Search
  • Follow NativePlanet
Share
» »ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

ಹರಿಹರರ ಭೇದವಿಲ್ಲ ಎಂದು ನಿರೂಪಿಸುವ ದೇವಾಲಯಗಳು ಮತ್ತು ಕ್ಷೇತ್ರಗಳನ್ನು ಬೆರಳೆಣಿಕೆ ಎಷ್ಟೇ ಕಾಣಬಹುದು. ಲೇಖದಲ್ಲಿ ತಿಳಿಸುವ ಕ್ಷೇತ್ರದಲ್ಲಿ ಹರಿಹರರು ಒಂದೇ ಕ್ಷೇತ್ರದಲ್ಲಿ ನೆಲೆಸಿದ್ದಾರೆ. ನಾರಾಯಣ ನರಸಿಂಹನ ಅವತಾರದಲ್ಲಿ ದರ್ಶನ ನೀಡಿದರೆ, ಪರಮೇಶ್ವರನು ಶಿವಲಿಂಗದ ರೂಪದಲ್ಲಿ ದರ್ಶನವನ್ನು ನೀಡುತ್ತಾನೆ. ಈ ಪವಿತ್ರವಾದ ಕ್ಷೇತ್ರವು ಕೃಷ್ಣಾ ನದಿ ತೀರದಲ್ಲಿದೆ. ಈ ಎರಡು ದೇವಾಲಯದಲ್ಲಿ ಹಲವು ಅದ್ಭುತಗಳು ಇವೆ.

ಈ ಹರಿಹರರ ದೇವಾಲಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದ ಮೂಲಕ ತಿಳಿದುಕೊಳ್ಳೋಣ.

1. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

1. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

PC:YOUTUBE

ತೆಲಂಗಾಣದ ವಾಡಪಲ್ಲಿಯಲ್ಲಿರುವ ಈ ಮಹಿಮಾನ್ವಿತವಾದ ದೇವಾಲಯವು ಪೂರ್ವ ದಿಕ್ಕಿನಲ್ಲಿದೆ. ಪರಮೇಶ್ವರನು ಲಿಂಗರೂಪಿಯಾಗಿ ಭಕ್ತರ ಕೋರಿಕೆಗಳನ್ನು ನೆರವೇರಿಸುತ್ತಿದ್ದಾನೆ. ಇಲ್ಲಿನ ಮಹಾಶಿವನನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಿದರೆ ಮನಸ್ಸಿನ ಎಲ್ಲಾ ಕೋರಿಕೆಗಳು ನೆರವೇರುತ್ತವೆ ಎಂದು ಭಕ್ತರು ನಂಬುತ್ತಾರೆ.

2. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

2. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

PC:YOUTUBE

ಈ ಈ ದೇವಾಲಯದಲ್ಲಿನ ಶಿವಾಲಯದಲ್ಲಿ ಆಶ್ಚರ್ಯವೆಂಬಂತೆ, ಲಿಂಗದ ಶಿರಭಾಗದಲ್ಲಿ ನೀರು ಸದಾ ಸೋರುತ್ತಿರುತ್ತದೆ. ನೀರಿನ ಹರಿವು ಸದಾ ಒಂದೇ ರೀತಿಯಲ್ಲಿರುತ್ತದೆ. ಶಿವಲಿಂಗದ ಕೆಳಗೆ ಆ ಪವಿತ್ರವಾದ ಜಲವು ಕೈಗೆ ಸಿಗುತ್ತದೆಯಂತೆ.

3. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

3. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

PC:YOUTUBE

ಇನ್ನು ಈ ನೀರು ಎಲ್ಲಿಂದ ಬರುತ್ತಿದೆ ಎಂಬುದು ಮಾತ್ರ ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಶಿವಲಿಂಗಕ್ಕೆ ವಿಶೇಷವಾದ ಆಭರಣಗಳಿವೆ. ಅವುಗಳೆಂದರೆ ಬೆಳ್ಳಿಯ ಕಣ್ಣುಗಳು ಹಾಗೂ ಬೆಳ್ಳಿಯ ಹಾವು. ಆಭರಣಗಳಿಂದ ಶಿವಲಿಂಗಕ್ಕೆ ಅಲಂಕಾರ ಮಾಡುವ ಸಮಯದಲ್ಲಿ ಆಧ್ಯಾತ್ಮಿಕ ಭಕ್ತಿ ಭಾವ ಇಮ್ಮಡಿಗೊಳ್ಳುತ್ತದೆ.

4. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

4. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

PC:YOUTUBE

ಮತ್ತೊಂದು ಮಹಿಮಾನ್ವಿತ ದೇವಾಲಯವೆಂದರೆ ಅದು ನರಸಿಂಹನ ದೇವಾಲಯ. ಇಲ್ಲಿನ ಸ್ವಾಮಿಯು ದಕ್ಷಿಣ ಮುಖವಾಗಿ ನೆಲೆಸಿದ್ದಾನೆ. ದೇವಾಲಯವು ಚಿಕ್ಕದಾಗಿದ್ದರೂ ಕೂಡ ಸ್ವಾಮಿಯು ಭಕ್ತರ ಅನೇಕ ಕೋರಿಕೆಗಳನ್ನು ಈಡೇರಿಸುತ್ತಿದ್ದಾರೆ.

5. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

5. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

PC:YOUTUBE

ನರಸಿಂಹ ಸ್ವಾಮಿ ದೇವಾಲಯದಲ್ಲಿ ಲಕ್ಷ್ಮೀದೇವಿಯು ಸ್ವಾಮಿಯ ತೊಡೆಯಮೇಲೆ ಕುಳಿತುಕೊಂಡ ಭಂಗಿಯಲ್ಲಿ ದರ್ಶನವನ್ನು ನೀಡುತ್ತಾಳೆ. ಗರ್ಭಗುಡಿಯಲ್ಲಿ ಸ್ವಾಮಿಯ ಮುಖದ ಎದುರಿನಲ್ಲಿ ಅದೇ ಎತ್ತರದ ಒಂದು ದೀಪವಿರುತ್ತದೆ.

6. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

6. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

PC:YOUTUBE

ಮತ್ತೊಂದು ದೀಪವು ಸ್ವಾಮಿಯ ಪಾದದ ಕೆಳಭಾಗದಲ್ಲಿ ಇರುತ್ತದೆ. ಸ್ವಾಮಿಯ ಮುಖದ ಎದುರಿನಲ್ಲಿರುವ ದೀಪವು ಸದಾ ಕದಲುತ್ತಿದ್ದರೆ, ಪಾದದ ಕೆಳಗಿರುವ ದೀಪ ಮಾತ್ರ ಯಾವುದೇ ಗಾಳಿಗೂ ಅಲ್ಲಾಡುವುದಿಲ್ಲವಂತೆ.

7. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

7. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

PC:YOUTUBE

ಸ್ವಾಮಿಯ ಎದುರಿನಲ್ಲಿರುವ ದೀಪ ಕದಲಲು ಕಾರಣ ಸ್ವಾಮಿಯು ಉಸಿರಾಡುವ ನಿದರ್ಶನವೆಂದು ಅಲ್ಲಿನ ಭಕ್ತರು ನಂಬುತ್ತಾರೆ. ಗಾಳಿಗೆ ಆ ದೀಪಾ ಕದಲುತ್ತದೆ ಎಂದು ಅನುಮಾನ ಪಡುವುದಾದರೆ ಆ ದೇವಾಲಯದ ಗರ್ಭಗುಡಿಯಲ್ಲಿ ಗಾಳಿ ಇರುವುದಕ್ಕೆ ಅವಕಾಶವೇ ಇಲ್ಲ ಎಂದು ಹೇಳುತ್ತಾರೆ.

8. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

8. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

PC:YOUTUBE

ಸ್ವಾಮಿಯ ಎದುರಿನಲ್ಲಿರುವ ದೀಪವು ಗಾಳಿಯಿಂದ ಅಲ್ಲಾಡುತ್ತಿದೆ ಎಂದಾದರೆ, ಗರ್ಭಗುಡಿಯಲ್ಲಿ ಸ್ವಾಮಿಯ ಪಾದದ ಕೆಳಗಿರುವ ದೀಪವು ಕೂಡ ಗಾಳಿಗೆ ಅಲ್ಲಾಡಲೇ ಬೇಕು ಅಲ್ಲವೇ? ಆದರೆ ದೀಪವು ಕಿಂಚಿತ್ತು ಅಲ್ಲಾಡುವುದಿಲ್ಲವಂತೆ.

9. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

9. ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

PC:YOUTUBE

ಈ ಕ್ಷೇತ್ರವು ನದಿ ಸಂಗಮ ಕ್ಷೇತ್ರವಾದ್ದರಿಂದ ಇಲ್ಲಿ ಮುಖ್ಯವಾಗಿ ಆಸ್ತಿಕಗಳನ್ನು ಬಿಡುವ ಹಾಗೂ ಶ್ರಾದ್ಧ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಈ ಪವಿತ್ರವಾದ ಕ್ಷೇತ್ರಕ್ಕೆ ಹೈದರಾಬಾದ್ನಿಂದ ನೇರವಾದ ಬಸ್ಸುಗಳ ಸೌಲಭ್ಯವಿದೆ. ಸಮೀಪದ ರೈಲ್ವೆ ನಿಲ್ದಾಣವೆಂದರೆ, ಮಿರಿಯಾಲಗುಂಡ ರೈಲ್ವೆ ನಿಲ್ದಾಣ. ಇಲ್ಲಿಂದ ಖಾಸಗಿ ಅಥವಾ ಸರ್ಕಾರಿ ಬಸ್ಸುಗಳ ಮೂಲಕ ಸುಲಭವಾಗಿ ದೇವಾಲಯಕ್ಕೆ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X