Search
  • Follow NativePlanet
Share
» »ಪ್ರಾಣವನ್ನು ತೆಗೆಯುವ ದೇವಾಲಯವಿದು! ಅಲ್ಲಿ ರಾತ್ರಿಯಾದರೆ ಸಾಕು...

ಪ್ರಾಣವನ್ನು ತೆಗೆಯುವ ದೇವಾಲಯವಿದು! ಅಲ್ಲಿ ರಾತ್ರಿಯಾದರೆ ಸಾಕು...

ನಮ್ಮ ಭಾರತ ದೇಶದಲ್ಲಿ ದೇವಾಲಯಗಳಿಗೆ ಪ್ರತ್ಯೇಕವಾದ ಮಹತ್ವವಿದೆ. ದೇವಾಲಯಕ್ಕೆ ಸಾಮಾನ್ಯವಾಗಿ ಭೇಟಿ ನೀಡುವುದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಲು ಹಾಗು ಮನಃಶಾಂತಿಗಾಗಿ.ಆದರೆ ಈ ದೇವಾಲಯದ ಬಗ್ಗೆ ನೀವು ಕೇಳಿದ್ದೀರಾ? ಇಲ್ಲಿ ಆ ದೇವಾಲಯದಲ್ಲಿ ಕಾ

ನಮ್ಮ ಭಾರತ ದೇಶದಲ್ಲಿ ದೇವಾಲಯಗಳಿಗೆ ಪ್ರತ್ಯೇಕವಾದ ಮಹತ್ವವಿದೆ. ದೇವಾಲಯಕ್ಕೆ ಸಾಮಾನ್ಯವಾಗಿ ಭೇಟಿ ನೀಡುವುದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಲು ಹಾಗು ಮನಃಶಾಂತಿಗಾಗಿ. ಆದರೆ ಇಲ್ಲೊಂದು ದೇವಾಲಯವಿದೆ. ಆ ದೇವಾಲಯ ನೀವು ಊಹಿಸಿಕೊಂಡಿದ್ದಕ್ಕಿಂತ ಅತ್ಯಂತ ವಿಭಿನ್ನವಾದುದು. ಯಾರಾದರೂ ದೇವಾಲಯವನ್ನು ಏಕೆ ದರ್ಶನ ಮಾಡಲು ತೆರಳುತ್ತಾರೆ ಹೇಳಿ. ಉತ್ತಮವಾದ ಆರೋಗ್ಯ, ಜೀವನವನ್ನು ಪಡೆಯಲು ಆ ದೇವತೆಗಳ ಆಶೀರ್ವಾದ ಬೇಕು ಎಂಬುದಕ್ಕೆ ಅಲ್ಲವೇ?

ಆದರೆ ಈ ದೇವಾಲಯದ ಬಗ್ಗೆ ನೀವು ಕೇಳಿದ್ದೀರಾ? ಇಲ್ಲಿ ಆ ದೇವಾಲಯದಲ್ಲಿ ಕಾಲ ಕಳೆದರೆ ಮರಣ ಸಂಭವಿಸುವ ಎಲ್ಲಾ ಅವಕಾಶಗಳಿವೆ. ಈ ಲೇಖನದಲ್ಲಿ ಹೇಳುವ ದೇವಾಲಯದ ಹೆಸರು ಮೈಹಾರ್ ದೇವಿಯ ಮಂದಿರವಾಗಿದೆ. ಇಲ್ಲಿ ರಾತ್ರಿ ಒಂದು ದಿನ ಕಳೆದರೆ ಪ್ರಾಣವನ್ನು ಕಳೆದುಕೊಳ್ಳಬೇಕು ಎಂದು ನಂಬುತ್ತಾರೆ. ಹಾಗಾದರೆ ಬನ್ನಿ ಈ ದೇವಾಲಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಪಡೆಯೋಣ. ಆ ದೇವಾಲಯಕ್ಕೆ ತೆರಳಿದರೆ ಪ್ರಾಣವನ್ನು ಏಕೆ ಕಳೆದುಕೊಳ್ಳುತ್ತಾರೆ? ಎಂಬ ಹಲವಾರು ವಿಷಯದ ಬಗ್ಗೆ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯೋಣ.

Madhya Pradesh Mahir Mandir

1.ಮಧ್ಯ ಪ್ರದೇಶದ ಪ್ರವಾಸ ಒಂದು ಮನೋಹರವಾದ ಪ್ರದೇಶವಾಗಿದೆ. ಮಧ್ಯ ಪ್ರದೇಶ ರಾಜ್ಯವನ್ನು "ಭಾರತ ದೇಶದ ಹೃದಯ ಭಾಗ" ಎಂದೇ ಬಣ್ಣಿಸಲಾಗುತ್ತದೆ. ಮಧ್ಯ ಪ್ರದೇಶವು ಭಾರತ ತನ್ನ ಸಂಸ್ಕøತಿ, ಭೌಗೋಳಿಕ ಸ್ಥಾನ, ಪ್ರಾಕೃತಿ ಸೌಂದರ್ಯ, ಸಾಂಸ್ಕøತಿ ಪರಂಪರೆ ಹೊಂದಿದ್ದು, ದೇಶದಲ್ಲಿಯೇ ಅತ್ಯುತ್ತಮವಾದ ಪ್ರವಾಸಿ ಕೇಂದ್ರವಾಗಿ ಹೆಸರುವಾಸಿಯಾಗಿದೆ. ರಾಜಧಾನಿಯಾದ ಭೋಪಾಲ್ "ನದಿಗಳ ನಗರ" ಎಂದು ಸುಪ್ರಸಿದ್ಧವಾಗಿದೆ.

Madhya Pradesh Mahir Mandir

2.ಪ್ರವಾಸಿಗರು ಅಸ್ವಾಧಿಸಲು ಎಲ್ಲಾ ರೀತಿಯ ಪ್ರವಾಸಿ ಅವಕಾಶಗಳು ಮಧ್ಯ ಪ್ರದೇಶದಲ್ಲಿದೆ. ಖಜರಾಹೋನಂತಹ ದೇವಾಲಯ ನಿರ್ಮಾಣ, ತನ್ನ ವಾಸ್ತು ಶಿಲ್ಪ, ಜಲಪಾತಗಳು ಹೀಗೆ ಹಲವಾರು ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಧ್ಯ ಪ್ರದೇಶದ ಭೌಗೋಳಿಕ ಸ್ವರೂಪವು ದೇಶದ ಮಧ್ಯ ಭಾಗದಲ್ಲಿರುವ ಈ ರಾಷ್ಟ್ರದಲ್ಲಿನ ಪ್ರಕೃತಿ ವೈವಿಧ್ಯತೆಗೆ ಒಂದು ಅದ್ಭುತವಾದ ಪ್ರದೇಶ ಎಂದೇ ಹೇಳಲಾಗುತ್ತದೆ.

Madhya Pradesh Mahir Mandir

3.ಎತ್ತರವಾದ ಪರ್ವತ ಶ್ರೇಣಿಗಳು, ದಟ್ಟವಾದ ಅರಣ್ಯಗಳು, ನದಿಗಳಿಂದ ಪ್ರಕೃತಿ ರಮಣೀಯತೆಯಿಂದ ವಿವಿಧ ಅಂಶಗಳಿಂದ ಈ ಪ್ರದೇಶ ಸಮನ್ವಯಗೊಂಡಿದೆ. ವಿಂಧ್ಯಾ, ಸಾತ್ಪೂರ ಪರ್ವತ ಶ್ರೇಣಿಗಳ ಮಧ್ಯೆ ನರ್ಮದಾ, ತಪತಿ ನದಿಗಳು ಸಮಾಂತರವಾಗಿ ಪ್ರವಹಿಸುತ್ತದೆ. ಇಲ್ಲಿನ ವೈವಿಧ್ಯ ಭರಿತವಾದ ವೃಕ್ಷಗಳು, ಪ್ರಾಣಿಗಳು, ಪ್ರಾಕೃತಿಕ ಸೌಂದರ್ಯ ಮಧ್ಯ ಪ್ರದೇಶದ ಪ್ರವಾಸಿ ತಾಣವನ್ನು ಮತ್ತಷ್ಟು ಶ್ರೀಮಂತವಾಗಿಸುತ್ತದೆ.

Madhya Pradesh Mahir Mandir

4.ಮಧ್ಯ ಪ್ರದೇಶದ ಚರಿತ್ರೆ, ಸಾಂಸ್ಕøತಿ ಪರಂಪರೆ ವಿವಿಧ ವಂಶಗಳಿಗೆ ಸೇರಿದ ಹಲವಾರು ಮಂದಿ ರಾಜರ ಪಾಲನೆಗಳನ್ನು ಮಧ್ಯ ಪ್ರದೇಶವು ಕಂಡಿದೆ. ಪ್ರಾಚೀನ ಕಾಲದಲ್ಲಿ ಮೌರ್ಯರು, ರಾಷ್ಟ್ರಕೂಟರು, ಗುಪ್ತರು, ಇಟವಲಿ, ಬುಂದೇಲಾ, ಮೊಘಲರು, ಸಿಂಧಿಗಳ ಆಳ್ವಿಕೆಯವರೆಗೆ ಸುಮಾರು 14 ರಾಜವಂಶಗಳನ್ನು ಕಂಡಿದೆ ಮಧ್ಯ ಪ್ರದೇಶ.

Madhya Pradesh Mahir Mandir

5.ವಿವಿಧ ರಾಜರ ಪಾಲನೆಯಿಂದಾಗಿ ವಿವಿಧ ಕಲೆ, ನಿರ್ಮಾಣ ಶೈಲಿಗಳು ಕೂಡ ಕಾಣಬಹುದು. ಖಜರಾಹೋದಲ್ಲಿನ ಶೃಂಗಾರ ಶಿಲ್ಪಗಳು, ಗ್ವಾಲಿಯರ್ ಕೋಟೆ, ಉಜ್ಜಯಿನಿಯಲ್ಲಿನ ದೇವಾಲಯ, ಚಿತ್ರಕೂಟ ಇವೆಲ್ಲಾ ಅದ್ಭುತವಾದ ನಿರ್ಮಾಣ ಕಲೆಗಳು ಮಧ್ಯ ಪ್ರದೇಶದಲ್ಲಿನ ವೈಭವಗಳಿಗೆ ಸಂಕೇತವಾಗಿವೆ. ಭೀಮ್ ಬೆಟ್ಕಾದಂತಹ ಯುನೆಸ್ಕೋ ಪ್ರಪಂಚ ಪಾರಂಪಾರಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ.

Madhya Pradesh Mahir Mandir

6.ಮಧ್ಯ ಪ್ರದೇಶದಲ್ಲಿನ ಗಿರಿಜನ ಸಂಸ್ಕøತಿ ಇಲ್ಲಿನ ಪ್ರವಾಸಿ ಪ್ರಧಾನವಾದ ಭಾಗವಾಗಿದೆ. ಇಲ್ಲಿ ಗಿರಿಜನ ಕಲಾಕೃತಿ ಇಲ್ಲಿನ ಮತ್ತೊಂದು ಪ್ರಧಾನವಾದ ಆಕರ್ಷಣೆ ಕೂಡ ಆಗಿದೆ. ಇಲ್ಲಿನ ಜಾನಪದ ಸಂಗೀತ, ನೃತ್ಯ ದೇಶದ ಕಲಾ ಪರಂಪರೆಯನ್ನು ಅಭಿವೃದ್ಧಿ ಹೊಂದಿದೆ. ವನ್ಯ ಪ್ರಾಣಿಗಳು ಮಧ್ಯ ಪ್ರದೇಶದಲ್ಲಿ ಪ್ರೇರಣೆಗೊಳಿಸುವ ಅಂಶವಾಗಿದೆ.

Madhya Pradesh Mahir Mandir

7.ವಿಂಧ್ಯಾ, ಸಾತ್ಪೂರ ಪರ್ವತಗಳು, ಹಚ್ಚ ಹಸಿರಿನ ಅರಣ್ಯಗಳು ಹಲವಾರು ಜೀವಿಗಳಿಗೆ ನಿವಾಸವಾಗಿದೆ. ವನ್ಯ ಪ್ರಾಣಿ ಅಭಯಾರಣ್ಯಗಳು, ವನ್ಯಪ್ರಾಣಿ ಜಾತಿಯ ಪಾರ್ಕುಗಳು ಕೂಡ ಮಧ್ಯ ಪ್ರದೇಶದ ಪ್ರವಾಸದಲ್ಲಿನ ಪ್ರಸಿದ್ಧವಾದ ಆಕರ್ಷಣೆಯಾಗಿದೆ.

Madhya Pradesh Mahir Mandir

8.ಇಂತಹ ಶ್ರೀಮಂತವಾದ ಮಧ್ಯ ಪ್ರದೇಶದಲ್ಲಿ ಈ ದೇವಾಲಯವಿದೆ. ಈ ಮಂದಿರವು ಮಧ್ಯ ಪ್ರದೇಶದಲ್ಲಿನ ಭೋಪಾಲ್ ಸಮೀಪದಲ್ಲಿನ ಸತ್ನಾಜಿಲ್ಲೆಯಲ್ಲಿನ ಮೈಹಾರ್‍ನಲ್ಲಿದೆ. ಈ ದೇವಾಲಯದಲ್ಲಿ ಶಾರದಾ ಅಮ್ಮನವರು ನೆಲೆಸಿದ್ದಾರೆ. ಮೈಹಾರ್ ಎಂದರೆ " ಮಾ ಕಾ ಹಾರ್" ಎಂದು ಅರ್ಥವಾಗಿದೆ.

Madhya Pradesh Mahir Mandir

9.ಈ ದೇವಾಲಯದಲ್ಲಿ ತ್ರಿಕೂಟ ಎಂಬ ಪರ್ವತದ ಮಧ್ಯದಲ್ಲಿದೆ. ಪ್ರತಿ ವರ್ಷ ಇಲ್ಲಿ ಶಾರದಾದೇವಿಯನ್ನು ದರ್ಶನ ಮಾಡುವುದಕ್ಕೆ ಹಲವಾರು ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲಿ ಅಂತಹ ಭಯಂಕರವಾದ ಚಳಿ ಇದ್ದರೂ ಕೂಡ ಅಲ್ಲಿಗೆ ಹಲವಾರು ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಯದ ಮಹಿಮೆಯ ಬಗ್ಗೆ ಆನೇಕ ಕಥೆಗಳು ಪ್ರಚಾರದಲ್ಲಿದೆ.

Madhya Pradesh Mahir Mandir

10.ಈ ನಂಬಿಕೆ ಎಲ್ಲಾವು ಹಲವಾರು ಮಂದಿ ನಿಜವಾದುದು ಎಂದು ನಂಬುತ್ತಾರೆ. ಹಾಗೆಯೇ ರಾತ್ರಿಯ ವೇಳೆಯಲ್ಲಿ ಆ ದೇವಾಲಯದಲ್ಲಿ ಇರುವುದಕ್ಕೆ ಆಗುವುದಿಲ್ಲವೆಂದೂ ಕೂಡ ಹೇಳುತ್ತಾರೆ. ಹಾಗೆ ಧೈರ್ಯ ಮಾಡಿ ಇದ್ದವರು ಮಾತ್ರ ತಮ್ಮ ಪ್ರಾಣವನ್ನು ಬಿಟ್ಟಿದ್ದಾರೆ ಎಂದು ನಂಬುತ್ತಾರೆ. ಈ ನಂಬಿಕೆಯ ಹಿಂದೆ ಒಂದು ಕಥೆ ಕೂಡ ಚಾಲ್ತಿಯಲ್ಲಿದೆ.

Madhya Pradesh Mahir Mandir

11.ಇಂದಿಗೂ ಶಾರದಾ ಮಾತೆಗೆ ಅತ್ಯಂತ ದೊಡ್ಡದಾದ ಭಕ್ತನಾದ ಅಲಹ್, ಉದಂ ಎಂಬ ಇಬ್ಬರು ಸಹೋದರ ಆತ್ಮಗಳು ಅಲ್ಲಿ ತಿರುಗುತ್ತಾ ಇರುತ್ತವೆ ಎಂತೆ. ಈ 2 ಆತ್ಮಗಳು ಅಂದಿಗೆ ಪೃಥ್ವಿರಾಜ ಚೌಹಾನ್‍ನ ಜೊತೆ ವೀರತ್ವದಿಂದ ಹೋರಾಡಿದ್ದರು. ಅದೇ ಅಲ್ಲದೇ ಇವರಿಬ್ಬರು ಮೊದಲ ಬಾರಿಗೆ ಮೈಹೋರ್ ದೇವಿ ದೇವಾಲಯವನ್ನು ಗುಡ್ಡದ ಮೇಲೆ ಕಂಡುಕೊಂಡರು.

12.ರಾತ್ರಿಯ ವೇಳೆಯಲ್ಲಿ ದೇವಾಲಯವನ್ನು ಮುಚ್ಚಿಬಿಡುತ್ತಾರೆ. ಅಲ್ಲಿನ ಸ್ಥಳೀಯರ ಪ್ರಕಾರ ಆ ಇಬ್ಬರು ಸಹೋದರರು ದೇವಿಯನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಅದೇ ಕಾರಣವಾಗಿ ದೇವಾಲಯ ಒಳ ಭಾಗದಲ್ಲಿ ಯಾರಿಗೂ ರಾತ್ರಿಯ ಸಮಯದಲ್ಲಿ ಅನುಮತಿಯನ್ನು ನೀಡುವುದಿಲ್ಲ. ಯಾರಾದರೂ ಸಾಹಸ ಮಾಡಿ ದೇವಾಲಯಕ್ಕೆ ತೆರಳಿದರೆ ಅಂಥವರು ಪ್ರಾಣವನ್ನು ಕಳೆದುಕೊಳ್ಳುತ್ತಾರಂತೆ. ಇದು ಅಲ್ಲಿನ ಸ್ಥಳೀಯರ ನಂಬಿಕೇ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X