Search
  • Follow NativePlanet
Share
» »ಮಾಧವ ವಿಲಾಸ ಅರಮನೆಯ ವೈಭವವನ್ನು ನೋಡಿ

ಮಾಧವ ವಿಲಾಸ ಅರಮನೆಯ ವೈಭವವನ್ನು ನೋಡಿ

ಶಿವಪುರಿಯಲ್ಲಿರುವ ಮಾಧವ ವಿಲಾಸ ಅರಮನೆಯನ್ನು 'ಪ್ಯಾಲೇಸ್' ಎಂದೇ ಅಲ್ಲಿನ ಜನಸಾಮಾನ್ಯರು ಕರೆಯುತ್ತಾರೆ. ಇಂಥಹ ಅದ್ಭುತವಾದ, ಆಕರ್ಷಿತವಾದ ಅರಮನೆ ತನಗೆ ತಾನೇ ಸಾಟಿ ಎಂಬಂತಿದೆ. ಸುಂದರವಾದ ಆಧಾರ ಸ್ತಂಭಗಳು, ಸಾಕಷ್ಟು ಗುಮ್ಮಟಗಳು, ಅಮೃತಶಿಲೆಯಿಂದ ಮಾಡಿದ ನೆಲಗಳು, ಗುಲಾಬಿ ಬಣ್ಣದಿಂದ ಕಂಗೊಳಿಸುವ ವೈಭವದಿಂದ ಕೂಡಿರುವ ಈ ಅರಮನೆ ಮಧ್ಯಪ್ರದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಅದ್ಭುತ ಶಿಲ್ಪಕಲೆ

ಅದ್ಭುತ ಶಿಲ್ಪಕಲೆ

PC:Teacher1943

ಇದರ ಶಿಲ್ಪಕಲೆ ನಿಜಕ್ಕೂ ಪ್ರಶಂಸನೀಯ. ಇಂದಿಗೂ ಸಹ ಇದರ ಟೆರೇಸು ಹಾಗು ಗುಮ್ಮಟಗಳು ಸುಂದರವಾಗಿದ್ದು ಅಳಿಯದೆ ರಕ್ಷಿಸಲ್ಪಟ್ಟಿವೆ. ಆಗಿನ ಕಾಲದಲ್ಲಿ ಇದು ಸಿಂಧಿಯಾ ರಾಜಮನೆತನದ ಬೇಸಿಗೆ ಅರಮನೆಯಾಗಿತ್ತು. ಅರಮನೆಯ ಟೆರೇಸಿನ ಮೇಲೆ ರಾಜಮನೆತನದ ಹೆಂಗಸರು, ರಾಜರು ಬೇಟೆಯ ನಂತರ ವಾಪಸಾಗಿ ಬರುವ ನಿರೀಕ್ಷೆಯಲ್ಲಿರುವ ವರ್ಣಚಿತ್ರ ಮನಸೆಳೆಯುತ್ತಿದೆ.

ಬೇಸಿಗೆ ಅರಮನೆ

ಬೇಸಿಗೆ ಅರಮನೆ

PC: DeepakSanakt

ಮಾಧವ ವಿಲಾಸ್ ಅರಮನೆ ಗ್ವಾಲಿಯರ್ ಸಿಂಧಿಯಾಸ್‌ನ ಬೇಸಿಗೆ ಅರಮನೆಯಾಗಿತ್ತು. ಪ್ರಸ್ತುತ ಇದು ಭಾರತ ಸರ್ಕಾರದ ಇಂಟೆಲಿಜೆನ್ಸ್ ಬ್ಯೂರೊದ ತರಬೇತಿ ಕೇಂದ್ರವಾಗಿದೆ. ಮಾಧವ ವಿಲಾಸ್ ಅರಮನೆಯು ರೂಪದಲ್ಲಿ ಸೌಂದರ್ಯದ ಪ್ರತಿಬಿಂಬವಾಗಿದೆ.

ಗಣೇಶನ ದೇವಾಲಯವಿದೆ

ಪ್ರಾಚೀನ ಕಾಲದಲ್ಲಿ ಇದು ನಿವಾಸವಾಗಿದ್ದಾಗ, ಉತ್ತಮ ಗುಣಮಟ್ಟದ ಅಲಂಕಾರಿಕ ಉತ್ಪನ್ನಗಳನ್ನು ಹೊಂದಿತ್ತು. ರಾಜ ಸಿಂಧಿಯಾ ಕುಟುಂಬ ಗಣೇಶನ ಅನುಯಾಯಿಯಾಗಿದ್ದು, ಅರಮನೆಯ ಆವರಣದಲ್ಲಿ ಗಣೇಶನ ದೇವಾಲಯವನ್ನು ನಿರ್ಮಿಸಿದ್ದರು.

ಯಾವಾಗ ಭೇಟಿ ಸೂಕ್ತ

ಯಾವಾಗ ಭೇಟಿ ಸೂಕ್ತ

PC: Arkadeep Meta

ಮಧ್ಯ ಪ್ರದೇಶದ ಮಾಧವ ವಿಲಾಸ್ ಅರಮನೆಯು ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಈ ಸ್ಥಳಕ್ಕೆ ಭೇಟಿ ನೀಡಲು ವರ್ಷದ ಯಾವುದೇ ಋತು ಮತ್ತು ದಿನಗಳು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಈ ಅರಮನೆಗೆ ಪ್ರವೇಶ ಉಚಿತವಾಗಿದ್ದು, ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ನಿಯಮಗಳ ಅನುಸಾರ ಅರಮನೆಯ ಆವರಣದಲ್ಲಿ ಫೋಟೋ ಕ್ಲಿಕ್ ಮಾಡಲು ಯಾರಿಗೂ ಅನುಮತಿ ಇಲ್ಲ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Amit Sen

ಗ್ವಾಲಿಯರ್ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಶಿವಪುರಿ ತನ್ನದೇ ರೈಲು ನಿಲ್ದಾಣವನ್ನು ಹೊಂದಿದೆ. ಗ್ವಾಲಿಯರ್ ದೇಶದ ವಿವಿಧ ಭಾಗಗಳಿಗೆ ರೈಲು ಸಂಪರ್ಕವನ್ನು ಹೊಂದಿದೆ. ಬಸ್ ಜನಪ್ರಿಯ ಸಾರಿಗೆ ಮಾರ್ಗವಾಗಿದ್ದು, ಬಸ್ ಮತ್ತು ರಸ್ತೆಗಳು ಶಿವಪುರಿಯನ್ನು ಮಧ್ಯಪ್ರದೇಶದ ಎಲ್ಲಾ ಪ್ರಮುಖ ಪಟ್ಟಣಗಳಾದ ಗ್ವಾಲಿಯರ್, ಭೋಪಾಲ್, ಇಂದೋರ್, ಉಜ್ಜೈನ್ ಮತ್ತು ಝಾನ್ಸಿಗಳಿಂದ ಸಂಪರ್ಕಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more