Search
  • Follow NativePlanet
Share
» »ಜಗತ್ತಿನ ಏಕೈಕ ತೇಲುವ ಕೆರೆ ಲೋಕ್ತಕ್

ಜಗತ್ತಿನ ಏಕೈಕ ತೇಲುವ ಕೆರೆ ಲೋಕ್ತಕ್

ಅದೇನಪ್ಪಾ ಕೇರೆಯೆ ತೇಲುತ್ತದೆಯಾ? ಎಂತನ್ನಿಸದೆ ಇರಲಾರದು. ಹೌದು ಇದೊಂದು ರೀತಿಯಲ್ಲಿ "ತೇಲುವ ಕೆರೆ" ಎಂಬ ಬಿರುದನ್ನು ಪಡೆದಿದೆ. ಈ ರೀತಿಯ ಕೆರೆಯ ವಿಧದಲ್ಲಿ ಇದು ಜಗತ್ತಿನಲ್ಲೆ ಏಕೈಕ ಕೆರೆಯಾಗಿದ್ದು, ಅದರಲ್ಲೂ ಭಾರತದಲ್ಲಿರುವುದು ಹೆಮ್ಮೆಯ ವಿಚಾರ. ಮೂಲವಾಗಿ ಇದಿರುವುದು ಈಶಾನ್ಯ ಭಾರತ ರಾಜ್ಯವಾದ ಮಣಿಪುರದ ಬಿಷ್ಣುಪುರ(ವಿಷ್ಣುಪುರ) ಜಿಲ್ಲೆಯಲ್ಲಿರುವ ಮೋಯಿರಾಂಗ್ ಎಂಬ ಪಟ್ಟಣದಲ್ಲಿ.

ಮಣಿಪುರದ ವಿವಿಧ ಪ್ರವಾಸಿ ಸ್ಥಳಗಳು

Loktak only floating lake in the world

ಚಿತ್ರಕೃಪೆ: Sharada Prasad CS

ಮೋಯಿರಾಂಗ್ ಒಂದು ಪ್ರವಾಸಿ ಮಹತ್ವವುಳ್ಳ ಪಟ್ಟಣವಾಗಿದ್ದು, ಮಣಿಪುರದ ರಾಜಧಾನಿಯಾದ ಇಂಫಾಲ್ ನಗರದ [ಇಂಫಾಲ್ ನಗರದ ಚಿತ್ರಗಳು ] ದಕ್ಷಿಣಕ್ಕೆ 45 ಕಿ.ಮೀ ಗಳಷ್ಟು ದೂರದಲ್ಲಿದೆ. ಇನ್ನು ಈ ಪಟ್ಟಣದಲ್ಲಿರುವ ಲೋಕ್ತಕ್ ಕೆರೆಯು ಈಶಾನ್ಯ ಭಾರತದ ಅತಿ ದೊಡ್ಡ ಸಿಹಿ ನೀರಿನ ಕೆರೆಯಾಗಿದ್ದು ತೇಲುವ ಚಿಕ್ಕ ಚಿಕ್ಕ ಗುಡ್ಡೆಗಳನ್ನು ಒಳಗೊಂಡಿದೆ. ಈ ಗುಡ್ಡೆಗಳು ವಿಘಟಿಸುತ್ತಿರುವ ಸಸ್ಯದ್ರವ್ಯ, ಮಣ್ಣು ಹಾಗೂ ಇತರೆ ಜೈವಿಕ ಉತ್ಪನ್ನಗಳಿಂದ ಉತ್ಪಾತಿಯಾಗಿರುತ್ತವೆ.

ಈ ಒಂದು ಕಾರಣದಿಂದಲೆ ಈ ಕೆರೆಯನ್ನು ತೇಲುವ ಕೆರೆ ಎಂದು ಕರೆಯಲಾಗಿದೆ. ಈ ಕೆರೆಯು ಲೋಕ ನೋಡಿದಷ್ಟೂ (ಕಣ್ಣು ಹಾಯಿಸಿದಷ್ಟು) ವಿಶಾಲವಾಗಿರುವುದರಿಂದ ಲೋಕ್ತಕ್ ಎಂಬ ಹೆಸರು ಪಡೆದುಕೊಂಡಿದೆ. ರಾಜ್ಯದ ಮತ್ತೊಂದು ಆಕರ್ಷಣೆಯಾದ ಕೈಬುಲ್ ಲಾಮಾಜೊ ರಾಷ್ಟ್ರೀಯ ಉದ್ಯಾನವು ಈ ಕೆರೆಯ ಆಗ್ನೇಯ ದಿಕ್ಕಿನ ದಂಡೆಯ ಮೇಲೆ 40 ಚ.ಕಿ.ಮೀ ಗಳಷ್ಟು ವಿಸ್ತಾರದಲ್ಲಿ ಚಾಚಿದೆ.

ಚಿತ್ರಕೃಪೆ: Sharada Prasad CS

ಈ ರಾಷ್ಟ್ರೀಯ ಉದ್ಯಾನವು ಅಳಿವಿನಂಚಿನಲ್ಲಿರುವ ಸಾಂಗೈ ಎಂಬ ವಿಶಿಷ್ಟ ಜಿಂಕೆಗಳ ನೈಸರ್ಗಿಕ ಆಶ್ರಯ ತಾಣವಾಗಿದೆ. ಈ ಜಿಂಕೆಯು ಕೇವಲ ಮಣಿಪುರದ ಈ ರಾಷ್ಟ್ರೀಯ ಉದ್ಯಾನದಲ್ಲಿ ಮಾತ್ರವೆ ಕಂಡುಬರುತ್ತವೆ ಹಾಗೂ ಮಣಿಪುರ ರಾಜ್ಯದ ಅಧಿಕೃತ ಪ್ರಾಣಿಯೂ ಸಹ ಆಗಿದೆ.

ಈ ಪುರಾತನ ಲೋಕ್ತಕ್ ಕೆರೆಯು ಪ್ರವಾಸಿ ಆಕರ್ಷಣೆ ಆಗಿರುವುದೂ ಅಲ್ಲದೆ ಮಣಿಪುರ ರಾಜ್ಯದ ಆರ್ಥಿಕ ಸ್ಥಿತಿಯಲ್ಲೂ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ನೂರಾರು ಸಂಖ್ಯೆಯಲ್ಲಿ ಕೆರೆಯ ಸುತ್ತ ಮುತ್ತ ಹಾಗೂ ಕೆರೆಯ ತೇಲುವ ಭಾಗಳಾದ ಫುಮ್ಡಿಸ್ ಗಳಲ್ಲಿ ವಾಸವಿರುವ ಬೆಸ್ತರ/ಮೀನುಗಾರರ ಪಾಲಿಗೆ ದೈನಂದಿನ ಜೀವನ ನಡೆಸಲು ಸಹಾಯಕವಾಗಿದೆ.

ಚಿತ್ರಕೃಪೆ: Mongyamba

ಕೆರೆಯು ಪ್ರಮುಖವಾಗಿ ಎರಡು ವಿಭಾಗಗಳಲ್ಲಿ ವಿಂಗಡಿಸಲ್ಪಟ್ಟಿದ್ದು ಒಂದು ಭಾಗವು ರಕ್ಷಿಸಲ್ಪಟ್ಟ ವಲಯವಾದರೆ ಇನ್ನೊಂದು ವಿಭಾಗವು "ಬಫರ್" ವಲಯವಾಗಿದೆ. ಕೆರೆಯ ಪರೀಧಿಯಲ್ಲೆ ಸುಮಾರು 14 ವಿವಿಧ ಗಾತ್ರ, ಆಕಾರಗಳ ಬೆಟ್ಟ ಗುಡ್ಡಗಳನ್ನು ಕಾಣಬಹುದಾಗಿದೆ.

ಲೋಕ್ತಕ್ ಕೆರೆಯು ಜೈವಿಕ ಸಂಪತ್ತಿನಿಂದ ಕಂಗೊಳಿಸುತ್ತಿದ್ದು, ಸಾಕಷ್ಟು ವೈವಿಧ್ಯಮಯ ಜಲಚರಗಳು, ಪಕ್ಷಿಗಳು ಹಾಗೂ ಇತರೆ ಜೀವರಾಶಿಗಳನ್ನು ಕೆರೆಯ ಬಳಿ ಕಾಣಬಹುದಾಗಿದೆ. ಕೆರೆಯ ಒಂದು ದಿಕ್ಕಿಗೆ ವಿವಿಧೋದ್ದೇಶಕ್ಕಾಗಿ ನಿರ್ಮಿಸಲಾದ ಇಥೈ ಬ್ಯಾರೇಜ್ ನಿಂದ ಸಾಕಷ್ಟು ಹಾನಿಯಾಗಿದ್ದು ಕೆರೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.

ಚಿತ್ರಕೃಪೆ: ch_15march

ಎಲ್ಲ ಅಂಶಗಳನ್ನು ಮನಗಂಡು, ಕೆರೆಯ ಆರೋಗ್ಯದ ಹಿತದೃಷ್ಟಿಯಿಂದ ಲೋಕ್ತಕ್ ಅಭಿವೃದ್ದಿ ಪ್ರಾಧಿಕಾರವನ್ನು ಮಣಿಪುರ ಸರ್ಕಾರದಿಂದ ಸ್ಥಾಪಿಸಲಾಗಿದೆ. ಈ ಪ್ರಾಧಿಕಾರವು ಕೆರೆಯನ್ನು ಆರೋಗ್ಯಕರಗೊಳಿಸುವ ಅನೇಕ ಯೊಜನೆಗಳನ್ನು ರೂಪಿಸಿದ್ದು, ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ.

Loktak only floating lake in the world

ಚಿತ್ರಕೃಪೆ: Kishalaya Namaram

ಲೋಕ್ತಕ್ ಕೆರೆಯು ಇಂಫಾಲ್ ನಗರದಿಂದ ಕೇವಲ 39 ಕಿ.ಮೀ ಗಳಷ್ಟು ದೂರದಲ್ಲಿದ್ದು ರಸ್ತೆಯ ಮೂಲಕ ಸುಲಭವಾಗಿ ಇಲ್ಲಿಗೆ ತೆರಳಬಹುದಾಗಿದೆ. ಪ್ರವಾಸಿ ದೃಷ್ಟಿಯಿಂದ ಇದೊಂದು ಅನನ್ಯ ಆಕರ್ಷಣೆಯಾಗಿದ್ದು ಕೆರೆಯಲ್ಲಿರುವ ಸಾಂಡ್ರಾ ಹಾಗೂ ಫುಬಾಲಾ ನಡುಗಡ್ಡೆಗಳು ಪ್ರಮುಖ ಪ್ರವಾಸಿ ಕೇಂದ್ರಗಳಾಗಿವೆ.

ನೀವು ಓದಲು ಬಯಸಬಹುದಾದ ಲೇಖನಗಳು:

ತಿಳಿಯಲೇಬೇಕಾದ ಭಾರತದ 7 ಪ್ರಾಕೃತಿಕ ವಿಸ್ಮಯಗಳುತಿಳಿಯಲೇಬೇಕಾದ ಭಾರತದ 7 ಪ್ರಾಕೃತಿಕ ವಿಸ್ಮಯಗಳು

ಬಿಟ್ಟ ಕಣ್ಣು ಬಿಟ್ಟಂತೆ ಮಾಡುವ ಔಲಿ ಮೈಸಿರಿಬಿಟ್ಟ ಕಣ್ಣು ಬಿಟ್ಟಂತೆ ಮಾಡುವ ಔಲಿ ಮೈಸಿರಿ

ಹಿಮಾಲಯನ್ ರಾಷ್ಟ್ರೀಯ ಉದ್ಯಾನ : ಯುನೆಸ್ಕೊದ ಹೊಚ್ಚ ಹೊಸ ಸ್ಥಳಹಿಮಾಲಯನ್ ರಾಷ್ಟ್ರೀಯ ಉದ್ಯಾನ : ಯುನೆಸ್ಕೊದ ಹೊಚ್ಚ ಹೊಸ ಸ್ಥಳ

ಹೃದಯವನ್ನು ಗುಲ್...ಮಾಡುವ ಗುಲ್ಮಾರ್ಗ್ಹೃದಯವನ್ನು ಗುಲ್...ಮಾಡುವ ಗುಲ್ಮಾರ್ಗ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X