Search
  • Follow NativePlanet
Share
» »ಚರಿತ್ರೆಯಲ್ಲಿ ಮಾಯವಾದ ನಗರಗಳು....

ಚರಿತ್ರೆಯಲ್ಲಿ ಮಾಯವಾದ ನಗರಗಳು....

By Sowmyabhai

ಒಂದು ಕಾಲದಲ್ಲಿ ಅನೇಕ ನಗರಗಳು ಶ್ರೀಮಂತವಾಗಿ ಇದ್ದವು. ರಾಜರ ಪಾಲನೆ ಪೋಷಣೆಯಲ್ಲಿ ಬೆಳೆದ ಅದೆಷ್ಟು ನಗರಗಳು ಅವುಗಳಲ್ಲಿ ಕೆಲವು ಅಸ್ತಿತ್ವದಲ್ಲಿದ್ದರೆ ಮತ್ತೆ ಕೆಲವು ನಗರಗಳು ಸಂಪೂರ್ಣವಾಗಿ ನಾಶವಾಗಿವೆ. ಕೆಲವು ನಗರಗಳು ಇಂದಿಗೂ ತನ್ನ ಗತ ವೈಭವವನ್ನು ತನ್ನಲ್ಲಿಯೇ ಅಡಗಿಸಿಕೊಂಡಿದೆ. ಆ ಸುಂದರವಾದ ಪ್ರದೇಶಗಳು ಇಂದಿಗೂ ಪ್ರವಾಸಿ ಸ್ಥಳವಾಗಿ ಪ್ರಸಿದ್ಧಿ ಹೊಂದಿದೆ.

ಹಾಗಾದರೆ ಆ ನಗರಗಳು ಯಾವುವು? ಎಂಬುದನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

1.ವಿಜಯನಗರ

1.ವಿಜಯನಗರ

ವಿಜಯನಗರ ಪಟ್ಟಣವು ಒಂದು ಕಾಲದಲ್ಲಿ ವೈಭವೋಪೇತವಾಗಿ ಮೆರೆದ ನಗರ. ಸುಮಾರು 5 ಲಕ್ಷ ಮಂದಿ ಪ್ರಜೆಗಳು ಹೊಂದಿತ್ತು. ಇಂದು ಈ ಪಟ್ಟಣದ ವೈಭವವೆಲ್ಲಾ ಹಂಪಿ ಶಿಥಿಲಾವಸ್ಥೆಯಲ್ಲಿ ನೋಡಬಹುದು. ಇದು ಒಂದು ಕಾಲದಲ್ಲಿ ಪ್ರಪಂಚದಲ್ಲಿ ಬಿಜಿಂಗ್ ಪಟ್ಟಣಗಳ ನಂತರ 2 ನೇ ದೊಡ್ಡ ನಗರವಾಗಿ ಇತ್ತು. ಹಂಪಿಯಲ್ಲಿನ ಶಿಥಿಲಾವಸ್ಥೆಯಲ್ಲಿರುವ ಸ್ಥಳಗಳು ಇಂದು ಒಂದು ವಿಶ್ವ ಪಾರಂಪರಿಕ ಪ್ರದೇಶವಾಗಿ ಮಾರ್ಪಾಟಾಗಿದೆ.

2.ಮುಜಿರಿಸ್ ಮುಸಿರಿ

2.ಮುಜಿರಿಸ್ ಮುಸಿರಿ

PC : Wiki Commons

ಭಾರತ ದೇಶದ ನೈಋತ್ಯ ಭಾಗದಲ್ಲಿ ಮುಜಿರಿಸ್ ಮುಸಿರಿ ಎಂದು ತಮಿಳಿನಲ್ಲಿ ಕರೆಯುತ್ತಿದ್ದರು. ಇದು ಒಂದು ಪುರಾತನ ಸಮುದ್ರ ರೇವು ಪಟ್ಟಣ ಎಂದು ಒಂದು ಕಾಲದಲ್ಲಿ ಹೆಸರುವಾಸಿಯಾಗಿತ್ತು. ಅಂದಿನ ದಕ್ಷಿಣ ಭಾರತದಲ್ಲಿನ ಪ್ರಜೆಗಳು ಈ ಮುಜಿರಿಸ್ ಪಟ್ಟಣದ ಮೂಲಕ ಈಜಿಫ್ಟಿಯನ್ನರು, ಗ್ರೀಕರು, ರೋಮನ್ ಸಾಮ್ರಾಜ್ಯದಿಂದ ವ್ಯಾಪಾರಗಳು ಮಾಡಿದರು. ಈ ಮುಜಿರಿಸ್ ಪಟ್ಟಣವು ಅಸಲಿಗೆ ಎಲ್ಲಿ ಇದೆ ಎಂದು ಚರಿತ್ರಿಕಾರರು. ಪುರಾವಸ್ತು ಶಾಸ್ತ್ರಕಾರರು ಇಂದಿಗೂ ತಿಳಿಯದು. ಈ ಪ್ರದೇಶವು ಕೇರಳದ ಕೊಚ್ಚಿನ್‍ಗೆ ಉತ್ತರ ದಿಕ್ಕಿಗೆ ಸುಮಾರು 18 ಮೈಲಿ ದೂರದಲ್ಲಿ ಪ್ರಸ್ತುತ ಕ್ರಾಗಾನ್ ಕೋರ್‍ಗೆ ಸಮೀಪದಲ್ಲಿ ಇತ್ತು ಎಂದು ಭಾವಿಸುತ್ತಾರೆ.

3.ಲೋಥಾಲ್

3.ಲೋಥಾಲ್

PC : Wiki Commons

ಗುಜರಾತ್ ರಾಜ್ಯದಲ್ಲಿನ ಲೋಥಾಲ್ ಪಟ್ಟಣವು ಪುರಾತನವಾದ ಸಿಂಧು ಕಣಿವೆ ನಾಗರೀಕತೆಯ ಕೇಂದ್ರವಾಗಿ ಶ್ರೀಮಂತಗೊಂಡಿತು. ಈ ಪ್ರದೇಶದಿಂದ ಬೆಳ್ಳಿ, ರತ್ನಗಳು, ಮಣಿಗಳು, ಬೆಲೆಬಾಳುವ ಬಂಗಾರ ಆಭರಣಗಳು ಪಶ್ಚಿಮ ಏಶಿಯಾ ಮತ್ತು ಆಫ್ರಿಕಾ ದೇಶಗಳಿಗೆ ರಫ್ತಾಗುತ್ತಿತ್ತು. ಈ ಪಟ್ಟಣದ ಪ್ರಜೆಗಳು ರತ್ನ ಹಾಗು ಆಭರಣಗಳ ತಯಾರಿಯಲ್ಲಿ ಪ್ರಸಿದ್ಧಿಯನ್ನು ಹೊಂದಿದೆ.

4.ಕಾಲಿಬಂಗಾನ್

4.ಕಾಲಿಬಂಗಾನ್

PC : Wiki Commons

ಕಾಳಿಬಂಗಾನ್ ಪಟ್ಣವು ಹರಪ್ಪ ಪೂರ್ವ ಚರಿತ್ರೆಯನ್ನು ಹಾಗು ಅವಶೇಷಗಳನ್ನು ಕಾಣಬಹುದಾಗಿದೆ. ರಾಜಸ್ಥಾನದಲ್ಲಿನ ಗಗ್ಗರ್ ನದಿ ದಕ್ಷಿಣ ಭಾಗದಲ್ಲಿನ ಪ್ರದೇಶಗಳನ್ನು ಕಾಳಿ ಬಂಗಾನ್ ಪಟ್ಟಣ ಎಂದು ಕರೆಯುತ್ತಿದ್ದರು. ಸಿಂಧೂ ಕಣಿವೆಯ ನಾಗರೀಕತೆಗೆ ಈ ಪ್ರದೇಶವು ಕೇಂದ್ರ ಬಿಂದುವಾಗಿತ್ತು ಎಂದು ಚರಿತ್ರೆಯು ತಿಳಿಸುತ್ತದೆ. ಈ ಪ್ರದೇಶವನ್ನು ಪ್ರಪಂಚದಲ್ಲಿನ ಮೊಟ್ಟ ಮೊದಲು ಉಳುಮೆ ಮಾಡಿದ ಭೂಮಿ ಎಂದು ಗುರುತಿಸಲಾಗಿದೆ.

5.ದ್ವಾರಕೆ

5.ದ್ವಾರಕೆ

PC : Wiki Commons

ಶ್ರೀ ಕೃಷ್ಣನ ಆಳ್ವಿಕೆಯಲ್ಲಿ ರಾಜಧಾನಿಯಾಗಿದ್ದ ಈ ಪಟ್ಟಣವು ಗುಜರಾತ್ ತೀರದಲ್ಲಿ ಸಮುದ್ರ ಗರ್ಭದೊಳಗೆ ಮುಳುಗಿ ಹೋಗಿದೆ. ಇದು ಇಂದಿಗೂ ಕೆಲವು ಅವಶೇಷಗಳನ್ನು ಕಾಣಬಹುದು. ದ್ವಾರಕಾ ಪಟ್ಟಣವು ಹಿಂದೂಗಳಿಗೆ ಪವಿತ್ರವಾದ ಚಾರ್ ಧಾಮ್ ಪುಣ್ಯ ಕ್ಷೇತ್ರಗಳಲ್ಲಿ ಒಂದು. ದೇಶದಲ್ಲಿ ಅತಿ ಪುರಾತನವಾದ ಧರ್ಮ ಪಟ್ಟಣವಾಗಿದೆ. ಚರಿತ್ರೆಯ ದೃಷ್ಟಿಯಿಂದ ನೋಡಿದರೆ ಶ್ರೀ ಕೃಷ್ಣನು ಈ ನಗರವನ್ನು ನಿರ್ಮಾಣ ಮಾಡಿದನು. ಆತನು ಮರಣ ಹೊಂದಿದ ನಂತರ ಈ ಪಟ್ಟಣವನ್ನು ಸಮುದ್ರ ಗರ್ಭದಲ್ಲಿ ಮುಳುಗಿ ಹೋಯಿತು ಎಂದು ಹೇಳುತ್ತಾರೆ.

6.ಪಟ್ಟದ ಕಲ್ಲು

6.ಪಟ್ಟದ ಕಲ್ಲು

ಪಟ್ಟದ ಕಲ್ಲು ಪಟ್ಟಣವು ಕರ್ನಾಟಕ ರಾಜ್ಯದಲ್ಲಿ ವಿಶ್ವ ಪಾರಂಪರಿಕ ಸಂಪತ್ತಾಗಿ ಹೊಂದಿದ ಪ್ರದೇಶವಾಗಿದೆ. ಒಂದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿ, ಚಾಳುಕ್ಯ ಕಾಲದ ಅನೇಕ ಚಾರಿತ್ರಿಕ ಸ್ಮಾರಕವು ಇಂದಿಗೂ ಗುರುತಿಸಲಾಗುತ್ತಿದೆ. ಇತಿಹಾಸ ಪ್ರಿಯರಿಗೆ ಪಟ್ಟದ ಕಲ್ಲು ಮುಖ್ಯ ಪ್ರವಾಸಿ ಆಕರ್ಷಣೆಯಾಗಿದೆ.

7.ಡೊಲವಿರಾ

7.ಡೊಲವಿರಾ

ಸ್ಥಳೀಯವಾಗಿ ಡೊಲವವಿರಾ ಪಟ್ಟಣವನ್ನು ಕೋಟೆಯ ಟಿಮ್ಬಾ ಎಂದು ಕರೆಯುತ್ತಾರೆ. ಗುಜರಾತ್‍ನಲ್ಲಿನ ಈ ಪುರಾವಸ್ತು ಪ್ರದೇಶದಲ್ಲಿ ಸಿಂಧು ಕಣಿವೆ ನಾಗರೀಕತೆಗೆ ಸಂಬಂಧಿಸಿದ ಪುರಾತನವಾದ ಅವಶೇಷಗಳು ಇವೆ. ಈ ಪುರಾತನವಾದ ಅವಶೇಷಗಳು ಕ್ರಿ. ಪೂ 2650-1450 ಕಾಲದ್ದು ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X