Search
  • Follow NativePlanet
Share
» »ಭಯಾನಕ ಪ್ರಶಾಂತತೆಯ ಪಾಪಿ ಬೆಟ್ಟಗಳು!

ಭಯಾನಕ ಪ್ರಶಾಂತತೆಯ ಪಾಪಿ ಬೆಟ್ಟಗಳು!

By Vijay

ಪಾಪಿ ಬೆಟ್ಟಗಳು ಗೋದಾವರಿ ನದಿಯೊಂದಿಗೆ ನಂಟು ಹೊಂದಿರುವ ಅತಿ ಗಾಂಭೀರ್ಯ ಶಾಂತತೆಯಿಂದ ಕೂಡಿದ ಅದ್ಭುತ ಬೆಟ್ಟಗಳು. ಈ ಬೆಟ್ಟಗಳಿಗೆ ಹಡುಗು, ದೋಣಿಗಳಲ್ಲಿ ಪ್ರವಾಸ ಮಾಡಿ ಮತ್ತೆ ಮರಳುವುದೆ ಒಂದು ರೋಮಾಂಚಕ ಅನುಭವ. ಹೌದು ನದಿಯಲ್ಲಿ ಕಾಡು-ಮೇಡುಗಳ ಅದ್ಭುತ ಸೌಂದರ್ಯವನ್ನು ಸವಿಯುತ್ತ ಮಾಡುವ ಪ್ರವಾಸವನ್ನು ಪಾಪಿ ಬೆಟ್ಟಗಳು ನೀಡುತ್ತವೆ.

ಕರ್ನಾಟಕದಲ್ಲಿರುವ ಅದ್ಭುತ ಬೆಟ್ಟಗಳು

ಸಾಮಾನ್ಯವಾಗಿ ಪಾಪಿ ಬೆಟ್ಟಗಳ ಪ್ರವಾಸ ಒಂದು ಅದ್ಭುತ ಚಟುವಟಿಕೆಯಾಗಿದ್ದು ಆಂಧ್ರಪ್ರದೇಶದಾದ್ಯಂತ ಬಲು ಜನಪ್ರೀಯವಾಗಿದೆ. ಈ ಪ್ರವಾಸವು ಸಾಮಾನ್ಯವಾಗಿ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಿಂದ ಆರಂಭವಾಗುತ್ತದೆ. ಸಾಕಷ್ಟು ಪ್ರವಾಸ ಆಯೋಜಕ ಸಂಸ್ಥೆಗಳಿದ್ದು ನಿಮಗೆ ಬೇಕಾದ ಏಜೆಂಟರುಗಳಿಂದ ಈ ಪ್ರವಾಸವನ್ನು ನೀವು ಮುಂಚಿತವಾಗಿ ಕಾಯ್ದಿರಿಸಬಹುದಾಗಿದೆ.

ಭಯಾನಕ ಪ್ರಶಾಂತತೆಯ ಪಾಪಿ ಬೆಟ್ಟಗಳು!

ಚಿತ್ರಕೃಪೆ: Dineshthatti

ಈ ಪ್ರವಾಸವು ಹಲವು ವಿಶೇಷತೆಗಳಿಂದ ಕೂಡಿದೆ. ಕೆಲವು ಕೇವಲ ದಿನದ ಸಮಯದಲ್ಲೆ ಗೋದಾವರಿ ನದಿಯಲ್ಲಿ ವಿಹರಿಸುತ್ತ ಹಲವು ಬುಡಕಟ್ಟು ಗ್ರಾಮಗಳಿಗೆ ಭೇಟಿ ನೀಡಿ ಪಾಪಿ ಬೆಟ್ಟ ತಲುಪಿ ಮತ್ತೆ ಅದೆ ಮರಳುವುದಾಗಿದ್ದರೆ. ಇನ್ನೂ ಕೆಲವು ನದಿಯಲ್ಲಿ ಸುತ್ತುತ್ತ ತಟದಲ್ಲಿರುವ ಕೊಲ್ಲೂರು ಎಂಬ ಬುಡಕಟ್ಟು ಗ್ರಾಮದ ಉಸುಕಿನ ದಮ್ಡೆಯಲ್ಲಿ ಗುಡಿಸಲುಗಳಲ್ಲಿ ರಾತ್ರಿ ತಂಗಿ ಮರುದಿನ ಪಾಪಿ ಬೆಟ್ಟ ತಲುಪಿ ಮರುಳುವುದಾಗಿದೆ.

ಇದರಲ್ಲೂ ಕೆಲವು ವಿಶೇಷ ಧಾರ್ಮಿಕ ಪ್ರವಾಸಿ ಪ್ಯಾಕೇಜುಗಳು ಲಭ್ಯವಿದ್ದು ಇವು ಭದ್ರಾಚಲಂವರೆಗೂ ಪ್ರವಾಸಿಗರನ್ನು ಕರೆದೊಯ್ಯುತ್ತವೆ. ಯಾರ್ಯಾರಿಗೆ ಯಾವ ರೀತಿಯ ಪ್ರವಾಸ ಇಷ್ಟವೊ ಆ ರೀತಿಯಾಗಿ ಮಾದಬಹುದು. ಇನ್ನೂ ಹೊರಡುವ ದಿನದಂದು ಮುಂಚಿತವಾಗೆ ಮೊದಲೆ ತಿಳಿಸಲಾದ ಸಮಯಕ್ಕೆ ಸರಿಯಾಗಿ ರಾಜಮಂಡ್ರಿ ನಗರದಿಂದ ಸುಮಾರು 35 ಕಿ.ಮೀ ದೂರವಿರುವ ಪುರುಷೋತಪಟ್ನಂ ಗ್ರಾಮಕ್ಕೆ ತಲುಪಬೇಕು.

ಭಯಾನಕ ಪ್ರಶಾಂತತೆಯ ಪಾಪಿ ಬೆಟ್ಟಗಳು!

ಚಿತ್ರಕೃಪೆ: Sreerambh

ಇಲ್ಲಿಂದಲೆ ಹಡಗು ಪ್ರಯಾಣ ಆರಂಭಗೊಳ್ಳುತ್ತದೆ. ಗೋದಾವರಿ ನದಿ ತಟದಲ್ಲಿ ಸಾಲು ಸಾಲಾಗಿ ಹಡುಗುಗಳು ನಿಂತಿರುತ್ತವೆ, ನಿಮಗೆ ತಿಳಿಸಲಾದ ಹಡಗು/ದೊಣಿಗಳಿಗೆ ನೀವು ತೆರಳಿ ಕುಳಿತರೆ ಸಾಕು. ನಂತರ ನೋಡಿ ನಿಮ್ಮ ಪ್ರವಾಸ ಎಂದಿಗೂ ಮರೆಯಲಾಗದಷ್ಟು ಮನೋರಂಜನೆಯೊಡನೆ ಈ ವಿಹಾರ ಆರಂಭವಾಗುತ್ತದೆ.

ಎಲ್ಲ ಮಧ್ಯಮ ಗಾತ್ರದ ದೋಣಿಗಳಾಗಿದ್ದು ಎಲ್ಲ ವ್ಯವಸ್ಥೆಗಳಿಂದ ಸುಸಜ್ಜಿತವಾಗಿರುತ್ತವೆ. ಒಬ್ಬೊಬ್ಬರಿಗೆ ಇಂತಿಷ್ಟು ಶುಲ್ಕವಿದ್ದು ಅದರಲ್ಲಿ ನಿಮ್ಮ ಎಲ್ಲ ಖರ್ಚುಗಳು ಕೂಡಿರುತ್ತವೆ. ಪ್ರತಿ ದೋಣಿಗಳಲ್ಲಿ ಒಬ್ಬೊಬ್ಬ ಕಲಾಕಾರರಿದ್ದು ಸಂಗೀತ ಹಾಗೂ ತನ್ನ ವಿನೋದಮಯ ಕಲೆಗಳಿಂದ ಪ್ರವಾಸಿಗರನ್ನು ರಂಜಿಸುತ್ತಿರುತ್ತಾನೆ.

ಭಯಾನಕ ಪ್ರಶಾಂತತೆಯ ಪಾಪಿ ಬೆಟ್ಟಗಳು!

ಚಿತ್ರಕೃಪೆ: Phanindrawiki

ಉದ್ದನೆ ಸಾಗುವ ಗೋದಾವರಿ ಹಲವು ಗುಡ್ಡಗಳ ಮಧ್ಯೆ ಅದ್ಭುತವಾಗಿ ಹರಿದು ಹೋಗಿರುವುದನ್ನು, ಗುಡ್ಡ-ಕಾಡುಗಳ ವರ್ಣನಾತೀತ ಸೌಂದರ್ಯವನ್ನು, ಅಲ್ಲಲ್ಲಿ ಮೀನು ಹಿಡಿಯುತ್ತಿರುವ ಬೆಸ್ತರನ್ನು ನೋಡಿ ಆನಂದಿಸುತ್ತ ವಿನೂತನವಾದ ಅನುಭವ ಪಡೆಯಬಹುದು.

ಮೊದ ಮೊದಲಿಗೆ ಸುಮಾರು ಮೂರು ಕಿ.ಮೀ ಅಗಲ ಹೊಂದಿರುವಂತಹ ಗೋದಾವರಿ ನದಿಯು ಮುಂದೆ ಹೋದ ಹಾಗೆ ತನ್ನ ಅಗಲವನ್ನು ಕಡಿಮೆ ಮಾಡುತ್ತ ಸಾಗುತ್ತಾಳೆ. ನಿಸ್ಸಂಶಯವಾಗಿ ಇಲ್ಲಿ ಗೋದಾವರಿಯು ಅತಿಯಾದ ಆಳವನ್ನು ಹೊಂದಿರುತ್ತಾಳೆ. ಇದಕ್ಕೆ ಸಂಬಂಧಿಸಿದಂತೆ ಒಂದು ಅದ್ಭುತವಾದ ಕಥೆಯೊಂದನ್ನು ಹೇಳಲಾಗುತ್ತದೆ.

ಭಯಾನಕ ಪ್ರಶಾಂತತೆಯ ಪಾಪಿ ಬೆಟ್ಟಗಳು!

ಚಿತ್ರಕೃಪೆ: Dineshthatti

ಹಿಂದೆ ಪಾಪಿ ಎಂಬ ರಾಕ್ಷಸನಿದ್ದನು. ಅವನು ಗೋದಾವರಿ ಸುಶ್ರಾವ್ಯವಾಗಿ ಹರಿದಿರುವುದನ್ನು ಕಂಡು ಅಸೂಯೆ ಪಟ್ಟು ಅವಳ ತಿರುವನ್ನೆ ಬದಲಿಸುವ ಇಚ್ಛೆಯಿಂದ ದೊಡ್ಡ ಗಾತ್ರದ ಬೆಟ್ಟ ಗುಡ್ಡಗಳ ರೂಪ ಪಡೆದು ಆಕೆಗೆ ಅಡ್ಡಲಾಗಿ ನಿಂತನು. ಇದರಿಂದ ಕುಪಿತಳಾದ ಗೋದಾವರಿ ತನ್ನ ಶಕ್ತಿಯಿಂದ ಆ ಗುಡ್ಡಗಳನ್ನೆ ಸೀಳುತ್ತ ಮುಂದೆ ಸಾಗಿದಳು. ಇದರಿಂದ ಆ ರಾಕ್ಷಸ ಸತ್ತು ಹೋದನೆನ್ನಲಾಗುತ್ತದೆ.

ಹೀಗಾಗಿ ಈ ನದಿ ಮಾರ್ಗದಲ್ಲಿ ಗಂಭೀರವಾಗಿ ಹರಡಿರುವ ಬೆಟ್ಟಗಳನ್ನು ಪಾಪಿ ಬೆಟ್ಟಗಳು ಎಂದು ಕರೆಯಲಾಗುತ್ತದೆ. ಇನ್ನೂ ಕೆಲವರು ಹೇಳುವ ಪ್ರಕಾರ ಪಾಪಿಡಿ ಶಬ್ದದಿಂದ ಪಾಪಿ ಬೆಟ್ಟಗಳು ಎಂಬ ಹೆಸರು ಬಂದಿದೆಯಂತೆ. ಪಾಪಿಡಿ ಎಂದರೆ ವಿವಾಹಿತ ಮಹಿಳೆ ತಲೆಯ ಮಧ್ಯದಲ್ಲಿ ಸಿಂಧೂರ ಇಟ್ಟು ಕೊಳ್ಳುವ ರೇಖೆ ಅಥವಾ ಬೈತಲು. ಪಾಪಿ ಬೆಟ್ಟಗಳ ಸರಣಿಯಲ್ಲಿ ಗೋದಾವರಿಯು ಇದೇ ರೀತಿಯಾಗಿ ಗೋಚರಿಸುತ್ತಾಳೆನ್ನಲಾಗುತ್ತದೆ.

ಭಯಾನಕ ಪ್ರಶಾಂತತೆಯ ಪಾಪಿ ಬೆಟ್ಟಗಳು!

ಚಿತ್ರಕೃಪೆ: Pranayraj1985

ಈ ಒಂದು ಪ್ರವಾಸವು ಸುಮಾರು 65 ಕಿ.ಮೀ ಗಳಷ್ಟು ದೂರವನ್ನು ಹೊಂದಿದ್ದು ಕಣಿವೆಯ ಮೂಲಕ ಹಾದು ಹೋಗುವುದರಿಂದ ಎರಡು ಬದಿಗಳಲ್ಲಿರುವ ರೌದ್ರಾವತಾರದ ಬೆಟ್ಟ ಗುಡ್ಡಗಳು ಒಂದು ರೀತಿಯ ನಿಗೂಢ ಶಾಂತತೆಯಿಂದ ಕೂಡಿರುವುದು ವಿಶೇಷವಾಗಿರುತ್ತದೆ. ಕೆಲವರಿಗೆ ಇದು ಭಯಾನಕವೆನಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಇನ್ನೇಕೆ ತಡ, ನೀವು ಒಮ್ಮೆ ಈ ಪ್ರವಾಸ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X