Search
  • Follow NativePlanet
Share
» »ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಕೋಟಿದೇವ ಸಮಫ್ರಭ, ಸೃಷ್ಟಿ ಕರ್ತನು, ಅರ್ಥನಾರೀಶ್ವರ, ಅದ್ವೈತ ಭಾಸ್ಕರನು, ಪಂಚ ಭೂತಾತ್ಮಕರನು, ಸಜ್ಜನ ಶುಭಕಂರನು ಹೀಗೆ ಎಷ್ಟೇ ಹೋಗಳಿದರೂ ಸಾಲದು ಪದಗಳು. ಹಾಗಾಗಿಯೇ ಎಷ್ಟೋ ಕೋಟಿ ವರ್ಷಗಳು, ಕೋಟಿಗಟ್ಟಲೇ ಭಕ್ತರ ಹೃದಯದಲ್ಲಿ ನೆಲೆಸಿದ್ದಾನೆ ಮಹೇಶ

ಕೋಟಿದೇವ ಸಮಫ್ರಭ, ಸೃಷ್ಟಿ ಕರ್ತನು, ಅರ್ಥನಾರೀಶ್ವರ, ಅದ್ವೈತ ಭಾಸ್ಕರನು, ಪಂಚ ಭೂತಾತ್ಮಕರನು, ಸಜ್ಜನ ಶುಭಕಂರನು ಹೀಗೆ ಎಷ್ಟೇ ಹೋಗಳಿದರೂ ಸಾಲದು ಪದಗಳು. ಹಾಗಾಗಿಯೇ ಎಷ್ಟೋ ಕೋಟಿ ವರ್ಷಗಳು, ಕೋಟಿಗಟ್ಟಲೇ ಭಕ್ತರ ಹೃದಯದಲ್ಲಿ ನೆಲೆಸಿದ್ದಾನೆ ಮಹೇಶ್ವರನು. ಆತನು ನೆಲೆಸಿದ ಸ್ಥಳವೆಲ್ಲಾ ಪುಣ್ಯಸ್ಥಳವಾಗಿವೆ.

ಶಿವನಿಗೆ ಮುಡಿಪಾದ ಹಲವಾರು ದೇವಾಲಯಗಳು ನಮ್ಮ ಭಾರತ ದೇಶದಲ್ಲಿವೆ. ಅವುಗಳಲ್ಲಿ ದ್ವಾದಶ ಜ್ಯೋತಿರ್‍ಲಿಂಗಗಳನ್ನು ಭಕ್ತಿಯಿಂದ ಭಕ್ತರು ಆರಾಧಿಸುತ್ತಾರೆ. ಆ ದ್ವಾದಶ ಜ್ಯೋತಿರ್‍ಲಿಂಗಗಳು ನಮ್ಮ ಭಾರತ ದೇಶದ ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿವೆ. ಅವುಗಳಲ್ಲಿ ಅತ್ಯಂತ ವಿಭಿನ್ನವಾದ ಆಚಾರ-ವಿಚಾರಗಳನ್ನು ಹೊಂದಿರುವ ಹಾಗು ಇಂದಿಗೂ ರಹಸ್ಯವಾಗಿಯೇ ಉಳಿಸಿರುವ ಒಂದು ಮಹಿಮಾನ್ವಿತವಾದ ದೇವಾಲಯವಿದೆ. ಆ ದೇವಾಲಯದಲ್ಲಿ ಸತ್ತವರ ಭೂದಿಯನ್ನು ದೇವರಿಗೆ ಅಭಿಷೇಕವನ್ನು ಮಾಡುತ್ತಾರೆ. ಇದು ನಿಜವೇ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಆ ದೇವಾಲಯ ಯಾವುದು? ಆ ದೇವಾಲಯ ಎಲ್ಲಿದೆ ಎಂಬ ಹಲವಾರು ಪ್ರಶ್ನೆಗೆ ಉತ್ತರ ಲೇಖನದ ಮೂಲಕ ಮಾಹಿತಿಯನ್ನು ಪಡೆಯಿರಿ.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಆ ಮಹಿಮಾನ್ವಿತವಾದ ದೇವಾಲಯವೇ ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ಜ್ಯೋತಿರ್‍ಲಿಂಗ. ಇದು ಮಧ್ಯ ಪ್ರದೇಶದಲ್ಲಿನ ಉಜ್ಜಯಿನಿ ನಗರದಲ್ಲಿನ ಮಹಾಕಾಳೇಶ್ವರ ದೇವಾಲಯ. ಈ ಜ್ಯೋತಿರ್‍ಲಿಂಗವು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ದೇವಾಲಯವು ಭೂಮಿ ಮೇಲೆ ಇರುವ 12 ಜ್ಯೋತಿರ್‍ಲಿಂಗಗಳಲ್ಲಿ ಒಂದಾಗಿ ಕೆಲವು ಲಕ್ಷ ವರ್ಷಗಳಿಂದ ಪೂಜೆಗಳನ್ನು ಇಲ್ಲಿನ ಸ್ವಾಮಿಯು ಮಾಡಿಕೊಳ್ಳುತ್ತಿದ್ದಾನೆ ಎಂಬುದು ಭಕ್ತರ ವಿಶ್ವಾಸ.

ಈ ಸ್ವಾಮಿಯನ್ನು ದಕ್ಷಿಣ ಮೂರ್ತಿ ಎಂದು ಕರೆಯಲು ಕಾರಣವೇನು ಎಂದರೆ? ಈ ಶಿವಲಿಂಗದ ಮುಖವು ದಕ್ಷಿಣ ದಿಕ್ಕಿಗೆ ಇದೆ. ಈ ವಿಲಕ್ಷಣವಿರುವ ಮೂರ್ತಿಯು ಬೇರೆ ಯಾವ ಶಿವಾಲಯದಲ್ಲಿಯೂ ಇಲ್ಲ. ಈ ದೇವಾಲಯದ ಗರ್ಭಗುಡಿಯಲ್ಲಿನ ಪೂರ್ವ, ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ಗಣಪತಿ, ಪಾರ್ವತಿ, ಸುಬ್ರಹ್ಮಣ್ಯ ಸ್ವಾಮಿಯ ಮೂರ್ತಿಗಳಿವೆ.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಹಾಗೆಯೇ ಈ ದೇವಾಲಯದಲ್ಲಿ ದಕ್ಷಿಣ ದಿಕ್ಕಿಗೆ ನಂದಿಯು ನೆಲೆಸಿದ್ದಾನೆ. ಉಜ್ಜಯಿನಿಯಲ್ಲಿ ಒಟ್ಟು 3 ಶಿವಲಿಂಗಗಳಿವೆ. ಈ ಮೂರು ಶಿವಲಿಂಗಗಳು ಮೂರು ಅಂತಸ್ತಿನಲ್ಲಿ ಪ್ರತಿಷ್ಟಾಪಿಸಿದ್ದಾರೆ. ಅವುಗಳೆಂದರೆ ಮೊದಲನೇ ಅಂತಸ್ತಿನಲ್ಲಿ ಮಹಾಕಾಳ ಲಿಂಗ, ಎರಡನೇ ಅಂತಸ್ತಿನಲ್ಲಿ ಓಂ ಕಾರ ಲಿಂಗ, ಮೂರನೇ ಅಂತಸ್ತಿನಲ್ಲಿ ನಾಗ ಚಂದ್ರೇಶ್ವರ ಲಿಂಗಗಳು.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಈ ಮೂರು ಲಿಂಗಗಳಲ್ಲಿ ನಾಗಚಂದ್ರೇಶ್ವರ ಲಿಂಗವು ಕೇವಲ ನಾಗ ಪಂಚಮಿಯಂದು ಮಾತ್ರವೇ ಭಕ್ತರ ದರ್ಶನಕ್ಕೆ ನೀಡಲಾಗುತ್ತದೆ. ಆ ಸಮಯದಲ್ಲಿ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಈ ದೇವಾಲಯವು ಹಲವಾರು ವಿಶೇಷಗಳನ್ನು ಹೊಂದಿದೆ. ಅವುಗಳೆಂದರೆ....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಅಲ್ಲಿನ ಪ್ರಸಾದ. ಸಾಧಾರಣವಾಗಿ ಎಲ್ಲಿಯಾದರೂ ದೇವರಿಗೆ ಇಟ್ಟಿರುವ ಪ್ರಸಾದವನ್ನು ಬೇರೊಂದು ದೇವರಿಗೆ ಇಡುವುದಿಲ್ಲ. ಆದರೆ ಈ ದೇವಾಲಯದಲ್ಲಿನ ಪ್ರಸಾದವನ್ನು ಬೇರೆಯಾವುದೇ ದೇವರಿಗೆ ಪ್ರಸಾದವಾಗಿ ಸರ್ಮಪಿಸಬಹುದು. ಈ ದೇವಾಲಯದಲ್ಲಿ ಯುಗ-ಯುಗಗಳಿಂದ ಅದ್ಭುತವಾದ ಸಂಘಟನೆ ನಡೆಯುತ್ತದೆ. ಅದೆನೆಂದರೆ....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಅದೆನೆಂದರೆ ಪ್ರತಿ ವರ್ಷ ಮಳೆಗಾಲಕ್ಕಿಂತ ಮುಂದೆ ಪರ್ಜಾನ್ಯ ಅನುಷ್ಟಾನ ಎಂಬ ಒಂದು ಅನುಷ್ಟಾನವನ್ನು ಮಾಡುತ್ತಾರೆ. ಆದರೆ ಕಾರ್ಯಕ್ರಮ ಪೂರ್ತಿಯಾದ ಕ್ಷಣದಲ್ಲಿಯೇ ಆಕಾಶದಲ್ಲಿ ಕಪ್ಪಗಿನ ವಾತಾವರಣ ಉಂಟಾಗಿ, ಭಾರೀ ಮಳೆ ಉಂಟಾಗುತ್ತದೆ. ಈ ಮಹಾ ಅದ್ಭುತವು ಹೇಗೆ ನಡೆಯುತ್ತದೆ ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಈ ದೇವಾಲಯದಲ್ಲಿನ ಮಹಕಾಳೇಶ್ವರ ಲಿಂಗದ ಕೆಳಗೆ "ಶಂಖ ಯಂತ್ರ" ಎಂಬುದು ಇದೆ ಎಂದೂ, ಆ ಯಂತ್ರವು ಅತ್ಯಂತ ಶಕ್ತಿಯನ್ನು ಹೊಂದಿದೆ ಎಂದು ಹೇಳುತ್ತಾರೆ. ಹಾಗಾಗಿಯೇ ಶಿವನ ಅರ್ಚನೆ ಮಾಡಿದ ನಂತರ ಶಂಖವನ್ನು ಮೊಳಗಿಸುತ್ತಾರೆ. ಆ ಸಮಯದಲ್ಲಿ ಯಾರಾದರೂ ಮಹಾ ಕಾಳೇಶ್ವರನ ದರ್ಶನ ಮಾಡಿಕೊಂಡರೆ ವಿಜಯ ಅವರ ಹಿಂದೆಯೇ ಇರುತ್ತದೆ ಎಂದು ಭಕ್ತರ ದೃಢವಾದ ನಂಬಿಕೆ.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಈ ದೇವಾಲಯದಲ್ಲಿ ನಡೆಯುವ ಮಹತ್ತರವಾದ ಕಾರ್ಯವೆನೆಂದರೆ "ಭಸ್ಮ ಹಾರತಿ". ಈ ದೇವಾಲಯದಲ್ಲಿ ಭಸ್ಮ ಹಾರತಿ ಎಂಬ ಮಂದಿರವಿದೆ. ಇದರಲ್ಲಿಯೇ ಈ ಕಾರ್ಯವನ್ನು ನಿರ್ವಹಿಸುತ್ತಾರೆ. ಭಸ್ಮ ಪ್ರೀಯನೆಂದು ಕರೆಯುವ ಆ ಪರಮೇಶ್ವರನಿಗೆ ಭಸ್ಮದಿಂದ ಅಭಿಷೇಕವನ್ನು ಮಾಡುತ್ತಾರೆ.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಪ್ರತಿದಿನ ಮುಂಜಾನೆ 4 ಗಂಟೆಗೆ ಸರಿಯಾಗಿ ಈ ಭಸ್ಮ ಹಾರತಿ ಅಥವಾ ಭಸ್ಮ ಅಭಿಷೇಕವನ್ನು ಮಾಡುತ್ತಾರೆ. ಈ ಅಭಿಷೇಕವು 2 ರೀತಿಯಲ್ಲಿರುತ್ತದೆ. ಮೊದಲನೆಯದು ಸಗಣಿಯನ್ನು ಒಣಗಿಸಿ ಅದನ್ನು ಬೂದಿಮಾಡಿ ಸ್ವಾಮಿಗೆ ಭಸ್ಮ ಹಾರತಿ ಮಾಡುತ್ತಾರೆ. ಹಾರತಿ ಮಾಡುವ ಸಮಯದಲ್ಲಿ ಬಿಳಿ ವಸ್ತ್ರದಲ್ಲಿ ಕಟ್ಟಿ, ಶಿವನ ಮುಖದ ಮೇಲೆ ಕೂಡ ಬಿಳಿ ಬಟ್ಟೆಯನ್ನು ಹೊದಿಸಿ, ಆ ಭಸ್ಮದ ಮೂಟೆಯನ್ನು ಲಿಂಗದ ಸುತ್ತ ಸುತ್ತುತ್ತಾ ಭಸ್ಮಾರತಿ ಮಾಡುತ್ತಾರೆ.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಆ ಭಸ್ಮಾರತಿ ಮಾಡುವುದನ್ನು ನೋಡಲು 2 ಕಣ್ಣು ಸಾಲದು. ಆ ಸಮಯದಲ್ಲಿ ನಮಗೆ ತಿಳಿಯದೇ ಅಲೌಕಿಕ ಅನುಭೂತಿ ಉಂಟು ಮಾಡುತ್ತದೆ ಎಂದು ಭಕ್ತರು ಹೇಳುತ್ತಾರೆ. ಈ ಭಸ್ಮಾರತಿ ಮಾಡುವಾಗ ಕೆಲವರ ಸಮ್ಮುಖದಲ್ಲಿ ನಡೆಯುತ್ತದೆ. ಯಾವುದೇ ಕಾರಣಕ್ಕೂ ಸ್ತ್ರೀಯರು ಈ ಭಸ್ಮಾರತಿಯನ್ನು ನೋಡುವ ಹಾಗಿಲ್ಲ.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಆ ಭಸ್ಮಾರತಿ ಮಾಡುವ ಸಮಯದಲ್ಲಿ ಕೇವಲ ಪುರುಷರಿಗೆ ಮಾತ್ರ ಅನುಮತಿಯನ್ನು ನೀಡಲಾಗುತ್ತದೆ. ನಿಮಗೆ ತಿಳಿದಿರಬಹುದು. ಶಿವನನ್ನು ಸ್ಮಶಾನವಾಸಿಯಾಗಿ ಕೂಡ ಕರೆಯುತ್ತಾರೆ. ಹಾಗಾಗಿ ಆಗಲೇ ಬೆಂಕಿ ಇಟ್ಟ ಶವದ ಭಸ್ಮವನ್ನು ತೆಗೆದುಕೊಂಡು ಹೋಗಿ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ. ಈ ಕಾರ್ಯ 10 ಮಂದಿ ನಾಗಸಾಧುಗಳ ಕೈಯಲ್ಲಿ ಮಾತ್ರ ನಡೆಯುತ್ತದೆ.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಈ ಭಸ್ಮ ಹಾರತಿಯಿಂದಾಗಿ ದೇವಾಲಯವನ್ನು ಮಹಾಸ್ಮಶಾನ ಎಂದೂ ಕೂಡ ಕರೆಯುತ್ತಾರೆ. ಈ ಪವಿತ್ರವಾದ ಕಾರ್ಯವನ್ನು ಯಾರು ಮಾಡುತ್ತಾರೆಯೋ ಅಂಥಹವರಿಗೆ ಮರುಜನ್ಮ ಇರುವುದಿಲ್ಲ ಎಂದು ಹೇಳುತ್ತಾರೆ. ಪುರಾಣ ಗ್ರಂಥಗಳ ಪ್ರಕಾರ, ಬ್ರಹ್ಮನು, ಶಿವನನ್ನು ಇಲ್ಲಿ ನೆಲೆಸಿ ಭಕ್ತರನ್ನು ಹರಸು ಎಂದು ಕೋರಿದ ಕಾರಣಕ್ಕೆ ಈ ಪ್ರದೇಶದಲ್ಲಿ ಸ್ವಯಂ ಭೂವಾಗಿ ಮಹಾಶಿವನು ನೆಲೆಸಿದನು ಎಂದು ಒಂದು ಪುರಾಣ ಕಥೆ ಇದೆ.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಈ ಉಜ್ಜಯಿನಿ ನಗರವನ್ನು ಅವಂತಿಕ ನಗರ ಎಂದು ಕೂಡ ಕರೆಯುತ್ತಿದ್ದರಂತೆ. ಪೂರ್ವದಲ್ಲಿ ಈ ಪ್ರದೇಶವನ್ನು ಚಂದ್ರಸೇನ ಎಂಬ ರಾಜನು ಆಳ್ವಿಕೆ ನಡೆಸುತ್ತಿದ್ದನಂತೆ. ಆತ ಮಹಾಶಿವ ಭಕ್ತನಾದ್ದರಿಂದ ಹೆಚ್ಚು ಸಮಯ ಈ ದೇವಾಲಯದಲ್ಲಿ ಶಿವನಾಮ ಸ್ಮರಣೆ ಮಾಡುತ್ತಾ ಕಾಲ ಕಳೆಯುತ್ತಿದ್ದನಂತೆ.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಆ ರಾಜ ರಾಜ್ಯ ಪಾಲನೆ ಸರಿಯಾಗಿ ಮಾಡುತ್ತಿಲ್ಲ ಎಂದು ಶತ್ರು ರಾಜರು ಚಂದ್ರಸೇನನು ಶಿವ ಮಂದಿರದಲ್ಲಿ ಇದ್ದ ಸಮಯವನ್ನು ನೋಡಿ, ಆ ರಾಜ್ಯದ ಮೇಲೆ ದಂಡೆತ್ತಿ ಬಂದು ಪೂರ್ತಿ ರಾಜ್ಯವನ್ನು ವಶಪಡಿಸಿಕೊಂಡರಂತೆ. ಆಗ ಅಲ್ಲಿದ್ದ ಶಿವಭಕ್ತರನ್ನು ಶತ್ರು ಸೈನ್ಯ ಸಂಹಾರ ಮಾಡುವ ಸಮಯದಲ್ಲಿ ಶಿವನು ಸ್ವಯಂ ಆಗಿ ಮಹಾಕಾಳನ ಅವತಾರವನ್ನು ಧರಿಸಿ ಶತ್ರು ಸೈನ್ಯವನ್ನು ಸಂಹಾರ ಮಾಡಿ ಚಂದ್ರಸೇನನ ಜೊತೆಗೆ ತನ್ನ ಭಕ್ತರನ್ನು ಕಾಪಾಡಿದನು ಎಂದು ಹೇಳಲಾಗುತ್ತಿದೆ.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಅಂದಿನಿಂದ ಆ ಸ್ವಾಮಿಯು ಮಹಾಕಾಳನಾಗಿ ಈ ದೇವಾಲಯದಲ್ಲಿ ನೆಲೆಸಿದ್ದಾನೆ ಎನ್ನಲಾಗುತ್ತಿದೆ. ಈ ದೇವಾಲಯವು ಅಷ್ಟಾದಶ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ಇಲ್ಲಿ ಸಾಕ್ಷಾತ್ ಪಾರ್ವತಿ ದೇವಿಯು ಕಾಳಿ ಮಾತೆಯಾಗಿ ಪೂಜೆಗಳನ್ನು ಮಾಡಿಕೊಳ್ಳುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ. ಮಹೇಶ್ವರನು ಸ್ವಯಂ ಭೂವಾಗಿ ಜ್ಯೋತಿರ್ ಲಿಂಗವಾಗಿ ನೆಲೆಸಿ ಮಹಾಕಾಳನಾಗಿ ಭಕ್ತರಿಗೆ ದರ್ಶನ ಭಾಗ್ಯವನ್ನು ನೀಡುತ್ತಿದ್ದಾನೆ.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಮಹಾಕಾಳಿದಾಸ ಮತ್ತು ಭೋಜರಾಜ ಈ ಪ್ರದೇಶಕ್ಕೆ ಸೇರಿದವರು ಎಂದು ಸ್ಥಳ ಪುರಾಣವು ಹೇಳುತ್ತದೆ. ಆದರೆ ಇಂದು ನಾವು ನೋಡುತ್ತಿರುವ ದೇವಾಲಯ ಪೂರ್ವದಲ್ಲಿದ್ದ ದೇವಾಲಯವಲ್ಲ. ಪೂರ್ವದಲ್ಲಿ ಭಾರತ ದೇಶದ ಮೊಗಲರ ಆಳ್ವಿಕೆಯಲ್ಲಿತ್ತು. 1231 ಕಾಲದಲ್ಲಿ ಈ ಪ್ರದೇಶವನ್ನು ಆಕ್ರಮಣ ಮಾಡಿಕೊಂಡ ಸುಲ್ತಾನ್ ಶಂಷುದ್ದೀನ್ ಎಂಬ ರಾಜ ಈ ದೇವಾಲಯವನ್ನು 50 ಭಾಗದಷ್ಟು ನಾಶ ಮಾಡಿದನು ಎಂದು ಚರಿತ್ರೆ ಹೇಳುತ್ತದೆ.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ತದನಂತರ ಕ್ರಿ. ಶ 1736 ರಲ್ಲಿ ಶ್ರೀಮಂತ್ ರಾಣೋಜಿರಾವ್ ಸಿಂಡೇ ಮಹಾರಾಜ್, ಪೇಶ್ವೆ ಬಾಜಿ ರಾವ್, ಛತ್ರಪತಿ ಶಾನು ಮಹಾರಾಜರು ಈ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದರು. ಅಂದಿನಿಂದ ರಾಜ ಕುಟುಂಬ ಅನೇಕ ಕಾಲದಿಂದ ಅಧೀನದಲ್ಲಿತ್ತು. ಸ್ವಾತಂತ್ರ್ಯ ಬಂದ ನಂತರ ಉಜ್ಜಯಿನಿ ಸರ್ಕಾರದ ಕೈಗೆ ಸೇರಿತು.

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಶವದ ಭಸ್ಮದಿಂದ ಅಭಿಷೇಕ ಮಾಡುತ್ತಾರೆ ಈ ಸ್ವಾಮಿಯನ್ನು....

ಮೊಗಲ ಕಾಲದಲ್ಲಿದ್ದ ಈ ದೇವಾಲಯದಲ್ಲಿ ಸಾಕಷ್ಟು ನಿಧಿಗಳು ಇದ್ದವು ಎಂದೂ, ಭಾರತೀಯ ಕಲೆಯನ್ನು ಹೊಂದಿದ್ದ ವಾಸ್ತುಶಿಲ್ಪಗಳು ಇದ್ದವೆಂದೂ ಅವೆಲ್ಲಾ ನಾಶವಾಗಿದೆ ಎಂದು ಚರಿತ್ರೆಕಾರರು ಹೇಳುತ್ತಾರೆ.

ತೆರಳುವ ಬಗೆ ಹೇಗೆ?

ತೆರಳುವ ಬಗೆ ಹೇಗೆ?

ವಿಮಾನ ಮಾರ್ಗದ ಮೂಲಕ: ಈ ಮಹಿಮಾನ್ವಿತವಾದ ದೇವಾಲಯಕ್ಕೆ ತೆರಳಲು ಸಮೀಪದ ವಿಮಾನ ನಿಲ್ದಾಣಗಳೆಂದರೆ ಅದು ಉಜ್ಜಯಿನಿಯಿಂದ ಸುಮಾರು 55 ಕಿ.ಮೀ ದೂರದಲ್ಲಿದೆ. ಇಂಡೋರ್‍ನಿಂದ ಸುಮಾರು 172 ಕಿ.ಮೀ ದೂರದಲ್ಲಿದೆ.

ರೈಲ್ವೆ ಮಾರ್ಗದ ಮೂಲಕ: ದೇಶದ ಅನೇಕ ನಗರಗಳಿಂದ ರೈಲುಗಳ ಇವೆ. ಹೀಗಾಗಿ ಸುಲಭವಾಗಿ ಈ ದೇವಾಲಯಕ್ಕೆ ತೆರಳಬಹುದಾಗಿದೆ. ಉಜ್ಜಯಿನಿಯಿಂದ ಈ ಮಹಾಕಾಳೇಶ್ವರ ದೇವಾಲಯಕ್ಕೆ ನಿರಂತರ ಬಸ್ಸುಗಳು ಇವೆ.

<strong>ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು...</strong>..ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು.....

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X