಣವಾಗಿದೆ. ಅಲ್ಲಿಂದ ಕ್ಯಾಬ್ ಅಥವಾ ಟ್ಯಾಕ್ಸಿಯ ಮೂಲಕ ಪ್ರಯಾಣಿಸಿ ಮಾಲ್ಪೆ ತಲುಪಬಹುದಾಗಿದೆ.

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ

ಮಾಲ್ಪೆಗೆ ನೇರವಾದ ರೈಲ್ವೆ ನಿಲ್ದಾಣವಿಲ್ಲ. ಬದಲಾಗಿ ಸಮೀಪದಲ್ಲಿನ 7 ಕಿ.ಮೀ ದೂರದಲ್ಲಿ ಉಡುಪಿ ರೈಲ್ವೆ ಸ್ಟೇಷನ್ ಇದೆ. ಇದು ದೇಶದ ಎಲ್ಲಾ ಪ್ರಧಾನ ನಗರಗಳ ರೈಲ್ವೆ ಇಲ್ಲಿ ಸಂಧಿಸುತ್ತದೆ.

ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ ಮಾಲ್ಪೆ ಕಡಲ ತೀರಕ್ಕೆ ತಲುಪಲು ಉಡುಪಿ, ಮಂಗಳೂರಿನಿಂದ ಮಾಲ್ಪೆಗೆ ನೇರವಾಗಿ ಬಸ್ಸುಗಳ ಸೌಕರ್ಯವಿದೆ. ಉಡುಪಿಯಿಂದ ಆಟೋ ರೀಕ್ಷಾದ ಮೂಲಕ ಮಾಲ್ಪೆ ಬೀಚ್‍ಗೆ ತೆರಳಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X