Search
  • Follow NativePlanet
Share
» »ಅಯ್ಯಾ ಲೋನಾವಲಾ ಎಂಥ ಸುಂದರ ಗಿರಿಧಾಮವಯ್ಯಾ

ಅಯ್ಯಾ ಲೋನಾವಲಾ ಎಂಥ ಸುಂದರ ಗಿರಿಧಾಮವಯ್ಯಾ

By Vijay

ಮಹಾರಾಷ್ಟ್ರದ ಪುಣೆ ಜಿಲ್ಲೆಯು ಮಾಹಿತಿ ತಂತ್ರಜ್ಞಾನದಲ್ಲಿ ಎಷ್ಟು ಪ್ರಸಿದ್ಧಿಯನ್ನು ಪಡೆದಿದೆಯೊ ಅಷ್ಟೆ ಹೆಸರುವಾಸಿಯಾಗುತ್ತಿದೆ ಬೇಸಿಗೆಯಲ್ಲಿನ ಸುಡು ಸುಡು ಬಿಸಿಲಿಗೆ. ಆದರೆ ಅಷ್ಟೊಂದಾಗಿ ಚಿಂತಿಸಬೇಕಾಗಿಲ್ಲ..ಏಕೆಂದರೆ ಈ ಜಿಲ್ಲೆಯು ಬೇಸಿಗೆಯ ಬಿಸಿಯಲ್ಲಿ ಬಳಲುವವರಿಗೆ ನೈಸರ್ಗಿಕವಾದಂತಹ ಹವಾ ನಿಯಂತ್ರಿತ ತಾಣವನ್ನೂ ಒದಗಿಸಿದೆ. ವಾರಾಂತ್ಯಗಳಲ್ಲಿ ಈ ತಾಣಕ್ಕೆ ಭೇಟಿ ನೀಡಿದರೆ ಸಾಕು...ಮುಂದಿನ ವಾರದಲ್ಲಿ ಬೇಕಾಗಿರುವ ಉತ್ಸಾಹವನ್ನು ರಿಚಾರ್ಜ್ ಮಾಡಿಕೊಳ್ಳಬಹುದು.

ಪುಣೆ ನಗರದಿಂದ ಕೇವಲ 64 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಸುಂದರ ಗಿರಿಧಾಮ ಭೇಟಿ ನೀಡುವವರಿಗೆ ಅನೇಕ ಆಯ್ಕೆಗಳನ್ನು ಒದಗಿಸುತ್ತದೆ. ಪ್ರಪ್ರಥಮವಾಗಿ ಈ ಘಟ್ಟ ಪ್ರದೇಶಗಳಲ್ಲಿ ವಾಹನಗಳ ಮೂಲಕ ಸಾಗುವಾಗಲೆ ಮೈಮನಗಳಲ್ಲಿ ರೋಮಾಂಚನದ ವಿದ್ಯುತ್ ಸಂಚಾರವಾಗುತ್ತದೆ. ಕುಟುಂಬ ಸಮೇತ ಬರುವವರು ಬೇಕಾದರೆ ಇಲ್ಲಿನ ರಿಸಾರ್ಟ್ ಗಳಲ್ಲಿ ತಂಗಬಹುದಾದರೆ ಯುವಜನಾಂಗವು ಜನಪ್ರಿಯವಾದ ಚಾರಣದಲ್ಲಿ ತಮ್ಮನ್ನು ತಾವು ಪಳಗಿಸಿಕೊಳ್ಳಬಹುದು.

ಇನ್ನೂ ಇಲ್ಲಿ ದೊರೆಯುವ ಚಿಕ್ಕಿಗಳನ್ನು ತಿನ್ನದೆ ಇರಬೇಡಿ. ಇದೊಂದು ವಿಶಿಷ್ಟವಾದ ಮಿಠಾಯಿಯಾಗಿದ್ದು ಬೆಲ್ಲದ ಪಾಕು ಹಾಗೂ ಕಡಲೆಬೀಗಗಳಿಂದ ಮಾಡಲ್ಪಟ್ಟಿರುತ್ತದೆ. "ಲೋನಾವಲಾ ಚಿಕ್ಕಿ" ಜಗತ್ಪ್ರಸಿದ್ಧವಾಗಿದೆ.

ಲೋನಾವಲಾ:

ಲೋನಾವಲಾ:

ಸಾಮಾನ್ಯವಾಗಿ ಚಾರಣಿಗರು ರಾಜಮಾಚಿ ತಾಣದಿಂದ ಚಾರಣ ಮಾರ್ಗವನ್ನು ಆರಂಭಿಸುತ್ತಾರೆ. ಇದು ಲೋನಾವಲಾದಿಂದ ಆರು ಕಿ.ಮೀ ದೂರದಲ್ಲಿದೆ ಅಲ್ಲದೆ ಲೋನಾವಲಾದಲ್ಲಿ ಬುಶಿ ಆಣೆಕಟ್ಟು, ಡ್ಯೂಕ್ ನೋಸ್, ಲೋನಾವಲಾ ಕೆರೆ, ಟೈಗರ್ ಲೀಪ್ ನಂತಹ ಗಮ್ಯ ಆಕರ್ಷಣೀಯ ತಾಣಗಳನ್ನು ಕಾಣಬಹುದು.

ಚಿತ್ರಕೃಪೆ: Ravinder Singh Gill

ಲೋನಾವಲಾ:

ಲೋನಾವಲಾ:

ಹಸಿರಿನಿಂದ ಕೂಡಿದ ಸುಂದರವಾದ ಕಣಿವೆಗಳು, ಅಗಾಧವಾದ ಪ್ರಕೃತಿ ಸೌಂದರ್ಯ ನೋಡುಗರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ.

ಚಿತ್ರಕೃಪೆ: Arjun Singh Kulkarni

ಲೋನಾವಲಾ:

ಲೋನಾವಲಾ:

ಮುಂಬೈ - ಪುಣೆ ಎಕ್ಸ್ ಪ್ರೆಸ್ ಹೆದ್ದಾರಿ ಮೂಲಕ ಸಾಗುವಾಗ ಲೋನಾವಲಾದ ಘಟ್ಟ ಪ್ರದೇಶಗಳು ಭವ್ಯವಾಗಿ ಗೋಚರಿಸುತ್ತವೆ ಹಾಗು ಅಗಾಧವಾದ ಪ್ರಯಾಣಾನುಭವವನ್ನು ಒದಗಿಸುತ್ತದೆ.

ಚಿತ್ರಕೃಪೆ: Nagesh Kamath

ಲೋನಾವಲಾ:

ಲೋನಾವಲಾ:

ಲೋನಾವಲಾದಲ್ಲಿರುವ ಟೈಗರ್ ಪಾಯಿಂಟ್. ಮಳೆಗಾಲದ ಸಂದರ್ಭದಲ್ಲಿ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುತ್ತದೆ. ವಿಶೇಷವೆಂದರೆ ಮಳೆಗಾಲದಲ್ಲಿ ಮಾತ್ರ ಉದ್ಭವಿಸುವ ಜಲಪಾತವನ್ನು ಇಲ್ಲಿ ಕಾಣಬಹುದು.

ಲೋನಾವಲಾ:

ಲೋನಾವಲಾ:

ಲೋನಾವಲಾದಲ್ಲಿರುವ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಬುಶಿ ಆಣೆಕಟ್ಟು. ಈ ಜಲಾಶಯವನ್ನು ತಲುಪಲು ಹೆಚ್ಚು ಆಳವಿಲ್ಲದ ನೀರಿನ ಒಂದು ಚಿಕ್ಕ ಕೊಳದಿಂದಲೆ ಸಾಗಬೇಕು.

ಚಿತ್ರಕೃಪೆ: Ripanvc

ಲೋನಾವಲಾ:

ಲೋನಾವಲಾ:

ಲೋನಾವಲಾದ ಬುಶಿ ಆಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರು. ಪಿಕ್ನಿಕ್ ಗೆ ಹೇಳಿ ಮಾಡಿಸಿದ ತಾಣವಿದು.

ಲೋನಾವಲಾ:

ಲೋನಾವಲಾ:

ಮಳೆಗಾಲದ ಸಂದರ್ಭದಲ್ಲಿ ಚುಮು ಚುಮು ಮಳೆಯ ಜೊತೆ ಇಬ್ಬನಿಯು ನಿಮ್ಮನ್ನು ಸ್ವಾಗತಿಸುತ್ತದೆ. ಒಂದು ರೀತಿಯ ಹೊಗೆ ಪ್ರದೇಶದಲ್ಲಿ ಬಂದೆವೇನೊ ಎಂಬಂತೆ ಸಂತೋಷ ನಿಮಗುಂಟಾಗುತ್ತದೆ.

ಚಿತ್ರಕೃಪೆ: Abhijeet Safai

ಲೋನಾವಲಾ:

ಲೋನಾವಲಾ:

ಲೋನಾವಲಾ ಕೆರೆಯ ಭವ್ಯವಾದ ನೋಟ.

ಚಿತ್ರಕೃಪೆ: سبأ

ಲೋನಾವಲಾ:

ಲೋನಾವಲಾ:

ಲೋನಾವಲಾ ಕೆರೆಯ ತಟದಲ್ಲಿ ಕುಳಿತು ಅಲ್ಲಲ್ಲಿ ವಿರಾಮದ ಸಮಯವನ್ನು ಆನಂದಮಯವಾಗಿ ಕಳೆಯುತ್ತಿರುವ ಪ್ರವಾಸಿಗರು ಹಾಗೂ ಕುಟುಂಬಗಳು.

ಚಿತ್ರಕೃಪೆ: سبأ

ಲೋನಾವಲಾ:

ಲೋನಾವಲಾ:

ಪ್ರಶಾಂತಮಯ ಹಾಗೂ ಅಂದಮಯವಾಗಿ ಗೋಚರಿಸುವ ಲೋನಾವಲಾ ಬೆಟ್ಟಗಳು.

ಚಿತ್ರಕೃಪೆ: Ramnath Srinivasan

ಲೋನಾವಲಾ:

ಲೋನಾವಲಾ:

ಲೋನಾವಲಾವನ್ನು ರಸ್ತೆ ಹಾಗೂ ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಲೋನಾವಲಾ ರೈಲು ನಿಲ್ದಾಣವು ಮುಂಬೈ - ಪುಣೆ ರೈಲು ಮಾರ್ಗದ ಮಧ್ಯದಲ್ಲಿ ಬರುವ ಒಂದು ಪ್ರಮುಖ ನಿಲ್ದಾಣವಾಗಿದೆ. ಅಲ್ಲದೆ ಮುಂಬೈ - ಪುಣೆ ಎಕ್ಸ್ ಪ್ರೆಸ್ ಹೆದ್ದಾರಿ ಹಾಗೂ ಮುಂಬೈ - ಚೆನ್ನೈ ಹೆದ್ದಾರಿಗಳು ಲೋನಾವಲಾದ ಮೂಲಕ ಸಾಗುತ್ತವೆ. ಮುಂಬೈ ಹಾಗೂ ಪುಣೆ ಎರಡೂ ನಗರಗಳಿಂದಲೂ ಬಸ್ಸು ಹಾಗೂ ರೈಲುಗಳು ಲೋನಾವಲಾಗೆ ಲಭ್ಯವಿದೆ.

ಚಿತ್ರಕೃಪೆ: Superfast1111

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X