Search
  • Follow NativePlanet
Share
» »ಈ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಹೆರಿಗೆ ಸುಸೂತ್ರವಾಗಿ ನಡೆಯುತ್ತಂತೆ !

ಈ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಹೆರಿಗೆ ಸುಸೂತ್ರವಾಗಿ ನಡೆಯುತ್ತಂತೆ !

ಮಗುವಿಗೆ ಜನ್ಮ ನೀಡುವುದು ಹೆಣ್ಣಿಗೆ ಇನ್ನೊಂದು ಜನ್ಮಸಿಕ್ಕಿದಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಎಲ್ಲರೂ ಒಪ್ಪಲೇ ಬೇಕಾದಂತಹ ಸತ್ಯ. ಪ್ರತಿಯೊಬ್ಬ ಮಹಿಳೆಯು ಹೆರಿಗೆ ಸುಸೂತ್ರವಾಗಿ ನಡೆಯಲಿ ಎಂದೇ ಬಯಸುತ್ತಾಳೆ. ತಮಿಳುನಾಡಿನಲ್ಲಿ ಒಂದು ವಿಶೇಷ ದೇವಾಲಯವಿದೆ. ಆ ದೇವಸ್ಥಾನದಲ್ಲಿ ಭಕ್ತರು ಹೆರಿಗೆ ಸುಸೂತ್ರವಾಗಿ ನಡೆಯಲಿ ಎಂದೇ ಬೇಡಲು ಬರುತ್ತಾರೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಾಜ

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಾಜ

PC: Suresh

ಒಮ್ಮೆ ರಾಜ ತಿರುಮಲೈ ನಾಯ್ಕರ್ ಹೊಟ್ಟೆನೋವಿನಿಂದ ಬಳಲುತ್ತಿರುತ್ತಾನೆ. ವಿದ್ಯಾನಾಥರ್ ಸ್ವಾಮಿಯ ಮಹಿಮೆ ಬಗ್ಗೆ ತಿಳಿದ ರಾಜನು ವಿದ್ಯಾನಾಥರ್ ಸ್ವಾಮಿಯ ಸನ್ನಿಧಿ ಇರುವ ಮಾಧವರ್ ವಲಗಂಗೆ ಹೋಗುತ್ತಾನೆ. ಆ ದೇವಾಲಯದಲ್ಲಿ 48 ದಿನಗಳ ಕಾಲ ಇರುತ್ತಾನೆ. ರಾಜನ ಹೊಟ್ಟೆ ನೋವು ಸಂಪೂರ್ಣ ಗುಣಮುಖವಾಗುತ್ತದೆ. ದೇವರ ಈ ಮಹಿಮೆಗಾಗಿ ರಾಜನು ತನ್ನ ಪಲ್ಲಕ್ಕಿಯನ್ನು ದೇವಸ್ಥಾನಕ್ಕೆ ಅರ್ಪಿಸಿ ತಾನು ಕಾಲ್ನಡಿಗೆಯಲ್ಲಿ ಹೋಗುತ್ತಾನೆ.

ಈ ಮಂದಿರೊಳಗೆ ಪ್ರವೇಶಿಸಿದರೆ ಮಾನಸಿಕ ರೋಗಿಗಳೂ ಗುಣಮುಖರಾಗುತ್ತಾರಂತೆ ! ಈ ಮಂದಿರೊಳಗೆ ಪ್ರವೇಶಿಸಿದರೆ ಮಾನಸಿಕ ರೋಗಿಗಳೂ ಗುಣಮುಖರಾಗುತ್ತಾರಂತೆ !

ಪೂಜೆಯ ನಂತರವೇ ಊಟ ಮಾಡುವ ರಾಜ

ಪೂಜೆಯ ನಂತರವೇ ಊಟ ಮಾಡುವ ರಾಜ

PC:Suresh

ರಾಜ ತಿರುಮಲೈ ನಾಯ್ಕರ್ ಮಾಧವರ್ ವಲಗಂನಲ್ಲಿ ಮಧ್ಯಾಹ್ನದ ಪೂಜೆಯ ನಂತರವೇ ಆಹಾರ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಂಡರು. ಅದಕ್ಕಾಗಿಯೇ ರಾಜನು ಮಾಧವರ್ ವಲಂಗನಿಮದ ಮಧುರೈವರೆಗೆ ಹಾಲ್‌ನ್ನು ನಿರ್ಮಿಸಿದರು. ಅಲ್ಲಿ ಡೋಲಿನ ಮೂಲಕ ಮಧುರೈಗೆ ದೇವಸ್ಥಾನದ ಪೂಜೆ ನೆರವೇರಿರುವ ಮಾಹಿತಿ ಸಿಗುತ್ತಿತ್ತು. ಈ ದೇವಸ್ಥಾನದಲ್ಲಿ ಡೋಲ್‌ ಬಡಿದರೆ ಅದು ಮಧುರೈಗೆ ಕೇಳಿಸುತ್ತಿತ್ತು. ಆ ನಂತರವೇ ರಾಜ ಊಟ ಮಾಡುತ್ತಿದ್ದನು.

ಹೆರಿಗೆ ಸುಸೂತ್ರವಾಗಿ ಆಗಲು ಪ್ರಾರ್ಥಿಸುತ್ತಾರೆ

ಹೆರಿಗೆ ಸುಸೂತ್ರವಾಗಿ ಆಗಲು ಪ್ರಾರ್ಥಿಸುತ್ತಾರೆ

PC: Ssriram mt

ಹೆರಿಗೆ ಸುಸೂತ್ರವಾಗಿ ತಾಯಿ ಮಗು ಇಬ್ಬರೂ ಆರೋಗ್ಯದಿಂದಿರಲೆಂದು ಭಕ್ತರು ಈ ದೇವಾಲಯಕ್ಕೆ ಬಂದು ಪ್ರಾರ್ಥಿಸುತ್ತಾರೆ. ತಮ್ಮ ಕೋರಿಕೆ ಈಡೇರಿದರೆ ಭಕ್ತರು ಈ ದೇವಾಲಯಕ್ಕೆ ಬಂದು ಅಭಿಷೇಕ, ಅರ್ಚನೆ ಮಾಡುತ್ತಾರೆ ಹಾಗೆಯೇ ದೇವರಿಗೆ ಸೀರೆಯನ್ನೂ ಅರ್ಪಿಸುತ್ತಾರೆ.

ದೇಸ್ಥಾನದ ವಿಶೇಷತೆ

ದೇಸ್ಥಾನದ ವಿಶೇಷತೆ

PC: Ssriram mt

ಕೆಲವು ಸ್ಮಗ್ಲರ್ ಕೇರಳದಲ್ಲಿ ಕರಿಮೆಣಸನ್ನು ಬೆಳೆಸಿ ಅದರ ಕಳ್ಳ ಸಾಗಾಟ ಮಾಡುತ್ತಿದ್ದು. ಟ್ಯಾಕ್ಸ್‌ನಿಂದ ಪಾರಾಗಲು ಅಧಿಕಾರಿಗಳಿಗೆ ಅದು ದಾಲ್ ಎಂದು ಸುಳ್ಳುಹೇಳಿದರು. ಅವರು ಮನೆ ಸೇರಿ ಕರಿಮೆಣಸಿನ ಗೋಣಿಯನ್ನು ಪರೀಕ್ಷಿಸಿದಾಗ ಅದರಲ್ಲಿ ಬರೀ ದಾಲ್‌ ಇದ್ದಿದ್ದು ಕಂಡು ಆಶ್ಚರ್ಯಗೊಳಗಾಗುತ್ತಾರೆ. ತಮ್ಮ ತಪ್ಪಿನ ಅರಿವಾಗಿ ದೇವಸ್ಥಾನಕ್ಕೆ ಹೋಗಿ ಕ್ಷಮೆಯಾಚಿಸಿದ್ದಾರೆ.

3000 ಮಿಲಿಯನ್ ವರ್ಷ ಹಳೆಯ ಬಂಡೆ ಬೆಂಗಳೂರಿನಲ್ಲಿದೆಯಂತೆ, ಅದು ಎಲ್ಲಿದೆ ಗೊತ್ತಾ? 3000 ಮಿಲಿಯನ್ ವರ್ಷ ಹಳೆಯ ಬಂಡೆ ಬೆಂಗಳೂರಿನಲ್ಲಿದೆಯಂತೆ, ಅದು ಎಲ್ಲಿದೆ ಗೊತ್ತಾ?

ಹೆರಿಗೆ ನೋವಿನಿಂದ ಬಳಲುತ್ತಿ ಮಹಿಳೆ

ಹೆರಿಗೆ ನೋವಿನಿಂದ ಬಳಲುತ್ತಿ ಮಹಿಳೆ

PC:Ssriram mt

ಶಿವಭಕ್ತೆಯೊಬ್ಬಳು ಹೆರಿಗೆ ನೋವಿನಿಂದ ಬಳಲುತ್ತಿರುತ್ತಾಳೆ. ಆಕೆ ನೋವಿನಿಂದ ಶಿವನನ್ನು ಕೂಗುತ್ತಾಳೆ. ಶಿವನು ಆಕೆಯ ತಾಯಿಯ ವೇಷದಲ್ಲಿ ಪ್ರತ್ಯಕ್ಷಳಾಗಿ ಹೆರಿಗೆಯನ್ನು ನಡೆಸಿಕೊಡುತ್ತಾನೆ. ಆಕೆಗೆ ಬಹಳ ಬಾಯಾರಿಕೆಯಾಗಿರುತ್ತದೆ. ಆಗ ಶಿವನು ತನ್ನ ಉಗುರಿನಿಂದ ನೆಲದ ಮೇಲೆ ಗೆರೆ ಎಳೆಯುತ್ತಾನೆ. ಅದರಿಂದ ನೀರು ಚಿಮ್ಮಲಾರಂಭಿಸುತ್ತದೆ. ಆ ನೀರು ಆಕೆಯ ದಾಹವನ್ನೂ ತೀರಿಸುತ್ತದೆ ಜೊತೆಗೆ ಆಕೆಯ ಹೆರಿಗೆ ನೋವಿಗೆ ಮದ್ದಾಗಿಯೂ ಪರಿಣಮಿಸುತ್ತದೆ. ಆ ಕರೆಯನ್ನು ಕಾಯಕುಡಿ ಆರು ಎಂದು ಕರೆಯಲಾಗುತ್ತದೆ.

ದೇವಾಲಯ ತೆರೆದಿರುವ ಸಮಯ

ದೇವಾಲಯ ತೆರೆದಿರುವ ಸಮಯ

PC:Suresh

ಶ್ರೀ ಶಿವಕಾಮಿ ವಿದ್ಯಾನಾಥರ್ ದೇವಾಲಯ, ಶ್ರೀವಿಲ್ಲಿಪುತೂರ್, ವಿರುಧು ನಗರ್ ಜಿಲ್ಲೆಯಲ್ಲಿರುವ ಈ ದೇವಾಲಯವು ಬೆಳಗ್ಗೆ 6 ಗಂಟೆಯಿಂದ ಮದ್ಯಾಹ್ನ 12 ಗಂಟೆ ವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಈ ದೇವಾಲಯ ತೆರೆದಿರುತ್ತದೆ. ಮಾಧವರ್ ವಲಗಂ ಒಂದು ಪವಿತ್ರ ದೇವಾಲಯವಾಗಿದ್ದು ಶಿವನು ಅನೇಕ ಚಮತ್ಕಾರಗಳನ್ನು ನಡೆಸುತ್ತಾನೆ. ತಮಿಳು ತಿಂಗಳ ಮೊದಲ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಸೂರ್ಯನ ಕಿರಣವು ನೇರವಾಗಿ ದೇವರ ಮೂರ್ತಿಯ ಮೇಲೆ ಬೀಳುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಮಾಧವರ್ ವಲಗಂ ಗೆ ಶಿವಳ್ಳಿಪುತುರುನಿಂದ ಬಸ್‌ ಮೂಲಕ ಹೋಗಬಹುದು. ಮಧುರೈನಿಂದ ಶಿವಳ್ಳಿಪುತುರುಗೆ ಸಾಕಷ್ಟು ಬಸ್‌ಗಳು ಲಭ್ಯವಿದೆ. ಸಮೀಪದ ರೈಲ್ವೆ ಸ್ಟೇಶನ್ ಎಂದರೆ ಶಿವಳ್ಳಿಪುತುರು ರೈಲು ನಿಲ್ದಾಣ. ಇನ್ನು ಸಮೀಪದ ವಿಮಾನ ನಿಲ್ದಾಣವೆಂದರೆ ಮಧುರೈ ವಿಮಾನ ನಿಲ್ದಾಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X