Search
  • Follow NativePlanet
Share
» »ಚಿಕ್ಕಿ ಅಂದ್ರೆ ನಿಮಗಿಷ್ಟಾನಾ ? ಹಾಗಾದ್ರೆ ಇಲ್ಲಿನ ಚಿಕ್ಕಿ ನೀವು ಟೇಸ್ಟ್ ಮಾಡ್ಲೇಬೇಕು

ಚಿಕ್ಕಿ ಅಂದ್ರೆ ನಿಮಗಿಷ್ಟಾನಾ ? ಹಾಗಾದ್ರೆ ಇಲ್ಲಿನ ಚಿಕ್ಕಿ ನೀವು ಟೇಸ್ಟ್ ಮಾಡ್ಲೇಬೇಕು

ಚಿಕ್ಕಿ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುತ್ತದೆ. ಮಕ್ಕಳಾಗಿದ್ದಾಗಂತೂ ಬೇಕಾಷ್ಟು ಚಿಕ್ಕಿ ತಿಂದಿರ್ತಿವಿ. ಈ ಚಿಕ್ಕಿಯ ರುಚಿ ಒಮ್ಮೆ ಬಾಯಿಗೆ ಹತ್ತಿದ್ರೆ ಸಾಕು ಮತ್ತೆ ಮತ್ತೆ ತಿನ್ನುತ್ತಾನೇ ಇರಬೇಕು ಅನ್ನಿಸುತ್ತದೆ. ಇಂದು ನಾವು ಚಿಕ್ಕಿಗೆ ಫೇಮಸ್ ಆಗಿರುವ ಸ್ಥಳವೊಂದರ ಬಗ್ಗೆ ತಿಳಿಸಲಿದ್ದೇವೆ. ಅಲ್ಲಿಯ ಚಿಕ್ಕಿಯನ್ನು ಬಾಯಿಗೆ ಹಾಕಿದ್ರೆ ನೀವು ಬೇರೆ ಯಾವ ಚಿಕ್ಕಿಯನ್ನೂ ತಿನ್ನಬಯಸೋದಿಲ್ಲ. ಅಲ್ಲಿ ತಯಾರಾಗುವ ಚಿಕ್ಕಿ ಇಡೀ ದೇಶದಲ್ಲೇ ಫೇಮಸ್.

 ಲೋಣಾವಲಾ

ಲೋಣಾವಲಾ

ಮಹಾರಾಷ್ಟ್ರದ ಲೋಣಾವಲಾದ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಇಲ್ಲಿ ಗಿರಿಧಾಮಗಳು ಎಷ್ಟು ಫೇಮಸ್ಸೋ , ಅಷ್ಟೇ ಫೇಮಸ್ ಇಲ್ಲಿನ ಮಗನ್ಲಾಲ್ ಚಿಕ್ಕಿ ಸೆಂಟರ್. ಲೋಣಾವಲಾಕ್ಕೆ ಬರುವ ಪ್ರತಿಯೊಬ್ಬರೂ ಅಲ್ಲಿನ ಮಗನ್ಲಾಲ್ ಚಿಕ್ಕಿ ಸವಿಯದೇ ಹೋಗೋದೇ ಇಲ್ಲ.

ಕಡಲೇ ಚಿಕ್ಕಿ

ಕಡಲೇ ಚಿಕ್ಕಿ

PC: Zeel Patel

ಪ್ರವಾಸಿಗರಂತೂ ಚಿಕ್ಕಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ. ನೀವು ಬೆಲ್ಲ ಹಾಗೂ ಕಡಲೇ ಬೀಜದ ಚಿಕ್ಕಿಯನ್ನು ತಿಂದಿರುತ್ತೀರಿ. ಆದರೆ ಇಲ್ಲಿ ವಿಧ ವಿಧವಾದ ಚಿಕ್ಕಿಗಳು ಲಭ್ಯವಿದೆ. ಈ ಚಿಕ್ಕಿಗಳೂ ಪ್ರವಾಸಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ.

ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್

ವಿವಿಧ ಬಗೆಯ ಚಿಕ್ಕಿಗಳು

ವಿವಿಧ ಬಗೆಯ ಚಿಕ್ಕಿಗಳು

PC: Amitshah02

ಒಣ ಹಣ್ಣುಗಳು, ತೆಂಗಿನಕಾಯಿಗಳು, ಗೋಡಂಬಿ, ಪಿಸ್ತಾ ಸೇರಿದಂತೆ ಗುಲಾಬಿ ದಳಗಳಿಂದಲೂ ಚಿಕ್ಕಿಯನ್ನು ತಯಾರಿಸಲಾಗಿತ್ತದೆ. ಇವುಗಳು ನೋಡಲೂ ಸುಂದರವಾಗಿದೆ ಜೊತೆಗೆ ರುಚಿಕರವೂ ಆಗಿದೆ. ನಿಮ್ಮ ಸ್ವಂತ ರುಚಿಯನ್ನು ಆಯ್ಕೆ ಮಾಡಿಕೊಂಡು ಅದರಂತೆ ನಿಮಗೆ ಇಷ್ಟವಾದ ಚಿಕ್ಕಿಯನ್ನು ನೀವು ಕೊಳ್ಳಬಹುದು.

ಮಗನ್ಲಾಲ್ ಚಿಕ್ಕಿ ಸೆಂಟರ್

ಮಗನ್ಲಾಲ್ ಚಿಕ್ಕಿ ಸೆಂಟರ್

PC:Jayabharat

ಪ್ರಸಿದ್ಧ ಮಗನ್ಲಾಲ್ ಚಿಕ್ಕಿ ಸೆಂಟರ್ 1888 ರಲ್ಲಿ ತನ್ನ ಮಗನ ಹೆಸರಿನಲ್ಲಿ ಶ್ರೀ ಬೂರಿಯಾರಾಜ್ ಅಗರ್ವಾಲ್ ಈ ಅಂಗಡಿಯನ್ನು ಸ್ಥಾಪಿಸಿದರು. ಶ್ರೀ ಮಗನ್ಲಾಲ್ ನಂತರ ತನ್ನ ಇಬ್ಬರು ಗಂಡುಮಕ್ಕಳೊಂದಿಗೆ ಈ ಅಂಗಡಿಯಲ್ಲಿ ಗುಡ್-ದಾನಿಯನ್ನು ಅಂದರೆ ಚಿಕ್ಕಿಯನ್ನು ಮಾರಾಟ ಮಾಡಲು ಆರಂಭಿಸಿದರು. ಅವರು ಕೆಲವು ವರ್ಷಗಳ ನಂತರ ನಿಧನರಾದರು. ಆದರೆ ಅವನ ಪರಂಪರೆಯನ್ನು ಇಬ್ಬರು ಪುತ್ರರು ಮುಂದುವರೆಸುತ್ತಿದ್ದಾರೆ.

ಇಲ್ಲಿ ಕಾಗೆಗಳು ತಿಂದ ಆಹಾರವೇ ಭಕ್ತರಿಗೆ ಪ್ರಸಾದ!ಇಲ್ಲಿ ಕಾಗೆಗಳು ತಿಂದ ಆಹಾರವೇ ಭಕ್ತರಿಗೆ ಪ್ರಸಾದ!

ಮಗನ್ಲಾಲ್ ಚಿಕ್ಕಿ

ಮಗನ್ಲಾಲ್ ಚಿಕ್ಕಿ

PC: youtube

ಲೋಣಾವಲಾದಲ್ಲಿ ಮಗನ್ಲಾಲ್ ಹೆಸರಿನ ಇನ್ನಷ್ಟು ಅಂಗಡಿಗಳು ಚಿಕ್ಕಿಯನ್ನು ಮಾರಾಟ ಮಾಡುತ್ತವೆ. ಆದರೆ ಅವ್ಯಾವು ರಿಯಲ್ ಮಗನ್ಲಾಲ್ ಅಂಗಡಿಗಳಲ್ಲ. ಲೋಣಾವಲಾದಲ್ಲಿ ರಿಯಲ್ ಮಗನ್ಲಾಲ್ ಚಿಕ್ಕಿ ಅಂಗಡಿಯು ಯಾವಾಗಲೂ ಜನಸಂದಣಿಯಿಂದ ಕೂಡಿರುತ್ತದೆ. ಈ ಅಂಗಡಿ ಇರೋದು ಲೋನಾವಲಾ ರೈಲು ನಿಲ್ದಾಣದ ಬಳಿ.

30 ವಿವಿಧ ಚಿಕ್ಕಿಗಳು

30 ವಿವಿಧ ಚಿಕ್ಕಿಗಳು

PC: youtube

30 ವಿವಿಧ ಚಿಕ್ಕಿಗಳನ್ನು ವಿವಿಧ ರುಚಿಯಲ್ಲಿ ಮಾರಾಟ ಮಾಡಲಾಗಿದ್ದು, ಬಾದಾಮಿ ಮತ್ತು ಗೇರುಬೀಜಗಳೊಂದಿಗೆ ಬೆರೆಸಿ, ಗುಲಾಬಿ ಅಥವಾ ಚಾಕೊಲೇಟ್ನೊಂದಿಗೆ ಬೆರೆಸಿ ಚಿಕ್ಕಿ ತಯಾರಿಸುತ್ತಾರೆ. ಆದರೆ ಸಿಂಪಲ್ ಆಗಿರುವ ಹಳೆ ಕಾಲದ ಬೆಲ್ಲ ಹಾಗೂ ಕಡಲೇ ಬೀಜದ ಚಿಕ್ಕಿ ಇಂದಿಗೂ ಸಾಕಷ್ಟು ಜನರ ಫೇಮರೆಟ್ ಆಗಿದೆ.

ಬೆಂಗಳೂರು ಸುತ್ತ ಮುತ್ತ ಇರುವವರು ತಮಿಳ್ನಾಡಿನ ಈ ತಾಣಗಳನ್ನು ನೋಡಲೇ ಬೇಕುಬೆಂಗಳೂರು ಸುತ್ತ ಮುತ್ತ ಇರುವವರು ತಮಿಳ್ನಾಡಿನ ಈ ತಾಣಗಳನ್ನು ನೋಡಲೇ ಬೇಕು

ವಿಭಿನ್ನ ಹೆಸರು

ವಿಭಿನ್ನ ಹೆಸರು

PC: youtube

ಉತ್ತರ ಭಾರತ, ವಿಶೇಷವಾಗಿ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ, ಈ ಸಿಹಿ ಅನ್ನು ಲಯಿಯ ಪತ್ತಿ ಎಂದು ಕರೆಯಲಾಗುತ್ತದೆ. ಭಾರತದ ಸಿಂಧ್ ಮತ್ತು ಸಿಂಧಿ ಪ್ರದೇಶಗಳಲ್ಲಿ, ಇದನ್ನು ಲೇಯಿ ಅಥವಾ ಲೈ ಎಂದು ಬಾಂಗ್ಲಾದೇಶದಲ್ಲಿ ಇದನ್ನು ಗುರ್ ಬಾದಾಮ್ ಎಂದು ಕರೆಯಲಾಗುತ್ತದೆ.

ಟೇಸ್ಟ್‌ ನೋಡಿ

ಟೇಸ್ಟ್‌ ನೋಡಿ

PC: youtube

ನೀವು ಮಹಾರಾಷ್ಟ್ರದ ಲೋಣಾವಲಾಕ್ಕೆ ಭೇಟಿ ನೀಡಿದ್ದಲ್ಲಿ ಮಗನ್ಲಾಲ್ ಚಿಕ್ಕಿ ರುಚಿನೋಡದನ್ನು ಹಾಗೂ ಒಂದೆರಡು ಪ್ಯಾಕೆಟ್ ನಿಮ್ಮ ಮನೆಯವರಿಗೂ ತರೋದನ್ನು ಮಾತ್ರ ಮರೀಬೇಡಿ. ಇಲ್ಲಿ ನಿಮಗೆ ಎಲ್ಲಾ ರೀತಿಯ ಬೆಸ್ಟ್ ಕ್ವಾಲಿಟಿ ಚಿಕ್ಕಿ ದೊರೆಯುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X