Search
  • Follow NativePlanet
Share
» »ಬೇರಿನ ಬ್ರಿಡ್ಜ್ ಮೇಲೆ ಒಮ್ಮೆಯಾದ್ರೂ ಹೋಗ್ಲೇಬೇಕು...

ಬೇರಿನ ಬ್ರಿಡ್ಜ್ ಮೇಲೆ ಒಮ್ಮೆಯಾದ್ರೂ ಹೋಗ್ಲೇಬೇಕು...

ಈಗಿನ ಕಾಲದಲ್ಲಂತೂ ರಸ್ತೆ ದಾಟಲು, ನದಿ ದಾಟಲು ಬ್ರಿಡ್ಜ್‌ನ್ನು ನಿರ್ಮಿಸಲಾಗುತ್ತಿದೆ. ಅದೇ ಹಿಂದಿನ ಕಾಲದಲ್ಲಿ ಈ ಬ್ರಿಡ್ಜ್‌ಗಳೆಲ್ಲಾ ಇರಲಿಲ್ಲ. ಆಗ ಜನರು ಯಾವ ರೀತಿ ನದಿ ದಾಟುತ್ತಿದ್ದರು ಎನ್ನುವುದು ನಿಮಗೆ ಗೊತ್ತಾ? ಮೇಘಾಲಯಕ್ಕೆ ಹೋದರೆ ಅಲ್ಲಿ ನಿಮಗೆ ಸಾಕಷ್ಟು ಪುರಾತನ ಬ್ರಿಡ್ಜ್‌ಗಳು ಕಾಣಸಿಗುತ್ತದೆ. ಅದು ಸಿಮೆಂಟ್, ಕಲ್ಲುಗಳಿಂದ ಕಟ್ಟಿರುವ ಬ್ರಿಡ್ಜ್ ಅಲ್ಲ. ಬದಲಾಗಿ ಮರದ ಬೇರುಗಳಿಂದ ನಿರ್ಮಿಸಿರುವ ಬ್ರಿಡ್ಜ್.

ಸತ್ತವರ ಜೊತೆ ಟೀ ಕುಡಿಬೇಕಾ...ತಿಂಡಿ ತಿನ್ನಬೇಕಾ...ಹಾಗಾದ್ರೆ ಈ ರೆಸ್ಟೋರೆಂಟ್‌ಗೆ ಹೋಗಿಸತ್ತವರ ಜೊತೆ ಟೀ ಕುಡಿಬೇಕಾ...ತಿಂಡಿ ತಿನ್ನಬೇಕಾ...ಹಾಗಾದ್ರೆ ಈ ರೆಸ್ಟೋರೆಂಟ್‌ಗೆ ಹೋಗಿ

ಬುಡಕಟ್ಟು ಜನಾಂಗದವರು ಕಂಡುಹಿಡಿದರು

ಬುಡಕಟ್ಟು ಜನಾಂಗದವರು ಕಂಡುಹಿಡಿದರು

PC: Himanshu Tyagi
ವಾರ್ ಖಸಿಸ್ ಹಾಗೂ ವಾರ್ ಜಂಟಿಯಸ್ ಎನ್ನುವ ಮೇಘಾಲಯದ ಬುಡಕಟ್ಟು ಜನಾಂಗಗಳು ಮೊದಲಿಗೆ ಮರಗಳ ಶಕ್ತಿಶಾಲಿ ಬೇರುಗಳನ್ನು ಕಂಡು ನದಿಯ ದಡದಿಂದ ಇನ್ನೊಂದು ದಡಕ್ಕೆ ಸುಲಭವಾಗಿ ದಾಟುವುದಕ್ಕಾಗಿ ಬಳಸಿದರು. ನಂತರ ಯಾವಾಗ್ಯಾವಾಗ ನದಿ, ಕೆರೆ ದಾಟಲು ಬ್ರಿಡ್ಜ್‌ನ ಅವಶ್ಯಕತೆ ಬೀಳುತ್ತಿತ್ತೋ ಆವಾಗ ಅವರು ಬೇರುಗಳ ಬ್ರಿಡ್ಜ್‌ಗಳನ್ನು ನಿರ್ಮಿಸುತ್ತಿದ್ದರು.

ಬೇರುಗಳಿಗೆ ನೀಡುತ್ತಿದ್ದರು ತರಬೇತಿ

ಬೇರುಗಳಿಗೆ ನೀಡುತ್ತಿದ್ದರು ತರಬೇತಿ

PC: Anya 1984

ರಬ್ಬರ್ ಮರದ ಬೇರುಗಳನ್ನು ಸರಿಯಾದ ರೀತಿಯಲ್ಲಿ ನದಿಯ ಮೇಲೆ ಬೆಳೆಸಲು ದಕ್ಷಿಣ ಮೇಘಾಲಯದ ಜನರು ಅನೇಕ ವಿಧಾನಗಳನ್ನು ಬಳಸಿದ್ದಾರೆ. ಮರಗಳ ಬೇರನ್ನು ಎಳೆದು ಅವುಗಳನ್ನು ತಿರುವಿ , ಒಂದಕ್ಕೊಂದು ಜೋಡಿಸಿ ಮರ ಹಾಗೂ ಬಿದಿರಿನಿ ತೊಗಟೆಯಿಂದ ಒಂದು ತಾತ್ಕಾಲಿಕ ಬ್ರಿಡ್ಜ್‌ನ ಆಕಾರವನ್ನು ರಚಿಸಿ ಹೊಸ ಬೇರುಗಳನ್ನು ಆ ಆಕೃತಿ ಸುತ್ತ ಹಬ್ಬಲು ಬಿಡುವ ಮೂಲಕ ಹೊಸ ಬೇರುಗಳಿಗೆ ತರಬೇತಿ ನೀಡಲಾಗುತ್ತಿತ್ತು.

500 ವರ್ಷ ಪುರಾತನ ಬೇರಿನ ಬ್ರಿಡ್ಜ್

500 ವರ್ಷ ಪುರಾತನ ಬೇರಿನ ಬ್ರಿಡ್ಜ್

PC: Anya 1984
ಬೇರುಗಳ ಬ್ರಿಡ್ಜ್ ಆಗಬೇಕಾದರೆ ಅದಕ್ಕೆ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಆ ಮರದ ಆರೋಗ್ಯ ಯಾವ ರೀತಿ ಇದೆ ಎನ್ನುವುದರ ಮೇಲೆ ಬ್ರಿಡ್ಜ್ ನಿರ್ಮಾಣಗೊಳ್ಳಲು ಎಷ್ಟು ಸಮಯ ಬೇಕು ಎನ್ನುವುದು ನಿರ್ಧರಿತವಾಗುತ್ತದೆ. ಚಿರಾಪುಂಜಿಯಲ್ಲಿ 500 ವರ್ಷ ಪುರಾತನ ಬೇರಿನ ಬ್ರಿಡ್ಜ್‌ನ್ನು ಕಾಣಬಹುದುದಾಗಿದೆ.

50 ಜನರನ್ನು ಹೊರಬಲ್ಲದು

50 ಜನರನ್ನು ಹೊರಬಲ್ಲದು

PC: Anya 1984

ಒಮ್ಮೆ ಬೇರಿನ ಬ್ರಿಡ್ಜ್ ನಿರ್ಮಾಣವಾದ ನಂತರ ಅವು ಬಹಳ ಗಟ್ಟಿಮುಟ್ಟಾಗಿರುತ್ತದೆ. ಒಮ್ಮೆಗೆ ಸುಮಾರು 50 ಜನರನ್ನು ಹೊರುವ ತಾಕತ್ತು ಆ ಬ್ರಿಡ್ಜ್‌ಗೆ ಇರುತ್ತದೆ. ಯಾಕೆಂದರೆ ಆ ಮರಗಳು ಜೀವಂತವಾಗಿರುತ್ತದೆ ಹಾಗೂ ದಿನದಿಂದ ದಿನಕ್ಕೆ ಬೆಳೆಯುತ್ತನೇ ಇರುತ್ತವೆ.

 ಡಬಲ್ ಡೆಕ್ಕರ್ ಬೇರಿನ ಬ್ರಿಡ್ಜ್

ಡಬಲ್ ಡೆಕ್ಕರ್ ಬೇರಿನ ಬ್ರಿಡ್ಜ್

PC: Luy Lalka
ದಕ್ಷಿಣ ಮೇಘಾಲಯದಲ್ಲಿರುವ ಬೇರಿನ ಬ್ರಿಡ್ಜ್‌ಗಳು ವಿಭಿನ್ನ ಆಕಾರ ಹಾಗೂ ಗಾತ್ರದಲ್ಲಿರುತ್ತವೆ. ಸುಮಾರು 170 ಫೀಟ್ ಉದ್ದ ಹಾಗೂ 80 ಫೀಟ್ ಅಗಲ ಬೆಳೆಯುತ್ತದೆ. ಒಂದು ಬ್ರಿಡ್ಜ್ ಇನ್ನೊಂದರ ಮೇಲೆ ಹಬ್ಬಿರುತ್ತದೆ. ಉಮ್ಸಿಯಾಂಗ್ ಡಬಲ್ ಡೆಕ್ಕರ್ ಬೇರಿನ ಬ್ರಿಡ್ಜ್.

ಚಿರಾಪುಂಜಿಯಲ್ಲಿ 11ಬೇರಿನ ಬ್ರಿಡ್ಜ್‌

ಚಿರಾಪುಂಜಿಯಲ್ಲಿ 11ಬೇರಿನ ಬ್ರಿಡ್ಜ್‌

PC: Sutirtha Das wiki
ಚಿರಾಪುಂಜಿಯಲ್ಲಿ 11 ಕಾರ್ಯಾಚರಿಸುವ ಬೇರಿನ ಬ್ರಿಡ್ಜ್‌ಗಳಿವೆ. ಶಿಲ್ಲಾಂಗ್ ದಿಂದ ಎರಡೂವರೆ ಗಂಟೆಗಳ ದೂರದಲ್ಲಿ ಈ ಬ್ರಿಡ್ಜ್ ಇದೆ. ಮರದ ಬೇರುಗಳ ಬ್ರಿಡ್ಜ್ ಮಾಡಬೇಕಾದರೆ ಅದಕ್ಕೆ ಅಡಕೆಯ ಮರದ ತುಂಡುಗಳನ್ನು ಕೆರೆಯ ಮೇಲೆ ಹರಿಯಬಿಡಲಾಗುತ್ತದೆ. ಅದರ ಸಹಾಯದಿಂದ ಬೇರುಗಳು ಹಬ್ಬಲಾರಂಭಿಸುತ್ತದೆ. ಈ ಬೇರುಗಳು ಇನ್ನೊಂದು ಬುಡವನ್ನು ತಲುಪಲು ಸುಮಾರು 15 ರಿಂದ 20 ವರ್ಷಗಳೇ ಹಿಡಿಯಬಹುದು.

ಕಾಲ ಕಳೆದಂತೆ ಬೇರುಗಳೂ ಬಲಶಾಲಿಯಾಗುತ್ತದೆ

ಕಾಲ ಕಳೆದಂತೆ ಬೇರುಗಳೂ ಬಲಶಾಲಿಯಾಗುತ್ತದೆ

PC: Uttaragarg
ಇನ್ನೂ ಕೆಲವು ಹಳ್ಳಿಗಳಲ್ಲಿ ಅಡಕೆಯ ಮರಗಳ ತೊಗಟೆಯನ್ನು ಉದ್ದಗೆ ಕತ್ತರಿಸಿ ಅದನ್ನು ಬ್ರಿಡ್ಜ್‌ನ ಗೈಡೆನ್ಸ್‌ಗೆ ಅಳವಡಿಸಲಾಗುತ್ತದೆ. ವರುಷಗಳು ಕಳೆದಂತೆ ಬೇರುಗಳೂ ಬಲಶಾಲಿಯಾಗುತ್ತಾ ಹೋಗುತ್ತದೆ. ಬಲವಾದ ದಪ್ಪನೆಯ ಬೇರುಗಳನ್ನು ಹೊಂದಿರುವ ಬ್ರಿಡ್ಜ್‌ ಆಗಿ ಮಾರ್ಪಾಡಾಗಲು ಸುಮಾರು 100 ವರ್ಷಗಳ ಕಾಲ ಹಿಡಿದಿರಬಹುದು.

ಪ್ರಕೃತಿ ಸೌಂದರ್ಯ ಕಾಣ ಸಿಗುತ್ತದೆ

ಪ್ರಕೃತಿ ಸೌಂದರ್ಯ ಕಾಣ ಸಿಗುತ್ತದೆ

PC: Sandeep.barkaley
ಬ್ರಿಡ್ಜ್‌ಗಳನ್ನು ನೋಡಲು ಸಾಕಷ್ಟು ಪ್ರವಾಸಿಗರು ಮೇಘಾಲಯಕ್ಕೆ ಆಗಮಿಸುತ್ತಾರೆ. ಮರಗಳಿಂದಲೇ ಆಗಿರುವ ನೈಸರ್ಗಿಕ ಬ್ರಿಡ್ಜ್‌ನಲ್ಲಿ ಪ್ರಕೃತಿ ಸೌಂದರ್ಯದ ನಡುವೆ ಫೋಟೋಗಳನ್ನು ಕ್ಲಿಕ್ಕಿಸಿ ಸಂತಸ ಪಡುತ್ತಾರೆ. ನಿಮಗೂ ಇದನ್ನು ನೋಡಬೇಕೆನಿಸಿದರೆ ಮೇಘಾಲಯಕ್ಕೆ ಒಮ್ಮೆ ಭೇಟಿ ನೀಡಿ.

ಹೇಗೆ ಪ್ರಯಾಣಿಸುವುದು ಹೇಗೆ?

ಹೇಗೆ ಪ್ರಯಾಣಿಸುವುದು ಹೇಗೆ?

PC: Sumanjit100
ಈ ಡಬ್ಬಲ್ ಡೆಕ್ಕರ್ ಬೇರಿನ ಬ್ರಿಡ್ಜ್ ಹಾಗೂ ಬೇರಿನ ಬ್ರಿಡ್ಜ್‌ಗಳನ್ನು ನೋಡಲು ಮೊದಲಿಗೆ ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ಗೆ ಹೋಗಿ. ಅಲ್ಲಿಂದ ಎರಡು ಮೂರು ಗಂಟೆಯಲ್ಲಿ ಬೇರಿನ ಬ್ರಿಡ್ಜ್ ಇರುವ ಹಳ್ಳಿಯನ್ನು ತಲುಪಬಹುದು.

ಮರದ ಬೇರುಗಳ ಬ್ರಿಡ್ಜ್

ಮರದ ಬೇರುಗಳ ಬ್ರಿಡ್ಜ್

PC: Jayesh minde
ನೈಸರ್ಗಿಕ ಮರದ ಬೇರುಗಳ ಬ್ರಿಡ್ಜ್‌ನ ನೋಟ

ಬ್ರಿಡ್ಜ್ ಕೆಳಗೆ ಹರಿಯುವ ನೀರು

ಬ್ರಿಡ್ಜ್ ಕೆಳಗೆ ಹರಿಯುವ ನೀರು

PC: Harsh25thakkar

ಮರದ ಬೇರಿನ ಬ್ರಿಡ್ಜ್‌ ಕೆಳಗೆ ಹರಿಯುತ್ತಿರುವ ನೀರು

Read more about: ಮೇಘಾಲಯ meghalaya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X