Search
  • Follow NativePlanet
Share
» »ಈ ದೇವಾಲಯದಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಹೊಡೆಯುತ್ತಾರೆ ಯಾಕೆ?

ಈ ದೇವಾಲಯದಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಹೊಡೆಯುತ್ತಾರೆ ಯಾಕೆ?

ನಮ್ಮ ದೇಶದಲ್ಲಿ ಎಷ್ಟೆಲ್ಲಾ ವಿಚಿತ್ರ ಆಚರಣೆಗಳಿವೆಯಲ್ಲವೆ. ಕೆಲವೊಮ್ಮೆ ಆ ಆಚರಣೆಗಳು ಭಯಾನಕ ಹಾಗೂ ಜೀವಕ್ಕೆ ಹಾನಿಯುಂಟು ಮಾಡುವಂತವುಗಳೂ ಆಗಿರುತ್ತವೆ. ಆದರೆ ಜನರು ತಮ್ಮ ಭಕ್ತಿಯನ್ನು ತೋರಿಸುವ ಸಲುವಾಗಿ ಕಷ್ಟಕರ ಆಚರಣೆಗಳನ್ನು ನಡೆಸುತ್ತಾರೆ. ಅಂತಹ ಆಚರಣೆಗಳಲ್ಲಿ ಹಲವಾರು ವಿಧಗಳಿವೆ. ಇಂದು ನಾವು ಒಂದು ವಿಶೇಷ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ. ಅಲ್ಲಿನ ಆಚರಣೆ ಬಗ್ಗೆ ಕೇಳಿದರೆ ನೀವು ಆಶ್ಚರ್ಯ ಚಕಿತರಾಗುವುದು ಖಂಡಿತ. ಅದುವೇ ತಲೆಯಲ್ಲಿ ತೆಂಗಿನ ಕಾಯಿ ಹೊಡೆಯುವುದು.

ತಲೆ ಮೇಲೆ ತೆಂಗಿನಕಾಯಿ ಹೊಡೆಯುವುದು

ತಲೆ ಮೇಲೆ ತೆಂಗಿನಕಾಯಿ ಹೊಡೆಯುವುದು

ಸಾಮಾನ್ಯವಾಗಿ ನೀವೆಲ್ಲಾ ನೋಡಿರ್ತೀರಿ, ದೇವಸ್ಥಾನದಲ್ಲಿ ತೆಂಗಿನಕಾಯಿ ನೆಲಕ್ಕೆ ಹೊಡೆಯುವಾಗ ಎಷ್ಟು ರಭಸವಾಗಿ ಹೊಡೆಯುತ್ತಾರೆ. ಹೊಡೆದ ರಭಸಕ್ಕೆ ತೆಂಗಿನಕಾಯಿ ಎರಡು ಹೋಳಾಗಿ ಬಿಡುತ್ತದೆ. ಅದರ ಶಬ್ಧ ಕೇಳುವಾಗಲೇ ಮೈ ಜುಮ್ಮೆನ್ನುತ್ತದೆ. ಇನ್ನು ತಲೆ ಮೇಲೆ ತೆಂಗಿನಕಾಯಿ ಹೊಡೆದಾಗ ಪ್ರಾಣವೇ ಹೋಗಿ ಬಿಡುತ್ತದೆಯೇನೋ ಅನ್ನಿಸೋದು ಸಹಜ.

ನೀವು ಇಷ್ಟಪಟ್ಟವರನ್ನೇ ಬಾಳ ಸಂಗಾತಿಯನ್ನಾಗಿ ಕರುಣಿಸುವ ದೇವಾಲಯ ಇದು !ನೀವು ಇಷ್ಟಪಟ್ಟವರನ್ನೇ ಬಾಳ ಸಂಗಾತಿಯನ್ನಾಗಿ ಕರುಣಿಸುವ ದೇವಾಲಯ ಇದು !

ಯಾವುದು ಆ ದೇವಾಲಯ

ಯಾವುದು ಆ ದೇವಾಲಯ

ಈ ವಿಶೇಷ ದೇವಾಲಯವನ್ನು ಮಹಾಲಕ್ಷ್ಮಿ ದೇವಸ್ಥಾನ ಎನ್ನುತ್ತಾರೆ. ಇದು ತಮಿಳುನಾಡಿನ ಕರೂರ್ ಜಿಲ್ಲೆಯ ಕೃಷ್ಣರಾಪುರಂ ತಾಲೂಕಿನ ಮೆಟ್ಟು ಮಹಾಧಾನಪುರಂ ನಲ್ಲಿದೆ.

ಏನೀ ಆಚರಣೆ

ಏನೀ ಆಚರಣೆ

ಇಲ್ಲಿಗೆ ಬರುವ ಭಕ್ತರು ತಲೆಯಲ್ಲಿ ತೆಂಗಿನಕಾಯಿ ಹೊಡೆಯುತ್ತಾರೆ. ದೇವಸ್ಥಾನದ ಅರ್ಚಕರು ಇಲ್ಲಿಗೆ ಬರುವ ಭಕ್ತರ ತಲೆಗೆ ತೆಂಗಿನಕಾಯಿ ಹೊಡೆಯುತ್ತಾರೆ. ಭಕ್ತರು ದೇವಾಲಯದ ಮುಂಭಾಗದಲ್ಲಿ ಒಟ್ಟುಗೂಡುತ್ತಾರೆ ಮತ್ತು ಪ್ರತಿ ನೋಂದಾಯಿತ ಭಕ್ತರ ತಲೆಯ ಮೇಲೆ ಒಬ್ಬ ಅರ್ಚಕ ತೆಂಗಿನ ಕಾಯಿಯನ್ನು ಹೊಡೆಯುತ್ತಾರೆ. ತೆಂಗಿನಕಾಯಿ ತುಂಡುಗಳಾಗಿ ಮುರಿದಾಗ, ಕೆಲವು ಭಕ್ತರು ತಮ್ಮ ತಲೆಗೆ ಸವರುತ್ತಾರೆ. ಇನ್ನೂ ಕೆಲವರು ಅದನ್ನು ಪ್ರಸಾದದ ರೂಪದಲ್ಲಿ ಕೊಂಡೊಯ್ಯುತ್ತಾರೆ.

ಈ ಜೈಲಿನಲ್ಲಿ ಕೈದಿಗಳಿಗೆ ಅಪಾರ್ಟ್‌ಮೆಂಟ್ ಕೊಡ್ತಾರೆ, ಹೆಂಡ್ತಿ ಮಕ್ಕಳ ಜೊತೆ ವಾಸಿಸಬಹುದುಈ ಜೈಲಿನಲ್ಲಿ ಕೈದಿಗಳಿಗೆ ಅಪಾರ್ಟ್‌ಮೆಂಟ್ ಕೊಡ್ತಾರೆ, ಹೆಂಡ್ತಿ ಮಕ್ಕಳ ಜೊತೆ ವಾಸಿಸಬಹುದು

 ಯಾಕಾಗಿ ಈ ಹರಕೆ

ಯಾಕಾಗಿ ಈ ಹರಕೆ

ಮದುವೆಯ ಮೈತ್ರಿಗಳಲ್ಲಿ ಅಡೆತಡೆಗಳಿದ್ದರೆ, ಸಂತಾನಪ್ರಾಪ್ತಿಗಾಗಿ, ಒಳ್ಳೆಯ ಉದ್ಯೋಗಕ್ಕಾಗಿ, ಶಿಕ್ಷಣದಲ್ಲಿ ಸಾಧನೆಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ. ಈ ಮಹಾಲಕ್ಷ್ಮಿಯನ್ನು ಪ್ರಾರ್ಥಿಸುತ್ತಾರೆ.

ವಾರ್ಷಿಕ ಆದಿ ಉತ್ಸವ

ವಾರ್ಷಿಕ ಆದಿ ಉತ್ಸವ

ಮೆಟ್ಟು ಮಹಡನಪುರಂನಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಆದಿ ಉತ್ಸವವನ್ನು 'ಆಡಿಪೆರುಕು ದಿನ' ಅಂದರೆ ಆದಿ ತಿಂಗಳ 18 ನೇ ದಿನ ಮತ್ತು ಆದಿ ತಿಂಗಳ 19 ನೇ ದಿನದಂದು ಆಚರಿಸಲಾಗುತ್ತದೆ.

ತೆಂಗಿನಕಾಯಿ ಹೊಡೆಯುವುದು

ತೆಂಗಿನಕಾಯಿ ಹೊಡೆಯುವುದು

ಈ ಉತ್ಸವದಂದು ಭಕ್ತರು ತಮ್ಮ ಬೇಡಿಕೆ ಈಡೇರಿದ್ದಲ್ಲಿ ತೆಂಗಿನಕಾಯಿ ಹೊಡೆಸುವ ಹರಕೆ ಕಟ್ಟುತ್ತಾರೆ. ಅದರಂತೆಯೇ ಉತ್ಸದಂದು ದೇವಸ್ಥಾನಕ್ಕೆ ಬಂದು ಅರ್ಚಕರ ಕೈಯಿಂದ ತಮ್ಮ ತಲೆಗೆ ತೆಂಗಿನ ಕಾಯಿ ಒಡೆಸುತ್ತಾರೆ.

ಈ ಊರಲ್ಲಿ ಜನರು ಕೋಳಿಯನ್ನು ಸಾಕೋದಿಲ್ಲ, ಮಂಚದಲ್ಲಿ ಮಲಗೋದಿಲ್ಲ, ಇಲ್ಲಿ ಎಲ್ಲವೂ ಮೈಲಾರಲಿಂಗ!ಈ ಊರಲ್ಲಿ ಜನರು ಕೋಳಿಯನ್ನು ಸಾಕೋದಿಲ್ಲ, ಮಂಚದಲ್ಲಿ ಮಲಗೋದಿಲ್ಲ, ಇಲ್ಲಿ ಎಲ್ಲವೂ ಮೈಲಾರಲಿಂಗ!

ರಕ್ತಸ್ರಾವವೂ ಆಗುತ್ತದೆ

ರಕ್ತಸ್ರಾವವೂ ಆಗುತ್ತದೆ

ಈ ಸಾಂಪ್ರದಾಯಿಕ ವಾರ್ಷಿಕ ಧಾರ್ಮಿಕ ಆಚರಣೆಯಲ್ಲಿ ತಮಿಳು ನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಹಲವು ಭಾಗಗಳಿಂದ ಸಾವಿರಾರು ಜನರು ಈ ವಾರ್ಷಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವೊಮ್ಮೆ ಕೆಲವು ಭಕ್ತರ ತಲೆಯಿಂದ ರಕ್ತಸ್ರಾವವೂ ಆಗುತ್ತದೆ. ಅದಕ್ಕೆ ಬೂದಿಯನ್ನು ಹಚ್ಚುತ್ತಾರೆ.

ತೆಂಗಿನಕಾಯಿ ರೂಪದ ಕಲ್ಲು

ತೆಂಗಿನಕಾಯಿ ರೂಪದ ಕಲ್ಲು

ಕೆಲವು ವರ್ಷಗಳ ಹಿಂದೆ ದೇವಸ್ಥಾನದ ಗ್ರಾಮಸ್ಥರು ದೇವಾಲಯದ ಸುತ್ತಮುತ್ತಲಿನ ಸಂಯುಕ್ತ ಗೋಡೆಯನ್ನು ನಿರ್ಮಿಸಲು ಬಯಸಿದ್ದರು. ಗುರುತಿಸಲ್ಪಟ್ಟ ಸ್ಥಳವನ್ನು ಸ್ವಚ್ಛಗೊಳಿಸಲಾಯಿತು ಮತ್ತು ಅಗೆಯುವ ವೇಳೆ ಅವರು ತೆಂಗಿನ ಆಕಾರದ 187 ಕಲ್ಲುಗಳನ್ನು ಕಂಡುಕೊಂಡರು.

ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!

ಮಹಾಲಕ್ಷ್ಮೀ ಆರಾಧನೆ

ಮಹಾಲಕ್ಷ್ಮೀ ಆರಾಧನೆ

ಈ ತೆಂಗಿನಕಾಯಿ ರೂಪದ ಕಲ್ಲನ್ನು ಗಾಜಿನಲ್ಲಿ ಸಂರಕ್ಷಿಸಲಾಗಿದ್ದು, ಭಕ್ತರ ವೀಕ್ಷಣೆಗಾಗಿ ಇರಿಸಲಾಗಿದೆ. ಸಂಪತ್ತಿನ ದೇವತೆಯಾದ ಮಹಾಲಕ್ಷ್ಮೀ ದೇವಿಯನ್ನು ಪೂಜಿಸುವವರಿಗೆ ಸಮೃದ್ಧತೆ, ಸಂತೋಷ, ಸೌಂದರ್ಯ ಮತ್ತು ಪ್ರೀತಿಯನ್ನು ಲಭಿಸುತ್ತದೆ ಎನ್ನುವುದು ಜನರ ನಂಬಿಕೆಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X