Search
  • Follow NativePlanet
Share
» »ಹರಿದ್ವಾರದಲ್ಲಿರುವ ಈ ಸ್ಥಳಗಳಿಗೆ ಏಕಾಂಗಿಯಾಗಿ ಹೋಗುವುದು ಸೂಕ್ತವಲ್ಲ, ಪ್ರತಿ ಕ್ಷಣವೂ ಎಚ್ಚರದಿಂದಿರಬೇಕು!  

ಹರಿದ್ವಾರದಲ್ಲಿರುವ ಈ ಸ್ಥಳಗಳಿಗೆ ಏಕಾಂಗಿಯಾಗಿ ಹೋಗುವುದು ಸೂಕ್ತವಲ್ಲ, ಪ್ರತಿ ಕ್ಷಣವೂ ಎಚ್ಚರದಿಂದಿರಬೇಕು!  

ಉತ್ತರಾಖಂಡವನ್ನು ದೇವತೆಗಳ ಭೂಮಿ ಅಥವಾ ದೇವರ ನಾಡು ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷ ಲೆಕ್ಕವಿಲ್ಲದಷ್ಟು ಪ್ರಯಾಣಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಜೊತೆಗೆ ಸಾಹಸ ಕ್ರೀಡೆಗಳನ್ನು ಆನಂದಿಸುತ್ತಾರೆ. ಆದರೆ ಉತ್ತರಾಖಂಡ ರಾಜ್ಯದ ಹಿಂದೂಗಳ ಪ್ರಮುಖ ಯಾತ್ರಾ ಕೇಂದ್ರವಾದ, ಭಕ್ತಿಯ ಕೇಂದ್ರವಾದ,ಹರಿದ್ವಾರದ ಕೆಲವು ಸ್ಥಳಗಳಲ್ಲಿ ಪ್ರೇತಗಳು ವಾಸಿಸುತ್ತವೆ ಎಂದು ನಿಮಗೆ ತಿಳಿದಿದೆಯೇ?, ನೀವು ನಂಬದೇ ಇರಬಹುದು, ಆದರೆ ಹರಿದ್ವಾರದಲ್ಲಿ ಪ್ರೇತಗಳಿರುವ 6 ಸ್ಥಳಗಳಿವೆ.

ಅಲ್ಲಿ ಜನರು ದೆವ್ವವನ್ನು ನೋಡಿದ್ದಾರಂತೆ. ಇಂದಿನ ಯುಗದಲ್ಲಿ ಜನರು ದೆವ್ವದಂತಹ ವಿಷಯಗಳನ್ನು ನಂಬುವುದಿಲ್ಲ. ಆದರೆ ಇಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದ ಜನರು ಇಲ್ಲಿ ದೆವ್ವವಿದ್ದರು ಇರಬಹುದು ಎಂದು ನಂಬಲು ಪ್ರಾರಂಭಿಸಿದ್ದಾರೆ. ಒಂದು ವೇಳೆ ನೀವು ಕೂಡ ಹರಿದ್ವಾರಕ್ಕೆ ಹೋದರೆ ನಾವಿಲ್ಲಿ ಉಲ್ಲೇಖಿಸಿರುವ ಸ್ಥಳಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಹಾಗಾದರೆ ಬನ್ನಿ ಹರಿದ್ವಾರದಲ್ಲಿ ದೆವ್ವಗಳಿರುವ ಆ ಸ್ಥಳಗಳು ಯಾವುವು ತಿಳಿಯೋಣ.

ಪಿರಾನ್ ಕಲಿಯಾರ್ ಷರೀಫ್ ದರ್ಗಾ

ಪಿರಾನ್ ಕಲಿಯಾರ್ ಷರೀಫ್ ದರ್ಗಾ

ಪಿರಾನ್ ಕಲಿಯಾರ್ ಷರೀಫ್, ಹರಿದ್ವಾರದ ಬಳಿಯ ಕಲಿಯಾರಿ ಗ್ರಾಮದಲ್ಲಿರುವ ಪ್ರಸಿದ್ಧ ದರ್ಗಾ. ಇಲ್ಲಿಗೆ ಹಿಂದೂ ಮತ್ತು ಮುಸ್ಲಿಮರು ಇಬ್ಬರೂ ಭೇಟಿ ನೀಡುತ್ತಾರೆ. ಇದು ಭಾರತದ ಪ್ರಮುಖ ಮುಸ್ಲಿಂ ದೇವಾಲಯಗಳಲ್ಲಿ ಒಂದಾಗಿದೆ. ಆದರೆ ಈ ಪ್ರದೇಶದಲ್ಲಿ ಹಿಂದೂಗಳ ಸಂಖ್ಯೆಯು ಹೆಚ್ಚಿದೆ.

ಆದರೆ ಈ ಸ್ಥಳವು ಆತ್ಮ ಮತ್ತು ಇತರ ಪ್ರೇತಗಳಿಗೂ ಪ್ರಸಿದ್ಧವಾಗಿದೆ. ಈ ದರ್ಗಾ ಇಡೀ ದೇಶಕ್ಕೆ ಮಾನವೀಯತೆ ಮತ್ತು ಏಕತೆಯ ಸಂದೇಶವನ್ನು ನೀಡುತ್ತಿದ್ದರೂ, ಇಲ್ಲಿಗೆ ಭೇಟಿ ನೀಡುವವರು ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ. ದರ್ಗಾದ ಒಳಗೆ ಎಲ್ಲವೂ ಚೆನ್ನಾಗಿದ್ದರೂ, ಹೊರಗಡೆ ಈ ಪ್ರದೇಶದ ಬಗ್ಗೆ ಜನರು ಬಹಳಷ್ಟು ಮಾತನಾಡುತ್ತಾರೆ.

ಹರಿದ್ವಾರದಿಂದ ಋಷಿಕೇಶಕ್ಕೆ ಹೋಗುವ ರಸ್ತೆ

ಹರಿದ್ವಾರದಿಂದ ಋಷಿಕೇಶಕ್ಕೆ ಹೋಗುವ ರಸ್ತೆ

ಹರಿದ್ವಾರದಿಂದ ಋಷಿಕೇಶಕ್ಕೆ ಹೋಗುವ ರಸ್ತೆಯ ಎಲ್ಲಾ ಕಡೆ ಪರ್ವತಗಳು ಮತ್ತು ಕಾಡುಗಳಿಂದ ಆವೃತವಾಗಿದೆ. ಈ ರಸ್ತೆ ತುಂಬಾ ಅಪಾಯಕಾರಿಯಾಗಿದೆ. ಇಲ್ಲಿ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ. ಒಂದು ಕಾಲದಲ್ಲಿ ಇಲ್ಲಿ ದೆವ್ವ ಮತ್ತು ಆತ್ಮಗಳು ಇದ್ದವು. ಈ ಸ್ಥಳವು ಅವುಗಳಿಗೆ ಸೇರಿತ್ತು ಎಂದು ಹೇಳಲಾಗುತ್ತದೆ. ಆದರೆ ಇಂದು ಈ ಸ್ಥಳದಲ್ಲಿ ಮನುಷ್ಯ ಸುತ್ತಾಡುತ್ತಾನೆ. ಆದ್ದರಿಂದ ಇಲ್ಲಿ ವಾಸಿಸುವ ಆತ್ಮಗಳು ಮನುಷ್ಯರ ಮೇಲೆ ಕೋಪಗೊಂಡು, ಇಲ್ಲಿಗೆ ಬರುವ ಜನರಿಗೆ ತೊಂದರೆ ನೀಡುತ್ತವೆ.

ರಿಷಿ ಆಶ್ರಮ

ರಿಷಿ ಆಶ್ರಮ

ರಿಷಿ ಆಶ್ರಮವು ಸುರಕ್ಷಿತ ಸ್ಥಳವಾಗಿದೆ. ಆದರೆ ಆಶ್ರಮದ ಸುತ್ತಲಿನ ಕಾಡು ತುಂಬಾ ಭಯಾನಕವಾಗಿದೆ. ನೀವು ಎಂದಾದರೂ ರಾತ್ರಿ ಇಲ್ಲಿ ಸಿಲುಕಿಕೊಂಡರೆ,ನೀವು ಖಂಡಿತವಾಗಿಯೂ ಸಹಾಯಕ್ಕೆ ಕೂಗುವುದು ಗ್ಯಾರಂಟಿ. ಇಲ್ಲಿ ನೀವು ಸಾಮಾನ್ಯವಾಗಿ ಋಷಿಗಳು ಮತ್ತು ತಂತ್ರಿಗಳು ಪ್ರೇತಗಳನ್ನು ಹೊರಹಾಕುವುದನ್ನು ನೋಡುತ್ತೀರಿ. ಅಂತಹ ಶಕ್ತಿಗಳಿಗೆ ಈ ಸ್ಥಳವು ಬಹಳ ಪ್ರಸಿದ್ಧವಾಗಿದೆ.

ವಿಷ್ಣು ಘಾಟ್‌

ವಿಷ್ಣು ಘಾಟ್‌

ಹರಿದ್ವಾರವು ಘಾಟ್‌ಗಳ ನಾಡು. ಇಲ್ಲಿನ ವಿಷ್ಣು ಘಾಟ್ ನಗರದ ಅತ್ಯಂತ ಪ್ರಶಾಂತ ಘಾಟ್‌ಗಳಲ್ಲಿ ಒಂದಾಗಿದೆ. ಹರಿ ಕಿ ಪೌರಿಗೆ ಸಮೀಪದಲ್ಲಿರುವ ಈ ಘಾಟ್ ಕಡಿಮೆ ಜನಸಂದಣಿಯನ್ನು ಹೊಂದಿದೆ. ವಿಷ್ಣು ಘಾಟ್‌ಗೆ ವಿಷ್ಣುವಿನ ಹೆಸರಿಡಲಾಗಿದೆ. ಇದು ಹರಿದ್ವಾರದಲ್ಲಿರುವ ಅತ್ಯಂತ ಸ್ವಚ್ಛ ಘಾಟ್‌ಗಳಲ್ಲಿ ಇದು ಒಂದಾಗಿದ್ದು, ಜನರು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಲು ಮತ್ತು ತಮ್ಮ ಪಾಪಗಳನ್ನು ಪರಿಹರಿಸಿಕೊಳ್ಳಲು ಈ ಘಾಟ್‌ಗೆ ಆಗಾಗ್ಗೆ ಬರುತ್ತಾರೆ.

ಅಂದಹಾಗೆ ವಿಷ್ಣು ಘಾಟ್‌ ನಲ್ಲಿ ಕೂಡ ಇಂತಹ ಕೆಲವು ವಿಚಿತ್ರ ಶಕ್ತಿಗಳು ನೆಲೆಸಿವೆ ಎಂದು ಕೆಲವರು ಹೇಳುತ್ತಾರೆ. ವಾಸ್ತವವಾಗಿ, ಹಿಂದೆ ಇಲ್ಲಿ ಅನೇಕ ತಾಂತ್ರಿಕ ಚಟುವಟಿಕೆಗಳು ನಡೆಯುತ್ತಿದ್ದವು. ಆದ್ದರಿಂದ ಇಂದಿಗೂ ಅಂತಹ ಶಕ್ತಿಗಳು ಇಲ್ಲಿವೆ. ಯಾರಾದರೂ ಕರೆಯುವವರೆಗೂ ಈ ಆತ್ಮಗಳು ಯಾರಿಗೂ ಏನನ್ನೂ ಹೇಳುವುದಿಲ್ಲ.

ಬಿರ್ಲಾ ಘಾಟ್‌

ಬಿರ್ಲಾ ಘಾಟ್‌

ಹರಿದ್ವಾರದಲ್ಲಿರುವ ಪುರಾತನ ಘಾಟ್‌ಗಳಲ್ಲಿ ಒಂದಾದ ಬಿರ್ಲಾ ಘಾಟ್ ವಿಷ್ಣು ಘಾಟ್‌ನ ಪಕ್ಕದಲ್ಲಿರುವ ಪ್ರಾಚೀನ ಮತ್ತು ಪ್ರಶಾಂತ ತಾಣವಾಗಿದೆ. ಬಿರ್ಲಾ ಘಾಟ್'ನಿಂದ ವಿಷ್ಣು ಘಾಟ್‌ ಗೆ ನಡಿಗೆಯಲ್ಲಿ ಬರಲು 5 ನಿಮಿಷಗಳು ಸಾಕು. ಹಾಗಾಗಿ ನೀವು ಎರಡಕ್ಕೂ ಒಟ್ಟಿಗೆ ಭೇಟಿ ನೀಡಬಹುದು. ಈ ಘಾಟ್ ಗಂಗಾ ಆರತಿಗೆ ಬಹಳ ಪ್ರಸಿದ್ಧವಾಗಿದೆ. ಹರಿಯುವ ನದಿ, ಸಂಜೆಯ ಆರತಿಯ ನೋಟ ನೋಡಲು ಎರಡು ಕಣ್ಣು ಸಾಲದು.

ನೀವು ಇಲ್ಲಿಗೆ ಬಂದಾಗ ನಿಜವಾಗಿಯೂ ಸ್ವರ್ಗದಲ್ಲಿದ್ದಂತೆ ಅನಿಸುತ್ತದೆ. ಆದರೆ ಬಿರ್ಲಾ ಘಾಟ್‌ನಲ್ಲಿ ಕೆಲವು ದೆವ್ವಗಳು ಕಂಡುಬರುವ ಸಮಯವಿದೆ. ಆ ಸಮಯದಲ್ಲಿ ದೆವ್ವಗಳು ಹೆಚ್ಚು ಶಕ್ತಿಶಾಲಿಯಾಗುತ್ತವೆ. ಆದ್ದರಿಂದ ಇಲ್ಲಿ ತಿರುಗಾಡುವಾಗ ಜಾಗರೂಕರಾಗಿರಬೇಕು. ಇಲ್ಲಿ ಏಕಾಂಗಿಯಾಗಿ ಮತ್ತು ಏಕಾಂತ ಸ್ಥಳದಲ್ಲಿ ಹೋಗುವುದು ಸೂಕ್ತವಲ್ಲ.

ಮಾನಸ ದೇವಿ ದೇವಸ್ಥಾನದ ದಾರಿ

ಮಾನಸ ದೇವಿ ದೇವಸ್ಥಾನದ ದಾರಿ

ಮಾನಸ ದೇವಿ ದೇವಸ್ಥಾನವು ಉತ್ತರಾಖಂಡದ ಹರಿದ್ವಾರದಲ್ಲಿರುವ ಪ್ರಸಿದ್ಧ ದೇವಾಲಯವಾಗಿದೆ. ಹರಿದ್ವಾರದಲ್ಲಿರುವ ಪಂಚ ತೀರ್ಥಗಳು ಅಥವಾ ಪಂಚ ತೀರ್ಥಕ್ಷೇತ್ರಗಳಲ್ಲಿ ಒಂದಾದ ಈ ದೇವಾಲಯಕ್ಕೆ ಪ್ರತಿ ವರ್ಷ ಸಾವಿರಾರು ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇದು ಶಿವಾಲಿಕ್ ಬೆಟ್ಟಗಳ ಮೇಲಿನ ಬಿಲ್ವ ಪರ್ವತದ ತುದಿಯಲ್ಲಿದೆ.

ನೀವು ಮಾನಸ ದೇವಿಯ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ದಾರಿಯಲ್ಲಿ ಅನೇಕ ದಟ್ಟವಾದ ಕಾಡುಗಳನ್ನು ನೀವು ನೋಡುತ್ತೀರಿ. ಕೆಲವು ರಾತ್ರಿಗಳಲ್ಲಿ ಇಲ್ಲಿ ದುಷ್ಟಶಕ್ತಿಗಳು ಹೊರಬರುತ್ತವೆ ಎಂದು ಇಲ್ಲಿನ ಜನರು ಅನೇಕ ಬಾರಿ ಹೇಳಿದ್ದಾರೆ. ಹೀಗಾಗಿ ರಾತ್ರಿ ವೇಳೆ ಈ ಸ್ಥಳದಲ್ಲಿ ತಂಗುವುದನ್ನು ನಿಷೇಧಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X