Search
  • Follow NativePlanet
Share
» »ದೆಹಲಿಯಲ್ಲಿರುವ ಮುರುಗನ ದೇವಾಲಯ!

ದೆಹಲಿಯಲ್ಲಿರುವ ಮುರುಗನ ದೇವಾಲಯ!

ದೆಹಲಿಯ ಸೆಕ್ಟರ್ 7 ಆರ್ ಕೆ ಪುರಂನಲ್ಲಿರುವ ಉತ್ತರ ಮಲೈ ಮಂದಿರವು ಮುರುಗನ್ ದೇವರಿಗೆ ಮುಡಿಪಾದ ವಿಶಿಷ್ಟ ದೇವಾಲಯವಾಗಿದ್ದು ಅಲ್ಲಿ ಮುರುಗನು ಸ್ವಾಮಿನಾಥನಾಗಿ ಆರಾಧಿಸಲ್ಪಡುತ್ತಾನೆ

By Vijay

ಕರ್ನಾಟಕದಲ್ಲಿ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯ ಸ್ವಾಮಿಯಾಗಿ ಪೂಜಿಸಲ್ಪಡುವ ದೇವನು ತಮಿಳಿನಲ್ಲಿ ಪ್ರಖ್ಯಾತ ಮುರುಗನ್ ಅಥವಾ ಸ್ವಾಮಿನಾಥನಾಗಿ ಅಷ್ಟೆ ಭಕ್ತ್ಯಾದರಗಳಿಂದ ಪೂಜಿಸಲ್ಪಡುತ್ತಾನೆ. ಮುರುಗನಿಗೆ ಮುಡಿಪಾಗಿರುವ ಅನೇಕ ದೇವಾಲಯಗಳನ್ನು ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿಯೆ ಹೆಚ್ಚಾಗಿ ಕಾಣಬಹುದು.

ಆದರೆ ದೆಹಲಿಯಲ್ಲೂ ಸಹ ಮುರುಗನಿಗೆ ಮುಡಿಪಾದ ದೇವಾಲಯವೊಂದಿದ್ದು ಸಾಕಷ್ಟು ಭಕ್ತ ಜನರನ್ನು ಆಕರ್ಷಿಸುತ್ತದೆ. ಅದನ್ನು ಉತ್ತರ ಮಲೈ ಮಂದಿರ ಅಂದರೆ ಗುಡ್ಡದ ಮೇಲಿನ ದೇವಾಲಯವೆಂದೆ ಕರೆಯುತ್ತಾರೆ. ಇಲ್ಲಿ ಮುರುಗನು ಸ್ವಾಮಿನಾಥನಾಗಿ ಭಕ್ತರಿಂದ ಪೂಜಿಸಲ್ಪಡುತ್ತಾನೆ.

ಚಿತ್ರಕೃಪೆ: Ravik

ದೆಹಲಿಯಲ್ಲಿರುವ ಮುರುಗನ ದೇವಾಲಯ!

ದೆಹಲಿಯಲ್ಲೂ ಸಹ ದಕ್ಷಿಣ ಭಾರತ ಮೂಲದ ಜನರು ಸಹಸ್ರಾರು ಸಂಖ್ಯೆಯಲ್ಲಿರುವುದರಿಂದ ಆ ಜನರ ಪಾಲಿನ ಪವಿತ್ರ ದೇವಾಲಯವಾಗಿದೆ ಮಲೈ ಮಂದಿರ. ಕನ್ನಡಿಗರು ಸೇರಿದಂತೆ ದೆಹಲಿಯಲ್ಲಿರುವ ತಮಿಳಿಗರು, ತೆಲುಗು ಭಾಷಿಕರು ಹಾಗು ಮಳಯಾಳಿ ಭಾಷಿಕರು ಈ ದೇವಾಲಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ನೈರುತ್ಯ ದೆಹಲಿಯ ವಸಂತ ವಿಹಾರವನ್ನು ಅಭಿಮುಖವಾಗಿ ನೋಡುತ್ತಿರುವ ಈ ದೇವಾಲಯವು ಸೆಕ್ಟರ್ - 7 ಆರ್ ಕೆ ಪುರಂ ಎಂಬ ಪ್ರದೇಶದಲ್ಲಿರುವ ಚಿಕ್ಕ ಗುಡ್ಡವೊಂದರ ಮೇಲೆ ಸ್ಥಿತವಿದ್ದು ಜನರನ್ನು ಆಕರ್ಷಿಸುತ್ತದೆ. ಗರ್ಭಗುಡಿಯಲ್ಲಿ ಮುರುಗನನ್ನು ಸ್ವಾಮಿನಾಥನ ರೂಪದಲ್ಲಿ ಆರಾಧಿಸಲಾಗುತ್ತದೆ.

ಕದ್ದಿರಾಂಪುರದ ಮುರುಗನ ದೇವಾಲಯ

ಇಲ್ಲಿ ಮುಖ್ಯವಾದ ಸ್ವಾಮಿನಾಥನ ದೇವಾಲಯದ ಜೊತೆ ಜೊತೆಗೆ ಕರ್ಪಗ ಗಣೇಶನ ದೇವಾಲಯ, ಮೀನಾಕ್ಷಿ ಅಮ್ಮನವರ ದೇಗುಲ ಹಾಗೂ ಶ್ರೀ ಸುಂದರೇಶ್ವರನಿಗೆ ಮುಡಿಪಾದ ದೇಗುಲಗಳನ್ನೂ ಸಹ ಕಾಣಬಹುದಾಗಿದೆ. ದೇವಾಲಯದ ಹೊರ ಭಾಗದಲ್ಲಿ ನಾನಿಲ್ಲಿರುವಾಗ ನಿನಗೇಕೆ ಭಯ? ಎಂದು ತಮಿಳಿನಲ್ಲಿ ಬರೆಯಲಾಗಿರುವುದನ್ನು ಕಾಣಬಹುದು.

ಶಿವನಿಗೆ ಶಿಕ್ಷಕನಾಗಿರುವ ಸ್ವಾಮಿನಾಥಸ್ವಾಮಿಯ ನೆಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X