Search
  • Follow NativePlanet
Share
» »ಇಲ್ಲಿದೆ ಒಂದು ಸುಂದರ ಹಡುಗು ಪ್ರಯಾಣ

ಇಲ್ಲಿದೆ ಒಂದು ಸುಂದರ ಹಡುಗು ಪ್ರಯಾಣ

By Vijay

ಪ್ರವಾಸವನ್ನು ನಾವು ಸಾಮಾನ್ಯವಾಗಿ ಬಸ್ಸುಗಳಲ್ಲಿ, ಕಾರುಗಳಲ್ಲಿ ಇಲ್ಲವೆ ರೈಲುಗಳಲ್ಲಿ ಪ್ರಯಾಣಿಸುತ್ತ ಮಾಡುತ್ತೇವೆ. ಆದರೆ ನೀವು ಒಮ್ಮೆಯಾದರೂ ಯೋಚಿಸಿದ್ದೀರಾ...ನದಿಯಲ್ಲಿ ಒಂದು ಪಟ್ಟಣದಿಂದ ಮತ್ತೊಂದು ಪಟ್ಟಣವನ್ನು ತಲುಪುವ ಕುರಿತು. ಹೌದು ಆ ರೀತಿಯ ಒಂದು ಪ್ರವಾಸವಿದ್ದರೆ ಖಂಡಿತವಾಗಿಯೂ ಮನಸ್ಸು ಹೋಗಲು ಚಡಪಡಿಸುತ್ತದೆಂದು ಪ್ರತ್ಯೆಕವಾಗಿ ಹೇಳಬೇಕಾಗಿಲ್ಲ.

ವಾರಾಂತ್ಯದ ಕೊಡುಗೆ : ಪ್ರಯಾಣ ಹಾಗೂ ವಿಮಾನ ಹಾರಾಟ ದರಗಳ ಮೇಲೆ 80% ರಷ್ಟು ಕಡಿತ

ಅದಕ್ಕೆ ಪೂರಕವೆಂಬಂತೆ ಆಂಧ್ರ ರಾಜ್ಯದ ರಾಜಮಂಡ್ರಿಯಿಂದ ತೆಲಂಗಾಣ ರಾಜ್ಯದ ರಾಮನ ದೇವಾಲಯಕ್ಕೆ ಮಹತ್ವ ಪಡೆದ ಭದ್ರಾಚಲಂವರೆಗೆ ಗೋದಾವರಿ ನದಿಯ ಮೂಲಕ ಬೆಟ್ಟ ಗುಡ್ಡಗಳ ಸುಂದರವಾದ ಪರಿಸರದಲ್ಲಿ ಯಾವುದೆ ಟ್ರಾಫಿಕ್ ಜಾಮ್ ಹಾಗೂ ಅಡಚಣೆಗಳಿಲ್ಲದೆ ತೇಲುತ್ತ, ಪ್ರಕೃತಿಯೊಂದಿಗೆ ಬೆರೆಯುತ್ತ ತಲುಪಬಹುದಾಗಿದೆ.

ಇಲ್ಲಿದೆ ಒಂದು ಸುಂದರ ಹಡುಗು ಪ್ರಯಾಣ

ಚಿತ್ರಕೃಪೆ: ಫ್ಲಿಕ್ಕರ್

ರಾಜಮಂಡ್ರಿಯಿಂದ ಆರಂಭವಾಗುವ ಈ ಹಡುಗು ಪ್ರಯಾಣವು ಶ್ರೀರಾಮಗಿರಿ ಅಥವಾ ಕುನವರಂವರೆಗೂ ಲಭ್ಯವಿದೆ. ನಂತರ ರಾಮಗಿರಿಯಿಂದ ಭದ್ರಾಚಲಂಗೆ ರಸ್ತೆಯ ಮೂಲಕ ಪ್ರಯಾಣಿಸಬಹುದು. ಪ್ರಮುಖವಾಗಿ ಹಡಗಿನಲ್ಲಿನ ಪ್ರಯಾಣವು ದಟ್ಟನೆಯ ಕಾಡುಗಳು ಹಾಗೂ ಅದ್ಭುತ, ವಿಶಾಲಕಾಯದ ಬೆಟ್ಟಗುಡ್ಡ ಮಧ್ಯದಲ್ಲಿ ಸಾಗುವುದರಿಂದ ಒಂದು ಸುಂದರ ಅನುಭವವನ್ನು ನೀಡುತ್ತದೆ. ಅಲ್ಲದೆ ಯಾವ ರೀತಿಯ ಗೌಜು ಗದ್ದಲಗಳಿಲ್ಲದೆ ನೀರಿನ ಮೇಲೆ ಹಾಯಾಗಿ ಪ್ರಯಾಣಿಸುತ್ತ (ತೇಲುತ್ತ) ಸಾಗುವುದೆ ಒಂದು ಚೆಂದದ ಅನುಭವವೂ ಸಹ ಆಗಿದೆ.

ವಿಶೇಷ ಲೇಖನ : ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ

ಇಲ್ಲಿದೆ ಒಂದು ಸುಂದರ ಹಡುಗು ಪ್ರಯಾಣ

ಚಿತ್ರಕೃಪೆ: ಫ್ಲಿಕ್ಕರ್

ಹಡಗಿನ ಪ್ರಯಾಣವು ತನ್ನ ಪಯಣದಲ್ಲಿ ಸಾಕಷ್ಟು ಪವಿತ್ರ ದೇಗುಲ ತಾಣಗಳು ಹಾಗೂ ಗಿರಿಧಾಮಗಳ ಮೂಲಕ ಹಾದು ಹೋಗುತ್ತದೆ. ಗೋದಾವರಿ ನದಿಯು ಭದ್ರಾಚಲಂನಿಂದ ರಾಜಮಂಡ್ರಿಯೆಡೆಗೆ ಹರಿಯುತ್ತಾಳೆ. ಆದರೆ ರಾಜಮಂಡ್ರಿಯ ಬಹುಭಾಗವು ಪಾಪಿಕೊಂಡಾಲು ಬೆಟ್ಟ ಗುಡ್ಡಗಳಿಂದ ಆವರಿಸಿದ್ದು ಬೆಳಗಿನ ಸುರ್ಯೋದಯದಿಂದ ಹಿಡಿದು ಸಾಕಷ್ಟು ಸುಂದರ ದೃಶ್ಯಾವಳಿಗಳನ್ನು ಇಲ್ಲಿ ಆನಂದಿಸಬಹುದು. ಒಂದೆರಡು ಘಂಟೆ ಪ್ರಯಾಣ ತಡವಾದರೂ ಸಹ ರಾಜಮಂಡ್ರಿಯಿಂದ ಭದ್ರಾಚಲಂಗೆ ಹೊರಡುವ ಆಯ್ಕೆ ಉತ್ತಮ ಎಂದು ಹೇಳಬಹುದು.

ಇಲ್ಲಿದೆ ಒಂದು ಸುಂದರ ಹಡುಗು ಪ್ರಯಾಣ

ಚಿತ್ರಕೃಪೆ: Srichakra Pranav

ಹಡುಗು ಪ್ರಯಾಣ ಸೇವೆಗಳನ್ನು ಹಲವಾರು ಖಾಸಗಿ ಪ್ರವಾಸ ಸಂಸ್ಥೆಗಳು ಆಯೋಜಿಸುತ್ತವೆ. ಈ ಸೇವೆಯು ಬೆಳಗಿನ ಚಹಾದಿಂದ ಹಿಡಿದು ಮಧ್ಯಾಹ್ನದ ಊಟ ಹಾಗೂ ಸಂಜೆಯ ತಿಂಡಿಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಅಕ್ಟೋಬರ್ ದಿಂದ ಜನವರಿಯ ಸಮಯವು ಹಡುಗು ಪ್ರವಾಸಕ್ಕೆ ಉತ್ತಮವಾಗಿರುತ್ತದೆ. ಏಕೆಂದರೆ ನದಿಯಲ್ಲಿ ನೀರು ಮಿತವ್ಯಯ ಪ್ರಮಾಣದಲ್ಲಿರುತ್ತದೆ. ಆದರೂ ಸಹ ವಾತಾವರಣದ ಬದಲಾವಣೆಗಳನ್ನು ಗಮನಿಸಿ ಪ್ರಯಾಣ ಹೊರಡುವುದು ಉತ್ತಮ. ನಿರ್ದಿಷ್ಟ ಸಮಯಗಳಲ್ಲಿ ಸರ್ಕಾರಿ ಚಾಲಿತ ಸೇವೆಗಳೂ ಸಹ ದೊರೆಯುತ್ತವೆ.

ವಿಶೇಷ ಲೇಖನ : ಬೆಂಗಳೂರಿನಿಂದ ಶ್ರೀಕಾಳಹಸ್ತಿ

ಇಲ್ಲಿದೆ ಒಂದು ಸುಂದರ ಹಡುಗು ಪ್ರಯಾಣ

ಚಿತ್ರಕೃಪೆ: VaidhyanathanN

ಈ ಹಡುಗು ಪ್ರಯಾಣ ಸೇವೆಗಳನ್ನು ಪಡೆಯಲು ಮುಂಚಿತವಾಗಿಯೆ ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ. ಕಾಯ್ದಿರಿಸುವ ಕೇಂದ್ರಗಳು ರಾಜಮಂಡ್ರಿ ಹಾಗೂ ಭದ್ರಾಚಲಂಗಳಲ್ಲಿ ಮಾತ್ರ ಲಭ್ಯವಿದೆ. ಭದ್ರಾಚಲಂನಿಂದ ರಾಜಮಂಡ್ರಿಯವರೆಗೆ ಟಿಕೆಟ್ ಕಾಯ್ದಿರಿಸಿದರೂ ಸಹ ಅಧಿಕೃತ ಹಡುಗು ಪ್ರಯಾಣವು ಶ್ರೀರಾಮಗಿರಿಯಿಂದ ಮಾತ್ರವೆ ಆರಂಭಗೊಳ್ಳುತ್ತದೆ. ಅದಕ್ಕಾಗಿ ಮೊದಲು ಭದ್ರಾಚಲಂನಿಂದ ಶ್ರೀರಾಮಗಿರಿಗೆ ರಸ್ತೆಯ ಮೂಲಕವೆ ತಲುಪ ಬೇಕಾಗುತ್ತದೆ. ಶ್ರೀರಾಮಗಿರಿಯಲ್ಲಿ ಕಾಯ್ದಿರಿಸುವ ಕೇಂದ್ರಗಳಿಲ್ಲ ಎಂಬುದು ಗಮನದಲ್ಲಿಡಬೇಕು.

ಇಲ್ಲಿದೆ ಒಂದು ಸುಂದರ ಹಡುಗು ಪ್ರಯಾಣ

ಚಿತ್ರಕೃಪೆ: Pranayraj1985

ರಾಜಮಂಡ್ರಿಯಿಂದ ಹಡುಗು ಪ್ರಯಾಣ ಬೆಳಿಗ್ಗೆ ಮೂರು ಘಂಟೆಯಿಂದಲೇ ಆರಂಭಗೊಳ್ಳುತ್ತದೆ. 50, 80, 120 ಜನರು ಕುಳಿತುಕೊಳ್ಳುವಷ್ಟು ಸಾಮರ್ಥ್ಯದ ಹಡುಗುಗಳು ಲಭ್ಯವಿದೆ. ರಾಜಮಂಡ್ರಿಯಿಂದ ಆರಂಭಗೊಂಡ ಹಡುಗು ಪ್ರಯಾಣವು ಮೊದಲಿಗೆ ಪಟ್ಟಿಸೀಮಾ ಎಂಬ ಸ್ಥಳಕ್ಕೆ ತಲುಪುತ್ತದೆ. ಇಲ್ಲಿಯೆ ಬೆಳಿಗ್ಗೆಯ ಫಲಾಹಾರವನ್ನು ನೀಡಲಾಗುತ್ತದೆ. ಪಟ್ಟಿಸೀಮಾದಲ್ಲಿ ಒಂದು ಪುರಾತನ ಶ್ರೀ ಉಮಾ ಮಹಾ ನಂದೀಶ್ವರ ಸ್ವಾಮಿಯ ದೇಗುಲದ ದರುಶನ ಪಡೆಯಬಹುದು. ಅಲ್ಲದೆ ಗುಡ್ಡದ ಮೇಲಿರುವ ಈ ದೇವಸ್ಥಾನದಿಂದ ಸುಂದರ ಗೋದಾವರಿ ನದಿಯ ಸುಮಧುರ ದೃಶ್ಯವನ್ನು ವೀಕ್ಷಿಸಬಹುದು.

ವಿಶೇಷ ಲೇಖನ : ಅಹೋಬಿಲಂ ಎಂಬ ಬಲಶಾಲಿ ಸ್ಥಳ

ಇಲ್ಲಿದೆ ಒಂದು ಸುಂದರ ಹಡುಗು ಪ್ರಯಾಣ

ಚಿತ್ರಕೃಪೆ: Dineshthatti

ಪಟ್ಟಿಸೀಮಾದ ನಂತರ ಒಂದು ಘಂಟೆಯಷ್ಟು ಪ್ರಯಾಣಿಸಿ ಹಡುಗು ಗೊಂಡೂರು ತಲುಪುತ್ತದೆ. ಇದು ದೇವತೆ ಗಂಡಿ ಪೊಶಮ್ಮಳ ದೇವಾಲಯಕ್ಕೆ ಪ್ರಸಿದ್ಧಿ ಪಡೆದಿದೆ. ಇಲ್ಲಿಂದಲೂ ಸಹ ಗೋದಾವರಿ ನದಿಯ ಸುಂದರ ವಿಹಂಗಮ ನೋಟವನ್ನು ಕಾಣಬಹುದು. ಇಲ್ಲಿಂದ ಹಡುಗು ಮತ್ತೆ ಮುಂದುವರೆದು ಚೆಕ್ ಪೊಸ್ಟ್ ಅಥವಾ ತಪಾಸಣಾ ಕೇಂದ್ರವೊಂದರ ಬಳಿ ನಿಂತು ಪರಿಶೀಲನಾ ಕಾರ್ಯ ಸಂಪೂರ್ಣಗೊಂಡ ನಂತರ ಪಾಪಿಕೊಂಡಾಲು ಬೆಟ್ಟಗಳ ಬಳಿ ಹೊರಡುತ್ತದೆ. ಈ ಪ್ರಯಾಣದ ಪ್ರಮುಖ ಆಕರ್ಷಣೆಯೆ ಪಾಪಿಕೊಂಡಾಲು ಅಥವಾ ಪಾಪಿ ಬೆಟ್ಟಗಳು.

ಪಾಪಿ ಬೆಟ್ಟಗಳು ಗಾಢವಾದ ಅರಣ್ಯ ಸಂಪತ್ತುಗಳ ಮಧ್ಯದಲ್ಲಿ ನೆಲೆಸಿದ್ದು ಗೋದಾವರಿ ನದಿಯು ತನ್ಮೂಲಕ ಪ್ರವಾಸಿಗರಿಗೆ ಅಪರೂಪವಾಗಿ ಲಭಿಸುವ ಸುಂದರ ದೃಶ್ಯಾವಳಿಗಳನ್ನು ಒದಗಿಸುತ್ತಾಳೆ. ನಗರ ಗೌಜು ಗದ್ದಲಗಳಿಂದ ಶಾಂತವಾದ ಪರಿಸರ, ಹಕ್ಕಿ ಪಕ್ಷಿಗಳ ಚಿಲಿಪಿಲಿ, ಕಾಡಿನ ವಿಶಿಷ್ಟ ಸದ್ದು, ಹಸಿರುಮಯ ಗಿಡ ಮರಗಳು, ಎದೆ ಸೆಟೆಸಿ ನಿಂತಿರುವ ಬೆಟ್ಟ ಗುಡ್ಡಗಳು...ಒಂದೊಂದು ದೃಶ್ಯಗಳು ಒಂದೊಂದು ರೀತಿಯ ಸುಂದರಮಯ ಅನುಭೂತಿಗಳಿಗೆ ಕಾರಣವಾಗುತ್ತವೆ.

ಇಲ್ಲಿದೆ ಒಂದು ಸುಂದರ ಹಡುಗು ಪ್ರಯಾಣ

ಚಿತ್ರಕೃಪೆ: Adityamadhav83

ನಂತರ ಪೆರಂಟಾ ಪಲ್ಲಿಯಲ್ಲಿ ಹಡುಗು ನಿಲ್ಲುತ್ತದೆ. ಈ ಸ್ಥಳದಲ್ಲಿ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಇಲ್ಲಿ ಬೇಕಿದ್ದರೆ ರಾಮಕೃಷ್ಣ ಆಶ್ರಮವನ್ನು ಕಾಣಬಹುದು. ಈ ಆಶ್ರಮ ತಾಣದಲ್ಲಿ ಚಿಕ್ಕ ಮನೋಹರವಾದ ಜಲಪಾತವೊಂದಿದೆ. ಆಶ್ರಮದಲ್ಲಿ ಪ್ರವೇಶ ಬಯಸುವವರು ಆ ಜಲಪಾತದ ನೀರಿನಲ್ಲಿ ಮಿಂದು ಆಶ್ರಮ ಪ್ರವೇಶಿಸಬೇಕು. ಅಲ್ಲದೆ ಹಳ್ಳಿಯ ಜನರ ಕೈಯಿಂದ ಮಾಡಲಾದ ನೈಜ ಕಲಾತ್ಮಕ ವಸ್ತುಗಳು ಇಲ್ಲಿ ದೊರೆಯುತ್ತವೆ. ಇಷ್ಟವಿದ್ದಲ್ಲಿ ಕೊಂಡುಕೊಳ್ಳಬಹುದು.

ನಂತರ ಪೆರಂಟ ಪಲ್ಲಿಯಿಂದ ಪ್ರಯಾಣ ಮುಂದುವರೆದು ಯಾವುದೆ ಸ್ಥಳಗಳಲ್ಲಿ ನಿಲ್ಲದೆ ನೇರವಾಗಿ ಶ್ರೀರಾಮಗಿರಿಯನ್ನು ತಲುಪುತ್ತದೆ. ಇದೆ ಹಡುಗು ಪ್ರಯಾಣದ ಅಧಿಕೃತ ಮುಕ್ತಾಯ. ಬೆಳಿಗ್ಗೆ ಆರಂಭಗೊಂಡ ಈ ಪ್ರಯಾಣವು ಸಂಜೆ ಐದು ಘಂಟೆಯ ಸುಮಾರಿಗೆ ಶ್ರೀರಾಮಗಿರಿಯನ್ನು ತಲುಪುತ್ತದೆ. ಮುಂದೆ ಶ್ರೀರಾಮಗಿರಿಯಿಂದ ಮುಂಚಿತವಾಗಿಯೆ ಕಾಯ್ದಿರಿಸಿದ ವಾಹನಗಳ ಮೂಲಕ ಭದ್ರಾಚಲಂಗೆ ಹೊರಡಬಹುದು. ಕಾಯ್ದಿರಿಸದಿದ್ದಲ್ಲಿ ರೇಖಾಪಲ್ಲಿ ಎಂಬ ಸ್ಥಳಕ್ಕೆ ರಿಕ್ಷಾಗಳ ಮೂಲಕ ತಲುಪಿ ಅಲ್ಲಿಂದ ದೊರೆಯುವ ಬಸ್ಸುಗಳ ಮೂಲಕ ಭದ್ರಾಚಲಂ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X