Search
  • Follow NativePlanet
Share
» »ರಾತ್ರೋರಾತ್ರಿ ಇಲ್ಲಿರುವ ಶಿವಲಿಂಗದ ಪೂಜೆ ಮಾಡುತ್ತಂತೆ ಅದೃಶ್ಯ ಶಕ್ತಿ

ರಾತ್ರೋರಾತ್ರಿ ಇಲ್ಲಿರುವ ಶಿವಲಿಂಗದ ಪೂಜೆ ಮಾಡುತ್ತಂತೆ ಅದೃಶ್ಯ ಶಕ್ತಿ

ಉತ್ತರ ಪ್ರದೇಶದಲ್ಲಿರುವ ಶಿವನ ಮಂದಿರದಲ್ಲಿ ಪ್ರತಿದಿನ ಒಂದು ಚಮತ್ಕಾರ ನಡೆಯುತ್ತಂತೆ. ಶಿವಲಿಂಗಕ್ಕೆ ಯಾವುದೋ ಅದೃಶ್ಯ ಶಕ್ತಿ ಪೂಜೆ ಸಲ್ಲಿಸುತ್ತದಂತೆ. ಆದರೆ ಈ ವರೆಗೂ ಅದು ಯಾರು ಎನ್ನುವುದು ತಿಳಿದುಬಂದಿಲ್ಲ. ಹಾಗಾದರೆ ಬನ್ನಿ ಆ ರಹಸ್ಯಮಯ ಮಂದಿರ ಎಲ್ಲಿದೆ ಅದರ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಎಲ್ಲಿದೆ ಈ ಮಂದಿರ

ಎಲ್ಲಿದೆ ಈ ಮಂದಿರ

PC: youtube

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿದೆ ಈ ರಹಸ್ಯಮಯ ಕುಂತೇಶ್ವರ ಮಹಾದೇವ ಮಂದಿರ. ಈ ಮಂದಿರವು ಮಹಾಭಾರತ ಕಾಲಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತದೆ.

ಭೀಕರ ಸುನಾಮಿಗೆ ಇಡೀ ಊರೇ ನಾಶವಾದರೂ ಒಂದಿಷ್ಟು ಹಾನಿಯಾಗದ ದೇವಾಲಯ ಇದು ಭೀಕರ ಸುನಾಮಿಗೆ ಇಡೀ ಊರೇ ನಾಶವಾದರೂ ಒಂದಿಷ್ಟು ಹಾನಿಯಾಗದ ದೇವಾಲಯ ಇದು

ಬಾರಾಬಂಕಿಯ ಕುಂತೇಶ್ವರ ಮಂದಿರ

ಬಾರಾಬಂಕಿಯ ಕುಂತೇಶ್ವರ ಮಂದಿರ

PC: Facebook
ಕುಂತೇಶ್ವರ ಮಂದಿರದಲ್ಲಿ ಕುಂತಿಯು ಪ್ರತಿದಿನ ಬಂದು ಪೂಜೆ ಮಾಡುತ್ತಾಳೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಅದಕ್ಕೆ ಒಂದು ಪೌರಾಣಿಕ ಕಥೆಯೂ ಇದೆ.

ಪೌರಾಣಿಕ ಕಥೆ

ಪೌರಾಣಿಕ ಕಥೆ

ಕುಂತಿಯು ಪಾಂಡವರ ಯಶಸ್ಸಿಗಾಗಿ ಬೇಡಿಕೊಂಡಿದ್ದಳು ಅದರಂತೆಯೆ ಒಂದು ಶಿವಲಿಂಗವನ್ನು ನಿರ್ಮಿಸಿ ಅದಕ್ಕೆ ಪೂಜಿಸುತ್ತಿದ್ದಳು. ಕುಂತಿಯು ಶಿವಲಿಂಗವನ್ನು ಪೂಜಿಸಿದ ಆ ಸ್ಥಳವೇ ಇಂದು ಕುಂತೇಶ್ವರ ಮಹದೇವ ಮಂದಿರ ಎನ್ನಲಾಗುತ್ತದೆ.

ಆಗುಂಬೆಯಲ್ಲಿ ಇಷ್ಟೇಲ್ಲಾ ಸುಂದರ ಪ್ರವಾಸಿ ತಾಣಗಳಿವೆ ಅನ್ನೋದು ನಿಮಗೆ ಗೊತ್ತಾ?ಆಗುಂಬೆಯಲ್ಲಿ ಇಷ್ಟೇಲ್ಲಾ ಸುಂದರ ಪ್ರವಾಸಿ ತಾಣಗಳಿವೆ ಅನ್ನೋದು ನಿಮಗೆ ಗೊತ್ತಾ?

ಪಾರಿಜಾತ ವೃಕ್ಷ

ಪಾರಿಜಾತ ವೃಕ್ಷ

PC: Faizhaider
ಮಹಾಭಾರತದ ಕಾಲದಲ್ಲಿನ ಪಾರಿಜಾತ ವೃಕ್ಷವೂ ಇಲ್ಲಿದೆ. ಅರ್ಜುನನು ಕುಂತಿಯ ಪುಷ್ಪಾರ್ಜನೆಗಾಗಿ ಈ ವೃಕ್ಷವನ್ನು ಇಂದ್ರಲೋಕದಿಂದ ತಂದನು ಎನ್ನುತ್ತಾರೆ. ಇದನ್ನು ದೇವವೃಕ್ಷ ಎನ್ನುತ್ತಾರೆ. ಸುಮಾರು 5 ಸಾವಿರ ವರ್ಷ ಹಳೆಯದು ಎನ್ನಲಾಗುತ್ತದೆ.

ಸ್ವರ್ಣದ ಬಣ್ಣದಲ್ಲಿ ಕಾಣುವ ಹೂವು

ಸ್ವರ್ಣದ ಬಣ್ಣದಲ್ಲಿ ಕಾಣುವ ಹೂವು

PC: Faizhaider

ಈ ಹೂವಿನ ವಿಶೇಷತೆ ಎಂದರೆ ಗಿಡದಲ್ಲಿರುವಾಗ ಬಿಳಿ ಬಣ್ಣದ ಹೂವಾಗಿರುತ್ತದೆ. ಅದುವೇ ಗಿಡದಿಂದ ಕೆಳಗೆ ಬಿದ್ದ ನಂತರ ಸ್ವರ್ಣದ ಬಣ್ಣಕ್ಕೆ ತಿರುಗುತ್ತದೆ. ಈ ಹೂವನ್ನು ಶಿವನಿಗೆ ಅರ್ಪಿಸಿದರೆ ಎಲ್ಲಾ ಮನೋಕಾಮನೆಗಳೂ ಪೂರ್ಣಗೊಳ್ಳುತ್ತವೆ ಎನ್ನಲಾಗುವುದು.

3 ದಿನದಲ್ಲಿ ಗೋವಾ ಸುತ್ತಾಡೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ಇಲ್ಲಿದೆ ಟಿಪ್ಸ್3 ದಿನದಲ್ಲಿ ಗೋವಾ ಸುತ್ತಾಡೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ಇಲ್ಲಿದೆ ಟಿಪ್ಸ್

ಮಹಾದೇವನ ಪೂಜಿಸುವ ಕುಂತಿ

ಮಹಾದೇವನ ಪೂಜಿಸುವ ಕುಂತಿ

PC: Facebook

ಬಾರಬಂಕಿಯ ಕುಂತೂರು ಗ್ರಾಮದಲ್ಲಿನ ಕುಂತೇಶ್ವರ ಮಹಾದೇವ ಮಂದಿರದಲ್ಲಿ ಪ್ರತಿದಿನ ಚಮತ್ಕಾರ ನಡೆಯುತ್ತದೆ. ಇಲ್ಲಿರುವ ಗರ್ಭಗುಡಿಯಲ್ಲಿನ ಶಿವಲಿಂಗಕ್ಕೆ ಕುಂತಿಯು ಪ್ರತಿದಿನ ಪೂಜೆ ಮಾಡಲು ಇಲ್ಲಿಗೆ ಬರುತ್ತಾಳೆ ಎನ್ನುವುದು ಭಕ್ತರ ನಂಬಿಕೆ.

ಮೊದಲ ಪೂಜೆ

ಮೊದಲ ಪೂಜೆ

PC: youtube

ಕುಂತೇಶ್ವರ ಮಂದಿರದಲ್ಲಿ ಮಹಾದೇವನಿಗೆ ಮೊದಲ ಪೂಜೆ ಕುಂತಿ ಮಾಡುತ್ತಾಳೆ. ಕುಂತಿಗೆ ಒಂದು ವಿಶೇಷ ವರದಾನ ದೊರೆತಿತ್ತು. ಹಾಗಾಗಿ ಇಂದಿಗೂ ಕುಂತಿ ಮಹಾದೇವನ ಪೂಜಿಸಲು ಇಲ್ಲಿಗೆ ಬರುತ್ತಾಳೆ ಎನ್ನುವುದು ಜನರ ಅಭಿಪ್ರಾಯ.

ನಮ್ಮ ದೇಶದ ಅತ್ಯಂತ ಅಪಾಯಕಾರಿ ರಸ್ತೆಗಳಿವು, ಇಲ್ಲಿ ವಾಹನ ಚಲಾಯಿಸುವುದು ಡೇಂಜರ್‌!ನಮ್ಮ ದೇಶದ ಅತ್ಯಂತ ಅಪಾಯಕಾರಿ ರಸ್ತೆಗಳಿವು, ಇಲ್ಲಿ ವಾಹನ ಚಲಾಯಿಸುವುದು ಡೇಂಜರ್‌!

ಬೀಗ ಹಾಕಲಾಗಿರುತ್ತದೆ

ಬೀಗ ಹಾಕಲಾಗಿರುತ್ತದೆ

ಪ್ರತಿದಿನ ಈ ಮಂದಿರಕ್ಕೆ ಮೂರು ಬೀಗಗಳನ್ನು ಹಾಕಲಾಗುತ್ತದೆ. ಒಳಗೆ ಯಾರೂ ಇರೋದಿಲ್ಲ. ಹೊರಗಿನಿಂದ ಒಳಗೆ ಯಾರೂ ಹೋಗೋದಿಲ್ಲ. ಆದರೆ ವಿಶೇಷ ಎಂದರೆ ಪ್ರತಿದಿನ ದೇವಾಲಯದ ಬಾಗಿಲು ತೆರೆದಾಗ ಶಿವಲಿಂಗಕ್ಕೆ ಪುಷ್ಪಾರ್ಚನೆ ಮಾಡಿರುವ ಹಾಗೂ ಪೂಜೆ ಮಾಡಿರುವ ಗುರುತು ಕಾಣಸಿಗುತ್ತದೆ.

ನಡೆಯುತ್ತೆ ಚಮತ್ಕಾರ

ನಡೆಯುತ್ತೆ ಚಮತ್ಕಾರ

ಶಯನ ಆರತಿಯ ನಂತರ ಶಿವಲಿಂಗವನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಿ ಗರ್ಭಗುಡಿಯನ್ನು ಪರದೆ ಹಾಕಿ ಬಾಗಿಲಿಗೆ ಬೀಗ ಹಾಕಲಾಗುತ್ತದೆ. ಆದರೆ ಪ್ರತಿದಿನವು ಗರ್ಭಗೃಹದ ಬಾಗಿಲು ತೆರೆದಾಗ ಚಮತ್ಕಾರ ಕಾದಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X