Search
  • Follow NativePlanet
Share
» »ಇಲ್ಲಿರುವ ದೇವಸ್ಥಾನದಲ್ಲಿ ಭಾವುಟ ಹಾರಿಸಿದ್ರೆ ಮಳೆಯಾಗುತ್ತಂತೆ!

ಇಲ್ಲಿರುವ ದೇವಸ್ಥಾನದಲ್ಲಿ ಭಾವುಟ ಹಾರಿಸಿದ್ರೆ ಮಳೆಯಾಗುತ್ತಂತೆ!

ಭಾರತ ದೇಶವು ತನ್ನ ಸಂಸ್ಕೃತಿಯ ಜೊತೆಗೆ ಆಶ್ಚರ್ಯಗಳಿಗೂ ಹೆಸರು ವಾಸಿಯಾಗಿದೆ. ಚಿತ್ರ ವಿಚಿತ್ರ ಪರಂಪರೆ ಇಲ್ಲಿ ಕಾಣಸಿಗುತ್ತದೆ. ಭಾರತದಲ್ಲಿ ಲಕ್ಷಾಂತರ ದೇವಿ ದೇವತೆಯರನ್ನು ಪೂಜಿಸಲಾಗುತ್ತದೆ. ವಿವಿಧ ಅವತಾರದಲ್ಲಿ ದೇವರು ನೆಲೆಯೂರಿದ್ದಾನೆ. ಇಂದು ನಾವು ನಿಮಗೆ ಒಂದು ವಿಶೇಷ ಮಂದಿರದ ಬಗ್ಗೆ ತಿಳಿಸಲಿದ್ದೇವೆ.

ಶಾರದೆಯ ಮಂದಿರ

ಶಾರದೆಯ ಮಂದಿರ

ಈ ಮಂದಿರದ ಜೊತೆಗೆ ಒಂದು ವಿಶೇಷ ಸಂಪ್ರದಾಯವಿದೆ. ಈ ಮಂದಿರದಲ್ಲಿ ಭಾವುಟ ಹಾರಿಸಿದ್ರೆ ಮಳೆಯಾಗುತ್ತಂತೆ. ಬೆಟ್ಟದ ಮೇಲಿನ ದೇವಿ ಶಾರದೆ ಮಧ್ಯಪ್ರದೇಶದ ಮದನ್‍ಮಹಲ್ ಎನ್ನುವ ಬೆಟ್ಟದ ಮೇಲೆ ಈ ಶಾರದೆಯ ಮಂದಿರವಿದೆ. ಇದಕ್ಕೂ ಹಿಂದೆ ಅದು ಪೂರ್ವ ಗೊಂಡಾವನ್ ಸಾಮ್ರಾಜ್ಯದ ಕ್ಷೇತ್ರವಾಗಿತ್ತು. ಇಲ್ಲಿರುವ ಮಂದಿರವು ವಿಜಯದ ಸಂಕೇತವಾಗಿದೆ.

ನೀರಿನಿಂದ ಶಿವಲಿಂಗ ಮಾಡಿ ಪಾರ್ವತಿ ಶಿವನನ್ನು ಪೂಜಿಸಿದ್ದು ಇಲ್ಲೇನೀರಿನಿಂದ ಶಿವಲಿಂಗ ಮಾಡಿ ಪಾರ್ವತಿ ಶಿವನನ್ನು ಪೂಜಿಸಿದ್ದು ಇಲ್ಲೇ

ಭಕ್ತರ ಕಷ್ಟ ನಿವಾರಣೆ

ಭಕ್ತರ ಕಷ್ಟ ನಿವಾರಣೆ

ಭಕ್ತರು ತಮ್ಮ ಸಮಸ್ಯೆಗಳನ್ನು ಹಿಡಿದುಕೊಂಡು ದೇವಿಯ ಬಳಿ ಬರುತ್ತಾರೆ. ದೇವಿ ಭಕ್ತರ ಕಷ್ಟವನ್ನು ನಿವಾರಣೆ ಮಾಡುತ್ತಾಳೆ. ಇದು ಹಿಂದೂಗಳ ಆಸ್ಥದ ಕೇಂದ್ರವಾಗಿದೆ. ವಿಶೇಷ ಸಂದರ್ಭದಲ್ಲಿ ಇಲ್ಲಿ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತದೆ. ಆಗ ದೂರದೂರದ ಊರುಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ರಾಣಿ ದುರ್ಗಾವತಿ ನಿರ್ಮಿಸಿದ ಮಂದಿರ

ರಾಣಿ ದುರ್ಗಾವತಿ ನಿರ್ಮಿಸಿದ ಮಂದಿರ

ಗೊಂಡಾವನ ಸಾಮ್ರಾಜ್ಯದ ರಾಣಿ ದುರ್ಗಾವತಿ ಈ ಮಂದಿರವನ್ನು ನಿರ್ಮಿಸಿದ್ದಳು. ಗೊಂಡಾವನ ಸಾಮ್ರಾಜ್ಯದಲ್ಲಿ ಬರಗಾಲ ಆವರಿಸಿತ್ತು. ಆಗ ದುರ್ಗಾವತಿ ಬರಗಾಲದಿಂದ ಮುಕ್ತಿಹೊಂದಲು ಶಾರದ ದೇವಿಯನ್ನು ಆಹ್ವಾನಿಸಿಳು. ನಂತರ ಶಾರದೆಯ ಮಂದಿರವನ್ನು ನಿರ್ಮಿಸಿದಳು. ದುರ್ಗಾವತಿ ಶ್ರಾವಣ ಸೋಮವಾರದಂದು ಈ ಮಂದಿರದಲ್ಲಿ ಭಾವುಟ ಹಾರಿಸಿದ್ದಳು. ಆ ನಂತರ ಜೋರಾಗಿ ಮಳೆ ಸುರಿಯಲು ಪ್ರಾರಂಭವಾಯಿತು. ಬರಡುಭೂಮಿ ಹಸಿರಾಯಿತು ಎನ್ನಲಾಗುತ್ತದೆ.

500 ವರ್ಷ ಹಳೆಯ ಮಂದಿರ

500 ವರ್ಷ ಹಳೆಯ ಮಂದಿರ

ಈ ಮಂದಿರ ಸುಮಾರು 500 ವರ್ಷ ಹಳೆಯದು ಎನ್ನಲಾಗುತ್ತದೆ. ರಾಣಿ ದುರ್ಗಾವತಿ ಈ ಮಂದಿರವನ್ನು 1550-60ನೇ ಇಸವಿಯಲ್ಲಿ ನಿರ್ಮಿಸಿದ್ದು ಎನ್ನಲಾಗುತ್ತದೆ. ರಾಣಿ ಶಾರದಾ ದೇವಿಯ ಪೂಜೆ ಮಾಡಲು ಪ್ರತಿದಿನ ಈ ಮಂದಿರಕ್ಕೆ ಬರುತ್ತಿದ್ದಳು ಎನ್ನುತ್ತಾರೆ ಅಲ್ಲಿನ ಸ್ಥಳೀಯರು. ರಾಣಿ ದುರ್ಗಾವತಿ 1556ರಲ್ಲಿ ಮಾಳವರ ಬಾಜಬಹಾದ್ದೂರ್‍ನ್ನು ಯುದ್ಧದಲ್ಲಿ ಸೋಲಿಸಿ ಶಾರದೆಯ ಮಂದಿರಲ್ಲಿ ವಿಜಯದ ಧ್ವಜ ಹಾರಿಸಿದ್ದಳು. ಅಂದಿನಿಂದ ಇಂದಿನವರೆಗೆ ಧ್ವಜ ಹಾರಿಸುವ ಸಂಪ್ರದಾಯ ಮುಂದುವರಿದಿದೆ.

ಮೂಲ ಪ್ರತಿಮೆ ಹಿಂಭಾಗದಲ್ಲಿದೆ

ಮೂಲ ಪ್ರತಿಮೆ ಹಿಂಭಾಗದಲ್ಲಿದೆ

ದೇವಿಯ ಮೂಲ ಪ್ರತಿಮೆಯು ದೇವಸ್ಥಾನದ ಹಿಂದಿನ ಭಾಗದಲ್ಲಿ ಸ್ಥಾಪನೆ ಮಾಡಲಾಗಿದೆ. ದೇವಸ್ಥಾನದ ಎದುರಿಗಿರುವ ಮೂರ್ತಿ ಮೂಲ ಮೂರ್ತಿಯಲ್ಲ. ದೇವಿಯ ಈ ಮೂರ್ತಿ ಸುಮಾರು 77 ವರ್ಷ ಹಿಂದಿನದ್ದು. ಸುಮಾರು 100 ವರ್ಷಗಳ ಹಿಂದೆ ಇಲ್ಲಿನ ಪೂಜಾರಿಯನ್ನು ಕೊಂದು ದೇವಿಯ ಮೂರ್ತಿಯನ್ನು ನಷ್ಟಮಾಡಲಾಗಿತ್ತು. ನಂತರ ಸ್ಥಳೀಯರ ಸಹಾಯದಿಂದ ಬೇರೆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಮಂದಿರಕ್ಕೆ ಬೇರೆ ರೂಪ ನೀಡಲಾಯಿತು ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X