Search
  • Follow NativePlanet
Share
» »ಬೆಂಗಳೂರಿನ ಸಸ್ಯಕಾಶಿ ಎಂದೇ ಕರೆಯಲ್ಪಡುವ ಲಾಲ್ ಬಾಗ್ ಬೊಟಾನಿಕಲ್ ಉದ್ಯಾನವನಕ್ಕೆ ಒಂದು ಪ್ರವಾಸ ಮಾಡಿ

ಬೆಂಗಳೂರಿನ ಸಸ್ಯಕಾಶಿ ಎಂದೇ ಕರೆಯಲ್ಪಡುವ ಲಾಲ್ ಬಾಗ್ ಬೊಟಾನಿಕಲ್ ಉದ್ಯಾನವನಕ್ಕೆ ಒಂದು ಪ್ರವಾಸ ಮಾಡಿ

"ಕೈ ಮುಗಿದು ಒಳಗೆ ಬಾ ಇದು ಸಸ್ಯಕಾಶಿ" ಎಂದು ಸ್ವಾಗತಿಸುವ ಬೆಂಗಳೂರಿನ ಸಸ್ಯತೋಟ ಲಾಲ್ ಬಾಗ್

ಬೆಂಗಳೂರೆಂದರೆ ಸಾಕು ನಮ್ಮಲ್ಲಿ ಹಲವರಿಗೆ ಒಂದು ಭಾವನಾತ್ಮಕ ಸಂಬಂಧವಿದೆ. ಬೆಂಗಳೂರು ತನ್ನಲ್ಲಿ ಉನ್ನತ ಮಟ್ಟದ ಶಾಪಿಂಗ್ ಮಾಲ್ ಗಳು, ನಯನಮನೋಹರ ಸರೋವರಗಳು, ಸುಂದರ ಉದ್ಯಾನವನಗಳು, ಪಬ್ ಗಳಿಂದ ಹಿಡಿದು ಅತ್ಯಂತ ಸೂಕ್ತವಾದ ವಾರಾಂತ್ಯದ ತಾಣಗಳವರೆಗೆ ಎಲ್ಲವನ್ನೂ ಹೊಂದಿದೆ ಎನ್ನುವುದು ಸತ್ಯ ಸಂಗತಿ ಬೆಂಗಳೂರಿನ ನಯನ ಮನೋಹರ ಉದ್ಯಾನವನಗಳಿಗಾಗಿ ಇದಕ್ಕೆ 'ಉದ್ಯಾನ ನಗರಿ' ಎಂಬ ಹೆಮ್ಮೆಯ ಹೆಸರಿದೆ. ಇಂತಹ ಉದ್ಯಾನವನಗಳಲ್ಲಿ ಅತ್ಯಂತ ಪ್ರಸಿದ್ದವಾದುದೆಂದರೆ ಬೆಂಗಳೂರಿನ ಲಾಲ್ ಬಾಗ್ ಬೊಟಾನಿಕಲ್ ಉದ್ಯಾನವನ. ಲಾಲ್ ಬಾಗ ಸಸ್ಯತೋಟವು ಬೆಂಗಳೂರಿನ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದೆನಿಸಿದೆ. ಈ ಉದ್ಯಾನವನವು ಉಷ್ಣವಲಯದ ಹಲವಾರು ಸಸ್ಯಗಳನ್ನು ಹೊಂದಿರುವುದಕ್ಕೆ ಸಾಕ್ಷಿಯಾಗಿದೆ.

ಅಲ್ಲದೆ ಇಲ್ಲಿ ಅಪರೂಪದ ಜಾತಿಯ ಹಲವಾರು ಸಸ್ಯಗಳನ್ನು ಪರ್ಸಿಯಾ, ಅಫಘಾನಿಸ್ಥಾನ, ಮತ್ತು ಫ಼್ರಾನ್ಸ್ ನಿಂದ ತರಲಾಗಿದ್ದು ಇವುಗಳನ್ನು ಇಲ್ಲಿ ಕಾಣಬಹುದಾಗಿದೆ. ಹುಲ್ಲಿನ ಹಾಸುಗಲು, ಹೂವಿನ ಹಾಸುಗಳು, ಕಮಲದ ಕೊಳಗಳು, ಕಾರಂಜಿಗಳು ಇತ್ಯಾದಿಗಳನ್ ಉಪಸ್ಥಿತಿಯಿಂದಾಗಿ ಈ ಉದ್ಯಾನವನಕ್ಕೆ ಇನ್ನಷ್ಟು ಮೆರುಗನ್ನು ನೀಡುತ್ತದೆ. ಇದು ಪ್ರಸಿದ್ದ ಗಾಜಿನ ಮನೆಯನ್ನು ಹೊಂದಿರುವುದಕ್ಕೂ ಜನಪ್ರಿಯವಾಗಿದ್ದು ಇಲ್ಲಿ ವರ್ಷಕ್ಕೆರಡು ಬಾರಿ ಪುಷ್ಪ ಮೇಳವನ್ನು ನಡೆಸಲಾಗುತ್ತದೆ. (26 ಜನವರಿಯಂದು ಮತ್ತು ಆಗಸ್ಟ್ 15ರಂದು)

lalbagh

ಸುಂದರವಾದ ಸರೋವರವು ಲಾಲ್ ಬಾಗ್ ನಲ್ಲಿರುವ ಇನ್ನೊಂದು ಆಕರ್ಷಣೆಯಾಗಿದೆ ಇವೆಲ್ಲವುಗಳ ಹೊರತಾಗಿಯೂ ಲಾಲ್ ಬಾಗ್ ನಲ್ಲಿ ಮಾಡಬಹುದಾದ ಹಲವಾರು ವಿಷಯಗಳಿವೆ. ಈ ಉದ್ಯಾನವನದಲ್ಲಿ 1000 ಅಥವಾ ಅದಕ್ಕೂ ಹೆಚ್ಚಿನ ಜಾತಿಯ ಪುಷ್ಪಗಳೂ, 100 ವರ್ಷಕ್ಕೂ ಹಳೆಯದಾದ ಮರಗಳೂ, ಇದ್ದು ಈ ಉದ್ಯಾನವನದ ಸೌಂದರ್ಯತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅಲ್ಲದೆ ಉದ್ಯಾನದಲ್ಲಿ ಕಂಡುಬರುವ ಲಾಲ್‌ಬಾಗ್ ಬಂಡೆಯು 3000 ಮಿಲಿಯನ್ ವರ್ಷಗಳಷ್ಟು ಹಿಂದಿನದು ಮತ್ತು ಇದು ಭೂಮಿಯ ಮೇಲಿನ ಅತ್ಯಂತ ಹಳೆಯ ಕಲ್ಲಿನ ರಚನೆಗಳಲ್ಲಿ ಒಂದಾಗಿದೆ. ಪಕ್ಕದ ಬೆಟ್ಟದ ಮೇಲಿರುವ ಕೆಂಪೇಗೌಡ ಗೋಪುರವು ಮೇಲಿನಿಂದ ಬೆಂಗಳೂರಿನ ಸಂಪೂರ್ಣ ನೋಟವನ್ನು ನೀಡುತ್ತದೆ.

ಇವೆಲ್ಲವುಗಳನ್ನು ಹೊಂದಿರುವ ಲಾಲ್ ಬಾಗ್ ಸಸ್ಯತೋಟ (ಬೊಟಾನಿಕಲ್ ಗಾರ್ಡನ್) ಒಂದು ಭೇಟಿ ಕೊಡಲೇಬೇಕು ಎನ್ನುವಂತಹ ಸ್ಥಳವಾಗಿದೆ. ಬೆಳಿಗ್ಗೆ 6:00 ಗಂಟೆಯಿಂದ ಸಾಯಂಕಾಲ 7:00 ಗಂಟೆಗಳವರೆಗೆ ಈ ಉದ್ಯಾನವನವು ವರ್ಷವಿಡೀ ತೆರೆದಿರುತ್ತದೆ. ಬೆಂಗಳೂರಿನ ಈ ಸ್ಥಳವು ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದ್ದು, ನಯನ ಮನೋಹರ ದೃಶ್ಯಗಳನ್ನು ಇಲ್ಲಿ ಆನಂದಿಸಿ. ಈ ಸುಂದರ ಲಾಲ್ ಬಾಗ್ ನಲ್ಲಿ ಪ್ರವಾಸ ಮಾಡುತ್ತಾ ಇದರ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ!

ಪ್ರವೇಶ: ಬೆಳಿಗ್ಗೆ 6:00 ರಿಂದ ಬೆಳಿಗ್ಗೆ 9ರ ವರೆಗೆ ಮತ್ತು ಸಾಯಂಕಾಲ 5:30 ರಿಂದ ರಾತ್ರಿ 7:00ರವರೆಗೆ ಈ ಉದ್ಯಾನವನವು ಜಾಗಿಂಗ್ ಮಾಡುವವರಿಗೆ ಪ್ರವಾಸಿಗರಿಗೆ ಮತ್ತು ಫಿಟ್ನೆಸ್ ಉತ್ಸಾಹಿಗಳಿಗಾಗಿ ಉಚಿತವಾಗಿ ಪ್ರವೇಶ ಒದಗಿಸಿಕೊಡುತ್ತದೆ ಈ ಸಮಯದ ಹೊರತಾಗಿ ಬೇರೆ ಸಮಯದಲ್ಲಿ ಇದಕ್ಕೆ ಪ್ರವೇಶ ಮಾಡಬೇಕಾದಲ್ಲಿ ಪ್ರವೇಶ ದರ ಪ್ರತಿಯೊಬ್ಬರಿಗೆ ತಲಾ .20/- ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ. ಶಾಲಾ ಮಕ್ಕಳಿಗೆ ಮತ್ತು ಅಂಗವಿಕಲರಿಗೆ ದಿನವಿಡೀ ಉಚಿತ ಪ್ರವೇಶ ಅವಕಾಶವಿರುತ್ತದೆ.

laqlbagh-2

ಗಾಜಿನ ಮನೆ ಮತ್ತು ಕಾರಂಜಿ

ಪ್ರಸಿದ್ದ ಗಾಜಿನ ಮನೆಯಲ್ಲಿ ವರ್ಷಕ್ಕೆರಡು ಬಾರಿ ಪುಷ್ಪ ಪ್ರದರ್ಶನವು ನಡೆಯುತ್ತದೆ. (ಜನವರಿ 26 ಮತ್ತು ಆಗಸ್ಟ್ 15) ಮತ್ತು ಈ ದಿನಗಳಲ್ಲಿ ಸುಂದರವಾಗಿ ಕಾಣುತ್ತದೆ.

ಸಂಜೆ ಅಥವಾ ರಾತ್ರಿಯಲ್ಲಿ ಗ್ಲಾಸ್ ಹೌಸ್ ಲಾಲ್ ಬಾಗ್‌ಗೆ ಭೇಟಿ ನೀಡುವುದು ಒಂದು ಆನಂದ ಮತ್ತು ರಾತ್ರಿಯಲ್ಲಿ ಗಾಜಿನ ಮನೆ ಹೇಗಿರುತ್ತದೆ ಎಂಬ ಸುಂದರ ಅನುಭವ ಪಡೆಯಬಹುದಾಗಿದೆ.

ಮರದ ಕಲಾಕೃತಿಯನ್ನೊಳಗೊಂಡ ಉದ್ಯಾನವು ತನ್ನ ಕಲಾತ್ಮಕ ರಚನೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಸಸ್ಯಶಾಸ್ತ್ರೀಯ ಉದ್ಯಾನದಲ್ಲಿರುವಗ್ಲಾಸ್ ಹೌಸ್‌ಗೆ ಹತ್ತಿರವಿರುವ ಇದು ಅಂತಹ ಸುಂದರ ಸೃಷ್ಟಿಗಳಲ್ಲಿ ಒಂದಾಗಿದೆ.

ಲಾಲ್ ಬಾಗ್ ಸರೋವರವು ಲಾಲ್ ಬಾಗ್ ಸಸ್ಯ ಉದ್ಯಾನವನದ ಒಂದು ಸುಂದರವಾದ ಸರೋವರವಾಗಿದೆ. ಉದ್ಯಾನವು ಭೇಟಿ ನೀಡುವವರಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತದೆ ಅಲ್ಲದೆ ಇಲ್ಲಿರುವ ಸರೋವರವೂ ಉದ್ಯಾನವನದ ಆಕರ್ಷಣೆಗಳಲ್ಲಿ ಒಂದಾಗಿದೆ. ಸರೋವರದ ತೀರದಲ್ಲಿ ಸಾಕಷ್ಟು ಪಕ್ಷಿಗಳನ್ನು ನೋಡಬಹುದು

lalbagh-3

ಬೊನ್ಸಾಯ್ ಗಾರ್ಡನ್

ಬೊನ್ಸಾಯ್ ಎಂದರೆ ಇದು ಜಪಾನಿನಲ್ಲಿ ಮರಗಳನ್ನು ಬೆಳೆಸುವ ರೀತಿಯ ಒಂದು ವಿಧವಾಗಿದ್ದು, ಇದರಲ್ಲಿ ಮರಗಳನ್ನು ಸಣ್ಣದಾಗಿ ಬೆಳೆಯುವಂತೆ ಮಾಡಲಾಗುತ್ತದೆ. ಈ ಕಲೆಯು ಮೂಲತಃ ವಾಗಿ ಜಪಾನಿನಿಂದಲೇ ಬಂದುದಾಗಿದೆ. ಲಾಲ್ ಬಾಗ್ ಬೋನ್ಸಾಯ್ ಉದ್ಯಾನವನಕ್ಕೆ ಮೀಸಲಾದ ಸ್ಥಳವನ್ನು ಹೊಂದಿರುವುದನ್ನು ನೋಡಲು ಅದ್ಭುತವಾಗಿದೆ ಮತ್ತು ಇದು ಬೋನ್ಸಾಯ್ ಉದ್ಯಾನದ ಪ್ರವೇಶದ್ವಾರವಾಗಿದೆ.

ಉದ್ಯಾನದಲ್ಲಿ ದೈತ್ಯ ಮರಗಳು ಗಾರ್ಡನ್ ಮನೆಗಳು, ಹಳೆಯ ಮರಗಳು ಮಾತ್ರವಲ್ಲದೆ, ಆಕಾಶವನ್ನು ಬಹುತೇಕ ಸ್ಪರ್ಶಿಸುವಂತೆ ಕಾಣುವ ದೈತ್ಯ ಮರಗಳೂ ಇವೆ ಮತ್ತು ಈ ಸ್ಥಳವು ಈಗ ಬಹಳಷ್ಟು ಫೋಟೋಶೂಟ್‌ಗಳಿಗೆ ಪ್ರಸಿದ್ಧವಾಗಿದೆ.

ಜನಪ್ರಿಯ ಪಳಿಯುಳಿಕೆಯ ಮರಗಳು

ಉದ್ಯಾನದಲ್ಲಿ ಸಾಕಷ್ಟು ಪಳೆಯುಳಿಕೆಯ ಮರಗಳಿವೆ ಮತ್ತು ನೀವು ಮರದ ವಿವರವಾದ ವಿವರಣೆಯನ್ನು ಸಹ ನೋಡಬಹುದು, ಇದು ಸಾಕಷ್ಟು ಆಸಕ್ತಿದಾಯಕವಾಗಿದೆ.

ಗಡಿಯಾರ ಗೋಪುರ (ವಾಚ್ ಟವರ್)

ಇದು ಉದ್ಯಾನದ ವ್ಯೂ ಪಾಯಿಂಟ್ ಆಗಿದ್ದು, ಇಲ್ಲಿ ನೀವು ರಾಕ್ ಕ್ಲೈಂಬಿಂಗ್ ಅನ್ನು ಅನುಭವಿಸಲು ಬಯಸುವಿರಾ? ನೀವು ಇದನ್ನು ಖಂಡಿತವಾಗಿಯೂ ಪ್ರಯತ್ನಿಸಬೇಕು, ಈ ಗೋಪುರವನ್ನು ತಲುಪಲು ನೀವು ಕಲ್ಲಿನ ಮೇಲ್ಮೈಯಲ್ಲಿ ನಡೆಯಬೇಕಾಗಬಹುದು. ಇದನ್ನು ಕೆಂಪೇಗೌಡ ವಾಚ್ ಟವರ್ ಎಂದು ಕರೆಯಲಾಗುತ್ತದೆ.

ಉದ್ಯಾನದಲ್ಲಿ ಒಂದು ದೇಗುಲ ಲಾಲ್ ಬಾಗ್‌ನಲ್ಲಿರುವ ಬೋನ್ಸಾಯ್ ಗಾರ್ಡನ್‌ಗೆ ಪ್ರವೇಶಿಸುತ್ತಿದ್ದಂತೆ, ಎಡಭಾಗದಲ್ಲಿ ಒಂದು ಸಣ್ಣ ದೇವಾಲಯವು ಸಂದರ್ಶಕರನ್ನು ಸ್ವಾಗತಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X