Search
  • Follow NativePlanet
Share
» »ಗುರು ಕೊಟ್ಟೂರೇಶ್ವರರ ಕೊಟ್ಟೂರಿಗೆ ಭೆಟಿ

ಗುರು ಕೊಟ್ಟೂರೇಶ್ವರರ ಕೊಟ್ಟೂರಿಗೆ ಭೆಟಿ

By Vijay

ವೀರಶೈವ ಧರ್ಮದಾಚರಣೆಯನ್ನು ಬಸವಣ್ಣನವರು 12 ನೇಯ ಶತಮಾನದಲ್ಲೆ ಆಚರಣೆಗೆ ತಂದಿದ್ದರು. ತದನಂತರ ಈ ಶರಣ ಪರಮ್ಪರೆಯನ್ನು ಉಳಿಸಿ ಬೆಳೆಸಿರುವವರಲ್ಲಿ ಪ್ರಮುಖರಾದವರು ಗುರು ಕೊಟ್ಟೂರೇಶ್ವರ ಸ್ವಾಮಿಗಳು. ಇವರು ನೆಲೆಸಿದ ಸ್ಥಳವೆ ಇಂದು ಕೊಟ್ಟೂರು ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ.

ನಿಮಗಿಷ್ಟವಾಗಬಹುದಾದ : ಕದ್ದಿರಾಂಪುರದ ಮುರುಗನ್ ದೇವಾಲಯ

ಗುರು ಕೊಟ್ಟೂರೇಶ್ವರರ ಕೊಟ್ಟೂರಿಗೆ ಭೆಟಿ

ಚಿತ್ರಕೃಪೆ: Amnbhushan

ಕೊಟ್ಟೂರು ಬಳ್ಳಾರಿ ಜಿಲ್ಲೆಯ ಕುಡ್ಲಿಗಿ ತಾಲೂಕಿನಲ್ಲಿದೆ. ನಿಜ ಹೇಳಬೇಕೆಂದರೆ ಈ ಸ್ಥಳದ ಹೆಸರೆ ಕೊಟ್ಟೂರೇಶ್ವರ ಸ್ವಾಮಿಯಿಂದ ಬಂದುದಾಗಿದೆ. ಲಿಂಗಾಯತ ಸಮುದಾಯದವರು ನಡೆದುಕೊಳ್ಳುವ ಈ ಕ್ಷೇತ್ರವು ವಾರ್ಷಿಕವಾಗಿ ಜರುಗುವ ರಥೋತ್ಸವಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳು ಕೊಟ್ಟೂರಿಗೆ ಭೆಟಿ ನೀಡುತ್ತಾರೆ.

ಗುರು ಕೊಟ್ಟೂರೇಶ್ವರರ ಕೊಟ್ಟೂರಿಗೆ ಭೆಟಿ

ಚಿತ್ರಕೃಪೆ: Veera.sj

ಕೊಟ್ಟೂರು ಒಂದು ಗ್ರಾಮ ಪ್ರದೇಶವಾಗಿದ್ದು ಮಂಡಕ್ಕಿ ಮೆಣಸಿನಕಾಯಿಗೆ ಹೆಚ್ಚು ಜನಪ್ರೀಯವಾಗಿದೆ. ಬಳ್ಳಾರಿ ಹಾಗೂ ಕುಡ್ಲಿಗಿಯಿಂದ ಕೊಟ್ಟೂರಿಗೆ ತಲುಪಲು ಬಸ್ಸುಗಳು ದೊರೆಯುತ್ತವೆ. ಇನ್ನೂ ಕೊಟ್ಟೂರಿನಲ್ಲಿರುವ ಕೊಟ್ಟೂರೇಶ್ವರ ದೇವಾಲಯವು ನಾಲ್ಕು ಭಾಗಗಳಲ್ಲಿ ವಿಂಗಡನೆಗೊಂದಿದೆ. ಅವುಗಳೆಂದರೆ ಮುರ್ಕಲಮಠ, ತೋಟಲಮಠ, ದರ್ಬಾರ್ ಮಠ ಅಥವಾ ದೊಡ್ಡ ಮಠ ಹಾಗೂ ಗಚ್ಚಿನಮಠ.

ಗುರು ಕೊಟ್ಟೂರೇಶ್ವರರ ಕೊಟ್ಟೂರಿಗೆ ಭೆಟಿ

ಚಿತ್ರಕೃಪೆ: Dushan7k

ದಂತಕಥೆಯ ಪ್ರಕಾರ, ಗುರು ಕೊಟ್ಟೂರೇಶ್ವರರು ಕಾಷ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಯಾತ್ರೆ ಮಾಡಿ ಕೊಟ್ಟೂರಿನಲ್ಲಿ ನೆಲೆಸಿದರು. ಒಂದೊಮ್ಮೆ ದೆಹಲಿಯಲ್ಲಿ ಅಕ್ಬರನ ಆಡಳಿತವಿದ್ದಾಗ ಗುರುಗಳು ಅಕ್ಬರನ ರಜಪೂತ ಪತ್ನಿಯ ಕೊಣೆಯಲ್ಲಿ ಪ್ರಕಟರಾದರು ಹಾಗೂ ಆಕೆಗೆ ಇವರು ಸಂತನ ರೂಪದಲ್ಲಿ ದರ್ಶನ ನೀಡಿದರು.

ಗುರು ಕೊಟ್ಟೂರೇಶ್ವರರ ಕೊಟ್ಟೂರಿಗೆ ಭೆಟಿ

ಚಿತ್ರಕೃಪೆ: Dushan 7k

ಹೀಗೆ ತಕ್ಷಣ ತನ್ನ ಪತ್ನಿಯ ಕೋಣೆಯಲ್ಲಿ ಒಬ್ಬ ವ್ಯಕ್ತಿಯ ಪ್ರವೇಶವಾದುದನ್ನು ಭಟರಿಂದ ತಿಳಿದ ಅಕ್ಬರ ಸಿಟ್ಟಿನಿಂದ ಬಂದು ನೋಡಿದಾಗ ಒಬ್ಬ ಮಧ್ಯ ವಯಸ್ಕನಂತೆ ಗುರುಗಳು ಆತನಿಗೆ ಕಂಡರು. ಕೋಪ ತಡೆಯಲಾಗದೆ ತನ್ನ ಖಡ್ಗವನ್ನು ತೆಗೆದು ಅವನ ಮೇಲ ಬೀಸಿದಾಗ ಅದು ಹಾರವಾಗಿ ಗುರುಗಳನ್ನು ಶೃಂಗರಿಸಿತು.

ಇದರಿಂದ ಅಕ್ಬರನಿಗೆ ಆ ಮಹಾನ್ ಚೇತನದ ಅರಿವುಂಟಾಗಿ ತನ್ನ ಆಭಾರವನ್ನು ಪ್ರಕಟಿಸುತ್ತ ಅವರಿಗೆ ಒಂದು ಮಂಚ ಹಾಗೂ ಖಡ್ಗವನ್ನು ಕಾಣಿಕೆಯಾಗಿ ನೀಡಿದನು. ಇಂದಿಗೂ ಆ ಮಂಚವನ್ನು ಕೊಟ್ಟೂರಿನ ಗಚ್ಚಿನ ಮಠದಲ್ಲಿ ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X