Search
  • Follow NativePlanet
Share
» »ತಿರುಪತಿ ಬಳಿಯ ಮತ್ತೊಂದು ಪ್ರಸಿದ್ಧ ವೆಂಕಟೇಶ್ವರ ದೇಗುಲ!

ತಿರುಪತಿ ಬಳಿಯ ಮತ್ತೊಂದು ಪ್ರಸಿದ್ಧ ವೆಂಕಟೇಶ್ವರ ದೇಗುಲ!

By Vijay

ಇದೊಂದು ವೆಂಕಟೇಶ್ವರನಿಗೆ ಮುಡಿಪಾದ ಪವಿತ್ರವಾದ ಸನ್ನಿಧಿಯಾಗಿದೆ. ಈ ವೆಂಕಟೇಶ್ವರನ ಸನ್ನಿಧಿಗೆ ಸಂಬಂಧಿಸಿದಂತೆ ಸಾಕಷ್ಟು ಮಹತ್ವವಿದೆ. ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ವೆಂಕಟೇಶ್ವರನ ದೇವಾಲಯಗಳಲ್ಲಿ ವೆಂಕಟೇಶ್ವರನ ಪ್ರತಿಮೆ ನೋಡೆ ನೋಡಿರುತ್ತೀರಿ. ಆದರೆ ಅವೆಲ್ಲವುಗಳಿಗಿಂತಲೂ ವಿಶೇಷವಾದ ವೆಂಕಟೇಶ್ವರನ ವಿಗ್ರಹ ಇಲ್ಲಿ ಕಾಣಬಹುದಾಗಿದೆ.

ತಿರುಪತಿ-ತಿರುಮಲದ ಅದ್ಭುತ ದಂತಕಥೆ!

ಹೌದು, ಇಲ್ಲಿ ವೆಂಕಟೇಶ್ವರನು ಅಭಯ ಹಸ್ತವನ್ನು ಚಾಚಿದ್ದು ಅತ್ಯಂತ ಪ್ರಸನ್ನತಾ ಭಾವದಲ್ಲಿರುವುದನ್ನು ಕಾಣಬಹುದು. ಹಾಗಾಗಿ ಇದನ್ನು ಪ್ರಸನ್ನ ವೆಂಕಟೇಶ್ವರನ ದೇವಾಲಯ ಎಂದೆ ಕರೆಯಲಾಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ಇದು ತಿರುಪತಿಯಿಂದ ಕೇವಲ 15 ಕಿ.ಮೀ ಗಳಷ್ಟು ದೂರದಲ್ಲಿರುವ ವೆಂಕಟೇಶ್ವರನ ಮತ್ತೊಂದು ಪವಿತ್ರ ದೇವಾಲಯವಾಗಿ ಅಪಾರ ಪ್ರಮಾಣದಲ್ಲಿ ಭಕ್ತರನ್ನು ಆಕರ್ಷಿಸುತ್ತದೆ.

ತಿರುಪತಿ ಬಳಿಯ ಮತ್ತೊಂದು ಪ್ರಸಿದ್ಧ ವೆಂಕಟೇಶ್ವರ ದೇಗುಲ!

ಅಭಯ ಹಸ್ತ, ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Manojkumar03

ತಿರುಪತಿಯ ವೆಂಕಟೇಶ್ವರನ ಸನ್ನಿಧಿಗೆ ಭೇಟಿ ನೀಡುವ ಭಕ್ತಾದಿಗಳಲ್ಲಿ ಸಾಕಷ್ಟು ಜನರು ಈ ಪ್ರಸನ್ನ ವೆಂಕಟೇಶ್ವರನ ದೇವಸ್ಥಾನಕ್ಕೂ ಸಹ ಭೇಟಿ ನೀಡಿಯೆ ಹೋಗುತ್ತಾರೆ. ನಂಬಿಕೆಯಂತೆ ಇಲ್ಲಿ ವೆಂಕಟೇಶ್ವರನು ಬಲು ಆನಂದದಿಂದ ನೆಲೆಸಿರುವುದರಿಂದ ಬೇಡಿ ಕೊಳ್ಳುವ ಭಕ್ತರ ಕಾಮನೆಗಳನ್ನು ಅತಿ ಶೀಘ್ರದಲ್ಲಿಯೆ ನೆರವೇರಿಸುತ್ತಾನಂತೆ.

ಪ್ರತೀತಿಯಂತೆ, ಈ ಸ್ಥಳದಲ್ಲಿಯೆ ವೆಂಕಟೇಶ್ವರನು ಮದುವೆಯಾಗಿ ಆನಂದದಿಂದ ತನ್ನ ಮದುವೆಗೆ ಸಾಕ್ಷಿಯಾದ ಸಕಲರನ್ನು ಆಶೀರ್ವದಿಸಿದ್ದನಂತೆ. ಇದೆ ಸ್ಥಳದಲ್ಲಿಯೆ ಶ್ರೀ ಸಿದ್ಧೇಶ್ವರ ಸ್ವಾಮಿ ಹಾಗೂ ಇತರೆ ಋಷಿಗಳಿಗೆ ವೆಂಕಟೇಶ್ವರನು ತುಂಬು ಹೃದಯದಿಂದ ಆಶೀರ್ವದಿಸಿದ್ದಾನಂತೆ. ಇಲ್ಲಿಯೆ ಪದ್ಮಾವತಿ ಅಮ್ಮನವರೊಂದಿಗೆ ಒಂದಾಗಿ ಕೆಲ ಕಾಲ ನಿಂತು ತಿರುಪತಿಗೆ ತೆರಳಿದ್ದನಂತೆ.

ತಿರುಪತಿ ಬಳಿಯ ಮತ್ತೊಂದು ಪ್ರಸಿದ್ಧ ವೆಂಕಟೇಶ್ವರ ದೇಗುಲ!

ಚಿತ್ರಕೃಪೆ: Bhaskaranaidu

ಹಾಗಾಗಿ ಈ ಸ್ಥಳವು ಇನ್ನಿಲ್ಲದ ಮಹತ್ವಗಳಿಸಿದೆ. ಅದಕ್ಕೆ ಪೂರಕವಾಗಿ ಇಲ್ಲಿ ವೆಂಕಟೇಶ್ವರನ ದೇವಾಲಯ ನಿರ್ಮಿಸಿದ್ದು ಸಾರ್ಥಕ ಭಾವನೆಯನ್ನು ಭಕ್ತಾದಿಗಳಲ್ಲಿ ಮೂಡಿಸುತ್ತದೆ. ಅಲ್ಲದೆ, ವಿಷ್ಣು ಹಾಗೂ ಶಿವನ ಏಕತ್ವವನ್ನು ಬಿಂಬಿಸುವ ಪೆರುಮಾಳನ ವಿಗ್ರಹವು ಇಲ್ಲಿರುವುದರಿಂದ ಈ ದೇವಾಲಯಕ್ಕೆ ಇನ್ನಷ್ಟು ಮಹತ್ವ ಬಂದಿದೆ.

ಹಾಗಾಗಿ ಈ ದೇವಾಲಯದಲ್ಲಿ ಕೇವಲ ವಿಷ್ಣು ದೇವರಿಗೆ ಸಂಬಂಧಿಸಿದಂತೆ ಮಾತ್ರವಲ್ಲದೆ ಶಿವನಿಗೆ ಸಂಬಂಧಿಸಿದ ಹಬ್ಬ ಹರಿದಿನಗಳನ್ನೂ ಸಹ ಬಲು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ರೀತಿಯಾಗಿ ಇದು ಶೈವ-ವೈಷ್ಣವರ ಅಚ್ಚುಮೆಚ್ಚಿನ ದೇವಾಲಯವಾಗಿದೆ ಎಂತಲೂ ಹೇಳಬಹುದು. ಅದರ ಪ್ರಕಾರವಾಗಿ ಶೈವ ಹಾಗೂ ವೈಷ್ಣವರಿಬ್ಬರೂ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ತಿರುಪತಿ ಬಳಿಯ ಮತ್ತೊಂದು ಪ್ರಸಿದ್ಧ ವೆಂಕಟೇಶ್ವರ ದೇಗುಲ!

ಚಿತ್ರಕೃಪೆ: Bhaskaranaidu

ಈ ದೇವಾಲಯದ ಮತ್ತೊಂದು ಆಕರ್ಷಣೆ ಎಂದರೆ ವಾಯು ದೇವರ ಅತ್ಯಂತ ಭವ್ಯವಾದ ವಿಗ್ರಹ. ಇದು ಬಲು ಶಕ್ತಿಯುತ ವಿಗ್ರಹವಾಗಿದೆ ಎಂದು ನಂಬಲಾಗಿದೆ. ಈ ವಿಗ್ರಹವನ್ನು ಅತ್ಯಂತ ಭಕ್ತ್ ಹಾಗೂ ಶೃದ್ಧೆಗಳಿಂದ ಪೂಜಿಸಿದರೆ ಕಲಿಯುಗದಲ್ಲಿ ಎದುರಾಗಿರುವ ಎಲ್ಲ ತೊಂದರೆಗಳು ಮಾಯವಾಗುತ್ತವೆ ಎಂದು ನಂಬಲಾಗುತ್ತದೆ.

ಆಂಧ್ರದ ಪ್ರಸಿದ್ಧ ಲಕ್ಷ್ಮಿ-ನರಸಿಂಹ ದೇವಾಲಯಗಳು!

ಮೇ-ಜೂನ್ ಸಮಯದಲ್ಲಿ ನಡೆಯುವ ವಾರ್ಷಿಕ ಬ್ರಹ್ಮೋತ್ಸವ ಈ ದೇವಾಲಯದ ಅತಿ ಮುಖ್ಯ ಉತ್ಸವವಾಗಿದೆ. ಅಲ್ಲದೆ ಇತರೆ ಉತ್ಸವಾದಿಗಳನ್ನು ಆಯಾ ಕಾಲದಲ್ಲಿ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ದೇವಾಲಯವು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಡಮಲಪೇಟ ತಾಲೂಕಿನ ಅಪ್ಪಾಲಯಗುಂಟ ಎಂಬ ಗ್ರಾಮದಲ್ಲಿದೆ. ಇದು ತಿರುಪತಿಯಿಂದ ಕೇವಲ 15 ಕಿ.ಮೀ ದೂರವಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X