Search
  • Follow NativePlanet
Share
» »ಲಕ್ಷದ್ವೀಪದ ಆನಂದ ಲಕ್ಷಕ್ಕೆ ಸಮ

ಲಕ್ಷದ್ವೀಪದ ಆನಂದ ಲಕ್ಷಕ್ಕೆ ಸಮ

By Vijay

ಕೆಲ ಸ್ಥಳಗಳ ಮಹಿಮೆಯೆ ಹಾಗೆ...ಯಾವಾಗಲೆ ಆಗಲಿ ಭೇಟಿ ನೀಡಿದಾಗ, ಪ್ರತಿ ಭೇಟಿಯಲ್ಲೂ ನವ ನವೀನವಾಗಿ ಗೋಚರಿಸುತ್ತವೆ. ಸುತ್ತಮುತ್ತಲಿನ ವಾತಾವರಣವು ಆನಂದದ ಅನುಭೂತಿಯನ್ನು ಕರುಣಿಸುತ್ತವೆ. ಮತ್ತೆ ಮತ್ತೆ ಬರಬೇಕೆಂಬ ಆಸೆಯನ್ನು ಮೂಡಿಸುತ್ತವೆ.

ಇಂತಹ ಸ್ಥಳಗಳ ಪೈಕಿ ಒಂದಾಗಿದೆ ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ. ಹೆಸರೆ ಸೂಚಿಸುವಂತೆ ಅರಬ್ಬಿ ಸಮುದ್ರದಲ್ಲಿ ರೂಪಗೊಂಡ ಹಲವು ಚಿಕ್ಕ ಪುಟ್ಟ ನಡುಗಡ್ಡೆಗಳ ಗುಚ್ಛವಾಗಿದೆ ಲಕ್ಷದ್ವೀಪ. ಭಾರತದ ಏಳು ಕೇಂದ್ರಾಡಳಿತದ ಪ್ರದೇಶಗಳ ಪೈಕಿ ಭೌತಿಕವಾಗಿ ಚಿಕ್ಕದಾದ ಪ್ರದೇಶ ಇದಾಗಿದೆ. ಭಾರತದ ನೈರುತ್ಯ ಕರಾವಳಿ ತೀರದಿಂದ ಸುಮಾರು 200 ಕಿ.ಮೀ ದೂರದಿಂದ ಆರಂಭವಾಗಿ 440 ಕಿ.ಮೀ ಗಳಷ್ಟು ದೂರದವರೆಗೆ ಲಕ್ಷದ್ವೀಪದ ದ್ವೀಪಗಳು ನೆಲೆಸಿವೆ.

ಲಕ್ಷದ್ವೀಪಕ್ಕೆ ತೆರಳಲು ಅಕ್ಟೋಬರ್ ನಿಂದ ಮೇ ಮಧ್ಯದವರೆಗಿನ ಸಮಯ ಪ್ರಶಸ್ತವಾಗಿರುತ್ತದೆ. ಮತ್ತೊಂದು ಅಂಶವೆಂದರೆ ಇಲ್ಲಿಗೆ ತೆರಳಲು ಅನುಮತಿ ಪತ್ರ ಬೇಕಾಗಿರುವುದು ಕಡ್ಡಾಯವಾಗಿದೆ. ಪ್ರವಾಸಗಳನ್ನು ಆಯೋಜಿಸುವ ಏಜನ್ಸಿಗಳ ಮೂಲಕವೂ ಹೋಗುವುದು ಸರಳವಾದ ಆಯ್ಕೆಯಾಗಿದೆ.

ಲಕ್ಷದ್ವೀಪ:

ಲಕ್ಷದ್ವೀಪ:

ಒಟ್ಟಾರೆ ಲಕ್ಷದ್ವೀಪದ ಭೂಪ್ರದೇಶವು 32 ಚ.ಕಿ.ಮೀ ವಿಸ್ತೀರ್ಣದಷ್ಟು ಹರಡಿದರೆ, ಸಮುದ್ರ ಖಾರಿ (ಲಗೂನ್) ಯು 4200 ಚ.ಕಿ.ಮೀ ಗಳಷ್ಟು ವಿಸ್ತೀರ್ಣದಲ್ಲಿ ಹರಡಿದೆ. ಇಲ್ಲಿ ಖಾರಿ ಎಂದರೆ ಆಳವಾದ ಸಮುದ್ರದಿಂದ ಬೇರ್ಪಟ್ಟ ಅಷ್ಟೊಂದು ಆಳವಲ್ಲದ ನೀರಿನ ಪ್ರದೇಶ.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಈ ಪ್ರದೇಶದ ಕುರಿತು ಘನವಾದ ಇತಿಹಾಸವಿಲ್ಲವಾದರೂ ಕೆಲ ವಿದ್ವಾಂಸರು ಶೋಧಿಸಿದ ಪುರಾತತ್ವ ಆಧಾರಗಳ ಪ್ರಕಾರ, 1500 ರ ಸಮಯದಿಂದ ಜನವಸತಿಯನ್ನು ಈ ಪ್ರದೇಶದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಅಲ್ಲದೆ ಸುಮಾರು ಆರನೇಯ ಶತಮಾನದಲ್ಲಿ ಬುದ್ಧನ ಜಾತಕ ಕಥೆಯಲ್ಲೂ ಸಹ ಈ ದ್ವೀಪಗಳ ಕುರಿತು ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಮಧ್ಯಯುಗದ ಸಮಯದಲ್ಲಿ ಈ ದ್ವೀಪಗಳು ಚೋಳ ಸಾಮ್ರಾಜ್ಯದ ಅಧೀನದಲ್ಲಿದ್ದವು. ನಂತರ ಪೋರ್ಚುಗೀಸರು ಈ ದ್ವೀಪಗಳನ್ನು ಸುಮಾರು1498 ರಿಂದ 1545 ರ ವರೆಗೆ ಆಳಿದರು.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಇದಾದ ನಂತರ ಅರಕ್ಕಲ್ ನ ಮುಸ್ಲಿಮ್ ಮನೆತನ ಹಾಗೂ ನಂತರದಲ್ಲಿ ಟಿಪ್ಪು ಸುಲ್ತಾನನ ಕೈವಶವಾಯಿತು ಈ ಸುಂದರ ದ್ವೀಪ ಗುಚ್ಛಗಳು. ಕೊನೆಯದಾಗಿ ಬ್ರೀಟಿಷ್ ಒಡೆತನಕ್ಕೆ ಸೇರಿದ ಈ ದ್ವೀಪಗಳು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 1956 ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲ್ಪಟ್ಟಿತು.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಪ್ರಸ್ತುತ, ಲಕ್ಷದ್ವೀಪದ ಹತ್ತು ದ್ವೀಪಗಳಲ್ಲಿ ಜನವಸತಿಯನ್ನು ಕಾಣಬಹುದಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮ್ ಧರ್ಮದವರು ವಾಸಿಸುತ್ತಿದ್ದಾರೆ. ಭೌತಿಕವಾಗಿ ಕೇರಳ ರಾಜ್ಯಕ್ಕೆ ಹತ್ತಿರದಲ್ಲಿರುವುದರಿಂದ ಮಲಯಾಳಂ ಭಾಷೆ ಹಾಗೂ ಸಂಸ್ಕೃತಿಯ ಪ್ರಭಾವವಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಮೀನುಗಾರಿಕೆ ಹಾಗೂ ತೆಂಗಿನ ಕೃಷಿ ಪ್ರದೇಶದ ಪ್ರಮುಖ ಉದ್ಯೋಗವಾಗಿದೆ. ಒಟ್ಟಾರೆಯಾಗಿ 12 ಹವಳ ದಿಬ್ಬಗಳು, 3 ಹವಳದ ರೀಫ್ ಗಳು ಹಾಗೂ 5 ಆಳವಿರದ ಸಾಗರ ತಳಗಳಿಂದ ಈ ಪ್ರದೇಶ ನಿರ್ಮಾಣವಾಗಿದೆ.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಈಗ ಪ್ರಚಲಿತದಲ್ಲಿರುವ 'ಲಕ್ಷದ್ವೀಪ,' ಒಂದೊಮ್ಮೆ 'ಲಖದೀವ್', 'ಮಿನಿಕೋಯ್' ಮತ್ತು 'ಅಮಿನ್ ದಿವಿ' ದ್ವೀಪಗಳು ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿತ್ತು.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಈ ದ್ವೀಪ ಸಮುದಾಯವನ್ನು ಒಂದು ಜಿಲ್ಲೆ ಎಂದು ಪರಿಗಣಿಸಲಾಗಿದೆ ಹಾಗು ಇದನ್ನು 10 ತಾಲೂಕುಗಳಲ್ಲಿ ವಿಂಗಡಿಸಲಾಗಿದೆ. ಲಕ್ಷದ್ವೀಪದ ರಾಜಧಾನಿ ಕವರಟ್ಟಿ. ಇದು ಕೇರಳ ರಾಜ್ಯದ ಹೈಕೋರ್ಟ್ ನ ಪರಿಧಿಯಲ್ಲಿ ಬರುತ್ತದೆ.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಜನವಸತಿಯಿರುವ ಇಲ್ಲಿನ ಕೆಲ ದ್ವೀಪಗಳನ್ನು ಹೆಸರಿಸಬಹುದಾದರೆ ಅವು ಇಂತಿವೆ: ಕವರಟ್ಟಿ, ಬಂಗಾರಂ, ಅಗಟ್ಟಿ, ಅಮಿನಿ, ಕಲ್ಪೇನಿ, ಮಿನಿಕಾಯ್, ಕದ್ಮತ್, ಕಿಲ್ತಾನ್, ಬಿತ್ರ ಹಾಗು ಚೆತ್ಲಾತ್.

ಚಿತ್ರಕೃಪೆ: icultist

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಸುತ್ತಮುತ್ತಲಿನ ಸಾಗರ ತಳಗಳಲ್ಲಿ ಶ್ರೀಮಂತಮಯ ಜಲ ಜೀವನವನ್ನು ಕಾಣಬಹುದಾಗಿದೆ. ಹವಳದ ದಿಬ್ಬಗಳು, ವೈವಿಧ್ಯಮಯ ಮೀನುಗಳು ಹಾಗೂ ಇತರೆ ವಿಶಿಷ್ಟ ಬಗೆಯ ಜಲಚರಗಳು ಜಲಚರ ಪ್ರಿಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Julio Romo

ಲಕ್ಷದ್ವೀಪ:

ಲಕ್ಷದ್ವೀಪ:

ಇಲ್ಲಿರುವ ಬಂಗಾರಂ ದ್ವೀಪ ಹಾಗೂ ಕದ್ಮತ್ ದ್ವೀಪಗಳನ್ನು ಭಾರತ ಸರ್ಕಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪ್ರವಾಸಿ ತಾಣಗಳಾಗಿ ಪ್ರೋತ್ಸಾಹಿಸುತ್ತಿದೆ. ಇಲ್ಲಿ ಸಾಕಷ್ಟು ಜಲ ಕ್ರೀಡೆಗಳು, ಶ್ರೀಮಂತ ಜಲಜೀವನವನ್ನು ಕಾಣಬಹುದಾಗಿದೆ.

ಚಿತ್ರಕೃಪೆ: icultist

ಲಕ್ಷದ್ವೀಪ:

ಲಕ್ಷದ್ವೀಪ:

ಭೌಗೋಳಿಕವಾಗಿ ಲಕ್ಷದ್ವೀಪವು ಚಿಕ್ಕದಾಗಿರುವುದರಿಂದ ಕೈಗಾರೀಕರಣಕ್ಕೆ ಅಷ್ಟೊಂದು ಯೋಗ್ಯವಾಗಿಲ್ಲ ಆದರೆ ಸಮುದ್ರ ದೃಶ್ಯಗಳು, ರಂಗು ರಂಗಾದ ಜಲಜೀವನ, ಕಡಲ ತಡಿಗಳು ಇದನ್ನು ಒಂದು ಪ್ರಬುದ್ಧ ಪ್ರವಾಸಿ ತಾಣವನ್ನಾಗಿ ಮಾಡಿರುವುದರಲ್ಲಿ ಯಾವುದೆ ಸಂಶಯವಿಲ್ಲ.

ಚಿತ್ರಕೃಪೆ: Binu K S

ಲಕ್ಷದ್ವೀಪ:

ಲಕ್ಷದ್ವೀಪ:

ಇನ್ನು ಲಕ್ಷದ್ವೀಪಕ್ಕೆ ತೆರಳಬೇಕಿದ್ದರೆ ಅನುಮತಿ ಪಡೇಯ ಬೇಕಾಗಿರುವುದು ಕಡ್ಡಾಯ. ಕೇವಲ ವಿಮಾನ, ಹೆಲಿಕಾಪ್ಟರ್ ಇಲ್ಲವೆ ದೋಣಿ/ಹಡಗಿನ ಮೂಲಕವೆ ಲಕ್ಷದ್ವೀಪಕ್ಕೆ ತೆರಳಬಹುದಾಗಿದೆ. ಕೇರಳದ ಕೊಚ್ಚಿಯಲ್ಲಿರುವ ಲಕ್ಷದ್ವೀಪದ ವ್ಯವಸ್ಥಾಪಕರ ಕಾರ್ಯದರ್ಶಿಯವರ ಕಚೇರಿಯಲ್ಲಿ ಪಡೆಯಬಹುದಾಗಿದೆ. ಕೊಚ್ಚಿಯಿಂದ ವಿಮಾನ ಹಾಗು ಹಡಗುಗಳೆರಡೂ ಲಕ್ಷದ್ವೀಪಕ್ಕೆ ತೆರಳಲು ದೊರೆಯುತ್ತವೆ.

ಚಿತ್ರಕೃಪೆ: Stefan Krasowski

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Thejas

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Thejas

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Stefan Krasowski

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Stefan Krasowski

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Stefan Krasowski

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Jennifer

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Jennifer

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Sankara Subramanian

ಲಕ್ಷದ್ವೀಪ:

ಲಕ್ಷದ್ವೀಪ:

ಲಕ್ಷದ್ವೀಪದ ಪರಿಸರವನ್ನು ವಿವರಿಸುವ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Stefan Krasowski

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X