Search
  • Follow NativePlanet
Share
» »40 ದಿನ ಇಲ್ಲಿನ ಆಂಜನೇಯನ ಪೂಜೆ ಮಾಡಿದ್ರೆ ಸಂತಾನಪ್ರಾಪ್ತಿಯಾಗುತ್ತಂತೆ!

40 ದಿನ ಇಲ್ಲಿನ ಆಂಜನೇಯನ ಪೂಜೆ ಮಾಡಿದ್ರೆ ಸಂತಾನಪ್ರಾಪ್ತಿಯಾಗುತ್ತಂತೆ!

ಆಂಜನೇಯ ಸ್ವಾಮಿಗೆ 40 ದಿನಗಳ ಪ್ರಾರ್ಥನೆಗಳನ್ನು ನೀಡುವ ಮೂಲಕ ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಹಾಗೆಯೇ ಸಾಕಷ್ಟು ಜನರು ಸಂತಾನ ಭಾಗ್ಯಕ್ಕಾಗಿ ಹನುಮನಿಗೆ 40 ದಿನಗಳ ಪೂಜೆ ಸಲ್ಲಿಸುತ್ತಾರೆ.

ಸುಮಾರು 300 ವರ್ಷಗಳ ಹಿಂದೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಈಗಿನ ದೇವಾಲಯವನ್ನು 160 ವರ್ಷಗಳ ಹಿಂದೆ ಕೃಷ್ಣ ರಾವ್ ದೇಶ್ಮುಖ್ ಅವರು ನವೀಕರಿಸಿದರು. ಇಲ್ಲಿನ ಮುಖ್ಯ ದೇವತೆ ಆಂಜನೇಯ ಸ್ವಾಮಿ. ಇಲ್ಲಿ ಆಂಜನೇಯನಲ್ಲದೆ ವೆಂಕಟೇಶ್ವರ, ದೇವತೆ ಅಲ್ವಾರೂಲಾ ಮತ್ತು ಲಕ್ಷ್ಮೀ ದೇವಿಯ ವಿಗ್ರಹವೂ ಇದೆ.

ಆಂಜನೇಯ ಸ್ವಾಮಿ

ಆಂಜನೇಯ ಸ್ವಾಮಿ

pc: Manasa.mani

ಸುಂದರವಾದ ಬೆಟ್ಟಗಳು, ಕಣಿವೆಗಳು ಮತ್ತು ರಿಫ್ರೆಶ್ ವಾಟರ್ ಸ್ಪ್ರಿಂಗ್ಸ್ ನಡುವೆ ಗುಡ್ಡದ ಮೇಲೆ ಈ ದೇವಾಲಯವ ನೆಲೆಗೊಂಡಿದೆ. ಇದು ಹನುಮಂತನಿಗೆ ಸಮರ್ಪಿಸಲಾಗಿದ್ದು, ದೇವಸ್ಥಾನದ ಗೋಡೆಯ ಮೇಲೆ ವಿವಿಧ ದೇವಿ, ದೇವತೆಗಳ ಶಿಲ್ಪಗಳನ್ನು ಕೆತ್ತಲಾಗಿದೆ. ಆಂಜನೇಯ ಸ್ವಾಮಿಯ ಪ್ರಮುಖ ದೇವತೆ ಜೊತೆಗೆ ದೇವಸ್ಥಾನವು ವೆಂಕಟೇಶ್ವರ, ದೇವತೆ ಅಲ್ವಾರ್ ಮತ್ತು ಶ್ರೀ ಲಕ್ಷ್ಮಿಯ ವಿಗ್ರಹಗಳನ್ನು ಹೊಂದಿದೆ. ಇಲ್ಲಿ ಆಂಜನೇಯನ ಜೀವ ವಿಗ್ರಹವನ್ನು ನೋಡಬಹುದು. ಪ್ರತಿಮೆಯನ್ನು ಹತ್ತಿರದಿಂದ ವೀಕ್ಷಿಸಲು ಪ್ರವಾಸಿಗರಿಗೆ ಗುಡ್ಡದ ಮೇಲಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.

ಶಿವಮೊಗ್ಗದಲ್ಲಿ ನಾಲ್ಕು ದಿನ ಕಳೆದ್ರೆ ಇಲ್ಲೆಲ್ಲಾ ಸುತ್ತಾಡಿ ಶಿವಮೊಗ್ಗದಲ್ಲಿ ನಾಲ್ಕು ದಿನ ಕಳೆದ್ರೆ ಇಲ್ಲೆಲ್ಲಾ ಸುತ್ತಾಡಿ

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

ಕೊಂಡಗಟ್ಟು ಬಸ್ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿ, ಜಾಗಿತ್ಯಲ್ ಬಸ್ ನಿಲ್ದಾಣದಿಂದ 14 ಕಿ.ಮೀ, ಕರಿಮ್‌ನಗರದಿಂದ 39 ಕಿ.ಮೀ ಮತ್ತು ಹೈದರಾಬಾದ್‌ನಿಂದ 178 ಕಿ.ಮೀ ದೂರದಲ್ಲಿ, ಕರಿಮ್‌ನಗರ್ ಜಿಲ್ಲೆಯ ಕೊಂಡಗಟ್ಟು ಹಳ್ಳಿಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವು ತೆಲಂಗಾಣದಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.

ಸ್ಥಳೀಯ ದಂತಕಥೆಯ ಪ್ರಕಾರ

ಸ್ಥಳೀಯ ದಂತಕಥೆಯ ಪ್ರಕಾರ

ಸುಮಾರು 300 ವರ್ಷಗಳ ಹಿಂದೆ ಒಬ್ಬ ರೈತ ಸಿಂಗಮ್ ಸಂಜೀವನು ತನ್ನ ಎಮ್ಮೆಯನ್ನು ಕಳೆದುಕೊಂಡು ಎಲ್ಲಾ ಕಡೆ ಎಮ್ಮೆಗಾಗಿ ಹುಡುಕಿ ಸುಸ್ತಾಗಿ ಈ ಗುಡ್ಡಕ್ಕೆ ಬಂದು ಮಲಗಿದನು. ಆಗ ಆಂಜನೇಯನು ಆತನ ಕನಸಿನಲ್ಲಿ ಬಂದು ಅವನ ಎಮ್ಮೆ ಎಲ್ಲಿದೆ ಎಂದು ತಿಳಿಸುತ್ತಾನೆ. ಅವನು ಎಚ್ಚರಗೊಂಡು ಬೆಟ್ಟದ ಸುತ್ತಲೂ ನೋಡುತ್ತಿದ್ದಂತೆ, ಆಂಜನೇಯನ ಒಂದು ಸುಂದರವಾದ ವಿಗ್ರಹ ಆತನಿಗೆ ಕಾಣಿಸುತ್ತದೆ. ನಂತರ ಆ ವಿಗ್ರಹ ದೊರೆತ ಸ್ಥಳದಲ್ಲಿಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದನು ಎನ್ನಲಾಗುತ್ತದೆ.

ಚೆಟ್ಟಿನಾಡ್‌ನಲ್ಲಿ ಚಿಕನ್‌ ಮಾತ್ರವಲ್ಲ ಇನ್ನೇನೆಲ್ಲಾ ವಿಶೇಷತೆ ಇದೆ ಗೊತ್ತಾ?ಚೆಟ್ಟಿನಾಡ್‌ನಲ್ಲಿ ಚಿಕನ್‌ ಮಾತ್ರವಲ್ಲ ಇನ್ನೇನೆಲ್ಲಾ ವಿಶೇಷತೆ ಇದೆ ಗೊತ್ತಾ?

ಸಂತಾನಕ್ಕಾಗಿ 40 ದಿನಗಳ ಪ್ರಾರ್ಥನೆ

ಸಂತಾನಕ್ಕಾಗಿ 40 ದಿನಗಳ ಪ್ರಾರ್ಥನೆ

ಆಂಜನೇಯ ಸ್ವಾಮಿಗೆ 40 ದಿನಗಳ ಪ್ರಾರ್ಥನೆಗಳನ್ನು ನೀಡುವ ಮೂಲಕ ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಹಾಗೆಯೇ ಸಾಕಷ್ಟು ಜನರು ಸಂತಾನ ಭಾಗ್ಯಕ್ಕಾಗಿ ಹನುಮನಿಗೆ ೪೦ ದಿನಗಳ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಹನುಮಾನ್ ಜಯಂತಿ ಪ್ರಮುಖ ಆಚರಣೆಯಾಗಿದೆ. ಅನೇಕ ಭಕ್ತರು ಹನುಮಾನ್ ಜಯಂತಿ ಸಮಯದಲ್ಲಿ 41 ದಿನಗಳ ಕಾಲ ಹನುಮಾನ್ ದೀಕ್ಷೆಯನ್ನು ನಿರ್ವಹಿಸುತ್ತಾರೆ . ಹನುಮಾನ್ ಜಯಂತಿ ಸಮಯದಲ್ಲಿ ಸುಮಾರು 4 ಲಕ್ಷ ಜನರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಹನುಮ ಜಯಂತಿ ಆಚರಣೆ

ಹನುಮ ಜಯಂತಿ ಆಚರಣೆ

ಈ ಹನುಮನನ್ನು ಸಂಜೀವ ಎಂದೂ ಕರೆಯಲಾಗುತ್ತದೆ. ಯಾಕೆಂದರೆ ಇದು ತನ್ನನ್ನು ಪೂಜಿಸುವ ಭಕ್ತರ ಕಾಯಿಲೆ ಗುಣಮಾಡುತ್ತದೆ. ಮಾನಸಿಕ ಅಸ್ವಸ್ಥರಾಗಿರುವವರು ಹಾಗೂ ಸಂತಾನ ಭಾಗ್ಯವಿಲ್ಲದವರಿಗೆ ಸಂಜೀವಿನಿಯಾಗಿದೆ. ಇಲ್ಲಿ ಹನುಮ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಕೊಳ್ಳೆಗಾಲದಲ್ಲಿರುವ ಮರಾಡಿ ಗುಡ್ದದಲ್ಲಿರುವ ಪಂಚಲೋಹದ ಬಿಲ್ಲು ಬಾಣದ ವಿಶೇಷತೆ ಏನು?ಕೊಳ್ಳೆಗಾಲದಲ್ಲಿರುವ ಮರಾಡಿ ಗುಡ್ದದಲ್ಲಿರುವ ಪಂಚಲೋಹದ ಬಿಲ್ಲು ಬಾಣದ ವಿಶೇಷತೆ ಏನು?

ಹನುಮನಿಗೆ ನೀರಿನ ಅಭೀಷೇಕ

ಹನುಮನಿಗೆ ನೀರಿನ ಅಭೀಷೇಕ

ಇಲ್ಲಿ ಹನುಮನಿಗೆ ನೀರಿನಿಂದ ಅಭಿಷೇಕ ಮಾಡಲಾಗುತ್ತದೆ. ಶಿವನು ಆಂಜನೇಯನಾಗಿ ಅವತಾರವಾದನು. ಇಲ್ಲಿ ಭಕ್ತರು ತಮ್ಮ ಕೋರಿಕೆಯನ್ನು ಪೂರೈಸಲು ದೇವರಿಗೆ ಅಭಿಷೇಕವನ್ನು ನಿರ್ವಹಿಸುತ್ತಾರೆ ಮತ್ತು ಕೊಂಡಗಟ್ಟು ಆಂಜನೇಯನನ್ನು ಪೂಜಿಸುತ್ತಾರೆ. ಮತ್ತು ಶ್ರೀ ಆಂಜನೇಯ ಸ್ವಾಮಿಯ ದೀಕ್ಷೆಯನ್ನು ಪಾಲಿಸುತ್ತಾರೆ. ಈ ದೀಕ್ಷೆ ಪ್ರಕಾರ 11 ದಿನಗಳು, 21 ದಿನಗಳು 41 ದಿನಗಳು ಇರುತ್ತವೆ. ಸ್ವಾಮಿಯ ಎಡಗೈ ಬೌಲಿನಲ್ಲಿರುವ ಚಂದನವನ್ನು ಪಡೆಯುವುದು ಒಳ್ಳೆಯದು ಎನ್ನಲಾಗುತ್ತದೆ. ಪ್ರತಿಯೊಬ್ಬ ಭಕ್ತನಿಗೂ ಆ ಚಂದನದ ಮೇಲೆ ದೃಢ ನಂಬಿಕೆ ಇದೆ.

ಸಾವಿರಾರು ಭಕ್ತರು ಆಗಮಿಸುತ್ತಾರೆ

ಸಾವಿರಾರು ಭಕ್ತರು ಆಗಮಿಸುತ್ತಾರೆ

ಶ್ರೀ ಆಂಜನೇಯ ಸ್ವಾಮಿಗೆ ಹೆಚ್ಚಿನ ಪೂಜೆಗಳು ನಡೆಯುತ್ತದೆ ಮತ್ತು ಪ್ರತಿ ದಿನವೂ ಸಾವಿರಾರು ಯಾತ್ರಿಗಳನ್ನು ಆಕರ್ಷಿಸುತ್ತದೆ. ಆಂಧ್ರಪ್ರದೇಶದ ತೆಲಂಗಾಣ ಪ್ರದೇಶದಿಂದ ಹೆಚ್ಚಿನ ಯಾತ್ರಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ದೇವರ ದರ್ಶನಕ್ಕೆ ಲಭ್ಯವಾಗಿದೆ.

 ವೆಮುಲಾವಾಡ ಕರಿಮ್‌ನಗರ

ವೆಮುಲಾವಾಡ ಕರಿಮ್‌ನಗರ

ವೆಮುಲಾವಾಡವು ಕರಿಮ್‌ನಗರ ಜಿಲ್ಲೆಯ ಪಶ್ಚಿಮ ಭಾಗದಲ್ಲಿರುವ ಒಂದು ಮಂಡಲ್ ಹೆಡ್ ಕ್ವಾರ್ಟರ್ಸ್ ಆಗಿದೆ. ಇದು ಮೂಲಾವುಗು ರಿವುಲೆಟ್ ತೀರದಲ್ಲಿದೆ. ಕರೀಂನಗರ ಪಟ್ಟಣ ಮತ್ತು ವೆಮುಲವಾಡಾ ನಡುವಿನ ಅಂತರವು 35 ಕಿಲೋಮೀಟರ್. ವೆಮುಲಾವಾಡ ಎ.ಡಿ 750-973 ರ ನಡುವೆ ವೆಮುಲವಾಡಾ ಚಾಲುಕ್ಯರ ರಾಜವಂಶದ ರಾಜಧಾನಿಯಾಗಿತ್ತು. ದೇವಾಲಯಗಳು ಮತ್ತು ಪ್ರತಿಮೆಗಳ ಅವಶೇಷಗಳು ಚಾಲುಕ್ಯರು ಮಹಾನ್ ವಾಸ್ತುಶಿಲ್ಪಿಗಳು ಎಂದು ತೋರಿಸುತ್ತವೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಈ ದೇವಸ್ಥಾನದಿಂದ ಕರೀಂನಗರ - 36 ಕಿಮೀ, ಜಗ್ತಿಯಾಲ್ - 14 ಕಿಮೀ, ಹೈದರಾಬಾದ್ - 200 ಕಿಮೀ, ವಾರಂಗಲ್ - 115 ಕಿ.ಮೀ, ನಿಜಾಮಾಬಾದ್ - 150 ಕಿಮೀ ದೂರದಲ್ಲಿದೆ.
ಹತ್ತಿರದ ವಿಮಾನ ನಿಲ್ದಾಣವೆಂದರೆ ಹೈದರಾಬಾದ್ ವಿಮಾನ ನಿಲ್ದಾಣ. ಇನ್ನು ಹತ್ತಿರದ ಬಸ್ ನಿಲ್ದಾಣ: ಕೊಂಡಗಟ್ಟು ಬಸ್ ನಿಲ್ದಾಣ. ಹತ್ತಿರದ ರೈಲ್ವೇ ನಿಲ್ದಾಣ: ಮಲ್ಲಿಯಲ್ ನುಕಾಪಲ್ಲಿ - 4 ಕಿಮೀ ದೂರದಲ್ಲಿದೆ.
ಸಾರಿಗೆ: ಕೊಂಡಿಗಟ್ಟು ಪಟ್ಟಣ ಕರೀಂನಗರ - ಜಗ್ತಿಯಾಲ್ ರಸ್ತೆಯಲ್ಲಿದೆ. ಕರೀಂನಗರ ಮತ್ತು ಜಗ್ತಿಯಾಲ್‌ನಿಂದ ಬಸ್ಸುಗಳು ನಿರಂತರವಾಗಿ ಚಲಿಸುತ್ತವೆ. ಹೈದರಾಬಾದ್‌ನಿಂದ ಕರೀಂ ನಗರ್‌, ಕೊಂಡಗಟ್ಟು ಚಲಿಸುತ್ತದೆ.

ವೆಮುಲಾವಾಡ ದೇವಸ್ಥಾನ

ವೆಮುಲಾವಾಡ ದೇವಸ್ಥಾನ

ಇತರ ಆಕರ್ಷಣೀಯ ತಾಣ: ವೆಮುಲಾವಾಡ ದೇವಸ್ಥಾನ ಈ ದೇವಸ್ಥಾನದಲ್ಲಿ ಶಿವ ಲಿಂಗ ರೂಪದಲ್ಲಿದ್ದಾನೆ. ಶ್ರೀ ರಾಜ ರಾಜೇಶ್ವರಿ ದೇವಿ ಮತ್ತು ಸಿದ್ಧಿ ವಿನಾಯಕನ ವಿಗ್ರಹಗಳು ಇವೆ. ಈ ದೇವಸ್ಥಾನವು ಸ್ಥಳೀಯವಾಗಿ ರಾಜಣ್ಣ ಎಂದೇ ಜನಪ್ರಿಯವಾಗಿದೆ. ಇದು ಅನಂತ ಪದ್ಮನಾಭ ಸ್ವಾಮಿ, ಭೀಮೇಶ್ವರ ಸ್ವಾಮಿ, ಕೊದಂಡ ರಾಮ ಮತ್ತು ಕಾಶಿ ವಿಶ್ವೇಶ್ವರ ಸೇರಿದಂತೆ ದೇವತೆಗಳಿಗೆ ಮೀಸಲಾದ ಇತರ ದೇವಸ್ಥಾನಗಳನ್ನು ಹೊಂದಿದೆ. ಹಾಗಾಗಿ ವೆಮುಲವಾಡ ದೇವಸ್ಥಾನವನ್ನು 'ಹರಿ ಹರ ಕ್ಷೇತ್ರ' ಎಂದು ಕೂಡ ಕರೆಯಲಾಗುತ್ತದೆ. ಮಹಾಶಿವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಾಕಷ್ಟು ಭಕ್ತರು ಇಲ್ಲಿಗೆ ಬರುತ್ತಾರೆ.

ರಾಮಗಿರಿ ಕೋಟೆ

ರಾಮಗಿರಿ ಕೋಟೆ

PC: Urssiva

12 ನೇ ಶತಮಾನದಲ್ಲಿ ಈ ಕೋಟೆಯನ್ನು ಸುಂದರವಾದ ರಾಮಗಿರಿ ಗುಡ್ಡದ ಮೇಲೆ ನಿರ್ಮಿಸಲಾಗಿದೆ. ಇದು ಅನೇಕ ಔಷಧೀಯ ಗಿಡಮೂಲಿಕೆಗಳನ್ನು ಹೊಂದಿರುವ ಹಚ್ಚ ಹಸಿರಿನಿಂದ ಆವೃತವಾಗಿದೆ. ಕಾಕತೀಯರು ನಿರ್ಮಿಸಿದ ನಂತರ ಗೋಲ್ಕೊಂಡಾ ಆಡಳಿತಗಾರರ ನಿಯಂತ್ರಣಕ್ಕೆ ಬಂತು. ಇಲ್ಲಿ ಶಿವ ಲಿಂಗ ಮತ್ತು ಸೀತಾ ರಾಮ ದೇವಾಲಯವಿದೆ. ರಾಮ ಮತ್ತು ಸೀತೆಯ ಪಾದದ ಗುರುತು ಇಲ್ಲಿದೆ ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X