ನೀವು ಸಾಕಷ್ಟು ಜಲಪಾತಗಳನ್ನು ನೋಡಿರಬಹುದು. ಆದರೆ ಹೈದರಾಬಾದ್ನ ಅದಿಲಾಬಾದ್ನಲ್ಲೊಂದು ವಿಶೇಷ ಜಲಪಾತವಿದೆ. ಅದರ ವಿಶೇಷತೆ ಏನೆಂದರೆ ಶಕುಂತಲಾ ಸ್ನಾನ ಮಾಡುತ್ತಿದ್ದ ಜಲಪಾತವಂತೆ.
ಎಲ್ಲಿದೆ ಈ ಜಲಪಾತ?
PC: youtube
ನೀವು ಸಾಕಷ್ಟು ಜಲಪಾತಗಳನ್ನು ನೋಡಿರಬಹುದು. ಆದರೆ ಹೈದರಾಬಾದ್ನ ಅದಿಲಾಬಾದ್ನಲ್ಲೊಂದು ವಿಶೇಷ ಜಲಪಾತವಿದೆ. ಅದರ ವಿಶೇಷತೆ ಏನೆಂದರೆ ಶಕುಂತಲಾ ಸ್ನಾನ ಮಾಡುತ್ತಿದ್ದ ಜಲಪಾತವಂತೆ.
ಬಳ್ಳಾರಿಯ ಗಾಣಾಗಟ್ಟೆ ಮಾಯಮ್ಮಳ ಪವಾಡ ಕೇಳಿದ್ದೀರಾ?
ಶಕುಂತಲಾ
ಜನಪ್ರಿಯ ಕಥೆ ಹಾಗೂ ಸ್ಥಳೀಯ ನಂಬಿಕೆ ಪ್ರಕಾರ ಈ ಕುಂತಾಳ ಜಲಪಾತ ಎನ್ನುವ ಹೆಸರು ದುಶ್ಶಾಸನನ ಪತ್ನಿ ಶಕುಂತಲಾದಿಂದ ಬಂದಿದೆ. ಇಲ್ಲಿನ ಸುತ್ತಮುತ್ತಲಿನ ಸೌಂದರ್ಯದಿಂದ ಜನರನ್ನು ಆಕರ್ಷಿಸುತ್ತಿತ್ತು. ಶಕುಂತಲಾ ಈ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದರು ಎನ್ನುವುದನ್ನು ಸ್ಥಳೀಯರು ಸಹ ಹೇಳುತ್ತಾರೆ.
ವಾರಾಂತ್ಯ ತಾಣ
PC: youtube
ಇದೊಂದು ಪ್ರಸಿದ್ಧ ಒಂದು ದಿನದ ಪ್ರವಾಸಕ್ಕೆ ಹಾಗೂ ಹೈದರಾಬಾದ್ ನಗರದಿಂದ ಉತ್ತಮ ವಾರಾಂತ್ಯದ ಸ್ಥಳವಾಗಿದೆ. ಜಲಪಾತಗಳ ಪ್ರವೇಶ ದ್ವಾರದ ವರೆಗೆ ರಸ್ತೆ ಇದೆ. ಪ್ರವೇಶದ್ವಾರದಿಂದ 10-15 ನಿಮಿಷಗಳ ನಡಿಗೆ ಮೂಲಕ ಈ ಜಲಪಾತದ ಕೆಳಕ್ಕೆ ತಲುಪಬಹುದು.
ಈ ಬಾರಿ ಮೈಸೂರು ದಸರಾಕ್ಕೆ ಹೋಗುವವರು ಇದನ್ನ ನೆನಪಿಟ್ಟುಕೊಳ್ಳಲೇ ಬೇಕು
ಯಾವಾಗ ಭೇಟಿ ಸೂಕ್ತ
PC: youtube
ಮಳೆಗಾಲ ಮತ್ತು ಮಾನ್ಸೂನ್ ನಂತರದ ದಿನಗಳಲ್ಲಿ ಕುಂತಾಲ ಫಾಲ್ಸ್ಗೆ ಭೇಟಿ ನೀಡಲು ಉತ್ತಮ ಕಾಲವಾಗಿದೆ. ಚೂಪಾದ ಕಲ್ಲುಗಳು ಮತ್ತು ತಿರುವುಗಳ ಕಾರಣ ನೀರಿನ ಹರಿವು ಅಧಿಕವಾಗಿದ್ದಾಗ ಕೆಳಭಾಗದಲ್ಲಿ ನೀರಿನಲ್ಲಿ ಬರುವುದು ಅಪಾಯಕಾರಿ.
ನೀರಿನ ಹರಿವು
PC: youtube
ಈ ಜಲಪಾತದ ಹರಿವು ಕದಮ್ ಜಲಾಶಯದಿಂದ ಬರುವ ನೀರಿನ ಬಿಡುಗಡೆಯ ಮೇಲೆ ಅವಲಂಬಿತವಾಗಿರುತ್ತದೆ. ನೀರಿನ ಬಿಡುಗಡೆಯ ಅನಿಶ್ಚಿತತೆಯು ವಿಶೇಷವಾಗಿ ಮಳೆಗಾಲದಲ್ಲಿ ಕುಂತಲಾ ಜಲಪಾತವನ್ನು ಸ್ವಲ್ಪ ಅಪಾಯಕಾರಿ ಸ್ಥಳವಾಗಿ ಮಾಡುತ್ತದೆ.
ಭೇಟಿ ಸೂಕ್ತವಲ್ಲ
PC: youtube
ಜನವರಿಯ ನಂತರ ನಿಮಗೆ ಹೆಚ್ಚು ನೀರು ಸಿಗುವುದಿಲ್ಲ, ಆದ್ದರಿಂದ ಜನವರಿ ಮತ್ತು ಜುಲೈ ನಡುವೆ ಕುಂತಲಾ ಜಲಪಾತಕ್ಕೆ ಭೇಟಿ ನೀಡುವುದನ್ನು ತಪ್ಪಿಸಿ.
ಬಿಜಾಪುರದಲ್ಲಿರುವ ಇಷ್ಟೆಲ್ಲಾ ಫೇಮಸ್ ತಾಣಗಳನ್ನು ನೀವು ನೋಡಿದ್ದೀರಾ?
ತಲುಪುವುದು ಹೇಗೆ?
PC: youtube
ಹತ್ತಿರದ ವಿಮಾನ ನಿಲ್ದಾಣವೆಂದರೆ ಹೈದರಾಬಾದ್ - ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ . ಇದು ಜಲಪಾತದಿಂದ 310 ಕಿ.ಮೀ ದೂರದಲ್ಲಿದೆ.
ಹತ್ತಿರದ ರೈಲು ನಿಲ್ದಾಣವೆಂದರೆ ಅದಿಲಾಬಾದ್ ರೈಲು ನಿಲ್ದಾಣ. ಇದು 58 ಕಿ.ಮೀ ದೂರದಲ್ಲಿದೆ. ಹತ್ತಿರದ ಬಸ್ ನಿಲ್ದಾಣವೆಂದರೆ ನೆರೆಕೊಂಡೊ ಬಸ್ ನಿಲ್ದಾಣ. ಇದು ಜಲಪಾತದಿಂದ 12 ಕಿ.ಮೀ ದೂರದಲ್ಲಿದೆ.