Search
  • Follow NativePlanet
Share
» »ಜಗತ್ತಿನ ಅಚ್ಚರಿ ಬಗ್ಗೆ ಆಸಕ್ತಿ ಇದ್ದರೆ ಉಲ್ಕೆಯಿಂದಾಗಿರುವ ಸರೋವರಕ್ಕೊಮ್ಮೆ ಭೇಟಿ ನೀಡಿ

ಜಗತ್ತಿನ ಅಚ್ಚರಿ ಬಗ್ಗೆ ಆಸಕ್ತಿ ಇದ್ದರೆ ಉಲ್ಕೆಯಿಂದಾಗಿರುವ ಸರೋವರಕ್ಕೊಮ್ಮೆ ಭೇಟಿ ನೀಡಿ

ಉಲ್ಕೆಯಿಂದ ನಿರ್ಮಿತವಾಗಿರುವ ಸರೋವರದ ಬಗ್ಗೆ ಯಾವತ್ತಾದರೂ ಕೇಳಿದ್ದೀರಾ ಅದು ಹೇಗೆ ಇರುತ್ತದೆ ಎನ್ನೋದಾದರೂ ನಿಮಗೆ ಗೊತ್ತಾ? ಮಹಾರಾಷ್ಟ್ರದಲ್ಲಿರುವ ಲೋನಾರ್ ದೈತ್ಯಗುಂಡಿ ಜ್ವಾಲಾಮುಖಿ ಕಲ್ಲಿನಲ್ಲಿ ಸಂಗ್ರಹಗೊಂಡಿರುವ ಜಗತ್ತಿನ ಏಕೈಕ ಉಪ್ಪು ನೀರು ಸರೋವರ ಇದಾಗಿದೆ.

ಇಲ್ಲಿನ ಕಾಲೇಜ್ ಕ್ಯಾಂಪಸ್‌ನಲ್ಲಿ ಕುರ್ಚಿ ತನ್ನಷ್ಟಕ್ಕೆ ಓಡಾಡುತ್ತಂತೆ!ಇಲ್ಲಿನ ಕಾಲೇಜ್ ಕ್ಯಾಂಪಸ್‌ನಲ್ಲಿ ಕುರ್ಚಿ ತನ್ನಷ್ಟಕ್ಕೆ ಓಡಾಡುತ್ತಂತೆ!

ಎಲ್ಲಿದೆ ಈ ಉಲ್ಕೆ ಸರೋವರ

ಎಲ್ಲಿದೆ ಈ ಉಲ್ಕೆ ಸರೋವರ

PC:V4vjk
ಉಲ್ಕೆಯಿಂದ ನಿರ್ಮಿತವಾದ ಸರೋವರವು ಮಹಾರಾಷ್ಟ್ರದಲ್ಲಿದೆ. ಮಹಾರಾಷ್ಟ್ರದ ಲೋನಾರ್ ನಗರದಲ್ಲಿ ಈ ಸರೋವರವಿದೆ. ಮುಂಬೈನಿಂದ 550 ಕಿಲೋ ಮೀಟರ್ ದೂರದಲ್ಲಿದೆ ಮತ್ತು ಔರಂಗಾಬಾದ್ ನಗರದಿಂದ 160 ಕಿಲೋ ಮೀಟರ್ ಅಂತರದಲ್ಲಿದೆ.

ಲೋನಾರ್ ಸರೋವರ ಹೇಗಾಯಿತು?

ಲೋನಾರ್ ಸರೋವರ ಹೇಗಾಯಿತು?

PC:Praxsans
ಸುಮಾರು 52,000 ವರ್ಷಗಳ ಹಿಂದೆ ಉಲ್ಕೆಯೊಂದು ಇಲ್ಲಿಗೆ ಅಪ್ಪಳಿಸಿದ ಪರಿಣಾಮ ಲೋನಾರ್ ನಲ್ಲಿ ದೈತ್ಯಗುಂಡಿ ನಿರ್ಮಾಣವಾಯ್ತು ಎನ್ನಲಾಗುತ್ತದೆ. ವರ್ಷಗಳ ಕಳೆದುಹೋದ ಮೇಲೆ ದೈತ್ಯಗುಂಡಿ ಸರೋವರವಾಗಿ ಪರಿವರ್ತನೆಗೊಂಡಿದೆ ಮತ್ತು ಇದು ಸದ್ಯ ಲೋನಾರ್ ಸರೋವರ ಅಂತಲೇ ಪ್ರಸಿದ್ದವಾಗಿದೆ. ಲೋನಾರ್ ದೈತ್ಯಗುಂಡಿ ಜ್ವಾಲಾಮುಖಿ ಕಲ್ಲಿನಲ್ಲಿ ಸಂಗ್ರಹಗೊಂಡಿರುವ ಜಗತ್ತಿನ ಏಕೈಕ ಉಪ್ಪು ನೀರು ಸರೋವರ ಇದಾಗಿದೆ.

ದೈತ್ಯಗುಂಡಿ ಸರೋವರ

ದೈತ್ಯಗುಂಡಿ ಸರೋವರ

PC:NASA
ಲೋನಾರ್ ಕುಳಿ ಬಸಾಲ್ಟ್ ರಾಕ್ನಲ್ಲಿ ರೂಪುಗೊಂಡ ಉತ್ತಮ ಸಂರಕ್ಷಿತ ಪರಿಣಾಮದ ಕುಳಿಯಾಗಿದ್ದು, ಭೂಮಿಯ ಮೇಲಿನ ಏಕೈಕ ಉಲ್ಕಾ ಕುಳಿ ಇದಾಗಿದೆ. ಪ್ರತಿ ವರ್ಷವೂ 30,000 ದಿಂದ 1,50,000 ವರೆಗೆ ಬೀಳುವ ಉಲ್ಕೆಗಳ ಸಂಖ್ಯೆಯಿಂದ ಭೂಮಿಯ ಮೇಲೆ ಅತಿದೊಡ್ಡ ಮತ್ತು ಏಕೈಕ ಹೈಪರ್-ವೆಲಾಸಿಟಿ ಪ್ರಭಾವದ ಕುಳಿಯನ್ನು ಸೃಷ್ಟಿಸಲು ಸಾಧ್ಯವಾಗಿದೆ.

ದೇವಸ್ಥಾನಗಳೂ ಇವೆ

ದೇವಸ್ಥಾನಗಳೂ ಇವೆ

PC:V4vjk
ಲೋನಾರ್ ಸರೋವರದ ಸುತ್ತಮುತ್ತಲ ಪ್ರದೇಶ ಔಷಧೀಯ ಸಸ್ಯ , ಪರಿಮಳಯುಕ್ತ ಗಿಡಗಳು ಮತ್ತು ವನಸ್ಪತಿ ಸಸ್ಯಗಳನ್ನು ಹೊಂದಿದೆ.ರಾಮಗಯಾ ದೇವಸ್ಥಾನ, ಕಮಲ್ಜಾ ದೇವಿ ದೇವಸ್ಥಾನ ಮತ್ತು ಭಾಗಶಃ ಮುಳುಗಿರುವ ಶಂಕರ ಗಣೇಶ ದೇವಸ್ಥಾನವು ಸರೋವರದ ಬಳಿ ನೆಲೆಗೊಂಡಿದೆ.

ವಲಸೆ ಪಕ್ಷಿಗಳೂ ಕಾಣಸಿಗುತ್ತವೆ

ವಲಸೆ ಪಕ್ಷಿಗಳೂ ಕಾಣಸಿಗುತ್ತವೆ

PC:Trusharm512
ಲೋನಾರ್ ಸರೋವರ ವಲಸೆ ಬಂದ ಹಾಗೂ ಸ್ಥಳೀಯ ಪಕ್ಷಿಗಳನ್ನು ವೀಕ್ಷಿಸುವ ಅದ್ಭುತ ಸ್ಥಳವಾಗಿದೆ. ಷೆಲ್ಡಕ್, ಕಪ್ಪು ರೆಕ್ಕೆಯ ಸ್ಟಿಲ್ಟ್ಸ್, ಬ್ರಾಹ್ಮಿನಿ ಬಾತುಕೋಳಿಗಳು, ಕೆಂಪು ವ್ಯಾಟಲ್ಡ್ ಲ್ಯಾಪ್ವಿಂಗ್ಸ್, ನೀಲಿ ಜೇಸ್, ಬೇವೇವೀವರ್ಸ್, ಹೂಪೊಸ್, ಬಾರ್ನ್ ಗೂಬೆಗಳು, ಗೋಲ್ಡನ್ ಓನಿಯಲ್, ಲ್ಯಾರ್ಕ್ಗಳು, ಟೈಲರ್ಬರ್ಡ್ಸ್, ಪ್ಯಾರೆಕೆಟ್ ಮತ್ತು ಪೀಫೌಲ್ ಮುಂತಾದವುಗಳನ್ನು ಅಪರೂಪಕ್ಕೆ ಕಾಣಬಹುದು.

ಲೋನಾರ್ ಸರೋವರವನ್ನು ಏಕೆ ಭೇಟಿ ಮಾಡಬೇಕು?

ಲೋನಾರ್ ಸರೋವರವನ್ನು ಏಕೆ ಭೇಟಿ ಮಾಡಬೇಕು?

PC:Nagwani

ಲೋನಾರ್ ನಲ್ಲಿ ಸೃಷ್ಟಿಯಾಗಿರೊ ದೈತ್ಯಗುಂಡಿ ಒಂದು ವೈಜ್ನಾನಿಕ ಕೌತುಕ. ಇದನ್ನು ನಂಬುವುದಕ್ಕೋಸ್ಕರ ಇಲ್ಲಿಗೆ ಭೇಟಿ ನೀಡಿ ಇದನ್ನು ನೋಡಲೇಬೇಕು. ಈ ದೈತ್ಯಗುಂಡಿ ನಿಮ್ಮನ್ನು ಸುಮಾರು 60,000 ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ.

Read more about: maharashtra lake
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X