Search
  • Follow NativePlanet
Share
» »ಕುಕ್ಕೆ ಸುಬ್ರಹ್ಮಣ್ಯ : ಸರ್ಪದೋಷ ನಿವಾರಕ

ಕುಕ್ಕೆ ಸುಬ್ರಹ್ಮಣ್ಯ : ಸರ್ಪದೋಷ ನಿವಾರಕ

By Vijay

ಹಿಂದೂ ನಂಬಿಕೆಯ ಪ್ರಕಾರ, ಸರ್ಪ ದೋಷವೆನ್ನುವುದು ಮಾನವನ ಜೀವನದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ. ದೋಷವಿದ್ದಾಗ ಪ್ರತಿಭೆ, ಅನುಕೂಲತೆಗಳು, ಶ್ರೀಮಂತಿಕೆ ಏನೇ ಇದ್ದರೂ ಸಹಿಸಲಾಗದಂತಹ ಕಷ್ಟಗಳು ಜೀವನದಲ್ಲಿ ಬಂದೊದಗುತ್ತವೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಸರ್ಪ ದೋಷ ಎನ್ನುವುದು ಕಷ್ಟಕರ ಬದುಕಿನ ಸಂಕೇತವಾಗಿದೆ ಎಂದು ನಂಬಲಾಗಿದೆ.

ಮತ್ತೊಂದು ವಿಷಯವೆಂದರೆ ಕೆಲ ಜ್ಯೋತಿಷಿಗಳ ಪ್ರಕಾರ, ಸರ್ಪ ದೋಷವು ಸಾಮಾನ್ಯವಾಗಿ ಬಹುತೇಕರಲ್ಲಿ ಕಂಡುಬರುತ್ತದೆಯಂತೆ. (ನಂಬಿಕೆಯ ಪ್ರಕಾರ, ಈ ದೋಷವು ತಿಳಿದೊ ತಿಳಿಯದೆಯೊ ಹಿಂದಿನ ಜನ್ಮದ ಕರ್ಮಗಳಿಗನುಸಾರವಾಗಿ ನಾನಾ ವಿಧಗಳ ಮೂಲಕ ಬರುವ ದೋಷ) ಈ ರೀತಿ ಹೇಳುವವರ ಉದ್ದೇಶ ಏನೆ ಇರಲಿ ಆದರೆ ಇದಕ್ಕೊಂದು ಪರಿಣಾಮಕಾರಿಯಾದ ಪರಿಹಾರ ಕರುಣಿಸುವಾತನೊಬ್ಬ ನಮ್ಮ ಕರ್ನಾಟಕದಲ್ಲಿ ನೆಲೆಸಿದ್ದಾನೆ ಎನ್ನುವುದು ನಮಗೆಲ್ಲ ಸಂತುಷ್ಟಿ ನೀಡುವ ವಿಷಯವಾಗಿದೆ.

ದೇಶೀಯ ವಿಮಾನ ಪ್ರಯಾಣದ ದರಗಳ ಮೇಲೆ 5000 ಗಳಷ್ಟು ಕಡಿತ ಪಡೆಯಲಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಲೇಖನಗಳು:

ಶಬರಿಮಲೆ: ಏಳು ಬೆಟ್ಟಗಳ ಒಡೆಯನ ದರುಶನ

ದಕ್ಷಿಣ ಭಾರತದ ಸುಪ್ರಸಿದ್ಧ ದೇವಾಲಯಗಳು

ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಯಾತ್ರೆಗಳು

ಕುಕ್ಕೆ ಸುಬ್ರಹ್ಮಣ್ಯ : ಸರ್ಪದೋಷ ನಿವಾರಕ

ಕುಮಾರ ಸುಬ್ರಹ್ಮಣ್ಯನ ಸಾಂದರ್ಭಿಕ ವರ್ಣಚಿತ್ರ
ಚಿತ್ರಕೃಪೆ: Redtigerxyz

ಹೌದು, ಜಾತಕಗಳಲ್ಲಿರುವ ದೋಷ, ಬಹು ಮುಖ್ಯವಾಗಿ ಸರ್ಪ ದೋಷ ನಿವಾರಣೆಗೆ ಅತಿ ಪ್ರಮುಖ ಸ್ಥಳವಾಗಿ ಶ್ರೀ ಸುಬ್ರಹ್ಮಣ್ಯ ದೇವರು ನೆಲೆಸಿರುವ ಕುಕ್ಕೆಯು ದೇಶದಲ್ಲೆ ಅತಿ ಜನಪ್ರಿಯ ಹಾಗೂ ಹೆಸರುವಾಸಿಯಾದಂತಹ ಸರ್ಪದೋಷ ನಿವಾರಣಾ ಕ್ಷೇತ್ರವಾಗಿದೆ. ಸಾಕ್ಷಾತ್ ಸುಬ್ರಹ್ಮಣ್ಯನೆ ಇಲ್ಲಿ ನೆಲೆಸಿರುವುದರಿಂದ ಈ ಸ್ಥಳವನ್ನು ಕುಕ್ಕೆ ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ದೇವಸ್ಥಾನವು ಮಂಗಳೂರಿನ ಅತಿ ಮುಖ್ಯ ದೇವಾಲಯವೂ ಸಹ ಆಗಿದೆ.

ಕುಕ್ಕೆ ಸುಬ್ರಹ್ಮಣ್ಯ : ಸರ್ಪದೋಷ ನಿವಾರಕ

ಚಿತ್ರಕೃಪೆ: karthick siva

ಕುಕ್ಕೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿ ಅಥವಾ ಭಕ್ತಾದಿಗಳು ಶ್ರೀಕ್ಷೇತ್ರದಲ್ಲಿ ಹರಿದಿರುವ ಕುಮಾರಧಾರಾ ನದಿಗೆ ಭೇಟಿ ನೀಡಿ, ನದಿಯ ನೀರಿನಿಂದ ಶುಚಿರ್ಭುತರಾಗಿ ನಂತರ ಸುಬ್ರಹ್ಮಣ್ಯ ದೇವರ ದರುಶನ ಕೋರಿ ದೇವಸ್ಥಾನಕ್ಕೆ ಪ್ರವೇಶಿಸುತ್ತಾರೆ. ದೇವಸ್ಥಾನವನ್ನು ಹಿಂಭಾಗದಿಂದ ಪ್ರವೇಶಿಸಲಾಗುತ್ತದೆ. ದೇವಸ್ಥಾನದ ಗರ್ಭಗೃಹದ ಎದುರು ಗರುಡಗಂಭವನ್ನು ಕಾಣಬಹುದು. ಇಲ್ಲಿ ವಾಸಿಸುತ್ತಿರುವ ವಾಸುಕಿ ಎಂಬ ವಿಷಕಾರಿ ಸರ್ಪದ ಜ್ವಾಲೆಯಂತಹ ಉಸಿರುಗಳಿಂದ ಜನರನ್ನು ಇದು ರಕ್ಷಿಸುತ್ತದೆ ಎನ್ನಲಾಗಿದೆ. ಆದ್ದರಿಂದ ಈ ಖಂಬಕ್ಕೂ ಸಹ ಪ್ರದಕ್ಷಿಣೆ ಹಾಕಲಾಗುತ್ತದೆ.

ಕುಕ್ಕೆ ಸುಬ್ರಹ್ಮಣ್ಯ : ಸರ್ಪದೋಷ ನಿವಾರಕ

ಚಿತ್ರಕೃಪೆ: Psubhashish

ಇಲ್ಲಿ ಮುಖ್ಯವಾಗಿ ಎರಡು ಸೇವೆಗಳನ್ನು ದೋಷವಿರುವವರು ಅಥವಾ ಭೇಟಿ ನೀಡುವ ಭಕ್ತಾದಿಗಳು ಮಾಡಬಹುದು. ಈ ಎರಡು ಮುಖ್ಯ ಪೂಜೆಗಳೆಂದರೆ ಒಂದು ಅಶ್ಲೇಷ ಬಲಿ ಪೂಜೆ ಹಾಗೂ ಇನ್ನೊಂದು ಸರ್ಪ ಸಂಸ್ಕಾರ/ಸರ್ಪದೋಷ. ತಿಳಿಯಬೇಕಾದ ಅಂಶವೆಂದರೆ ಈ ಎರಡೂ ಪೂಜೆಗಳಿಗೆ ಬಹಳ ಬೇಡಿಕೆಯಿರುವುದರಿಂದ ಮುಂಗಡವಾಗಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ನಿಮ್ಮ ಹೆಸರನ್ನು ಕಾಯ್ದಿರಿಸಬೇಕಾಗಿರುವುದು ಅವಶ್ಯ. ಸಚಿನ್ ತೆಂಡೂಲ್ಕರ್, ಹೇಮಾಮಾಲಿನಿಯಂತಹ ಖ್ಯಾತನಾಮರೂ ಸಹ ಇಲ್ಲಿ ಪೂಜೆಯನ್ನು ನೆರವೇರಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ : ಸರ್ಪದೋಷ ನಿವಾರಕ

ಆದಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಹರಿದಿರುವ ಕುಮಾರಧಾರಾ ನದಿಯಲ್ಲಿ ಹರಕೆ ಹೊತ್ತಿ ಒಂದರ ಮೇಲೊಂದರಂತೆ ನಿಲ್ಲಿಸಲಾದ ಚೆಪ್ಪಡಿ ಕಲ್ಲುಗಳು
ಚಿತ್ರಕೃಪೆ: Soorajna

ಅಶ್ಲೇಷ ಬಲಿ ಪೂಜೆಯನ್ನು ಪ್ರತಿ ತಿಂಗಳು ಅಶ್ಲೇಷ ನಕ್ಷತ್ರದ ಸಂದರ್ಭದಲ್ಲಿ ನೆರವೇರಿಸಲಾಗುತ್ತದೆ. ಒಂದೆ ದಿನದಲ್ಲಿ ಸಮಾಪ್ತಗೊಳ್ಳುವುದರಿಂದ ಭೇಟಿ ನೀಡಿದ ದಿನದಲ್ಲೆ ಸೇವಾ ಕೌಂಟರಿಗೆ ತೆರಳಿ ಅದರ ನಿಗದಿತ ಶುಲ್ಕ ಪಾವತಿಸಿ ರಸೀದಿ ಪಡೆದು ಈ ಸೇವೆಯಲ್ಲಿ ಭಾಗವಹಿಸಬಹುದು. ನೆನಪಿರಲಿ ಈ ಪೂಜೆಯು ಬೆಳಿಗ್ಗೆ 7 ಹಾಗೂ 9 ಘಂಟೆಗೆ ಮಾತ್ರ ನೆರವೇರಿಸಲಾಗುತ್ತದೆ. ಸಾಮಾನ್ಯವಾಗಿ ಶ್ರಾವಣ ಮಾಸ, ಕಾರ್ತಿಕ ಮಾಸ ಹಾಗೂ ಮಾರ್ಗಶಿರ ಮಾಸಗಳು ಈ ಪೂಜೆ ನೆರವೇರಿಸಲು ಉತ್ತಮ ಸಮಯ ಎನ್ನಲಾಗುತ್ತದೆ.

ಕುಕ್ಕೆ ಸುಬ್ರಹ್ಮಣ್ಯ : ಸರ್ಪದೋಷ ನಿವಾರಕ

ಚಿತ್ರಕೃಪೆ: Gopal Venkatesan

ಆದರೆ ಮುಖ್ಯ ಪೂಜೆಯಾದ ಸರ್ಪಸಂಸ್ಕಾರ ಅಥವಾ ಸರ್ಪ ದೋಷಕ್ಕೆ ಎರಡು ದಿನಗಳನ್ನು ಮೀಸಲಿಡಬೇಕಾಗುತ್ತದೆ. ಈ ಒಂದು ವಿಧಾನವು ಶ್ರಾದ್ಧದ ಪೂಜೆಗೆ ಸಮನಾಗಿರುವುದರಿಂದ ಕಟ್ಟು ನಿಟ್ಟಾದ ಶಿಸ್ತುಗಳನ್ನು ಪಾಲಿಸಬೇಕಾಗುತ್ತದೆ. ಈ ಪೂಜೆಯಲ್ಲಿ ಯಾರೆ ಆಗಲಿ ಯಾವುದೆ ಭೇದ ಭಾವನೆಗಳಿಲ್ಲದೆ ಪಾಲ್ಗೊಳ್ಳಬಹುದು. ಪೂಜೆ ಮಾಡಿಸುವವರಿಗೆ ದೇವಸ್ಥಾನದ ವತಿಯಿಂದಲೆ ಉಪಹಾರ, ಭೋಜನದ ವ್ಯವಸ್ಥೆಯಿರುತ್ತದೆ. ಪ್ರತಿ ಕುಟುಂಬದಿಂದ ಗರಿಷ್ಠ ನಾಲ್ಕು ಜನರು ಮಾತ್ರ ಪಾಲ್ಗೊಳ್ಳಬಹುದು.

ಕುಕ್ಕೆ ಸುಬ್ರಹ್ಮಣ್ಯ : ಸರ್ಪದೋಷ ನಿವಾರಕ

ಚಿತ್ರಕೃಪೆ: Soorajna

ಇನ್ನು ಕುಕ್ಕೆಗೆ ತೆರಳುವುದು ಸುಲಭವಾಗಿದೆ. ಬೆಂಗಳೂರು, ಮಂಗಳೂರಿನಿಂದ ಸಾಕಷ್ಟು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ಕುಕ್ಕೆಗೆ ಲಭ್ಯವಿದೆ. ಅಲ್ಲದೆ ರೈಲೂ ಸಹ ಲಭ್ಯವಿದೆ. ರೈಲಿನ ಮೂಲಕ ತೆರಳಿದಾಗ ಸುಬ್ರಮಣ್ಯ ರಸ್ತೆ ನಿಲ್ದಾಣದಲ್ಲಿ ಇಳಿಯಬೇಕು. ಇಲ್ಲಿಂದ ಕುಕ್ಕೆ ದೇವಸ್ಥಾನವು ಕೇವಲ ಏಳು ಕಿ.ಮೀ ಗಳಷ್ಟು ದೂರದಲ್ಲಿದೆ. ಅಲ್ಲದೆ ಸುಬ್ರಮಣ್ಯ ರಸ್ತೆ ರೈಲು ನಿಲ್ದಾಣದಿಂದ ಬಾಡಿಗೆ ಟ್ಯಾಕ್ಸಿ, ರಿಕ್ಷಾಗಳು ಕುಕ್ಕೆ ದೇವಸ್ಥಾನಕ್ಕೆ ತೆರಳಲು ಸದಾ ದೊರೆಯುತ್ತವೆ.

ಇಲ್ಲಿ ತಂಗಲು ಸಾಕಷ್ಟು ಮಿತವ್ಯಯದ ಹಾಗೂ ಲಕ್ಸುರಿ ಹೋಟೆಲುಗಳು ಲಭ್ಯವಿದೆ. ಇಲ್ಲಿರುವ ಹೋಟೆಲುಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X