Search
  • Follow NativePlanet
Share
» »ಚಿತ್ರ ವಿಚಿತ್ರ ಕೆತ್ತನೆಗಳ ಕೋತ ಗುಲ್ಲು!

ಚಿತ್ರ ವಿಚಿತ್ರ ಕೆತ್ತನೆಗಳ ಕೋತ ಗುಲ್ಲು!

ತೆಲಂಗಾಣ ರಾಜ್ಯದ ವಾರಂಗಲ್ ಬಳಿ ಸ್ಥಿತವಿರುವ ಘನಪೂರ ಎಂಬಲ್ಲಿ ಕಾಕತೀಯ ನಿರ್ಮಿತ ದೇವಾಲಯಗಳ ಸಂಕೀರ್ಣವಿದ್ದು ಅದನ್ನು ಸ್ಥಳೀಯವಾಗಿ ಕೋತ ಗುಲ್ಲು ಎಂದು ಕರೆಯುತ್ತಾರೆ

By Vijay

ರಾಜ್ಯ : ತೆಲಂಗಾಣ

ಜಿಲ್ಲೆಯ : ವಾರಂಗಲ್

ಪಟ್ಟಣ : ಘನಪೂರ (ಮುಲುಗ್)

ವಿಶೇಷತೆ : ಘನಪೂರ ದೇವಾಲಯಗಳ ಸಮೂಹ. 20 ಪ್ರಾಚೀನ ದೇವಾಲಯಗಳ ಈ ಸಮೂಹವನ್ನು ಕೋತ ಗುಲ್ಲು ಎಂದೂ ಸಹ ಸ್ಥಳೀಯವಾಗಿ ಕರೆಯಲಾಗುತ್ತದೆ.

ತಾಣದ ಪರಿಚಯ

ತೆಲಂಗಾಣ ರಾಜ್ಯದ ವಾರಂಗಲ್ ಬಳಿ ಸ್ಥಿತವಿರುವ ಘನಪೂರ ಎಂಬಲ್ಲಿ ಈ ಪ್ರಾಚೀನ ದೇವಾಲಯಗಳ ಸಮೂಹವಿದೆ. ಕಾಕತೀಯರಿಂದ ಸುಮಾರು 12-13 ಶತಮಾನದಲ್ಲಿ ನಿರ್ಮಾಣಗೊಂದ ಅದ್ಭುತ ರಚನೆಗಳು ಇವಾಗಿವೆ. ಕಾಕತೀಯರ ದೊರೆಯಾಗಿದ್ದ ಗಣಪತಿ ದೇವನಿಂದ ಈ ದೇವಾಅಲಯಗಳ ನಿರ್ಮಾಣವಾಗಿದೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ.

ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ಶ್ರೀಮಂತ ಶಿಲ್ಪಕಲೆಯುಳ್ಳ ದೇವಾಲಯಗಳನ್ನು ಕಾಣಬಹುದು. ವಿವಿಧ ಸಾಮ್ರಾಜ್ಯಗಳು ಈ ಪ್ರದೇಶವನ್ನು ಆಳಿದ್ದು ಎಲ್ಲರೂ ತಮ್ಮದೆ ಆದ ವಿಶಿಷ್ಟ ವಾಸ್ತುಶೈಲಿಯ ಉದಾಹರಣೆಗಳನ್ನು ಇಂದು ನಮಗೆ ಬಿಟ್ಟು ಹೋಗಿದ್ದಾರೆ. ಅದರಂತೆ ತೆಲುಗು ಪ್ರದೇಶವನ್ನಾಳಿದ್ದ ಕಾಕತೀಯರು ತಮ್ಮದೆ ಆದ ವಿಶೇಷ ವಾಸ್ತುಶೈಲಿಯನ್ನು ಪರಿಚಯಿಸಿ ಹೋಗಿದ್ದಾರೆ.

ಚಿತ್ರ ವಿಚಿತ್ರ ಕೆತ್ತನೆಗಳ ಕೋತ ಗುಲ್ಲು!

ಚಿತ್ರಕೃಪೆ: Aarti reddy

ಅಂತಹ ಶ್ರೀಮಂತ ರಚನೆಗಳಲ್ಲಿ ಕೋತಾ ಗುಲ್ಲು ದೇವಾಲಯಗಳೂ ಸಹ ಒಂದಾಗಿ ಪರಿಗಣಿಸಲ್ಪಡುತ್ತವೆ. ಇಲ್ಲಿರುವ ಒಂದೊಂದು ರಚನೆಗಳೂ ಸಹ ತಮ್ಮದೆ ಆದ ಕಥೆ ಹೇಳುತ್ತವೆ. ತಮ್ಮದೆ ಆದ ವಿಶೇಷಮಯ ಶೃಂಗಾರಮಯ ಕೆತ್ತನೆಗಳಿಂದ ಸಂಪದ್ಭರಿತವಾಗಿವೆ. ಇಪ್ಪತ್ತಕ್ಕೂ ಅಧಿಕ ದೇಗುಲಗಳಿರುವ ಈ ಸಂಕೀರ್ಣವು ಸುತ್ತಲೂ ಎರಡು ಸ್ತರಗಳಲ್ಲಿ ಗೋಡೆಯಿಂದ ಸುತ್ತುವರೆದಿದೆ.

ಇಲ್ಲಿನ ಪರಿಸರವು ವಿಚಿತ್ರ ಭಾವವನ್ನು ಮನದಲ್ಲಿ ಮೂಡುವಂತೆ ಮಾಡುತ್ತದೆ. ಯಾರಾದರೂ ಐತಿಹಾಸಿಕ ಇಲ್ಲವೆ ಭಯ ಮುಡಿಸುವಂತಹ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂದಿದ್ದಲ್ಲಿ ಈ ತಾಣಕ್ಕೊಮ್ಮೆ ಭೇಟಿ ನೀಡುವುದುಸೂಕ್ತ. ಏಕೆಂದರೆ ಇಲ್ಲಿನ ಆ ವಾತಾವರಣವು ಚಿತ್ರದ ಸನ್ನಿವೇಷಗಳ ಮೇಲೆ ಸಾಕಷ್ಟು ಪ್ರಭಾವ ಬೀರಬಹುದು.

ಚಿತ್ರ ವಿಚಿತ್ರ ಕೆತ್ತನೆಗಳ ಕೋತ ಗುಲ್ಲು!

ಚಿತ್ರಕೃಪೆ: Adityamadhav83

ಗಮನಸೆಳೆವ ಅಂಶಗಳು

ಈ ತಾಣವೆ ಒಂದು ರೀತಿಯಲ್ಲಿ ವಿಚಿತ್ರ ವಾತಾವರಣ ಹಾಗೂ ಮೌನದಿಂದ ಕೂಡಿರುವುದೆ ಒಂದು ಗಮನಸೆಳೆವ ಅಂಶ. ಆದಾಗ್ಯೂ ಇಲ್ಲಿನೆ ಕೆತ್ತನೆಗಳು ಹಾಗೂ ಶಿಲ್ಪಕಲೆ ವಿಶೇಷವಾಗಿ ಗಮನಸೆಳೆಯುತ್ತವೆ. ಅದರಲ್ಲೂ ವಿಶೇಷವಾಗಿ ಕಾಲ್ಪನಿಕ ಜೀವಿಗಳು, ರಹಸ್ಯಮಯ ಜೀವಿಗಳ ಕೆತ್ತನೆಗಳು ವಿಶೇಷವಾಗಿ ಆಕರ್ಷಿಸಬಹುದು.

ಉದಾಹರಣೆಗೆ, ಇಲ್ಲಿನ ಕೆತ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಸಾಗಿದರೆ, ಅರ್ಧ ಮನುಷ್ಯ ಅರ್ಧ ಸಿಂಹದ ಜೀವಿಯು ಆನೆಯ ಮೇಲೆ ವಿಹರಿಸುತ್ತಿರುವ ಕೆತ್ತನೆ, ಗಜ-ಕೇಸರಿ, ಕುದುರೆ ಮುಖ ಸಿಂಹದ ದೇಹವಿರುವ ಜೀವಿ ಆನೆಯ ಮೇಲೆ ವಿಹರಿಸುತ್ತಿರುವ ಕೆತ್ತನೆ ಹೀಗೆ ಇನ್ನೂ ಹಲವು ರಚನೆಗಳು ನಿಮ್ಮ ಗಮನಸೆಳೆಯದೆ ಇರಲಾರವು.

ಚಿತ್ರ ವಿಚಿತ್ರ ಕೆತ್ತನೆಗಳ ಕೋತ ಗುಲ್ಲು!

ಚಿತ್ರಕೃಪೆ: Adityamadhav83

ಇಲ್ಲಿರುವ ದೇವಾಲಯಗಳಲ್ಲಿ ದೊಡ್ಡದಾದ ಹಾಗೂ ಮುಖ್ಯವಾದ ದೇವಾಲಯವು ಕೆತ್ತನೆಗಳಿಂದ ಸಮ್ಪದ್ಭರಿತವಾಗಿದೆ. ಅಲ್ಲದೆ ಇತರೆ ದೇವಾಲಯಗಳಿಗಿಂತ ಕೊಂಚ ಭಿನ್ನವಾಗಿಯೂ ಹಾಗೂ ಬಲು ಸುಂದರವಾಗಿಯೂ ಕಂಡುಬರುತ್ತದೆ. ಈ ಮುಖ್ಯ ದೇವಾಲಯವು ಶಿವನಿಗೆ ಮುಡಿಪಾದ ದೇವಾಲಯವಾಗಿದ್ದು ಕಾಕತೀಯರು ಶಿವನನ್ನು ಹೆಚ್ಚಾಗಿ ಆರಾಧಿಸುತ್ತಿದ್ದರೆಂಬ ಅಂಶವನ್ನು ಅನಾವರಣಗೊಳಿಸುತ್ತದೆ.

ಎಲ್ಲಿದೆ ಹಾಗೂ ತಲುಪುವ ಬಗೆ

ಘನಪೂರ ಎಂಬ ಎರಡು ಸ್ಥಳಗಳಿವೆ ತೆಲಂಗಾಣದಲ್ಲಿ ಒಂದು ಹೈದರಾಬಾದ್ ನಿಂದ ವಾರಂಗಲ್ ಗೆ ಬರುವಾಗ ದೊರಕುತ್ತದೆ. ಅದನ್ನು ಹೊರತುಪಡಿಸಿದರೆ ಇನ್ನೊಂದು ಘನಪೂರವು ವಾರಂಗಲ್ ನಿಂದ 76 ಕಿ.ಮೀ ಗಳಷ್ಟು ದೂರದಲ್ಲಿದೆ. ಇದನ್ನು ಸ್ಥಳೀಯವಾಗಿ ಕೋತಗುಲ್ಲು ಎಂದೂ ಸಹ ಕರೆಯುತ್ತಾರೆ. ಇದೊಂದು ಮಂಡಲ ಹಾಗೂ ಗ್ರಾಮವಾಗಿದ್ದು ಮುಲುಗ ಎಂತಲೂ ಸಹ ಕರೆಯಲ್ಪಡುತ್ತದೆ.

ನೂತನ ತೆಲಂಗಾಣ ರಾಜ್ಯದ ಪ್ರವಾಸಿ ಸ್ಥಳಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X