Search
  • Follow NativePlanet
Share
» »ಭಾರತದ ಚಳಿಗಾಲದಲ್ಲಿ ಭೇಟಿ ಕೊಡಲು ಯೋಗ್ಯವಾದ "ಸನ್ ಬೀಚ್" ರಜಾತಾಣಗಳು

ಭಾರತದ ಚಳಿಗಾಲದಲ್ಲಿ ಭೇಟಿ ಕೊಡಲು ಯೋಗ್ಯವಾದ "ಸನ್ ಬೀಚ್" ರಜಾತಾಣಗಳು

ಚಳಿಗಾಲ ಬಂತೆಂದರೆ ಸಾಕು ಈ ನಮ್ಮ ಪ್ರೀತಿ ಪಾತ್ರರೊಡನೆ ರಜಾದಿನಗಳು ಅಥವಾ ಹಬ್ಬಗಳ ಸಮಯದಲ್ಲಿ ಕಡಲ ತೀರಗಳು ಇತ್ಯಾದಿ ಸ್ಥಳಗಳಿಗೆ ಭೇಟಿ ಕೊಡುವುದು ಸಹಜ.

ನಿಮಗೆ ಅನುಕೂಲವಾಗುವಂತೆ ನಿಮ್ಮ ಹುಡುಕಾಟಕ್ಕೆ ಸುಲಭವಾಗುವಂತೆ ಹಾಗೂ ಚಳಿಗಾಲದ ರಜಾದಿನಗಳನ್ನು ಸನ್ ಬೀಚ್ ಗಳಲ್ಲಿ ಕಳೆಯಬೇಕೆಂದು ಅಪೇಕ್ಷಿಸುವವರಿಗಾಗಿ ಭಾರತದಲ್ಲಿಯ ಹತ್ತು ಅತ್ಯಂತ ಉತ್ತಮವಾದ"ಸನ್ ಬೀಚ್" ಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ಕೆವೆಲೋಸಿಮ್ ಬೀಚ್, ಗೋವಾ

ಕೆವೆಲೋಸಿಮ್ ಬೀಚ್, ಗೋವಾ

ನಿಮ್ಮ ರಜಾದಿನಗಳನ್ನು ಅತ್ಯುತ್ತಮವಾಗಿ ಕಳೆಯಬೇಕೆಂದುಕೊಂಡಿದ್ದು ವಿಹಾರಕ್ಕಾಗಿ ಕಡಲತೀರಗಳಿಗೆ ಭೇಟಿ ಕೊಡಬೇಕೆಂದು ಯೋಚಿಸುತ್ತಿರುವಿರ? ಹಾಗಿದ್ದಲ್ಲಿ ಕೊಂಕಣ ತೀರದ ಹಲವಾರು ನಿಧಿಗಳಿಗೆ ಭೇಟಿ ಕೊಡಿ ಇಲ್ಲಿಯ ಅಪಾರವಾದ ನೀರಿನ ಮೇಲಿನ ಗುಡಿಸಲುಗಳು, ಬಂಗಲೆಗಳು ಮತ್ತು ರೆಸಾರ್ಟ್ ಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ. ಈ ಸ್ಥಳಗಳು ವಿಶ್ರಾಂತಿ ಪಡೆಯಲು ಅತ್ಯಂತ ಉತ್ತಮವಾಗಿರುತ್ತವೆ ಇಂತಹ ಬೀಚ್ ಗಳಲ್ಲಿ ಕೆವೆಲೋಸಿಮ್ ಬೀಚ್ ಕೂಡಾ ಒಂದಾಗಿದ್ದು, ಇದು ಕ್ಯಾವೆಲೋಸಿಮ್ ಒಂದು ರೋಮಾಂಚಕ ಉಷ್ಣವಲಯದ ಭೂದೃಶ್ಯವನ್ನು ಸಹ ಹೊಂದಿದೆ.

ಮತ್ತು ನೀವು ನಿಮ್ಮ ಪ್ರಯಾಣದ ಅನುಭವವನ್ನು ಇನ್ನೂ ಒಂದು ಹೆಜ್ಜೆ ಮುಂದೆ ಇಡುತ್ತಾ ಇಲ್ಲಿಯ ಐಷಾರಾಮಿ ಸ್ಪಾಗೆ ಪ್ರವೇಶ ಪಡೆಯಬಹುದು ಮತ್ತು ಉಲ್ಲಾಸಭರಿತ ಋತುವಿನಲ್ಲಿ ಆನಂದಮಯವಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು. ಇಲ್ಲಿ ಜೆಟ್-ಸ್ಕೀಯಿಂಗ್, ಸ್ನಾರ್ಕೆಲಿಂಗ್ ಮತ್ತು ಡೈವಿಂಗ್, ನೌಕಾಯಾನದಂತಹ ಇನ್ನೂ ಹಲವಾರು ಸಾಮಾನ್ಯ ಜಲ ಸಾಹಸ ಚಟುವಟಿಕೆಗಳು ನಿಮ್ಮನ್ನು ತೃಪ್ತಿ ಪಡಿಸುತ್ತವೆ.

ಅಲ್ಪುಝಾ ಬೀಚ್, ಕೇರಳ

ಅಲ್ಪುಝಾ ಬೀಚ್, ಕೇರಳ

ಅಲ್ಪುಝಾ ಬೀಚ್ ಈ ಕಡಲತೀರವು ಚಳಿಗಾಲದ ಸಮಯದಲ್ಲಿ ಅತ್ಯಂತ ಆಹ್ಲಾದಮಯವಾಗಿದ್ದು ಈ ಸಮಯದಲ್ಲಿ ಇದು ಎಲ್ಲಾ ವಯೋಮಾನದ ಜನರನ್ನೂ ಆಕರ್ಷಿಸುತ್ತದೆ. ಹೋಟೇಲುಗಳು ಮತ್ತು ವಿಲ್ಲಾಗಳಲ್ಲಿ ಭಾಗವಹಿಸಬಹುದಾದಂತಹ ಎಲ್ಲಾ ತರಹದ ಅಲಂಕಾರಗಳು, ಪಾರ್ಟಿಗಳು ಮತ್ತು ಮೋಜಿನ ಚಟುವಟಿಕೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತವೆ.

ಅಲೆಪ್ಪಿಯ ಉದ್ದಕ್ಕೂ ಹಲವಾರು ಅತ್ಯತ್ತಮ ರೆಸಾರ್ಟ್ ಗಳು, ಹೋಟೇಲುಗಳು ಮತ್ತು ರೆಸ್ಟೋರೆಂಟ್ ಗಳನ್ನು ಕಾಟಬಹುದಾಗಿದ್ದು ನಿಮ್ಮ ವಿಶೇಷ ರಜಾದಿನಗಳನ್ನು ಆಸಕ್ತಿದಾಯಕವಾಗಿ ಕಳೆಯಲು ಬೇಕಾದುದನ್ನು ಇವುಗಳು ಒದಗಿಸಿಕೊಡುತ್ತವೆ. ಇವೆಲ್ಲಕ್ಕಿಂತ ಹೆಚ್ಚಾಗಿ ನೀವು ಅಲ್ಲೆಪ್ಪಿಯ ಅತ್ಯಂತ ಜನಪ್ರಿಯ ಆಕರ್ಷಣೆಗಳಾದ ಹಿನ್ನೀರುಗಳು, ಹೌಸ್ ಬೋಟ್ ಗಳು, ಸರೋವರಗಳು ಮತ್ತು ಇನ್ನೂ ಇತ್ಯಾದಿಗಳಿಗೆ ಭೇಟಿ ನೀಡಬಹುದಾಗಿದೆ.

ಮರೀನಾ ಬೀಚ್, ಚೆನ್ನೈ

ಮರೀನಾ ಬೀಚ್, ಚೆನ್ನೈ

ದಕ್ಷಿಣ ಭಾರತದಲ್ಲಿ ಚಳಿಗಾಲದಲ್ಲಿ ನೀವು ಆದರ್ಶಕರ ಬೀಚ್ ಗಾಗಿ ನೋಡುತ್ತಿದ್ದಲ್ಲಿ, ಮರೀನಾ ಬೀಚ್ ನಲ್ಲಿ ನೀವು ಸಾಕಷ್ಟು ಉತ್ತಮ ಉಲ್ಲಾಸ ಮತ್ತು ಬೆಚ್ಚಗಿನ ತಾಪಮಾನವನ್ನು ಕಾಣಬಹುದಾಗಿದೆ.

ನೈಸರ್ಗಿಕವಾಗಿ ಟ್ರಿಮ್ ಮಾಡಿದಂತೆ ಕಾಣುವ ತೆಂಗಿನ ಮರಗಳು, ವರ್ಣರಂಜಿತ ಅಂಗಡಿಗಳ ಸಾಲುಗಳು, ಮತ್ತು ಐತಿಹಾಸಿಕ ವಾಟರ್ ಫ್ರಂಟ್ ನಲ್ಲಿ ಅಲಂಕೃತ ದೋಣಿಗಳು ಇತ್ಯಾದಿಗಳನ್ನೊಳಗೊಂಡ, ಚೆನ್ನೈ ನ ಉಲ್ಲಾಸಭರಿತ ಮತ್ತು ಮೋಜಿನ ರಾತ್ರಿ ಜೀವನದ ಜೊತೆಗೆ ಬೇಸಿಗೆಯ ವಾತಾವರಣವನ್ನು ನೀವು ಇಲ್ಲಿ ಅನುಭವಿಸಬಹುದಾಗಿದೆ.

ರಾಧಾನಗರ್ ಬೀಚ್, ಅಂಡಮಾನ್

ರಾಧಾನಗರ್ ಬೀಚ್, ಅಂಡಮಾನ್

ಮೋಜುಭರಿತ ನೀರಿನಲ್ಲಿ ಕ್ರೀಡೆಗಳು ಮತ್ತು ಅತ್ಯುತ್ತಮವಾದ ರೆಸಾರ್ಟ್ ಗಳನ್ನು ಹೊಂದಿರುವ ಅಂಡಮಾನ್ ಮತ್ತ್ಜು ನಿಕೋಬಾರ್ ಮತ್ತು ರಾಧಾನಗರ ಬೀಚ್ ಗಳು ಅತ್ಯಂತ ಅದ್ಬುತವಾದ ತಾಣಗಳಾಗಿವೆ. ರಜಾದಿನಗಳಲ್ಲಿ ಇಲ್ಲಿ ಆನಂದ ಪಡುವಂತಹ ಹಲವಾರು ಅತ್ಯುತ್ತಮ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಒದಗಿಸಿಕೊಡುತ್ತವೆ. ಇಲ್ಲಿ ರಜಾದಿನಗಳಲ್ಲಿ ಸಾಂಪ್ರದಾಯಿಕವಾಗಿ ರೆಸಾರ್ಟ್ ಗಳು ಕಡಿಮೆ ಅತ್ಯಾಧುನಿಕತೆ ಮತ್ತು ಬೆರಗುಗೊಳಿಸುವ ದೀಪಗಳೊಂದಿಗೆ ಉತ್ತಮವಾಗಿ ಅಲಂಕರಿಸಲ್ಪಡುತ್ತವೆ.

ಇದರಂತೆಯೇ ರಾಧಾನಗರ ಬೀಚ್ ಕೂಡಾ ಮುತ್ತಿನ ಬಣ್ಣದಂತೆ ಕಂಗೊಳಿಸುವುದರರ ಜೊತೆಗೆ ಕಡಲತೀರದಲ್ಲಿರುವ ತೆಂಗಿನ ಮರದ ತೋಪುಗಳು ಈ ಸ್ಥಳಕ್ಕೆ ಇನ್ನಷ್ಟು ಮೆರುಗನ್ನು ಕೊಡುತ್ತವೆ. ಅಷ್ಟೇ ಅಲ್ಲದೆ ಈ ಬೀಚ್ ಗಳು ಹವಳದ ಬಂಡೆಯ ನಿಕ್ಷೇಪಗಳಿಗೆ ನೆಲೆಯಾಗಿದೆ, ಅತ್ಯುತ್ತಮ ಸ್ನಾರ್ಕ್ಲಿಂಗ್ ಮತ್ತು ಡೈವಿಂಗ್ ತಾಣಗಳನ್ನು ಒದಗಿಸುವುದರ ಜೊತೆಗೆ, ಆಹ್ಲಾದಕರ ವಾಸ್ತವ್ಯವನ್ನು ಹೊಂದಲು ಇಲ್ಲಿ ಅನೇಕ ಅತ್ಯುತ್ತಮ ರೆಸಾರ್ಟ್‌ಗಳನ್ನೂ ಹೊಂದಿದೆ.

ಕೋವಲಂ ಬೀಚ್, ಕೇರಳ

ಕೋವಲಂ ಬೀಚ್, ಕೇರಳ

ಕೋವಲಂ ಬೀಚ್ ಜಗತ್ತಿನ ಅತ್ಯಂತ ಮನಮೋಹಕ ಬೀಚ್ ಗಳಲ್ಲಿ ಒಂದಾಗಿದೆ. ಇದು ಪ್ರಾಚೀನ ,ಬಿಳಿ ಮರಳುಗಳಿನ ಅಂತ್ಯವಿಲ್ಲದಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊಂಡಿದೆ. ಸಾಂದರ್ಭಿಕ ಬಿಳುಪಾಗಿಸಿದ ಡ್ರಿಫ್ಟ್ ವುಡ್ ಮತ್ತು ತೆಂಗಿನ ಸಿಪ್ಪೆಗಳಿಂದ ವಿಶೇಷವಾಗಿ ಗುರುತಿಸಲಾಗಿದೆ. ಒಳಭಾಗದ ಪ್ರದೇಶದಲ್ಲಿರುವ ಈ ಬೀಚ್ ನಿಷ್ಕಲ್ಮಶಾ ಬೀಚ್ ಪ್ರತಿಯೊಬ್ಬರಿಗೂ ಬೇಕಾದ ಏನನ್ನಾದರೂ ನೀಡುತ್ತದೆ.

ನೀವು ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಅತ್ಯನ್ನುತವಾದ ಪ್ರವಾಸದಲ್ಲಿ ಭಾಗಿಯಾಗಬೇಕೆಂದಿದ್ದಲ್ಲಿ, ಈ ಬೀಚ್ ನಿಮಗಾಗಿ ಆಹ್ವಾನವನ್ನು ನೀಡುತ್ತದೆ.! ನೀವು ಅದ್ಭುತವಾದ ಕೃತಕ ಬಂಡೆಗಳ ನಡುವೆ ಸ್ನಾರ್ಕ್ಲಿಂಗ್ ಅಥವಾ ಡೈವಿಂಗ್ ಅನ್ನು ಆನಂದಿಸಬಹುದು, ಸಾಕಷ್ಟು ಆರೋಗ್ಯಕರ ಸಮುದ್ರಾಹಾರವನ್ನು ತಿನ್ನಬಹುದು ಮತ್ತುಅತ್ಯಂತ ಸ್ನೇಹಪರ ಸ್ಥಳಿಯ ಜನರೊಂದಿಗೆ ಸಂಭಾಷಣೆ ಕೂಡಾ ಮಾಡಬಹುದು.

ಜುಹು ಬೀಚ್, ಮುಂಬೈ

ಜುಹು ಬೀಚ್, ಮುಂಬೈ

ಮುಂಬೈನ ಜುಹು ಬೀಚ್ ನಿಮ್ಮನ್ನು ತನ್ನ ಗಾಜಿನಂತೆ ಅಂತ್ಯವಿಲ್ಲದ ಹೊಳೆಯುವ ನೀರು. ಹಾಗೂ ಮೃದುವಾದ ಬಿಳಿ ಮರಳುಗಳು ಮತ್ತು ರಜಾದಿನದ ಸಂಪ್ರದಾಯದಂತೆ ನಿಮ್ಮನ್ನು ಸ್ವಾಗತಿಸುತ್ತದೆ. ನೀವು ಇಲ್ಲಿಯ ಹೊಳೆಯುವ ಮತ್ತು ಬೆಚ್ಚಗಿನ ನೀರಿನಲ್ಲಿ ಆಟವಾಡಬಹುದಾಗಿದೆ. ಇಲ್ಲಿ ಹಬ್ಬಗಳು ಕರಕುಶಲ ವಸ್ತುಗಳ ಜಾತ್ರೆಗಳು ಮಾತ್ರವಲ್ಲದೆ ರೋಸ್ಟ್ ಟರ್ಕಿ, ಬೀಟ್ರೂಟ್ ಕಾರ್ಪಾಸಿಯೊ, ಆರ್ಟಿಸನ್ ಚೀಸ್ ಬೋರ್ಡ್, ಭಟ್ಟಿ ಪನೀರ್ ಟಿಕ್ಕಾ ಮತ್ತು ಘೋಸ್ಟ್ ಚಿಲ್ಮನ್ ಬಿರಿಯಾನಿಯಂತಹ ಬಾಯಲ್ಲಿ ನೀರೂರಿಸುವ ಆಹಾರಗಳನ್ನೊಳಗೊಂಡಿರುವ ಆಹಾರ ಮೇಳಗಳನ್ನೂ ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಜನರ ಸದ್ದುಗದ್ದಲದ ಹೊರತಾಗಿಯೂ ಕೂಡಾ, ನಿಮ್ಮ ಕುಟುಂಬದೊಂದಿಗೆ ಶಾಂತ ಹಾಗೂ ಗುಣಮಟ್ಟದ ಸಮಯವನ್ನು ಕಳೆಯಬಹುದಾಗಿದೆ. ಜುಹು ಬೀಚ್‌ನ ಸುತ್ತಲೂ ಅನೇಕ ಚಳಿಗಾಲದ ಅದ್ಬುತ ತಾಣಗಳಿವೆ.

ಪ್ಯಾರಡೈಸ್ ಬೀಚ್, ಪುದುಚೇರಿ

ಪ್ಯಾರಡೈಸ್ ಬೀಚ್, ಪುದುಚೇರಿ

ಸುಮ್ಮನೆ ಬೀಚ್ ನಲ್ಲಿ ಕುಳಿತು ಸಮಯ ಕಳೆಯಲು ಅಥವಾ ಮಳೆಕಾಡುಗಳಲ್ಲಿ ಟ್ರೆಕ್ ಮಾಡಲು ಮತ್ತು ಆಶ್ರಮಗಳಿಗೆ ಭೇಟಿ ನೀಡಲು ಇವೆಲ್ಲವನ್ನು ಒಳಗೊಂಡಿರುವ ಪುದುಚೇರಿಗೆ ಚಳಿಗಾಲದಲ್ಲಿ ಭೇಟಿ ಕೊಡಲು ಅತ್ಯುತ್ತಮ ಸಮಯವಾಗಿದೆ. ಪ್ಯಾರಡೈಸ್ ಬೀಚ್ ನಿಮ್ಮ ಪ್ರೀತಿ ಪಾತ್ರರೊಡನೆ ಶಾಂತಿಯುತವಾಗಿ ಸಮಯ ಕಳೆಯಲು ಅತ್ತ್ಯುತ್ತಮವಾದ ಸ್ಥಳವಾಗಿದೆ. ಅತ್ಯಂತ ಹೆಚ್ಚಿನ ಚಳಿಯಿಂದ ತಪ್ಪಿಸಿಕೊಳ್ಳಲು ಯುರೋಪ್ ನಿಂದ ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಾರೆ. ಪುದುಚೇರಿಯಲ್ಲಿ ತಂಪಾದ ಮತ್ತು ಹಿತವಾದ ಹವಾಮಾನದ ಜೊತೆಗೆ ಬಿಸಿಯಾದ ಹುರಿದ ಗೋಮಾಂಸಕ್ಕಿಂತ ತಾಜಾ ಹಂದಿಮಾಂಸ ಮತ್ತು ಸಮುದ್ರಾಹಾರದ ಅನುಭವನ್ನೂ ಪಡೆಯಬಹುದಾಗಿದೆ.

ವರ್ಕಾ ಬೀಚ್, ಗೋವಾ

ವರ್ಕಾ ಬೀಚ್, ಗೋವಾ

ನೀವು ಯಾವುದಾದರೂ ಪ್ರಶಾಂತವಾದ ಸ್ಥಳದಲ್ಲಿ ಸಮಯ ಕಳೆಯಬೇಕೆಂದಿದ್ದಲ್ಲಿ, ವರ್ಕಾ ಬೀಚ್ ನಿಮಗಾಗಿದೆ! ವರ್ಕಾ ಕಡಲತೀರವು ದಕ್ಷಿಣಗೋವಾದಲ್ಲಿ ನೆಲೆಸಿದ್ದು, ಇದೊಂದು ಅತ್ಯಂತ ಸುಂದರ ದೃಶ್ಯಾವಳಿಗಳನ್ನು ಒಳಗೊಂಡಿರುವಂತಹ ಬೀಚ್ ಆಗಿದ್ದು ಇದು ಗೋವದ ಅತ್ಯಂತ ಪ್ರಸಿದ್ದ ಪ್ರವಾಸಿ ಬೀಚ್ ಗಳಲ್ಲೊಂದೆನಿಸಿದೆ. ಹೆಚ್ಚಿನ ಬೇಸಿಗೆಯ ಅನ್ವೇಷಣೆಗಳು ನಡೆಯುವುದರಿಂದ, ಗೋವಾ ನಗರದಾದ್ಯಂತ ನೀವು ಜಾನಪದದ ವಾತಾವರಣವನ್ನು ಕಾಣುತ್ತೀರಿ. ಕಲ್ಲಿನ ಬಂಡೆಗಳು ಮತ್ತು ತೆಂಗಿನ ಮರಗಳಿಂದ ಸುತ್ತುವರೆದಿರುವ ಹಾಗೂ ಸ್ಪಷ್ಟವಾದ ನೀರು ಇತ್ಯಾದಿಗಳಿಂದ ಕೂಡಿದ ವರ್ಕಾ ಬೀಚ್ ಶಾಂತವಾದ ಏಕಾಂತತೆಯ ಅನುಭವವನ್ನು ನೀಡುತ್ತದೆ!

ಪಲೋಲೆಮ್, ಗೋವಾ

ಪಲೋಲೆಮ್, ಗೋವಾ

ರಜಾದಿನಗಳಲ್ಲಿ ಈ ಉತ್ಸಾಹಭರಿತ ಕಡಲತೀರದಲ್ಲಿ ನೀವು ಪ್ರಾಯೋಗಿಕವಾಗಿ ರೋಮಾಂಚಕ ಸಮಯವನ್ನು ಕಳೆಯಬೇಕೆಂದಿದ್ದಲ್ಲಿ, ಚಳಿಗಾಲದಲ್ಲಿ ಗೋವಾಗೆ ಭೇಟಿ ಕೊಡಿ ಏಕೆಂದರೆ . ಗೋವಾದಲ್ಲಿ, ಚಳಿಗಾಲದಲ್ಲಿ ಹಲವಾರು ಉತ್ಸವಗಳು ನಡೆಯುತ್ತವೆ. 500 ವರ್ಷಗಳಷ್ಟು ಹಳೆಯದಾದ ನಗರದ ಭವ್ಯವಾದ ವಸಾಹತುಶಾಹಿ ಸೌಂದರ್ಯದೊಂದಿಗೆ ಗೋವಾದ ಚಳಿಗಾಲವು ನಿಜವಾಗಿಯೂ ಮನಮೋಹಕ ಸಮಯವಾಗಿದೆ, ಮಿನುಗುವ ದೀಪಗಳು ಮತ್ತು ವರ್ಣರಂಜಿತವಾಗಿ ಸುಂದರವಾಗಿ ಬೆಳಗುತ್ತದೆ. ಕಡಲತೀರದಲ್ಲಿ ತೂಗಾಡುತ್ತಿರುವ ಮರಗಳ ಕೆಳಗೆ ಹಗಲು ಹೊತ್ತಿನಲ್ಲಿ ಹಾಯಾಗಿ ಕಾಲ ಕಳೆಯುತ್ತಾ ಮತ್ತು ಮಳೆಕಾಡಿನ ಮೂಲಕ ನಡೆಯುವುದು ಹಿಮದಿಂದ ಆವೃತವಾದ ಪರ್ವತಗಳಲ್ಲಿ ಸಮಯ ಕಳೆಯುವುದು ಒಂದು ಅತ್ಯುತ್ತಮವಾದ ಅನುಭವಾಗಿದೆ.

ಮಹಾಬಲಿಪುರಂ, ತಮಿಳುನಾಡು

ಮಹಾಬಲಿಪುರಂ, ತಮಿಳುನಾಡು

ಕಡಲತೀರದಲ್ಲಿ ವಿಶ್ರಾಂತಿ ಪಡೆಯುತ್ತಾ ಮತ್ತು ಮೃದುವಾದ ಉತ್ತಮವಾದ ಮರಳು, ಸ್ಪಷ್ಟವಾದ ನೀರು ಮತ್ತು ಬೆಚ್ಚಗಿನ ಸೂರ್ಯನ ಬೆಳಕು ರಜೆಯ ಸಂತೋಷದ ಸಮಯದಲ್ಲಿ ಊಟದ ನಡುವೆ ನಿಮ್ಮ ರಜಾದಿನಗಳನ್ನು ಸುಂದರವಾಗಿ ಕಳೆಯಲು ಅವಕಾಶ ಮಾಡಿಕೊಡಿ. ಮಹಾಬಲಿಪುರಂನಲ್ಲಿರುವ ಅನೇಕ ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳು ತಮ್ಮ ಅತಿಥಿಗಳಿಗೆ ಎಲ್ಲಾ ರೀತಿಯ ಚಟುವಟಿಕೆಗಳನ್ನು ನೀಡುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X